Stories by Dunty Vinay Raj on Medium
ಮನೆಯಲ್ಲಿ ಗೌರಿಯವರ ಪೂಜೆ ಭರದಿಂದ ಸಾಗುತಿತ್ತು. ಕೈಯಲ್ಲಿ ಕಾಫಿ ಹಿಡಿದು, ರಂಗನಾಥರು ನ್ಯೂಸ್ ಪೇಪರ್ ಓದುತ್ತಿರುವಲ್ಲಿಗೆ ಬಂದ ಅಜಯ,
ಅಜಯ — “ಗುಡ್ ಮಾರ್ನಿಂಗ್ ಅಪ್ಪ. ಏನಿವತ್ತು ಇಷ್ಟು ಬೆಳಗ್ಗೆ ಜೋರಾಗಿ ಶುರು ಮಾಡಿದ್ದಾಳೆ ಅಮ್ಮ. ರಾತ್ರಿ ತಡವಾಗಿ ಮಲಗಿದ್ದು, ಈ ಗಲಾಟೆಗೆ ಎಚ್ಚರ ಆಗೋಯ್ತು. ದಿನವೆಲ್ಲ ನಿದ್ದೆ ಮಂಪರಲ್ಲೇ ಕಳೀಬೇಕು ಈಗ” ಎಂದು ಗೊಣಗಿದನು.
ರಂಗನಾಥ್ — “ನೀನಂತೂ ದೇವರ ಮನೆ ಕಡೆ ತಲೆ ಹಾಕಲ್ಲ. ಅವಳ ನಂಬಿಕೆ ಅವಳಿಗೆ. ನಿನ್ನದು ನಿನಗೆ. ನನಗೆ ತೊಂದರೆ ಆಗುತ್ತೆ, ನೀವು ಬೆಳಗ್ಗೆ ಎದ್ದು ಪೂಜೆ ಮಾಡಬೇಡಿ ಅಂದರೆ ಹೇಗೆ ಮಾರಾಯ ?” ಪ್ರಶ್ನಿಸಿದರು.
ಅಜಯ — “ಹೌದು. ಅವರವರ ನಂಬಿಕೆ ಅವರವರಿಗೆ. ನಾನು ಪೂಜೆ ಮಾಡೋಲ್ಲ ಅನ್ನೋ ಕಾರಣಕ್ಕೆ ನಂಗೆ ನಂಬಿಕೆ ಇಲ್ಲ ಅಂತ ನೀವು ಅನ್ಕೊಂಡಿದ್ದೀರಾ. ನೀವೇ ಹೇಳೋ ಪ್ರಕಾರ ಧರ್ಮ ಪಾಲನೆಯಲ್ಲಿ, ಆಚಾರ ಮತ್ತೆ ವಿಚಾರ, ಎರಡೂ ಇರುತ್ತೆ ಅಲ್ವಾ ? ಈಗ ಅಮ್ಮ ಮಾಡ್ತಿರೋದು ಆಚಾರ. ನನಗೆ ಆಚಾರಕ್ಕಿಂತಲೂ ವಿಚಾರದಲ್ಲಿ ಆಸಕ್ತಿ. ನೀವು ಆಚರಣೆ ಸಾಧನವಾಗಿಸಿಕೊಂಡು ದೇವರಿಗೆ ಪೂಜೆ ಮಾಡ್ತೀರಿ. ನಾನು ವಿಚಾರದಿಂದ ಅದೇ ಯತ್ನ ಮಾಡ್ತೀನಿ. ಹಾಗಂತ, ನಂಗೆ ಯಾವುದರಲ್ಲೂ ನಂಬಿಕೆ ಇಲ್ಲ ಅಂದರೆ ಹೇಗೆ?” ಎಂದು ತನ್ನ ಹುಬ್ಬನ್ನು ಗಂಟಿಕ್ಕಿದನು.
ರಂಗನಾಥ್ — “ನೀನು ಹೇಳೋದು ಸರಿ. ಆಚಾರ, ವಿಚಾರ, ಎಲ್ಲವು ಒಂದು ಸಾಧನವಷ್ಟೇ. ಆಚಾರವು ಭಕ್ತಿ ಮಾರ್ಗ ಅನುಸರಿಸಿದರೆ ವಿಚಾರವು ಜ್ಞಾನ ಮಾರ್ಗ ಅನುಸರಿಸುತ್ತೆ. ಅವರವರ ಆಸಕ್ತಿ ಅಷ್ಟೇ..” ಅಜಯನ ಮಾತಿಗೆ ಸಹಮತ ಸೂಚಿಸಿದರು.
ಗೌರಿ — “ಇವತ್ತಾದರೂ ಬೇಗ ಏಳಬಾರದಿತ್ತಾ. ಏನು ಹುಡುಗನೋ ಏನೋ. ಮನೇನ ಹಾಸ್ಟೆಲ್ ಮಾಡ್ಕೊಂಡಿದ್ದಾನೆ. ಹಬ್ಬ, ಹರಿದಿನ ಯಾವುದೂ ಲೆಕ್ಕ ಇಲ್ಲ ಇವನಿಗೆ. ಮದುವೆಯಾಗಿ ಐದು ತಿಂಗಳಾದ್ರು ಇವನ ಅಭ್ಯಾಸ ಬದಲಾಗಲಿಲ್ಲ. ಏನು ಕರ್ಮನೊ ಈ ಹುಡುಗನದ್ದು” ಅಪ್ಪ ಮಗನ ಚರ್ಚೆ ಆಲಿಸಿ, ದೇವರ ಕೋಣೆಯಿಂದಲೇ ಸಿಡುಕಿದರು.
ಅಜಯ — “ಒಟ್ಟಿನಲ್ಲಿ ನಮ್ಮಿಷ್ಟದಂತೆ ಇರದ ಎಲ್ಲದಕ್ಕೂ ಕರ್ಮ ಅಂದುಬಿಡೋದು. ನಾನು ತಡವಾಗಿ ಮಲಗಿದರೂ ಕರ್ಮ. ತಡವಾಗಿ ಎದ್ದರೂ ಕರ್ಮ. ಅಮ್ಮನ ಪ್ರಕಾರ ಕರ್ಮ ಅಂದ್ರೆ ಏನು ಅಂತ ನಂಗೆ ತಿಳಿಯೋದಿಲ್ಲ”.. ಗೌರಿಯವರ ಸಿಡುಕನ್ನು ತಿರಸ್ಕರಿಸುವಂತೆ ವ್ಯಂಗ್ಯವಾಗಿ ನಗುತ್ತ ರಂಗನಾಥರಿಗೆ ಹೇಳಿದನು.
ರಂಗನಾಥ್ — “ಅದೇನೋ ಹೇಳ್ತಾರಲ್ವ. What goes around comes around (ವಾಟ್ ಗೋಸ್ ಅರೌಂಡ್, ಕಮ್ಸ್ ಅರೌಂಡ್) ಹಾಗೆ. ಕರ್ಮ ಅಂದ್ರೆ ನನ್ನ ಪ್ರಕಾರ ಅಷ್ಟೇ. ಒಂತರ ನ್ಯೂಟನ್ನಿನ ಥರ್ಡ್ ಲಾ ಆಫ್ ಮೋಶನ್ ಇದ್ದ ಹಾಗೆ. “Every action has a reaction”.. ನಾವು ಮಾಡೋ ಪ್ರತಿ ಕ್ರಿಯೆಗೂ ಒಂದು ಪ್ರತಿಕ್ರಿಯೆ ಇರುತ್ತೆ.. ಇವತ್ತು ನಮಗಾಗೋದು ನಾವು ಯಾವತ್ತೋ ಮಾಡಿದ ಕ್ರಿಯೆಯ ಪ್ರತಿಕ್ರಿಯೆ.. ಆಳವಾಗಿ ಅವಲೋಕಿಸಿದ್ರೆ, ಕ್ರಿಯೆ ಪ್ರತಿಕ್ರಿಯೆಯ ಕಾಲಘಟ್ಟ ಬರಿ ಈ ಜನ್ಮಕ್ಕಷ್ಟೇ ಅಂಟಿದ್ದಿರಬೇಕಿಲ್ಲ.. ಎಷ್ಟು ಮಾಡಿಟ್ಟರೂ ಏನು ಹೊತ್ಕೊಂಡು ಹೋಗಲ್ಲ ಅಂತಾರಲ್ವ, ಏನನ್ನ ಹೊತ್ಕೊಂಡು ಹೋಗ್ತೀವೋ ಬಿಡ್ತೀವೋ ಗೊತ್ತಿಲ್ಲ, ಆದ್ರೆ ಈ ಜನ್ಮದ ನಮ್ಮ ಎಲ್ಲ ಕ್ರಿಯೆಗಳ ಮೂಟೆಯನ್ನ (ಸಂಚಿತ) ಹೊತ್ಕೊಂಡು ಮುಂದಿನ ಜನ್ಮಕ್ಕೂ ಹೋಗ್ತೀವಿ.. ಅದರ ಪ್ರತ್ರಿಕ್ರಿಯೆ ಆಗ ತೀರಿಸಬೇಕಾಗುತ್ತೆ..” ಫಿಲಾಸಫಿ ಮತ್ತು ಭೌತಶಾಸ್ತ್ರದ ನಡುವೆ ನಂಟು ಬೆಸೆದು ಉತ್ತರಿಸಿದರು.
ಅಜಯ — “ಆದ್ರೆ, ಈ ಕರ್ಮ, ಪಾಪ, ಪುಣ್ಯ ಈ ವಿಚಾರಗಳೆಲ್ಲವೂ ಸಾಮಾಜಿಕ ವ್ಯವಸ್ಥೆ ಕಾಪಾಡ್ಕೊಳೋದಿಕ್ಕೆ ತುಂಬಿರೋ ನಂಬಿಕೆ ಅನ್ನಿಸೋದಿಲ್ಲವಾ ? ಒಳ್ಳೇದೇ ಮಾಡಿದ್ರೆ ಒಳ್ಳೇದೇ ಆಗುತ್ತೆ. ಕೆಟ್ಟದು ಮಾಡಿದ್ರೆ ಮುಂದಿನ ಜನ್ಮದಲ್ಲೂ ಕೆಟ್ಟದೇ ಆಗುತ್ತೆ. ಯಾವಾಗಲೂ ಒಳ್ಳೆಯದೇ ಮಾಡಬೇಕು, ಅಂತ ಫಿಲಾಸಫಿ ಸೃಷ್ಟಿಸಿ ಅದಕ್ಕೆ “ಕರ್ಮ” ಅಂತ ಶೀರ್ಷಿಕೆ ಇಟ್ಟು ಸಮಾಜ ಮಾಡೋ ಮಾರಲ್ ಪೊಲೀಸಿಂಗ್ ಅನ್ನಿಸೋಲದಿಲ್ವ ?” ವಾದಿಸಿದನು.
ರಂಗನಾಥ್ — “ಅವರವರ ಭಾವಕ್ಕೆ ಅಷ್ಟೇ. ಕರ್ಮ, ಪಾಪ, ಪುಣ್ಯ ಇವೆಲ್ಲವೂ ಬದುಕಿಗೆ ಮಾರ್ಗಸೂಚಿ ಅಂತಾದರೂ ಅನ್ಕೋಬಹುದು, ಇಲ್ಲವೇ, ಸಾಮಾಜಿಕ ವ್ಯವಸ್ಥೆಯ ನಂಬಿಕಗಳು ಅಂತಾದರೂ ಅನ್ಕೋಬಹುದು.. ಈ ವಾದಕ್ಕೆಲ್ಲ ನಿರ್ಧಿಷ್ಟ ಅಂತ್ಯ ಅಂತ ಇರೋದಿಲ್ಲ.. ಅವರ ವಿವೇಚನೆಗೆ, ಅನುಭವಕ್ಕೆ, ಹಲವು ಬಾರಿ ಅನುಕೂಲಕ್ಕೆ ಬಿಟ್ಟಿದ್ದು ಅಷ್ಟೇ.. ನೀನೆ ಹೇಳಿದೆ ಅಲ್ವಾ, ನಿನ್ನದು ವಿಚಾರ ಮಾರ್ಗ ಅಂತ.. ನೀನೆ ವಿಚಾರ ಮಾಡ್ಕೋ..” ಎಂದು ನಸುನಕ್ಕು ಕರ್ಮದ ವಾದಕ್ಕೆ ಅಂತ್ಯ ಹಾಡಿದರು.
ಅಜಯ — “ಹೌದೂ, ಅಮ್ಮನ “ಕರ್ಮ” ಪದ ಪ್ರಯೋಗದ ಹಿಂದೆ ಇಷ್ಟೆಲ್ಲ ಫಿಲಾಸಫಿ ಇದೆ ಅಂತೀರಾ.. ಇದೆಲ್ಲ ಅವಳಿಗೆ ಹೇಳಿದ್ರೆ, ಅದಕ್ಕೂ ಅವ್ಳು “ನನ್ ಕರ್ಮ” ಅಂತ ಉತ್ತರಿಸ್ತಾಳೆ” ಎಂದು ನಕ್ಕು ಕಾಫಿ ಮುಗಿಸಿ ಶುಭ್ರನಾಗಲು ತನ್ನ ಕೋಣೆಗೆ ಹೊರಟನು.
ಮಠ ಮಠ ಮಧ್ಯಾಹ್ನ. ಅಂದು ಸೂರ್ಯನು ಕೊಂಚ ಹೆಚ್ಚಾಗಿಯೇ ಪ್ರಖರನಾಗಿದ್ದನು. ಉಪಹಾರ ಮುಗಿಸಿದ್ದ ಎಲ್ಲರು ಗೌರಿಯವರು ನೀಡಿದ್ದ ಬಿಸಿ ಚಹಾ ಹಿಡಿದು ಕುಳಿತಿದ್ದರು. ಇನ್ನು 10 ತಿಂಗಳುಗಳಲ್ಲಿ ರಂಗನಾಥರಿಗೆ ಸರ್ಕಾರೀ ಉದ್ಯೋಗದಿಂದ ನಿವೃತ್ತಿ. 33 ವರ್ಷಗಳ ಧೀರ್ಘ ಸೇವೆ. ಹಲವಾರು ಬಾರಿ ವರ್ಗಾವಣೆ. ನಿವೃತ್ತಿಯಾನಂತರದ ತಮ್ಮ ಹಲವು ಯೋಜನೆಗಳ ಬಗ್ಗೆ ಅಜಯನೊಟ್ಟಿಗೆ ಹರಟುತ್ತಿದ್ದರು.
ಗೌರಿ — “ನೀವು ಏನನ್ನಾದರೂ ಮಾಡಿ. ಆದರೆ ಮೊದಲು ಒಂದು ವಾರ ಬಿಡುವು ಮಾಡಿಕೊಳ್ಳಿ. ದೇವಿಪುರಕ್ಕೆ ಹೋಗಿ ದೇವಸ್ಥಾನದ ಪುನಶ್ಚೇತನ ಕಾರ್ಯ ಮಾಡಿ ಮುಗಿಸೋಣ. ಅಜಯನ ಮದುವೆಯ ಹರಕೆಯದು.” ಎಂದು ಅಡುಗೆ ಕೋಣೆಯಿಂದಲೇ ಹರಟೆಯ ಮದ್ಯೆ ಮೂಗು ತೂರಿಸಿದರು.
ದೇವಿಪುರ ರಂಗನಾಥರ ಪೂರ್ವಿಕರ ಗ್ರಾಮ. ಮನೆಯಲ್ಲಿ ಏನೇ ಶುಭ ಕಾರ್ಯ ನಡೆದರೂ ಮೊದಲ ಸಂಕಲ್ಪ ಆಗುತ್ತಿದ್ದದ್ದು ದೇವಿಪುರದ ಗ್ರಾಮದೇವತೆಯ ದೇವಸ್ತಾನದಲ್ಲೇ. ಊರ ಹೊರಗಿನ ಕಿರಿದಾದ ದೇವಸ್ಥಾನವದು. ಜನ ಜಂಗುಳಿಯಿಂದ ದೂರ. ಅಲ್ಲಿಯ ನಿರ್ಮಲ ವಾತಾವರಣ ಮನಸ್ಸಿಗೆ ಮುದ ಉಂಟು ಮಾಡಿತ್ತಿದ್ದರಿಂದ, ದೇವಿಪುರದ ಭೇಟಿ ರಂಗನಾಥರಿಗೆ ಭಕ್ತಿ ಮತ್ತು ಭಾವ ಎರಡನ್ನೂ ತಣಿಸುವ ರಮಣೀಯ ತಾಣ. ಬೆಂಗಳೂರಿನಿಂದ 2 ಗಂಟೆಗಳ ಪ್ರಯಾಣ ದೇವಿಪುರಕ್ಕೆ. ಬೆಳಗ್ಗೆ ಹೊರಟರೆ ಪೂಜೆ, ಸಂಕಲ್ಪ ಮುಗಿಸಿಕೊಂಡು ಮಧ್ಯಾಹ್ನ ಊಟದ ವೇಳೆಗೆ ತಿರುಗಿ ಬರಬಹುದು. ಅನುಕೂಲಕ್ಕನುಸಾರವಾಗಿ ಕುಟುಂಬ ಸಮೇತರಾಗಿಯೋ, ಇಲ್ಲವೇ ಏಕಾಂಗಿಯಾಗಿಯೋ ಹೋಗಿ ಬರುತ್ತಿದ್ದರು ರಂಗನಾಥರು. ಅದು ತಮ್ಮ ಪೂರ್ವಿಕರ ಗ್ರಾಮವಾದರೂ ಅವರ ತಲೆಮಾರಿನವರ ಯಾವ ಪರಿಚಯಸ್ಥರ ಮನೆಯು ಗ್ರಾಮದಲ್ಲಿರದ ಕಾರಣ, ಅವರು ನೇರವಾಗಿ ಗುಡಿಗೆ ಹೋಗಿ, ತಮ್ಮ ಕೆಲಸ ಕಾರ್ಯ ಮುಗಿಸಿಕೊಂಡು, ಅಲ್ಲಿಂದಲೇ ತಿರುಗಿ ಬರುವುದು ವಾಡಿಕೆ. ಹಲವು ವರ್ಷಗಳ ಭೇಟಿಯಿಂದ ಗುಡಿಯ ಅರ್ಚಕರ ಪರಿಚಯ ಚೆನ್ನಾಗಿಯೇ ಇತ್ತು. ತಾವು ಹೋದಾಗ ಏನಾದರು ಸಹಾಯವೋ ಇಲ್ಲವೇ ಸೌಕರ್ಯವೋ ಬೇಕಿದ್ದರೆ ಎಲ್ಲವೂ ಅರ್ಚಕರ ಮನೆಯಲ್ಲೇ ಆಗುತಿತ್ತು. ಅಜಯನಿಗೆ ಕಳೆದ ಎರಡು ವರ್ಷಗಳ ವಧು ಅನ್ವೇಷಣೆ ಸಫಲವಾಗದಿದ್ದಾಗ, ರಂಗನಾಥ್ ಮತ್ತು ಗೌರಿಯವರು ದೇವಿಗೆ ಸಂಕಲ್ಪ ಮಾಡಿ, ಬಹುತೇಕ ಶಿಥಿಲಗೊಂಡಿದ್ದ ಗುಡಿಯನ್ನು ಪುನಶ್ಚೇತನ ಮಾಡುವುದಾಗಿ ಹರಕೆ ಹೊತ್ತಿದ್ದರು. ಆದರೆ ಹಲವು ವರ್ಷಗಳ ನಿರಂತರ ಭೇಟಿಯಾನಂತರವೂ ಗ್ರಾಮದ ಪರಿಚಯ ಹೆಚ್ಚಾಗಿ ಇರದ ಕಾರಣ, ಗುಡಿಯ ಪುನಶ್ಚೇತನ ಸುಲಭದ ಕೆಲಸವಾಗಿರಲಿಲ್ಲ ಅವರಿಗೆ. ದೇವಿಪುರದಲ್ಲೇ 4–5 ದಿನಗಳ ವಾಸ್ತವ್ಯ ಹೂಡಿ, ಅರ್ಚಕರ ಸಹಾಯದಿಂದ ಅಲ್ಲಿಯ ಕೆಲಸಗಾರರ ಪರಿಚಯ ಬೆಳಸಿಕೊಂಡು, ಎಲ್ಲದರ ಉಸ್ತುವಾರಿ ವಹಿಸಿ, ಕಾರ್ಯ ನೆರವೇರಿಸಬೇಕಿತ್ತು. ಕಛೇರಿಯಲ್ಲಿ ಸೀನಿಯರ್ ಆಗಿದ್ದ ರಂಗನಾಥರಿಗೆ ಅಷ್ಟು ದಿನಗಳ ಬಿಡುವು ಸಿಗುವುದು ಕಷ್ಟವಿತ್ತು. ಕೆಲವು ತಿಂಗಳ ಕೆಳಗಷ್ಟೇ ಅಜಯನ ಮದುವೆಗೆ ಎರಡು ವಾರದ ರಜೆ ಹಾಕಿದ್ದರು. ದೇವಿಪುರದ ಕೆಲಸ ಹಾಗೆಯೇ ಉಳಿದಿತ್ತು. ಇದೆ ಗೌರಿಯವರ ಕಳವಳ.
ರಂಗನಾಥ್ — “ಹೌದು. ಹೌದು, ಮೊದಲು ಮಾಡಬೇಕಿರೋ ಕೆಲಸ ಅದೇ. ಉಳದಿದ್ದೆಲ್ಲ ಆಮೇಲೆ” ಎಂದು ತಾವು ಮರೆತಂತಿದ್ದ ಜವಾಬಾದಾರಿಯ ನೆನಪಾಗಿ ಸಹಮತ ಸೂಚಿಸಿದರು.
ಅಜಯ ತಾನೇನೋ ಹೇಳ ಹೊರಡುವಷ್ಟರಲ್ಲಿ ಮನೆಯ ಕಾಲಿಂಗ್ ಬೆಲ್ಲಿನ ಸದ್ದಾಯಿತು. ಮಾತು ಮರೆತು ಬಾಗಿಲು ತೆಗೆಯಲು ಹೊರಟ.
ಅಜಯ — “ಯಾರು ? ಯಾರುಬೇಕಿತ್ತು ?” ಬಾಗಿಲಾಚೆ ಬೆವರು ಸುರಿಸಿ ನಿಂತಿದ್ದ ನೀಳ ಕಾಯದ ವ್ಯಕ್ತಿಯನ್ನು ನೋಡಿ ಕೇಳಿದ.
ಅವರು ಧರಿಸಿದ್ದ ಶರ್ಟ್ ಮತ್ತು ಪ್ಯಾಂಟ್ ಗಳಿಗೆ ಯಾವುದೇ ತಾಳ ಮೇಳವಿರಲಿಲ್ಲ. ತೊಡುವುದಕ್ಕಷ್ಟೇ ಉಡುಗೆಯಂತಿದ್ದ ಅವೆರಡರ ಆಯ್ಕೆಯಲ್ಲಿ ಯಾವುದೇ ವಿಲಾಸ ಗೋಚರಿಸಲಿಲ್ಲ. ಸಧೃಡವಾದ ಮೈಕಟ್ಟಾದರೂ, ಏನೋ ಭಾರ ಹೊತ್ತು ದಣಿದಂತ್ತಿದ್ದ ಮೇಲ್ನೋಟ. ರಂಗನಾಥರ ವಯಸ್ಸಿರಬಹುದಷ್ಟೆ ಬಹುಷಃ, ಎನಿಸಿತು ಅಜಯನಿಗೆ. ತಮ್ಮ ಮನೆಯ ಆಸುಪಾಸು ಎಂದೂ ಕಂಡಿರುವಂತೆ ತೋರಲಿಲ್ಲ.
“ಯಜಮಾನ್ರು ಇದ್ದಾರಾ ? ಭೇಟಿ ಮಾಡ್ಬೇಕು ಅಂದ್ರೆ ಈ ವಿಳಾಸಕ್ಕೆ ಬನ್ನಿ ಅಂತ ಹೇಳಿದ್ರು”
“ಯಜಮಾನ್ರು ಅಂದ್ರೆ ಯಾರು ? ಹೆಸರು ಏನು ?” ಕೊಂಚ ಗೊಂದಲಮಯನಾಗೆ ಕೇಳಿದ ಅಜಯ.
ಅಷ್ಟರಲಿ ಮೇಲಿನಿಂದ ಕೆಳಗಿಳಿದು ಬಾಗಿಲ ಬಳಿ ಬರುತ್ತಿದ್ದ ರಂಗನಾಥರು
“ಯಾರೋ ಅದು ? ಏನ್ ಬೇಕಂತೆ” ಎಂದು ಕೇಳಿದರು.
ಅಸ್ಫಷ್ಟವಾಗಿ ಕಾಣುತಿದ್ದ ವ್ಯಕ್ತಿಯನ್ನು ಮೆಟ್ಟಿಲುಗಳನ್ನು ಇಳಿಯುತ್ತ ತಮ್ಮ ಹುಬ್ಬೇರಿಸಿ ದಿಟ್ಟಿಸಿ ನೋಡುತ್ತಾ ತಮ್ಮ ಕನ್ನಡ ಸರಿಪಡಿಸಿಕೊಂಡು ಆಶ್ಚರ್ಯದಿಂದ
“ಒಹ್ ನೀವಾ..!? ಬನ್ನಿ.. ಒಳಗ್ ಬನ್ನಿ.. ಸರಿಯಾಗೇ ಬಂದಿದ್ದೀರಲ್ಲ..ಪರವಾಗಿಲ್ಲ ವಿಳಾಸ ಹುಡುಕೋದಿಕ್ಕೆ ತೊಂದರೆ ಆಗ್ಲಿಲ್ವಾ ನಿಮಗೆ ?”
“ಅಜಯ್, ಮೇಲೆ ಹೋಗಿ ಅಮ್ಮನಿಗೆ ಸ್ವಲ್ಪ ಉಪಹಾರ ಮತ್ತೆ ಚಹಾ ಮಾಡ್ಕೊಂಡ್ ಬರೋದಿಕ್ಕೆ ಹೇಳು. ನಾವು ಇಲ್ಲೇ ಯುಟಿಲಿಟಿ ರೂಮ್ ಅಲ್ಲಿ ಕೂತ್ಕೊಂಡಿರ್ತೀವಿ.”
ಇದ್ಯಾವ ಪರಿಚಯ ಅಪ್ಪನಿಗೆ ಅಂತ ಯೋಚಿಸುತ್ತಲೇ ಅಮ್ಮನೆಡೆಗೆ ನಡೆದ ಅಜಯ.
ಅಜಯ — “ಅಮ್ಮ ಯಾರೋ ಬಂದಿದ್ದಾರೆ. ಅವರನ್ನ ಈ ಆಸುಪಾಸಿನಲ್ಲಾಗಲಿ ಮುಂಚೆ ಎಲ್ಲಿಯೂ ನೋಡಿದ ನೆನಪಿಲ್ಲ. ಅಪ್ಪನ ಆಫೀಸಿನವರ ಥರ ಕಾಣಿಸೋದಿಲ್ಲ ಅವರ ವೇಷ ಭೂಷಣ.. ಆದ್ರೂ ಅಪ್ಪ ತುಂಬಾ ಪರಿಚಯದಿಂದ ಮಾತಾಡಿಸ್ತಿದಾರೆ. ಸ್ವಲ್ಪ ಟಿಫನ್ ಚಹಾ ತೊಗೊಂಡ್ ಹೋಗ್ಬೇಕಂತೆ” ಎಂದು ಸಂದೇಶದೊಟ್ಟಿಗೆ ತನ್ನ ಗೊಂದಲಗಳನ್ನು ಗೌರಿಯವರಿಗೆ ಒಪ್ಪಿಸಿ ತನ್ನ ಕೋಣೆಗೆ ಹೋದ.
ಕೆಲ ಹೊತ್ತುಗಳ ಹರಟೆ ಮತ್ತೊಂದು ಸರತಿಯ ಚಹಾದ ನಂತರ,
“ಅಜಯ್.. ಅಜಯ್.. ಸ್ವಲ್ಪ ಬಾ ಇಲ್ಲಿ. ಇಲ್ಲೇ ಏಟಿಎಂ ಗೆ ಹೋಗಿ ಒಂದು ೧೦ ಸಾವಿರ ತೊಗೊಂಡ್ ಬಾ”
ಕೆಳಗಿನ ಕೋಣೆ ಇಂದ ಕೂಗಿ ಹೇಳಿದರು ರಂಗನಾಥ್.
ಅಪ್ಪ ಯಾಕೆ ಈ ಅಪರಿಚಿತರಿಗೆ ಇಷ್ಟು ಸತ್ಕರಿಸುತಿದ್ದಾರೆ ಅನ್ನುವ ಗೊಂದಲಿದಿಂದಲೇ ಏನು ಮಾತನಾಡದೆ ಅಪ್ಪನ ಮೇಜಿನ ಮೇಲಿದ್ದ ಅವರ ಏಟಿಎಂ ಕಾರ್ಡ್ ತೆಗೆದುಕೊಂಡು ಹೋಗಿ ಹಣವನ್ನು ತಂದು ಕೊಟ್ಟ.
ಅಮ್ಮ ನೋಡಿದರೆ ತನಗೆ ಸಂಬಂಧವೇ ಇಲ್ಲ ಎನ್ನುವಂತೆ ತನ್ನ ಪಾಡಿಗೆ ತಾನು ಅಡುಗೆ ಮನೆಯ ಕೆಲಸದಲ್ಲಿ ನಿರತಳಾಗಿದ್ದಾಳೆ.
“ಆಯಿತು ಸ್ವಾಮಿ. ನಾನ್ ಬರ್ತೀನಿ. ಅವರು ಯಾರು ? ನಿಮ್ಮ ಮಗನೆ ? ಹೊಲದ ಕಡೆ ಕರ್ಕೊಂಡು ಬನ್ನಿ. ನಿಮ್ ಹತ್ರ ಸಹಾಯ ಕೇಳೋದೇ ಆಯ್ತು ನೋಡಿ. ನಿಮ್ ಋಣ ಹೆಂಗೆ ತೀರುಸ್ತೀನೋ ಗೊತ್ತಿಲ್ಲ. ಬರ್ತೀನಿ” ಅತ್ಯಂತ ವಿನಮ್ರತೆಯಿಂದ ಮತ್ತು ಅಸಹಾಯಕವಾಗಿ ತಮ್ಮ ಕೈ ಜೋಡಿಸಿ ನುಡಿದ ವ್ಯಕ್ತಿಯನ್ನು ಬಾಲ್ಕನಿಯಿಂದಲೇ ನಿಂತು ಗಮನಿಸುತ್ತಿದ್ದ ಅಜಯ.
“ಆಯಿತು. ಹೋಗಿ ಬನ್ನಿ. ಎಲ್ಲ ಒಳ್ಳೆಯದಾಗಲಿ. ನಾನು ಆ ಕಡೆ ಬಂದು ಸ್ವಲ್ಪ ದಿನಗಳಾಗಿವೆ. ಬರ್ತೀನಿ. ಮಗನಿಗೆ ನಿಮ್ಮ ಗುರುತು ಸಿಗ್ಲಿಲ್ಲ ಅನ್ಸುತ್ತೆ. ನೋಡಿದ್ದಾರೆ ನಿಮ್ಮನ್ನ. ನಾನು ಅವ್ರಿಗೆ ಪರಿಚಯ ತಿಳಿಸ್ತೀನಿ ಬಿಡಿ. ಉಷಾರು” ರಂಗನಾಥರು ಮಂದಹಾಸದಿಂದಲೇ ಬಂದವರನ್ನು ಬಿಳ್ಕೊಟ್ಟರು.
ಒಂದು ಬಗೆಯ ಸಂತೃಪ್ತಿ ಭಾವದಿಂದ ತಮ್ಮ ಏಟಿಎಂ ಕಾರ್ಡ್ ಹಿಡಿದು ಮುಗುಳ್ನಗೆ ಬೀರುತ್ತಾ ಮೇಲೆ ಗೌರಿ ಊಟಕ್ಕೆ ತಯಾರಿ ಮಾಡುತಿದ್ದಲ್ಲಿಗೆ ಬಂದು
“ಬಂದಿದ್ದು ಯಾರು ಅಂತ ಗುರುತು ಸಿಗಲಿಲ್ವಾ?”
ಗೌರಿ — “ಎಲ್ಲೋ ನೋಡಿದ ಹಾಗಿದೆ. ಆದ್ರೆ ಹೊಳೀತಿಲ್ಲ ? ದೇವಿಪುರದವರಾ ?” ಊಹಿಸಿದರು.
ರಂಗನಾಥ್ — “ದೇವಿಪುರದವರು ಅಲ್ಲಾ. ಆದ್ರೆ ಅಲ್ಲಿಗೆ ಹೋಗ್ತಾ ಬರ್ತಾ ಯಾವಾಗ್ಲೂ ಎಳೆನೀರು ಕುಡಿಯೋದಿಕ್ಕೆ ನಿಲ್ಲಿಸ್ತೀವಿ ಅಲ್ವಾ ? ಅದೇ ಅರೆಕೆರೆ ಹತ್ರ. ರಾಮಣ್ಣ ಕಣೆ” ಎಂದು ಉದ್ಗರಿಸಿದ್ರು.
ಗೌರಿ — “ಒಹ್ ! ಹೈವೇ ರಾಮಣ್ಣನಾ.. ಈಗ ಗುರುತಾಯ್ತು ನೋಡಿ.. ಬೇಗ ನೆನಪು ಹತ್ತಲಿಲ್ಲ”
“ಹಲವು ವರ್ಷಗಳ ಪರಿಚಯದಿಂದ ಒಂದು ನಗೆ ಮತ್ತು ಕುಶಲೋಪರಿ ಬಿಟ್ಟರೆ ಇಷ್ಟು ಸ್ನೇಹ ಪರಿಚಯ ಇದೆ ನಿಮಗೆ ಅಂತ ತಿಳಿದಿರಲಿಲ್ಲ” ಆಶ್ಚರ್ಯದಿಂದ ಕೇಳಿದರು.
ರಂಗನಾಥ್ — “ಅಲ್ವೇ ನಾವು ದೇವಿಪುರಕ್ಕೆ ಹೋಗುವಾಗೆಲ್ಲ ಅಲ್ಲಿ ಒಂದು ಎಳೆನೀರು ಕುಡಿತೀವಿ. ಎಷ್ಟೋ ಬಾರಿ ಹೈವೆ ಬಳಿ ಬಸ್ಸಿಗೆ ಕಾಯುತ್ತ ಮಳೆ ಬಂದ್ರೆ ಅವರ ಗೂಡಂಗಿದಿಯಲ್ಲೇ ಗಂಟೆಗಳ ಕಾಲ ಕೂತಿದ್ದೀವಿ. ಅಷ್ಟು ಪರಿಚಯ ಇರೋದಿಲ್ವೇನೇ ?”
“ಹೀಗೆ ಒಂದು ಬಾರಿ ದೇವಿಪುರಕ್ಕೆ ನಾನು ಒಬನ್ನೇ ಬಸ್ಸಿನಲ್ಲಿ ಹೊರಟಾಗ ಅರೆಕೆರೆ ಕ್ರಾಸಿನವರೆಗೂ ಬಸ್ಸು ಸಿಕ್ಕಿತು. ಅಲ್ಲೇ ರಾಮಣ್ಣನ ಗೂಡಂಗಡಿಯಲ್ಲಿ ಕುರ್ಚಿ ಹಾಕಿಕೊಂಡು ದೇವಿಪುರದ ಬಸ್ಸಿಗೆಂದೇ ಗಂಟೆಗಟ್ಟಲೆ ಕಾಯುತ್ತ ರಾಮಣ್ಣನೊಟ್ಟಿಗೆ ಹರಟೆ ಹೊಡಿತಿದ್ದೆ.
ಸಂಜೆ ಆದರೂ ಏನು ಸಿಗದೇ ಕಂಗಾಲಾಗಿದ್ದ ನನಗೆ ರಾಮಣ್ಣನೇ ತಮ್ಮ TVS ಅಲ್ಲಿ ಅರಕೆರೆ ವರೆಗೆ ಕರೆದುಕೊಂಡು ಹೋಗಿ, ಮಾರಾಟ ವಾಗದೆ ಉಳಿದ ತೆಂಗಿನ ಕಾಯಿಗಳನೆಲ್ಲ ಮನೆಯಲ್ಲಿ ಇಳಿಸಿ, ತೋಟಕ್ಕೆ ನೀರು ಹಾಯಿಸಲೆಂದು ಹೊರಟವರು ನನ್ನನು ಕರೆದುಕೊಂಡು ತಮ್ಮ ತೋಟದ ಕಿರು ಪರಿಚಯ ಮಾಡಿಸಿ, ಅಲ್ಲಿಂದ ಮತ್ತೆ 12km ದೇವಿಪುರದವರೆಗೂ ತಮ್ಮ TVS ಅಲ್ಲೇ ಬಿಟ್ಟು ಬಂದರು.
ಆಗ ನಾನು ರಾಮಣ್ಣನಿಗೆ ನನ್ನ ಫೋನ್ ನಂಬರ್ ಕೊಟ್ಟು ಮನೆಯ ವಿಳಾಸ ಸಹ ತಿಳಿಸಿದ್ದೆ. ಬೆಂಗಳೂರಿನ ಕಡೆಗೆ ಬಂದಾಗ ಮನೆಗೆ ಬರಬೇಕೆಂದು ತಿಳಿಸಿ, ನನಗೆ ಹೈವೇಯಿಂದ ದೇವಿಪುರದವರೆಗೆ ಬಿಟ್ಟಿದ್ದಕ್ಕೆ 100rs ಕೊಡಲು ಹೋದೆ.. ಆಗ ರಾಮಣ್ಣ ಒಪ್ಪದೇ..
ರಾಮಣ್ಣ — ಬೇಡ ಸ್ವಾಮಿ. ಇರ್ಲಿ ಬಿಡಿ. ಇವತ್ತು ನಾನು ನಿಮಗೆ ಸಹಾಯ ಮಾಡಿದಿನಿ. ಮುಂದೆ ನೀವು ನಂಗೆ ಇಲ್ಲ ಇನ್ನೊಬ್ಬರಿಗೋ ಮಾಡ್ತೀರಾ.. ಎಲ್ಲಾನು ವ್ಯವಹಾರ ಆಗುತ್ತಾ..? ನೀವೊಳ್ಳೆ.. ನಾನೇನು ಕಾಸಿಗೆ ನಿಮ್ಮನ್ನ ಇಲ್ಲಿ ಕರ್ಕೊಂಡು ಬಂದು ಬಿಟ್ಟೇನೆ.. ವರ್ಷಗಳ ವಿಶ್ವಾಸಕ್ಕೆ ಅಲ್ವಾ.. ಮತ್ತೀಗ್ಯಾಕೆ ಕಾಸು ತೆಗಿತೀರಾ.. ಬಿಡಿ ಬಿಡಿ..
ಎಂದು ಹಣವನ್ನು ನನ್ನ ಕಿಸೆಗಿಳಿಸಿಬಿಟ್ಟರು”
ಗೌರಿ — “ಒಹ್ ಹೌದಾ.. ನೀವು ಹೈವೆಯಿಂದ ಬಸ್ಸು ಸಿಗದೇ ಪರದಾಡಿದ್ದು ಹೇಳಿದ್ದಷ್ಟೇ ನೆನಪಿದೆ. ರಾಮಣ್ಣನ ವಿಷಯ ನನಗೆ ನೆನಪಿಲ್ಲ ನೋಡಿ.. ಸರಿ, ಹೊತ್ತಾಯ್ತು, ಊಟ ಮಾಡೋಣ ಬನ್ನಿ” ಎಂದು ಅಜಯನನ್ನು ಊಟಕ್ಕೆ ಕರೆಯಲು ಹೊರಟರು.
ಊಟಕ್ಕೆ ಕುಳಿತಾಗ ಬಂದವರ ವಿಷಯ ಅಪ್ಪ ಪ್ರಸ್ತಾಪಿಸುವರು ಎಂದು ಕಾಯುತಿದ್ದ ಅಜಯ, ಏನು ಸಂಬಾಷಣೆ ಇಲ್ಲದೆ ಊಟ ಸಾಗಿದ್ದನು ತಾಳದೆ ತಾನೇ ಮೌನ ಮುರಿದ.
ಅಜಯ — “ಅಪ್ಪ ಯಾರು ಅವ್ರು ? ಇಲ್ಲಿ ಸುತ್ತ ಮುತ್ತ ನೋಡಿದ ನೆನಪಿಲ್ಲ, ಆದರೆ ಎಲ್ಲೋ ನೋಡಿದ ಹಾಗೆ ಅನ್ನಿಸ್ತಿದೆ.. ಅಸ್ಪಷ್ಟ. ಅದಿರಲಿ, ಅವರಿಗ್ಯಾಕೆ ಅಷ್ಟು ಹಣ ಕೊಟ್ಟು ಕಳಿಸಿದಿರಿ ?”
ರಂಗನಾಥ್ — “ನಾವು ದೇವಿಪುರದಿಂದ ತಿರುಗಿ ಬರುತ್ತಾ ಅರೆಕೆರೆ ಹತ್ರ ಹೈವೇ ಸೇರಬೇಕಾದರೆ ಒಂದು ಕಡೆ ಎಳೆನೀರು ಕುಡಿತೀವಿ ಅಲ್ವಾ ? ಅದೇ ಆ ಗೂಡಂಗಡಿ.. ಅವ್ರೆ ಅಲ್ವ ಹೈವೇ ರಾಮಣ್ಣ.. ಗುರ್ತು ಸಿಗ್ಲಿಲ್ವಾ ?” ಉದ್ಗರಿಸಿದರ..
ಅಜಯ — “ಒಹ್ ಅವರಾ ? ಹಾಂ ನೆನಪು ಬಂತು ಈಗ.. ಅದೇ, ಎಲ್ಲೋ ನೋಡಿದ ಹಾಗೆ ಅನ್ನಿಸ್ತಿತ್ತು.. ಆದ್ರೆ ಸರಿಯಾಗಿ ನೆನಪು ಬರದೇ ಗೊಂದಲವಾಯ್ತು.. ಹೌದು ಅವರ್ಯಾಕೆ ಇಲ್ಲಿಗೆ ಬಂದ್ರು ? ನಮ್ಮ ಮನೆ ವಿಳಾಸ ಅವ್ರಿಗೆ ಹೇಗೆ ಗೊತ್ತಾಯ್ತು ?” ಇನ್ನಷ್ಟು ಪ್ರಶ್ನೆಗಳನ್ನು ಸುರಿಸಿದನು..
ರಂಗನಾಥ್ — “ಅವ್ರಿಗೆ ಏನೋ ಕಷ್ಟ ಇದೆಯಂತ ಅನ್ಸುತ್ತೆ.. ಅದಿಕ್ಕೆ ಇಲ್ಲಿಯವರಿಗೆ ಬಂದಿದ್ದಾರೆ.. ನನ್ನ ಸಹಾಯ ಕೇಳ್ಬೇಕೋ ಬೇಡವೋ ಅನ್ನೋ ಇರಿಸು ಮುರಿಸು ಅವ್ರಿಗೆ ಇತ್ತು ಅನ್ಸುತ್ತೆ.. ಆದ್ರೆ ಪರಿಸ್ಥಿತಿಯ ಸಂಕಷ್ಟ ಕರೆ ತಂದಿರಬೇಕು.. ಬಂದ್ಮೇಲೂ ಸ್ವಲ್ಪ ಹೊತ್ತು ಏನು ಮಾತಾಡದೆ ಸುಮ್ನೆ ಕುಶಲೋಪರಿ ಹೇಳಿ ಹೊರಟು ನಿಂತರು.. ಅವರ ಮುಖ ಅವರ ಸಂದಿಗ್ದತೆಯನ್ನ ಬಿಂಬಿಸ್ತಾ ಇತ್ತು.. ಅವರನ್ನ ಇನ್ನಷ್ಟು ಮುಜುಗರಕ್ಕೆ ಒಳಪಡಿಸಬಾರದು ಅಂತ ನಾನೆ ಕೇಳಿದೆ.. ಸಂಕೋಚ ಯಾಕೆ ರಾಮಣ್ಣ.. ನಾನು ನಿಮ್ ಸಹಾಯ ಈಗ್ಲೂ ನೆನೆಸ್ತ ಇರ್ತೀನಿ.. ಏನಾದ್ರು ಬೇಕಿದ್ರೆ ಹೇಳಿ.. ಮುಜುಗರ ಮಾಡ್ಕೋಬೇಡಿ ಅಂತ ಒತ್ತಾಯಿಸಿದೆ..”
ರಾಮಣ್ಣ — “ಸ್ವಾಮಿ ನಾನು ಹೀಗೆ ಹೇಳ್ತಿನಿ ಅಂತ ತಪ್ಪು ತಿಳ್ಕೊಬೇಡಿ.. ನಾನು ನಿಮಗೆ ಸಹಾಯ ಮಾಡಿದ್ದು ನನ್ನ ತಲೆಯಲ್ಲಿ ಇಟ್ಕೊಂಡಿಲ್ಲ.. ಪ್ರತ್ಯುಪಕಾರಕ್ಕೆ ಇಲ್ಲಿಗೆ ಬಂದಿದೀನಿ ಅನ್ಕೋಬೇಡಿ.. ಸ್ವಲ್ಪ ಕಷ್ಟ ಇತ್ತು.. ಯಾರಿಗೆ ಹೇಳ್ಬೇಕು ತಿಳಿದೇ ನಿಮ್ಮ ಹತ್ರ ಬಂದೆ ನೋಡಿ”
ರಂಗನಾಥ್ — “ರಾಮಣ್ಣ ನಾನು ಎಷ್ಟು ವರ್ಷ ಇಂದ ನಿಮ್ನ ನೋಡ್ತಾ ಇದೀನಿ.. ಇಷ್ಟ್ಯಾಕೆ ಪೀಠಿಕೆ.. ಹೇಳಿ ಏನು ವಿಷ್ಯ..”
ರಾಮಣ್ಣ — “ಏನಿಲ್ಲ.. ನೀವೇ ಬಂದಾಗ ತೋರಿಸಿದ್ದೆ ಅಲ್ವಾ.. ನನಗಂತ ಇರೋದು 1.5 ಎಕರೆ.. ಅದರಲ್ಲಿ ನಾನು ಚಿಕ್ಕವನಿದ್ದಾಗ ನಮ್ಮ ಅಪ್ಪ ನೆಟ್ಟಿದ್ ಸ್ವಲ್ಪ ತೆಂಗಿನ ಮರಗಳು, ಇನ್ನು ಸ್ವಲ್ಪ ಮನೆ ಪೂರ್ತಿಗೆ ಆಗೋ ಹಣ್ಣಿನ ಮರಗಳು.. ಹೈವೇ ಆದಮೇಲೆ ಹಣದ ಆಸೆಗೆ ಅಣ್ಣ ತಮ್ಮಂದಿರೆಲ್ಲರೂ ಅವರವರ ಪಾಲಿನ ಹೊಲ ಮಾರಿ, ಬಂದ ಹಣವನ್ನೆಲ್ಲ ಎರಡೇ ವರ್ಷದಲ್ಲಿ ತಿಂದು ಹೇತು ಬಿಟ್ರು .. ಈಗ ತಿಂಗಳಿಗೆ ಒಂದೊಂದು ಊರಲ್ಲಿ ಸರ್ಕಾರದವರು ಕೊಡೊ ಕೂಲಿ ಕೆಲಸ ಮಾಡ್ತಿದ್ದಾರೆ.. ನಂಗೆ ಉಳಿದ ಹೊಲದಲ್ಲಿ ನಾನು ಕಷ್ಟನೋ ಸುಖನೋ ಹಾಗೆ ಜೀವನ ನಡಿಸ್ತಿದ್ದೆ.. ಬೆಳಿಯೋ ಅಲ್ಪ ಸ್ವಲ್ಪ ತೆಂಗನ್ನ ಮಾರ್ಕೆಟಿಗ್ಗೆ ತಿರುಗಾಡಿ ಹಾಕೋ ಅಷ್ಟು ತ್ರಾಣ ಇಲ್ಲ ನಂಗೆ. ನಂದೇ ಹಳೆ ಲೂನಾ ತೊಗೊಂಡ್ ಅಣ್ಣತಮ್ಮಂದಿರ ಆಸೆ ಗೆಡಿಸಿ ಜೀವನ ಹಾಳು ಮಾಡಿಕೊಂಡ ಹೈವೇ ಪಕ್ಕನೆ ನಿಂತು ಕಾಯಿ ಮಾರ್ತೀನಿ.. ಇಷ್ಟು ವರ್ಷ ಹೆಂಗೋ ಕಳಿತು.. ಮಕ್ಳು ಚಿಕ್ಕವ್ರು ಇದ್ರು ನಡೀತು.. ಒಂದೆರಡು ತಿಂಗಳಾಯ್ತು, ನನ್ನ ಮಗ, ಮನೆ ಕಷ್ಟ ನೋಡೋಕೆ ಆಗ್ದೇ, ಇದೆ ಬೆಂಗಳೂರು ಸೇರಿದನೇ ನೋಡಿ, ಅದೇನೋ ಕ್ಯಾಬ್ ಓಡಿಸ್ತೀನಿ ಅಂತ.. ಅವನಿಗಾದ್ರೂ ಕ್ಯಾಬ್ ಶುರು ಮಾಡೋದಿಕ್ಕೆ ಹಣ ಎಲ್ಲಿಂದ ಬರ್ಬೇಕು.. ಸಣ್ಣವನಿದ್ದಾಗಲಿಂದನೂ ಒಂದು ಮಿಠಾಯಿ ಕೂಡ ಕೇಳದ ಮಗ ಅದು.. ಅವ್ನ ಒದ್ದಾಟ ನೋಡೋಕೆ ಆಗದೆ ನಾನೆ ಸ್ವಲ್ಪ ಹಣ ಅಲ್ಲಿ ಇಲ್ಲಿ ಹುಟ್ಟಿಸಿ ಕೊಟ್ಟೆ ನೋಡಿ.. ಎರಡೇ ವರ್ಷದಲ್ಲಿ ಎಲ್ಲ ವಾಪಾಸ್ ಮುಟ್ಟಿಸ್ತೀನಿ, ನೀವು ಅದರ ಬಗ್ಗೆ ತಲೆ ಕೆಡಿಸ್ಕೊಬೇಡಿ ಅಂತಾನೆ.. ಅದೇನು ಮಾಡ್ತಾನೆ ನೋಡ್ಬೇಕು.. ಹೆಂಗೋ ಆಯ್ತು ಅಂತ ಸ್ವಲ್ಪ ನಿರಾಳ ಆದೆ..
ಅಷ್ಟ್ರಲ್ಲಿ ಬೆಳ್ದಿರೋ ಮಗಳು ಮನೆ ತುಂಬಾ ಕಣ್ಮುಂದೆನೇ ಓಡಾಡ್ತಾಳೆ.. ಮಗನಿಗೆ ಏನೋ ಮಾಡಿಕೊಟ್ಟೆ, ಮಗಳಿಗೆ ಯಾರೋ ದಡ ಮುಟ್ಟಿಸೋರು ಅಂತ ಎಲ್ಲರು ಮಾತಾಡೋ ಹಾಗಾಯ್ತು..
ಶಕ್ತಿ ಇರ್ಬೇಕಾದ್ರೆನೇ ಇದು ಆಗ್ಲಿ ಅಂತ ಮದ್ವೆ ಮಾಡೋಣ ಅನ್ಕೊಂಡ್ವಿ.. ಕಳೆದ ವಾರ ವರ ನಿಶ್ಚಯ ಮಾಡ್ಕೊಂಡು ಬಂದ್ವಿ.. ಹೆಂಡ್ತಿಗಾದ್ರೋ ನಮ್ ಜವಾಬ್ದಾರಿ ಮುಗಿಯೋದಿಕ್ಕೆ ಬಂತು ಅಂತ ನಿರಾಳ.. ಆದ್ರೆ ನಂಗೆ ? ಮದ್ವೆಗೆ ಹಣ ಮತ್ತೆಲ್ಲಿಂದ ತರೋದು ಅನ್ನೋ ಆತಂಕ.. ಹೊಲ ಮಾರೋದಿಕ್ಕೆ ಮನಸ್ಸಿಲ್ಲ.. ಊರಲ್ಲಿ ನಂಗೆ ಮತ್ತೆ ಹಣ ಹುಟ್ಟಲ್ಲ.. ನನ್ನ ಎಳೆನೀರು ಅಂಗಡಿಯಿಂದ ಎಷ್ಟಾದ್ರೂ ವ್ಯಾಪಾರ ಆಗುತ್ತೆ ನಿಮಗೆ ಗೊತ್ತು.. ಅದೇನೋ ಹೇಳ್ತಾರಲ್ವ, ಎಕ್ರೆಗೊಂದ್ ಲೋಟ ಗಂಜಿ ಅಂತ.. ಹಂಗೆ ಆಗಿದೆ ನೋಡಿ.. ಒಂದೂವರೆ ಲೋಟದ್ ಗಂಜಿ ಜೀವನ ನಂದು..” ಅರೆ ನಗುವಿನಿಂದಲೇ ಹೇಳಿದ..
ರಂಗನಾಥ್ — “ರಾಮಣ್ಣ, ಸ್ವಲ್ಪ ಸುಧಾರಿಸಿಕೊಳ್ಳಿ.. ತಿನ್ನೋದಿಕ್ಕೆ ಏನಾದ್ರು ಹೇಳ್ತಿನಿ..” ಕೇಳಿದ್ದನ್ನು ಅರಗಿಸಿಕೊಳ್ಳಲು ಒಂದು ಕಿರು ವಿರಾಮ ಬೇಕಿತ್ತು.. ಹೇಳಿ ಕೇಳಿ ರಂಗನಾಥರದ್ದೋ ಹೆಂಗರಳು.. ನೆಪವೊಂದನ್ನು ಒಡ್ಡಿ ರಾಮಣ್ಣರಿಗೆ ಹಣ ಬೇಕಾಗಬಹುದೆಂಬ ಸೂಕ್ಷ್ಮ ಅರಿತು ಮೆಲ್ಲನೆ ಮೇಲೆ ಬಂದು ಅಜೇಯನನ್ನು ಕೂಗಿ ಕರೆದು ಏಟಿಎಂ ಇಂದ ಹಣ ಬಿಡಿಸಿಕೊಂಡು ಬರಲು ಹೇಳಿದ್ದರು..
ರಂಗನಾಥ್ — “ಹೇಳಿ ರಾಮಣ್ಣ.. ನಿಮ್ ಕಷ್ಟ ನಂಗೆ ತಿಳಿಯುತ್ತೆ.. ನನ್ನಿಂದ ಏನಾಗ್ಬೇಕು ಅದನ್ನ ಮಾಡ್ತೀನಿ ಅನ್ನೋ ಭರವಸೆ ಅಷ್ಟೇ ಕೊಡಬೋದು ನಿಮಗೆ..” ಗಾಂಭೀರ್ಯದಿಂದ ನುಡಿದು ಧೀರ್ಘವಾಗಿ ಉಸಿರೆಳೆದರು..
ರಾಮಣ್ಣ — “ಏನಿಲ್ಲ.. ನಾನು ಆಗ್ಲೇ ಹೇಳಿದೆ ನಿಮ್ಗೆ.. ಹೊಲ ಮಾರಿ ಮನೆತನ ಹಾಳು ಬಿದ್ದಿವೆ ನಮ್ಮವು.. ಹೊಲದ ಋಣ ತೀರಿಸದೆ ಹಣದ ಆಸೆಗೆ ಬಿದ್ದು ಮಾರಿದ್ರೆ ಹಂಗೆ ಅಗೋದೇನೋ.. ನನ್ನ ಪರಿಸ್ಥಿತಿ ಕೂಡ ಈಗ ಹಾಗೆ ಇದೆ.. ಏನು ಮಾಡೋದು ಅಂತ ಬಹಳ ಯೋಚಿಸಿದೆ.. ಒಳ್ಳೇದೋ, ಕೆಟ್ಟದೋ, ಕಷ್ಟನೋ, ಸುಖನೋ, ಎಲ್ಲಾನು ಆ ಹೊಲದಲ್ಲೇ ಅನುಭವಿಸಿದಿವಿ.. ಸುಖ ಇದ್ದಾಗ ಅಲ್ಲೇ ಸೇರಿ ಊಟ ಮಾಡೀವಿ, ಕಷ್ಟ ಇದ್ದಾಗ ಅಲ್ಲೇ ಕೂತು ಅತ್ತೀನಿ.. ಏನೇ ಆದ್ರು ನನ್ನ ಕಣ್ಣಿಗೆ ಬೀಳೋದು ಅದೇ.. ನನ್ನ ಮಗ ಮಗಳು ತರ ಅದು ಒಂದು ರೀತಿ ಮಗು ಇದ್ದಂಗೆ ಅಂತ ತಿಳ್ದೀನಿ.. ಇಷ್ಟು ವರ್ಷ ಎಷ್ಟೋ ಜನ ಆಸೆ ತೋರ್ಸಿದ್ರೂ ಆ ಮಗುನ ಜೋಪಾನವಾಗಿ ಕಾಪಾಡಿಕೊಂಡ ಬಂದೀನಿ.. ಆದ್ರೆ ಈಗ ಯಾಕೋ ಅದ್ರ ಋಣ ಮುಗ್ದಿದೆ ಅನ್ನಿಸ್ತಿದೆ.. ಹಣಕ್ಕೆ ಆಸೆ ಬಿದ್ದು ಮಾರಕ್ಕೆ ಇಟ್ಟಿಲ್ಲ ಅನ್ನೋ ಸಮಾಧಾನ ಅಂತೂ ಇದೆ.. ಇಷ್ಟು ವರ್ಷ ಆ ಮಗುನ ನಾನು ಪೋಷಿಸಿದೆ, ಈಗ ಅದು ನನ್ನ ಭಾರ ಸ್ವಲ್ಪ ಹೊರ್ತಾ ಇದೆ ಅನ್ಕೋತೀನಿ.. ಈಗ ನಾನು ಮಾಡಬೋದಾಗಿರೋದು ಇಷ್ಟೇ.. ಈ ಮಗುನ ಯಾರ ಯಾರೋ ಕೈಯಲ್ಲಿ ಹಾಕೋ ಇಷ್ಟ ನಂಗಿಲ್ಲ.. ಹೈವೆಗೆ ಸಮೀಪ ಇರೋದ್ರಿಂದ ಎಷ್ಟೋ ಜನ ಹೊಲ ಕೊಟ್ಟುಬಿಡಿ ಒಳ್ಳೆ ರೇಟು ಕೊಡ್ತೀವಿ, ನಾವು ಇಲ್ಲೇ ರೆಸಾರ್ಟ್ ಮಾಡ್ತೀವಿ ಅಂತಾರೆ.. ನಂಗೆ ಅದಕ್ಕೆಲ್ಲ ಈ ಮಗುನ ಹಾಕೋದಿಕ್ಕೆ ಮನಸ್ಸು ಇಲ್ಲ.. ನಮ್ಮ ಮನೆತನ ಬೆಳ್ಸ್ಕೊಂಡ್ ಅವ್ರೆಲ್ಲರಿಗೂ ನೆರಳು ಕೊಟ್ಟಿರೋ ಹೊಲ ಅದು.. ಅದ್ರಲ್ಲಿರೋ ಮರ ನಮ್ಮ ಅಪ್ಪ ತಾತ ಮುತ್ತಾತ ಹಾಕಿರೋವು.. ಅಲ್ಲಿಗೆ ಯಾರೋ ಶೋಕಿ ಮಾಡೋದಿಕ್ಕೆ ಬಂದು ಸೇರಾಯಿ ಕುಡಿದು ಉಚ್ಚೆ ಮಾಡಿದ್ರೆ ಆ ನಮ್ಮ ಪೂರ್ವಿಕರು ನಂಗೆ ಶಾಪ ಹಾಕ್ದೆ ಬಿಟ್ಟೋರಾ ಹೇಳಿ.. ಅದನ್ನ ಕೊಟ್ರೆ ಯಾರಾದ್ರೂ ಲಾಯಕ್ಕಾದೋರಿಗೆ ಕೊಡೋಣ ಅಂತ ವಿಚಾರ ಮಾಡಿದ್ರೆ ನಂಗೆ ತೋಚಿದ್ದು ನೀವೊಬ್ಬರೇ ನೋಡಿ.. ಎಷ್ಟು ವರ್ಷಗಳಿಂದ ನಿಮ್ನ ನೋಡಿನಿ. ನಿಮಿಗೆ ಯಾವುದೇ ಪೇಟೆಗೆ ಕೆಲ್ಸಕ್ಕೆ ಹಾಕಿದ್ರು ಆ ಚಿಕ್ಕ ಹಳ್ಳಿಯಲ್ಲಿರೋ ದೇವರ ಗುಡಿ ಮೇಲೆ ಎಷ್ಟು ಭಕ್ತಿ.. ನೀವು ದೇವಿಪುರದಲ್ಲಿ ಯಾರನ್ನ ಬೇಕಾದ್ರು ಕರೆಸಿ ಹೊಲ ತೋರಿಸಿ ನೋಡಿ.. ಅವರು ಹೇಳೋ ಅಷ್ಟೇ ಹಣ ನಿಶ್ಚಯ ಮಾಡೋಣ.. ಇದನ್ನ ವ್ಯವಹಾರ ಅಂತ ಮಾಡೋದಿಕ್ಕೆ ನಂಗೆ ಮನಸ್ಸು ಒಪ್ಪಲ್ಲ.. ಮಗಳ ಮದ್ವೆ ತರಾನೇ ಇದು ಆಗ್ಬಿಡಲಿ.. ಇದನ್ನ ಕೇಳೋಣ ಅಂತಾನೆ ನಿಮ್ನ ಹುಡ್ಕೊಂಡ್ ಬಂದೆ”.. ತನ್ನ ತಲೆ ಮೇಲಿದ್ದ ಭಾರ ಇಳಿಸಿದಂತೆ ನಿರಾಳನಾದ ರಾಮಣ್ಣ..
ರಂಗನಾಥ್ — “ನಂಗೆ ಏನ್ ಹೇಳ್ಬೇಕು.. ಈಗ ಸದ್ಯ ತಿಳಿತಿಲ್ಲ.. ಆದ್ರೆ ನಿಮ್ಮ ಪರಿಸ್ಥಿತಿ ನಂಗೆ ಸಂಪೂರ್ಣ ಅರ್ಥವಾಗಿದೆ ಅನ್ನೋದಷ್ಟೇ ಹೇಳ್ಬೋದು ರಾಮಣ್ಣ.. ನಂಗೆ ಒಂದು ವಾರ ಟೈಮ್ ಕೊಡಿ.. ಮನೇಲೂ ಮಾತಾಡಿ ನಾನು ನಿಮ್ಗೆ ತಿಳ್ಸ್ತೀನಿ.. ಈಗ ಸದ್ಯಕ್ಕೆ ನಾನು ಕೊಡೋದನ್ನ ಬೇಡ ಅನ್ಬೇಡಿ..” ಅಜಯ್ ತಂದಿದ್ದ ೧೦ ಸಾವಿರ ರೂಪಾಯಿಗಳನ್ನ ರಾಮಣ್ಣನ ಕೈಗಿತ್ತು ಅವ್ರನ್ನ ಬೀಳ್ಕೊಟ್ಟರು..
ನಡೆದದ್ದೆಲವನ್ನು ಊಟ ಮಾಡುತ್ತ ಗೌರಿ ಮತ್ತು ಅಜೇಯರಿಗೆ ವಿವರಿಸಿ ಕೈ ತೊಳೆಯಲು ಎದ್ದು ಹೊರಟರು..
ಗೌರಿ ಮತ್ತು ಅಜೇಯರಿಗೂ ರಾಮಣ್ಣನ ವಿಷಯ ಜೀರ್ಣಿಸಿಕೊಳ್ಳಲು ಕೊಂಚ ಸಮಯ ಹಿಡಿದಂತೆ ತೋರಿತು.. ಎಲ್ಲರ ಊಟ ಮುಗಿದು ನೆಲ ಬಳೆದು ತಮ್ಮ ತಮ್ಮ ಕೋಣೆಗೆ ಸೇರಿಕೊಳುವವರೆಗೆ ಅಲ್ಲಿ ಮೌನವೇ ನೆರೆದಿತ್ತು..
ಅಜಯ — “ಅಪ್ಪ.. ನಂಗೆ ಒಂದ್ ವಿಷ್ಯ ಹೇಳಿ.. ಈ ರಾಮಣ್ಣನ ಕಥೆ ಹೇಗೆ ನಂಬೋದು ? ಅವ್ರು ಚಟವೋ ಇಲ್ಲ ಮತ್ತ್ಯಾವ ವ್ಯಸನಕ್ಕೋ ಒಳಗಾಗಿ ಹಣ ಹಾಳು ಮಾಡಿಲ್ಲ ಅಂತ ಹೇಗೆ ಗೊತ್ತಾಗೋದು ?” ಸಂಜೆಯ ಚಹಾ ಹೀರುತ್ತಾ, ಊಟದ ಸಮಯದಲ್ಲಿ ನಿರ್ದಿಷ್ಟ ಅಂತ್ಯವಿಲ್ಲದೆ ಬಿಟ್ಟಿದ್ದನ್ನು ಪ್ರಸ್ತಾಪಿಸಿದ.
ರಂಗನಾಥ್ — “ರಾಮಣ್ಣನಿಗೆ ಹಣವೇ ಮುಖ್ಯವಾಗಿದ್ರೆ ಅವರು ನನ್ನ ಹುಡುಕ್ಕೊಂಡು ಇಲ್ಲಿಗೇಕೆ ಬರ್ತಿದ್ರು.. ಅವರೇ ಹೇಳ್ತಿರೋ ಹಾಗೆ ಯಾವ್ದೋ ರೆಸಾರ್ಟ್ ಮಾಡೋರಿಗೆ ಇಷ್ಟೋತ್ತಿಗಾಗಲೇ ಕೊಟ್ಟಿರೋರು.. ನಾವೇ ನೋಡಿದೀವಲ್ವಾ.. ಅರಕೆರೆ ಬೆಂಗಳೂರಿಂದ ಕೇವಲ 65–70 km ದೂರದಲ್ಲಿದೆ, ಮೇಲಾಗಿ ಹೈವೇ ಇಂದ ಒಂದು 8–10 km ಇರ್ಬೋದು ಅಷ್ಟೇ.. ಆ ಜಾಗಕ್ಕೆ ಗಿರಾಕಿ ಹುಡ್ಕೋದು ಅಷ್ಟೇನು ಕಷ್ಟ ಇರ್ಲಿಕ್ಕಿಲ್ಲ.. ನೆಲದ ಋಣ, ದುರಾಸೆಯ ಕರ್ಮ ಅಂತ ಅವರು ಮಾತಾಡೋದು ನೋಡಿದ್ರೆ, ಒಂದು ಮುಗ್ದತೆ ಮತ್ತು ಸತ್ಯವಷ್ಟೇ ಕಾಣ್ತಿದೆ ಹೊರತು ಕಪಟ ಮತ್ತು ಆಸೆ ಇರ್ಲಿಲ್ಲ.. ಈಗ ನಾನು ನಿಂಗೆ ರಾಮಣ್ಣ ಏನ್ ಹೇಳಿದ್ರು ಅಂತ ಅವರು ಹೇಳಿದ ಮಾತುಗಳಷ್ಟೇ ಹೇಳಬೋದು.. ಅದನ್ನ ನೀನು ನಿನ್ನ ಇಂಜಿನಿಯರಿಂಗ್ ಮನಸ್ಥಿತಿಯಲ್ಲಿ ಪರಿಷ್ಕರಿಸಿ ಯೋಚಿಸಬೋದು.. ಆದ್ರೆ ಅವರು ಹೇಳ್ಬೇಕಾದ್ರೆ ಅವರಲ್ಲಿ ಇದ್ದ ಆ ಭಾವ, ಪ್ರಾಮಾಣಿಕತೆ, ನಾನು ಹೇಗೆ ನಿಂಗೆ ತೋರಿಸ್ಲಿ.. ನೀನು ಎಷ್ಟೋ ಬಾರಿ ಹೇಳ್ತಿಯಲ್ವ, ಅದೇನೋ ಗೊತ್ತಿಲ್ಲ ಅಲ್ಲಿ ಒಂತರ ಒಳ್ಳೆ ವೈಬ್ ಇತ್ತು ಅಂತ.. ಹಂಗೆ ಇದು.. ಸಂಭಾಷಣೆನ ಬರಿಯ ಭಾಷೆಯಿಂದ ಅಳೆದು ಅಷ್ಟೇ ನೋಡೋದಿಕ್ಕಾಗಲ್ಲ, ಅದರ ಭಾವಕ್ಕೂ ಒಂದು ತೂಕ ಇರುತ್ತೆ.. ಭಾಷೆಯಲ್ಲಿ ತಿಳಿದೇ ಇರೋ ಎಷ್ಟೋ ಸತ್ಯಗಳು ಭಾವದಲ್ಲಿ ಅರ್ಥವಾಗುತ್ತೆ..” ರಾಮಣ್ಣನ ವ್ಯಕ್ತಿತ್ವದ ಸಂಶಯಕ್ಕೆ ಕೊಂಚ ಕೋಪದಿಂದಲೇ ಅಜಯನ ಪ್ರಶ್ನೆಯನ್ನು ತಿರಸ್ಕರಿಸಿ ಉತ್ತರಿಸಿದರು..
ಅಜಯ — “ಇವತ್ತೇನೋ ಸ್ಪೆಷಲ್.. ಯಾವುದೇ ವಿಷ್ಯ ಚರ್ಚಿಸಿದ್ರೂ ಕರ್ಮ ಮತ್ತು ಋಣಗಳ ಸುತ್ತಾನೆ ತಿರುಗುತ್ತಿದೆ ಅಲ್ವ.. “ ಕಿರುದಾಗಿ ನಕ್ಕನು..
“ನೀವು ಏನ್ ಮಾಡಬೇಕು ಅನ್ಕೊಂಡಿದೀರಾ ಈಗ ? ಜಾಗ ಏನೋ ಚೆನ್ನಾಗೆ ಇದೆ.. ದೇವಿಪುರಕ್ಕೆ ಹತ್ರಾನೇ ಇದೆ.. ಅದೇ ದಾರಿಯಲ್ಲಿ ಆಸ್ತಿಯೊಂದಿದ್ರೆ ನಮಗೂ ಅನುಕೂಲ ಆಗುತ್ತೆ.. ನೋಡ್ಕೊಂಡ್ ಬರೋದಾ ಹಾಗಿದ್ರೆ ? ಇಬ್ರಿಗೂ ಅನುಕೂಲ ಆಗೋ ಹಾಗೆ ರೇಟ್ ಮಾತಾಡಿ ಮುಗಿಸಿ ಬಿಡೋಣ ವ್ಯವಹಾರ ? ನೀವು ಹೇಳೋದ್ ಕೇಳಿದ್ರೆ, ನೀವು ಹೇಳೋ ಬೆಲೆಗೆ ತುಂಬಾ ಹಿಂದೂ ಮುಂದು ನೋಡಲ್ಲ ರಾಮಣ್ಣ ಅನ್ಸುತ್ತೆ..” ಕುಹಕ ನಗೆ ಹೊರಡಿಸಿದನು..
“ಅವರ ಮಗಳ ಮದ್ವೆಗೆ ಮತ್ತು ಆನಂತರದ ಜೀವನಕ್ಕೆ ಸ್ವಲ್ಪ ಹಣ ಆದ್ರೆ ಆಯಿತು ಅನ್ಸುತ್ತೆ ಅವ್ರಿಗೆ..”
ಗೌರಿ ಏನನ್ನು ಮಾತನಾಡದೆ ರಂಗನಾಥ್ ಏನೆನ್ನುವರು ಎಂದು ಆಲಿಸುತ್ತಿದ್ದರು..
ರಂಗನಾಥ್ — “ಇಲ್ಲ.. ನಂಗೆ ಹಾಗೆ ಅನ್ನಿಸ್ತಿಲ್ಲ.. ರಾಮಣ್ಣ ಹೊಲ ಮಾರಬೇಕೆಂದು ಮಾರ್ತಿಲ್ಲ.. ಅವರು ಮಾರ್ತಿರೋದು ಮಗಳ ಮದ್ವೆಗೆ ಹಣ ಸಮಸ್ಯೆ ಇದೆ ಅಂತ..” ಮಾತು ಮುಗಿಸುವ ಮಧ್ಯದಲ್ಲೇ
ಅಜಯ — “ಹೌದು.. ಅದು ಈಗಾಗ್ಲೇ ಗೊತ್ತಿದೆ.. ಅದಕ್ಕೆ ನಾವೇನು ಮಾಡೋದು ಹೇಳಿ..” ಕೋಪದಿಂದ ಪ್ರಶ್ನಿಸಿದ..
ರಂಗನಾಥ್ — “ರಾಮಣ್ಣ ಎರಡು ಮೂರು ಬಾರಿ ನಂಗೆ ಹೇಳಿದ್ರು.. ನಾನು ನಿಮ್ಮ ಹತ್ರ ವ್ಯವಹಾರಕ್ಕೆಂದು ಬಂದಿಲ್ಲ ಅಂತ.. ನ್ಯಾಯವಾಗಿ ನೋಡೋದಾದ್ರೆ ನಾನೂ ಇದನ್ನ ವ್ಯವಹಾರ ಅಂತ ನೋಡ್ಬಾರ್ದು ಅಲ್ವ.. ವ್ಯವಹಾರ ಅಲ್ಲ ಅಂದ್ಮೇಲೆ ನಾನೇನು ಮಾಡಬೋದು ಹೇಳು.. ರಾಮಣ್ಣನಿಗೆ ಸಹಾಯ ಮಾಡಬೋದು.. ಹೇಗೆ ಅವರು ಇಷ್ಟು ವರ್ಷಗಳು ನಮಗೆ ಸಹಾಯ ಮಾಡಿದರೋ ಹಾಗೆ.. ಹೇಗೆ ಬಸ್ಸು ಸಿಗದೇ ಪರದಾಡುತ್ತಿದ್ದ ನಂಗೆ ಆ ಸಂಜೆ ಸಹಾಯ ಮಾಡಿದ್ರೋ ಹಾಗೆ.. ನಾನು ರಾಮಣ್ಣನಿಗೆ
“ಮಗಳ ಮದ್ವೆಗೆ ಬೇಕಾಗೋ ದುಡ್ಡು ಕೊಡ್ತೀನಿ.. ನಿಮ್ಗೆ ಅನುಕೂಲ ಆದಾಗ ವಾಪಾಸ್ ಕೊಡಿ.. ಹೊಲದ ವಿಷ್ಯ ಮರೆತು ಬಿಡಿ” ಅಂತ ಹೇಳೋಣ ಅಂದುಕೊಂಡಿದೀನಿ” ಎಂದರು ತೃಪ್ತ ಭಾವದಿಂದ ..
ಅಜಯ ಮತ್ತು ಗೌರಿ ಇಬ್ಬರ ಹುಬ್ಬೇರಿತು.. ಅಮ್ಮ ಮಗ ಇಬ್ಬರೂ ಈಗಾಗಲೇ ಅಡುಗೆ ಮನೆಯಲ್ಲಿ ಒಂದು ಚಿಕ್ಕ ಪಟ್ಟಂಗಕ್ಕೆ ಕುಳಿತು ದೇವಿಪುರದ ಸಮೀಪದಲ್ಲೇ ತೋಟವೊಂದಿದ್ದರೆ ಎಷ್ಟು ಚೆನ್ನಾಗಿರುತ್ತೆ ಅನ್ನೋದರ ಗಾಳಿ ಗೋಪುರ ಕಟ್ಟಿಯಾಗಿತ್ತು.. ಈಗ ರಂಗನಾಥರ ನಿಲುವು ಅವರಿಗೆ ಮೂರ್ಖತನ ಅನ್ನಿಸಿತು..
ಅಜಯ — “ಅಲ್ಲ.. ರಾಮಣ್ಣನೇ ಹೇಳ್ತಿದಾನೆ ಅವ್ನಿಗೆ ಹಣ ಹುಟ್ಟಲ್ಲ.. ಈಗಾಗ್ಲೇ ಸಾಲ ಇದೆ ಅಂತ.. ಮತ್ತೆ ಸಾಲ ಅಂತ ಕೊಟ್ಟರೆ ಅವ್ನು ವಾಪಾಸ್ ಕೊಡ್ತಾನಾ..? ಆಗುತ್ತಾ..? ನಿಮಗೂ 10 ತಿಂಗ್ಳು ಕಳೆದ್ರೆ ನಿವೃತ್ತಿ.. ಈ ಸಮಯದಲ್ಲಿ ಸಾಲ ಕೊಡೋದೆಲ್ಲಾ ಬೇಕಾ ?” ಕೋಪದಿಂದ ರಾಮಣ್ಣನನ್ನು ಏಕವಚನಕ್ಕಿಳಿಸಿ ಏರುಧ್ವನಿಯಲ್ಲಿ ಅಪ್ಪನ ನಿಲುವನ್ನು ತತಳ್ಳಿಹಾಕಿದನು..
ಅಜಯನ ಈ ವಾದ ರಂಗನಾಥರಿಗೆ ಹಿಡಿಸಲಿಲ್ಲ.. ಆಸ್ತಿಯೆಂದ ತಕ್ಷಣ ಮನುಷ್ಯನ ತಲೆ ಹೇಗೆ ತಿರುಗುತ್ತಲ್ವಾ ಎಂದು ಅವರಿಗೆ ಕೊಂಚ ನಾಚಿಕೆಯಾಯಿತು.. ರಾಮಣ್ಣ ಮತ್ತು ಹೊಲ, ಈ ಎರಡು ಕೇಂದ್ರ ಬಿಂದುಗಳ ಚರ್ಚೆಯಲ್ಲಿ, ಎಲ್ಲರಿಗೂ ಹೊಲವೇ ಎದ್ದು ಕಾಣುತ್ತಿದೆಯಲ್ಲ, ರಾಮಣ್ಣ ಯಾರಿಗೂ ಕಾಣದಷ್ಟು ಆಸ್ತಿಯ ಕಾಮಾಲೆ ಅಷ್ಟು ಬೇಗ ನಮಗೆ ಸುತ್ತುಬಿಟ್ಟಿತೇ ಎನಿಸಿತು..
ರಂಗನಾಥ್ — “ನಿಮ್ಮ ವಾದದ ಪ್ರಕಾರ ನಿಮಗೆ ಮೊದಲು ಗೋಚರಿಸೋದು ಹೊಲ.. ಅದನ್ನ ಮಾರ್ತಿರೋದು ರಾಮಣ್ಣ ಅನ್ನೋದು ಅಮೌಲ್ಯ.. ಆದರೆ ನನಗೆ ಮೊದಲು ಕಾಣೋದು ರಾಮಣ್ಣ.. ಆಮೇಲೆ ಪರಿಚಯವಾದದ್ದು ಅವನ ಹೊಲ.. ರಾಮಣ್ಣನ ಸ್ನೇಹವಿರದಿದ್ದರೆ ಅವನ ಹೊಲದ ಋಣ ಕರ್ಮಗಳ ಚರ್ಚೆ ಆಗೋ ಅಗತ್ಯವೇ ಈಗ ಇರ್ತಿರ್ಲಿಲ್ಲ.. ಹಾಗಾಗಿ ರಾಮಣ್ಣನ ತೆಗದು, ಅವನ ಹೊಲಕ್ಕೆ ಆಸೆ ಪಡೋದು ನಂಗೆ ಯಾಕೋ ಸರಿ ಬರ್ತಿಲ್ಲ.. ರಾಮಣ್ಣ ಯಾವುದೇ ಕಾರಣ ಇರದೇ ವ್ಯವಹಾರಕ್ಕಂತಲೇ ಹೊಲ ಮಾರೋದಿಕ್ಕೆ ಬಂದಿದ್ರೆ ಅದರ ಆಯಾಮ ಬೇರೆ ಇರ್ತಿತ್ತು.. ಆದ್ರೆ ಇದು ಹಾಗಲ್ಲ..” ಎಂದು ಒಂದು ರೀತಿಯ ರೇಜಿಗೆ ತಮ್ಮನ್ನು ಆವರಿಸಿದ ಹಾಗೆ ಅಲ್ಲಿಂದ ಎದ್ದು ಹೊರಟರು..
ಅವರ ಯೋಚನೆಗೆ ಸ್ಪಂದಿಸದೆ ಇದ್ದರೂ ಸಹ ಅದನ್ನು ಮೂರ್ಖತ್ವ ಎನ್ನುವಂತೆ ಬಿಂಬಿಸುವಷ್ಟು ಲೌಕಿಕರಲ್ಲ ಅವರ ಕುಟುಂಬಸ್ಥರು ಎಂದು ಭಾವಿಸಿದ್ದೆ ರಂಗನಾಥರ ರೇಜಿಗೆಯ ಮುಖ್ಯ ಕಾರಣ ಇರಬೇಕು..
ಇನ್ನೂ ಕೊಂಡುಕೊಳ್ಳದ ಹೊಲಕ್ಕೇ ಇಷ್ಟು ಚರ್ಚೆ ಆಗುತ್ತಿರಬೇಕಾದರೆ ನಾಳೆ ಇದನ್ನು ಕೊಂಡಮೇಲೆ ಮತ್ತೇನೇನು ಸಮಸ್ಯೆಗಳು ಬರಬಹುದೋ ಎಂದು ಕೊಂಚ ದಿಗಿಲೂ ಆಯಿತು ಅವರಿಗೆ..
ತಮ್ಮ ಕನ್ನಡಕ ಹುಡುಕುವ ನೆಪದಲ್ಲಿ ಮತ್ತೆ ಅಜಯ ಗೌರಿಯರಿದ್ದೆಡೆಗೆ ಬಂದು, ತಮಗೆ ಬೇಕಾದ್ದು ಅಲ್ಲಿಲ್ಲ ಎಂದು ತಿಳಿದಿದ್ದರೂ ಮೇಜಿನ ಮೇಲಿನ ವಸ್ತುಗಳನ್ನು ತಳುಕಾಡಿ
“ಹಾಂ.. ಇನ್ನೊಂದು ಹೇಳೋದು ಮರೆತೆ.. ನನ್ನ ನಿವೃತ್ತಿ ಸಮೀಪಿಸಿತ್ತಿರುವ ಕಾರಣ ರಾಮಣ್ಣನಿಗೆ ಸಹಾಯ ಮಾಡಬಾರದು ಅನ್ನೋ ಉತ್ಕೃಷ್ಟ ಸಲಹೆ ನೀಡಿದ್ರಿ ಅಂತ ಭಾವಿಸಿ ಹೆಮ್ಮೆ ಪಟ್ಟುಕೋಬೇಡಿ.. ಅದರಡಿ ಇರೋ ಆಸೆ ತಿಳಿದೇ ಇರೋ ಅಷ್ಟು ಅಪರಿಚಿತರಲ್ಲ ನಾವೆಲ್ಲಾ.. ದೇವಿಪುರದ ದೇವಸ್ಥಾನ ಜೀರ್ಣೋದ್ಧಾರಕ್ಕೆ ಅಂತ ಇಟ್ಟಿರೋ ಹಣ ರಾಮಣ್ಣನಿಗೆ ಕೊಟ್ರು ತಪ್ಪೇನಿಲ್ಲ.. ಆ ದೇವಿ ಇಷ್ಟು ದಿನವೇ ಕಾದಿದ್ದಾಳೆ.. ಆಕೆಯ ಮಗನಂತಿರುವ ರಾಮಣ್ಣನಿಗೆ ಸಹಾಯ ಮಾಡಿದ್ರೆ ತಪ್ಪೇನು ತಿಳಿಯಲ್ಲ ಬಿಡಿ.. ಆ ದೇವಿಯ ದರ್ಶನಕ್ಕೆ ರಾಮಣ್ಣನು ನನಗೆ ಸಹಾಯ ಮಾಡಿದ್ದಾನೆ.. ಆ ಹೊಲದ ಮರಗಳು ಎಷ್ಟೋ ಬಾರಿ ನಮ್ಮೆಲ್ಲರ ಹಸಿವು ದಾಹ ಇಂಗಿಸಿವೆ.. ಅದರ ಋಣ ತೀರ್ಸೋ ಮಾರ್ಗ ಇದು ಅಂತ ಅನ್ಕೊಂತೀನಿ..” ಎಂದು ಜೋರಾಗಿಯೇ ನುಡಿದು ತಮ್ಮ ಸಂಜೆಯ ವಾಕಿಂಗಿದೆಂದು ಹೊರಟೆ ಬಿಟ್ಟರು..
ಅಜಯ — “ನಾವೇನು ಅಂದ್ವಿ ಅಂತ ಅಪ್ಪ ಇಷ್ಟು ಸಿಟ್ಟಾದ್ರೋ ಗೊತ್ತಿಲ್ಲ.. ಅವ್ರು ವಾಕಿಂಗ್ ಹೋಗೋ ಟೈಮ್ ಸಹ ಆಗಿಲ್ಲ ಇನ್ನು.. ಆದ್ರೂ ಮಾತು ಮುಗಿಸದೆ ಹೊರಟೆ ಹೋದ್ರಲ್ಲ” ಎಂದು ಗೌರಿಯನ್ನು ಕೇಳಿದನು..
ಗೌರಿ — “ಬಿಡು.. ಅವ್ರಿಗೆ ಸರಿ ಅನ್ಸಿದ್ದು ಮಾಡ್ಲಿ.. ನಮಿಗೆ ರಾಮಣ್ಣನಿಗೆ ಪರಿಚಯವಾದ್ರು ಎಲ್ಲಿ ಇದೆ.. ಸದ್ಯಕ್ಕೆ ಇದನ್ನ ಬಿಟ್ಟುಬಿಡೋಣ.. ಅವ್ರೆ ಮತ್ತೇನಾದ್ರು ಕೇಳಿದ್ರೆ ನಮಗನ್ನಿಸಿದ್ದು ಹೇಳೋಣ.. ಸುಮ್ನೆ ಮಾತಿಗೆ ಮಾತು ಬೆಳೆಸೋದು ಬೇಡ” ಅಂತ ತಮ್ಮ ನಿರ್ಣಯ ತಿಳಿಸಿ ಮೆಲ್ಲಗೆ ಹೊರಟರು..
ಅಜಯ — “ನಂಗ್ಯಾಕೋ ಇದು ಸರಿ ಅನ್ನಿಸ್ತಿಲ್ಲ.. ಈ ವಯಸ್ಸಲ್ಲಿ ಇಷ್ಟು ದೊಡ್ಡ ವ್ಯವಹಾರವೆಲ್ಲ ನಿಂಗ್ಯಾಕೆ ನಾನೆ ಮಾಡ್ತೀನಿ ಅಂದ್ರೆ ಏನರ್ಥ.. ಇನ್ನೊಂದ್ ಸರಿ ಮತ್ತೆ ಮಾತಾಡಿ ನೋಡ್ತೀನಿ.. ನೋಡೋಣ ಆಮೇಲೆ” ಎಂದು ತನ್ನ ಹಠ ಬಿಡದವನಂತೆ ತನ್ನ ಅಭಿಪ್ರಾಯ ಪುನಃ ಮಂಡಿಸಿದ..
ಸಂಜೆಯ ದೀಪ ಹಚ್ಚಿ ದೇವರಿಗೆ ನಮಸ್ಕರಿಸಿ ಕೊಂಚ ಯೋಚಿತರಾದ ಗೌರಿ ಮೇಲಿನ ಮಹಡಿಯ ಅಜಯನ ಕೋಣೆಯ ಮೇಟ್ಟಿಲುಗಳ ಬಳಿ ನಿಂತು
“ಅಜಯ್, ಅಜಯ್.. ಅಪ್ಪ ವಾಕಿಂಗ್ ಹೋಗಿ ಎಷ್ಟೋತ್ತು ಆಯ್ತಲ್ವೋ.. ಇಷ್ಟು ಹೊತ್ತಿಗೆ ಬರ್ಬೇಕಿತ್ತಲ್ವಾ.. ಯಾಕೆ ಇವತ್ತು ಇಷ್ಟು ತಡ.. ಅಷ್ಟು ಬೇಸರ ಆಗೋದು ಏನಿತ್ತು ಅಂತೀನಿ..” ಎಂದು ತಡವಾದರೂ ಇನ್ನು ಮನೆಗೆ ಬಾರದ ರಂಗನಾಥರನ್ನು ಕುರಿತು ಕೂಗಿ ಹೇಳಿದರು..
ಅಜಯ — “ಅಪ್ಪ ಇಷ್ಟೊಂದೆಲ್ಲಾ ತಲೆ ಕೆಡಿಸಿಕೊಳ್ಳೋರು ಅಲ್ವಲ್ಲಾ..? ಆ ಕಾರಣ ಇರ್ಲಿಕ್ಕಿಲ್ವಮ್ಮ.. ಪಾರ್ಕಿನಲ್ಲಿ ಯಾರೋ ಸ್ನೇಹಿತರು ಸಿಕ್ಕಿರಬೇಕು.. ಅವ್ರಿಗೂ ಇದೆ ವಿಷ್ಯದ ಗುಂಗು ಹಿಡ್ಸಿ ಕರ್ಮ ಋಣ ಅಂತ ಏನೋ ಮಾತಡ್ಕೊಂಡ್ ಕೂತಿರಬೇಕು.. ಬರಬಹುದು ನೋಡೋಣ ಇನ್ನೊಂದ್ ಅರ್ಧ ಗಂಟೆ..” ನಕ್ಕು ಸುಮ್ಮನಾದ..
ಗೌರಿ — “ಏನೋ.. ಬೆಳಗ್ಗೆ ನಾನು ಪೂಜೆ ಮಾಡೋವಾಗ ಅಪ್ಪ ಮಗ ಅದೇನಂತ ಈ ವಿಷ್ಯ ಶುರು ಮಾಡಿದ್ರೋ.. ಇಡೀ ದಿನ ಯಾವ್ದೋ ಕರ್ಮ ಅಂಟಿಕೊಂಡಿರೋ ಹಾಗೆ ಆಯಿತು ನೋಡು..” ಎಂದು ತಮಗೆ ತೋಚಿದ್ದೆಲ್ಲಾ ಉಸುರಿ ಯೋಚಿಸುತ್ತಲೇ ಹೊರಟರು..
ಅಜಯನ ಫೋನಿಗೆ ಯಾವುದೊ ಅಪರಿಚಿತ ನಂಬರಿನಿಂದ ಕರೆ..
ಅಜಯ — “ಹಲೋ.. ಯಾರು.. ಹೌದ.. ? ಎಲ್ಲಿ ? ಯಾವಾಗ.. ? ನೀವು ಯಾರು ? ಸರ್ ನೀವು ಸ್ವಲ್ಪ ಅಲ್ಲೇ ಇರಿ.. ಬರ್ತೀನಿ..” ದಿಗಿಲಿನಿಂದ ಗೌರಿಯವರನ್ನು ಲೆಕ್ಕಿಸದೆ, ಅವರಿಗೆ ಏನು ಹೇಳುವ ಗೋಜಿಗೂ ಹೋಗದೆ, ಓಡಿ ತನ್ನ ಗಾಡಿ ತೆಗೆದುಕೊಂಡು ಜಯನಗರದ ಮಣಿಪಾಲ ಆಸ್ಪತ್ರೆ ಕಡೆ ದೌಡಾಯಿಸಿದ..
ಪ್ರತಿ ಸಿಗ್ನಲ್ಲಿನಲ್ಲಿ ನಿಂತಾಗಲೂ ಹೆಚ್ಚುತ್ತಿರುವ ಆತಂಕ.. ಸಂಜೆ ಕಳೆದು ನಸುಕಾಗುವ ಸಮಯ.. ಆ ಸಮಯದಲ್ಲಿ ಇನ್ನಷ್ಟು ಸಂಚಾರದ ಬಿಗು ಬೇರೆ.. ಅಜಯನಿಗೆ ಎಲ್ಲವೂ ಕಳವಳ.. ರಂಗನಾಥರಿಗೆ ಆಕ್ಸಿಡೆಂಟ್ ಆಗಿದೆ ಎಂದು ಅವರನ್ನು ಆಸ್ಪತ್ರೆಗೆ ಸೇರಿಸಿದ ವ್ಯಕ್ತಿ ಫೋನ್ ಮಾಡಿದ್ದರು..
“ನೀವು ಬರುವವರೆಗೂ ನಾನು ಇಲ್ಲೇ ಇರ್ತೀನಿ.. ನೀವು ಬಂದಮೇಲೆ ಹೊರಡ್ತೀನಿ” ಅಂತ ಹೇಳಿದ್ದರು.. ಅದನ್ನು ಕೇಳಿ ಅಜೇಯನಿಗೆ ಜಂಘಾ ಬಲವೇ ಉಡುಗಿ ಹೋಗಿತ್ತು..
“ಅಪ್ಪ ಹೇಗಿದ್ದಾರೋ ಏನೋ.. ಆಕ್ಸಿಡೆಂಟ್ ಎಂತ ಸ್ವರೂಪದ್ದು..? ಏನು ಆಗಿರದೆ ಇದ್ರೆ ದೇವಿಪುರಕ್ಕೆ ಹೋಗಿ ಪೂಜೆ ಮಾಡಿಸಬೇಕು.. ನನ್ನ ನಂಬರಿಗೆ ಫೋನ್ ಮಾಡಿದ್ದಾರೆಂದರೆ ಅಪ್ಪನೇ ಅವರಿಗೆ ನನ್ನ ನಂಬರ್ ಕೊಟ್ಟಿರಬೇಕು.. ಹಾಗಾದಮೇಲೆ ಅಪ್ಪನಿಗೆ ಯೋಚಿಸುವಷ್ಟು ಏನು ಆಗಿರಲಿಕ್ಕಿಲ್ಲ..” ಎಂದು ತನ್ನ ಮನದಲ್ಲೇ ಪ್ರಶ್ನೋತ್ತರ ಅಧಿವೇಶನ ನಡೆಸುತ್ತಿದ್ದ.
“ಇವತ್ತು ಮನೆಯಲ್ಲಿ ನಡೆದ ಚರ್ಚೆ ಮತ್ತು ಅದರಿಂದಾದ ಬೇಸರ ಅಪ್ಪನಿಗೆ ಹೀಗಾಗಲು ಕಾರಣವಾ ? ನನ್ನೊಟ್ಟಿಗೆ ಫೋನ್ ಅಲ್ಲಿ ಮಾತಾಡಿದವರೇ ಅಪ್ಪನಿಗೆ ಆಕ್ಸಿಡೆಂಟ್ ಮಾಡಿರಬೋದಾ” ಹೀಗೆಯೇ ಮತ್ತಷ್ಟು ಯೋಚಿಸುತ್ತ ಮಣಿಪಾಲ ಆಸ್ಪತ್ರೆ ತಲುಪಿದ..
“ಸರ್ ನಾನು ಆಕ್ಸಿಡೆಂಟ್ ಆಗಿರೋ ರಂಗನಾಥರ ಮಗ.. ಆಸ್ಪತ್ರೆಗೆ ಬಂದೆ.. ಎಲ್ಲಿಗೆ ಬರ್ಬೇಕು.. ಅಪ್ಪ ಎಲ್ಲಿದಾರೆ ?” ಎಂದು ತನಗೆ ಕರೆ ಬಂದಿದ್ದೆ ನಂಬರಿಗೆ ಫೋನಾಯಿಸಿ ಕೇಳಿದನು..
ವ್ಯಕ್ತಿ — “ಇಲ್ಲಿ ನೋಡಿ.. ನಾನೆ ಬನ್ನಿ..” ಅಜೇಯ ನಿಂತಿದ್ದಲ್ಲಿಂದ ಕೊಂಚ ದೂರದ ಮೂಲೆಯೊಂದರಿಲ್ಲಿದ್ದ ಎಮರ್ಜೆನ್ಸಿ ವಾರ್ಡಿನ ಕಡೆಯಿಂದ ವ್ಯಕ್ತಿಯೊಬ್ಬ ಕೈಬೀಸಿದ.. ಅದನ್ನು ನೋಡಿದ ತಕ್ಷಣ ಅಜಯ ಅವರಿದ್ದೆಡೆಗೆ ಓಡಿದ..
ಅಜಯ — “ಹೆಂಗಾಯ್ತು ಸರ್.. ಎಲ್ಲಿದಾರೆ ಅಪ್ಪ..”
ವ್ಯಕ್ತಿ — “ನಾನು ಪಾರ್ಕಿನಿಂದ ಹೊರಗೆ ಇದ್ದ ದರ್ಶಿನಿ ಅಲ್ಲಿ ನಿಂತಿದ್ದೆ ನೋಡಿ.. ಬೆಳಗ್ಗೆ ಇಂದ ಪುರ್ಸೊತ್ತಿಲ್ದೇ ಕ್ಯಾಬ್ ಓಡ್ಸಿ ಆಗಷ್ಟೇ ಪಾರ್ಕ್ ಪಕ್ಕ ಕ್ಯಾಬ್ ಹಾಕಿ ಬಂದಿದ್ದೆ.. ಅದು ಯಾರೋ ಒಬ್ಬ ಬೈಕಿನಲ್ಲಿ ಜೋರಾಗಿ ಶಬ್ದ ಮಾಡ್ಕೋತ ಬರ್ತಿದ್ದ.. ನಿಮ್ಮ ಅಪ್ಪ ಅದೇ ಸಮಯಕ್ಕೆ ಪಾರ್ಕ್ ಕಡೆಗಿಂದ ದರ್ಶಿನಿ ಕಡೆಗೆ ಬರ್ತಿದ್ರು.. ಬೈಕಿನವನು ಬಂದಿದ್ ಸ್ಪೀಡಿಗೆ ನಿಮ್ ಅಪ್ಪನ ಬಲಗಾಲು ಸಿಕ್ತು.. ಅವ್ನು ಹೆಂಗೋ ಬ್ಯಾಲೆನ್ಸ್ ಮಾಡ್ಕೊಂಡು ತಪ್ಸ್ಕೊಂಡ್ ಹೋದ.. ನಿಮ್ ಅಪ್ಪ ಗಾಬರಿ ಇಂದ ಅಲ್ಲೇ ಬಿದ್ರು.. ನಾನು ಅಲ್ಲೇ ಇದ್ದೋನೂ ಎಬ್ಬಿಸೋಕೆ ಓಡಿ ಹೋದೆ.. ವಯಸ್ಸಾಗಿದೆ ಅಲ್ವ.. ಕಾಲಿಗೆ ಸ್ವಲ್ಪ ಪೆಟ್ಟು ಜೋರಾಗಿ ಬಿತ್ತು ಅನ್ಸುತ್ತೆ.. ಆ ಗಾಡಿಯ ಕ್ರ್ಯಾಶ್ ಗಾರ್ಡಿನ ರಾಡು ಯೆಜಮಾನ್ರ ಕಾಲಿಗೆ ಬಲವಾಗೇ ನಾಟಿದೆ.. ಫ್ರಾಕ್ಚರ್ ಆಗಿರ್ಬೋದು ಅಂತ ಸ್ಕ್ಯಾನ್ ಮಾಡೋದಿಕ್ಕೆ ಕರ್ಕೊಂಡು ಹೋಗಿದ್ದಾರೆ.. ಏನು ಅಂತ ಡಾಕ್ಟರ್ ಬಂದ್ಮೇಲೆ ತಿಳಿಯುತ್ತೆ ನೋಡಿ.. ಆದ್ರೆ ಯೆಜಮಾನ್ರಿಗೆ ಕಾಲು ಅಲ್ಲಾಡಿಸೋದಿಕ್ಕೂ ಬರ್ತಿಲ್ಲ.. ಅಲ್ಲೇ ಇದ್ದೋರೆಲ್ಲ ಸೇರಿ ನನ್ ಕ್ಯಾಬ್ ಅಲ್ಲಿ ಕೂಡ್ಸಿದ್ರು.. ನಾನು ಸೀದಾ ಇಲ್ಲಿಗೆ ಕರ್ಕೊಂಡ್ ಬಂದೆ ನೋಡಿ.. ಕಾಲಿಗೆ ಪೆಟ್ಟು ಬಿಟ್ರೆ ಬೇರೆ ಏನು ಯೋಚಿಸುವಂತದ್ದು ಇಲ್ಲ.. ಆರಾಮಾಗೆ ಮಾತಡ್ಕೊಂಡೇ ಬಂದ್ರು.. ಆದ್ರೆ ನೋವು ಬಹಳ ಇದ್ದಂಗೆ ಕಾಣ್ತದೆ.. ದಾರಿಯುದ್ದಕ್ಕೂ ದೇವ್ರ ಜಪ ಜೋರಾಗೆ ಮಾಡ್ತಿದ್ರು..” ನಡೆದ ಇಡೀ ವಿಷಯವನ್ನ ಒಂದೇ ಉಸಿರಲ್ಲಿ ಅಜಯನಿಗೆ ಒಪ್ಪಿಸಿದ..
ಸ್ಕ್ಯಾನಿಂಗ್ ರೂಮಿನಿಂದ ಹಲವು ರಿಪೋರ್ಟ್ ಹಿಡಿದು ಹೊರ ಬಂದ ಡಾಕ್ಟರ್..
ಡಾಕ್ಟರ್ — “ಕೇಳಿ.. ಇಲ್ಲಿ ಬನ್ನಿ.. ಸ್ಕ್ಯಾನ್ ರಿಪೋರ್ಟ್ ಬಂದಿದೆ.. ಕಾಲಿನ ಮೂಳೆ ಮುರಿದಿದೆ.. ಇದಕ್ಕೆ ಟ್ರೀಟ್ಮೆಂಟ್ ಸ್ವಲ್ಪ ದಿನಗಳೇ ಹಿಡಿಯುತ್ತೆ ಮತ್ತು ಇಲ್ಲಿ ಸ್ವಲ್ಪ ಖರ್ಚು ಆಗುತ್ತೆ.. ನೀವು ಬೇರೆ ಆಸ್ಪತ್ರೆಗೆ ಕರ್ಕೊಂಡ್ ಹೋಗೋದಿದ್ರೆ ನಾನು ರಿಪೋರ್ಟ್ ಕೊಡ್ತೀನಿ, ಫಸ್ಟ್ ಏಡ್ ಮಾಡಿದ್ದೀನಿ.. ಈಗ್ಲೇ ಕರ್ಕೊಂಡ್ ಹೊರಟುಬಿಡೋದು ಉತ್ತಮ.. 8 ಗಂಟೆ ಆಗ್ತಾ ಇದೆ.. ತುಂಬಾ ತಡ ಮಾಡ್ಕೊಂಡ್ರೆ ಅವ್ರಿಗೆ ಟ್ರೀಟ್ಮೆಂಟ್ ಶುರು ಮಾಡೋದು ಮತ್ತೆ ನಾಳೇನೇ ಆಗಿ ಇವತ್ತು ಬರಿ ಪೈನ್ ಕಿಲ್ಲರ್ ಮೇಲೆ ಇರ್ಬೇಕಾಗುತ್ತೆ” ಎಂದು ಅಜಯ ಮತ್ತು ಕ್ಯಾಬ್ ಚಾಲಕನಿಗೆ ವಿವರಿಸಿದರು..
ಅಜಯ — “ಇಲ್ಲ ಸರ್.. ನೀವು ಟ್ರೀಟ್ಮೆಂಟ್ ಇಲ್ಲೇ ಶುರು ಮಾಡಿ ತೊಂದ್ರೆ ಇಲ್ಲ..” ಎಂದು ತಕ್ಷಣವೇ ಉತ್ತರಿಸಿದ..
ಡಾಕ್ಟರ್ — “ಓಕೆ ಹಾಗಿದ್ರೆ.. ಅಡ್ಮಿಶನ್ ಕೌಂಟರಿಗೆ ಈ ಸ್ಲಿಪ್ ಮತ್ತೆ ರಿಪೋರ್ಟ್ಸ್ ತೊಗೊಂಡು ಹೋಗಿ ಕೊಡಿ.. ಅವ್ರು ವಿವರಿಸ್ತಾರೆ.. ಪೊಲೀಸ್ ಕೇಸ್ ಮಾಡೋದಿದ್ರೆ ಹೇಳಿ, ಆದಿಕ್ಕು ಸ್ವಲ್ಪ ಫಾರ್ಮಾಲಿಟಿಸ್ ಇರುತ್ತೆ.. ರೆಡಿ ಮಾಡ್ಕೋತೀವಿ” ಎಂದು ಉತ್ತರಿಸಿದರು..
ಕ್ಯಾಬ್ ಚಾಲಕ — “ಅಣ್ಣ, ನೀವು ಮೊದ್ಲು ಹೋಗಿ ಅಡ್ಮಿಷನ್ನಿಗೆ ಏನು ಮಾಡಬೇಕು ಅದು ನೋಡಿ.. ಪೊಲೀಸು ಗೀಲೀಸು ಆಮೇಲೆ ಕೂತು ಮಾತಾಡೋಣ.. ಮೊದ್ಲು ಈ ಕೆಲಸ ಮುಗುಸ್ಕೊಂಡ್ ಬನ್ನಿ.. ನಾನು ಇಲ್ಲಿರ್ತೀನಿ ಯೆಜಮಾನ್ರ ಹತ್ರ.. ನೀವು ನಡೀರಿ “ ಇನ್ನು ದಿಗಿಲಿನಿಂದ ಹೊರ ಬಾರದ ಅಜಯನನ್ನು ಗಮನಿಸಿ ಧೈರ್ಯ ತುಂಬುವಂತೆ ಹೇಳಿದ..
ಆಸ್ಪತ್ರೆಯ ಎಲ್ಲ ಪ್ರಕ್ರಿಯೆ ಮುಗಿಸುವಷ್ಟರಲ್ಲಿ ರಾತ್ರಿ 9.30.. ಅಮ್ಮನಿಂದ 10–12 ಮಿಸ್ ಕಾಲುಗಳು ಬಂದಿದ್ದವು ಅಜಯನಿಗೆ.. ಅಮ್ಮನಿಗೆ ಹೇಗೆ ಹೇಳೋದು, ಧೈರ್ಯ ಸಾಲದೇ ಅಪ್ಪನನ್ನು ಇರಿಸಿದ್ದ ಕೋಣೆಗೆ ಬಂದ..
ಅಜಯ — “ಥ್ಯಾಂಕ್ಸ್ ಸರ್.. ನೀವು ಇನ್ನು ಹೊರಡಿ.. ತುಂಬಾ ಹೆಲ್ಪ್ ಆಯಿತು.. ನಿಮಗೆ ನಾನು ನಾಳೆ ಫೋನ್ ಮಾಡ್ತೀನಿ.. ಆಮೇಲೆ ಮಾತಾಡೋಣ.. ಸುಮ್ನೆ ನಿಮಗೆ ಯಾಕೆ ಈಗ ತೊಂದ್ರೆ.. ಈಗಾಗ್ಲೇ ತುಂಬಾ ತಡ ಆಗಿದೆ” ಎಂದು ತನ್ನ ತಂದೆಯ ಬಗ್ಗೆ ಕಾಳಜಿ ತೋರಿ ತನ್ನ ಕ್ಯಾಬಿನಲ್ಲಿ ಕರೆ ತಂದು ಸುಮಾರು 2–2:30 ಗಂಟೆಗಳ ಕಾಲ ಅವರೊಟ್ಟಿಗೆ ಇದ್ದು ಧೈರ್ಯ ತುಂಬಿದ್ದ ಕ್ಯಾಬ್ ಚಾಲಕನ ಕೈ ಕುಲುಕುತ್ತಾ ನುಡಿದ..
ಕ್ಯಾಬ್ ಚಾಲಕ — “ಅದೆಲ್ಲ ಇರ್ಲಿ ಬಿಡಿ ಅಣ್ಣ.. ಯೆಜಮಾನ್ರಿಗೆ ಇಂಜೆಕ್ಷನ್ ಕೊಟ್ಟಿರುವಂತೆ ಕಾಣ್ತದೆ.. ಮಲಗಿದ್ದಾರೆ.. ನಿಮ್ಮದು ಊಟಕ್ಕೆ ಏನು ? ಇನ್ನೊಂದು 20 ನಿಮಿಷ ಆದ್ರೆ ಎಲ್ಲ ಮುಚ್ಚುತ್ತೆ.. ಏನೂ ಸಿಗಲ್ಲ.. ಬನ್ನಿ ಹಂಗೆ ಸ್ವಲ್ಪ ಏನಾದ್ರು ತಿಂಕೊಂಡ್ ಬರೋಣ.. ಡಾಕ್ಟರ್ ಇನ್ನೊಂದ್ ಗಂಟೆ ಬಿಟ್ಟು ಬಂದು ಚೆಕ್ ಮಾಡ್ತೀನಿ ಅಂತ ಹೇಳಿ ಹೋದ್ರು.. ಸದ್ಯಕ್ಕೆ ಇಲ್ಲಿ ಕೆಲಸ ಇಲ್ಲ ನಡೀರಿ”
ಅಜಯ — “ಇಲ್ಲ.. ಮನೇಲಿ ಅಮ್ಮ ಒಬ್ಳೆ ಇರ್ತಾಳೆ.. ನನ್ನ ಹೆಂಡ್ತಿ ಊರಿಗೆ ಹೋಗಿದ್ದಾಳೆ.. ಫೋನಿನಲ್ಲಿ ಹೇಳಿದ್ರೆ ಅಮ್ಮ ಗಾಬ್ರಿ ಆಗ್ತಾಳೆ ಅಂತ ಹೇಳಿಲ್ಲ.. ನಾನು ಮನೆಗೆ ಹೋಗ್ಬೇಕು.. ಅಮ್ಮನ್ನ ಕರ್ಕೊಂಡ್ ಬರ್ತೀನಿ ಇಲ್ಲಿಗೆ.. ನೀವು ಹೋಗಿ ಪರವಾಗಿಲ್ಲ.. ಈಗಾಗ್ಲೇ ತುಂಬಾ ಸಹಾಯ ಮಾಡಿದಿರಾ..”
ಕ್ಯಾಬ್ ಚಾಲಕ — “ಅಯ್ಯೋ.. ಇರ್ಲಿ ತಗೋಳಿ.. ನೀವು ಹೋಗಿ ಅಮ್ಮನ್ನ ಕರ್ಕೊಂಡ್ ಬನ್ನಿ.. ನೀವ್ ಬಂದ್ಮೇಲೆ ನಾನ್ ಹೋಗ್ತೀನಿ ಬಿಡಿ”
ಅಜಯ — “ಥ್ಯಾಂಕ್ಸ್.. ಈಗ ರಾತ್ರಿ ಆಗ್ತಿದೆ.. ಮತ್ತ್ಯಾರಿಗೂ ಈಗ ಹೇಳಿ ಗಾಬ್ರಿ ಪಡಿಸೋದಿಕ್ಕೆ ನಂಗೆ ತಿಳೀತಿಲ್ಲ.. ನಾನು ಹೀಗೆ ಹೋಗಿ ಅಮ್ಮನ್ನ ಒಂದು 30 ನಿಮಿಷದಲ್ಲಿ ಕರ್ಕೊಂಡ್ ಬರ್ತೀನಿ.. ಡಾಕ್ಟರ್ ಏನಾದ್ರು ಕೇಳಿದ್ರೆ ನಂಗ್ ಫೋನ್ ಮಾಡಿ.. ಥ್ಯಾಂಕ್ಸ್ ಎಷ್ಟು ಹೇಳಿದ್ರು ಕಡಿಮೆ ನಿಮಗೆ”
ಕ್ಯಾಬ್ ಚಾಲಕ — “ಅಯ್ಯೋ ಹೋಗಿ ಅಣ್ಣ.. ನೀವೊಳ್ಳೆ..” ಎಂದು ಅಜಯನನ್ನು ಲಘುವಾಗಿ ತಳ್ಳಿದ..
ಗಾಬರಿಗೊಂಡ ಗೌರಿಯವರು ಅಳುತ್ತಲೇ ಕೋಣೆಗೆ ಬಂದಾಗ ಸಮಯ ರಾತ್ರಿ 11 ಗಂಟೆ.. ಗೌರಿಯವರ ಅಳು ರಂಗನಾಥರನ್ನು ಎಚ್ಚರಿಸಿತು..
ರಂಗನಾಥ್ — “ಕಾಲಷ್ಟೇ ಸ್ವಲ್ಪ ನೋವು.. ಬೇರೆ ಏನು ಆಗಿಲ್ಲ.. ಅಳ್ಬೇಡ” ಎಂದು ಗೌರಿಯವರನ್ನು ಸಮಾಧಾನಿಸಲೆತ್ನಿಸಿದರು..
ಗೌರಿ — “ನಿಮಗೆ ತುಂಬಾ ಥ್ಯಾಂಕ್ಸ್ ಕಣಪ್ಪ” ಎಂದು ಕ್ಯಾಬ್ ಚಾಲಕನಿಗೆ ಕೈ ಮುಗಿದರು..
ಕ್ಯಾಬ್ ಚಾಲಕ — “ಪರವಾಗಿಲ್ಲ ಬಿಡಿ.. ಆ ಗಾಡಿಯವನು ಹೋಗಿದ್ ಸ್ಪೀಡಿಗೆ ಬರಿ ನಿಮ್ ಕಾಲಿಗೆ ಪೆಟ್ಟಾಗಿದ್ದೆ ಆಶ್ಚರ್ಯ.. ಆ ದರ್ಶಿನಿ ಕಡೆಯಿಂದ ನೋಡಿ ನಂಗೆ ಒಂದು ಕ್ಷಣಕ್ಕೆ ದಿಗಿಲಾಯ್ತು.. ನೀವು ಮಾಡಿದ ಯಾವುದೊ ಪುಣ್ಯ ಅಂದ್ಕೊಳಿ ಬರಿ ಇಷ್ಟಕ್ಕೆ ಇದು ಮುಗಿದಿದ್ದು..”
ಅವನ ಆ ಕೊನೆಯ ಮಾತು ಅಲ್ಲಿದ್ದ ಎಲ್ಲರಿಗೂ ಅಂದಿನ ದಿನದ ಅವರ ಮನೆಯ ಚರ್ಚೆಗಳ ಮಾರ್ಮಿಕ ಟಿಪ್ಪಣಿಯಂತಿತ್ತು..
ರಂಗನಾಥ್ — “ಅಜಯ್.. ಅವ್ರಿಗೆ ಸ್ವಲ್ಪ ಏನಾದ್ರು ಊಟ ಮಾಡ್ಸಿ ಕಳಿಸು” ಎಂದು ತಮ್ಮ ಕಣ್ಣ ಸನ್ನೆಯಿಂದಲೇ ಹಣದ ಏನಾದ್ರು ಸಹಾಯ ಮಾಡುವಂತೆ ಸೂಚಿಸಿದರು..
ಅಜಯ — “ನಾನ್ ನೋಡಿ.. ಮರತೇ ಬಿಟ್ಟೆ.. ಬನ್ನಿ.. ಇಲ್ಲೇ ಕ್ಯಾಂಟೀನ್ ಇದೆ ಆಸ್ಪತ್ರೆಯದ್ದು.. ಏನಾದ್ರು ತಿನ್ನಿ ನೀವು.. ತುಂಬಾ ತಡವಾಯ್ತು..” ಎಂದು ಕ್ಯಾಬ್ ಚಾಲಕನನ್ನು ಕ್ಯಾಂಟೀನ್ ಕಡೆಗೆ ಕರೆದು ಹೊರಟ..
ತಡ ರಾತ್ರಿಯಾದ್ದರಿಂದ ಕ್ಯಾಂಟೀನ್ ಬಹುತೇಕ ಖಾಲಿ ಇದ್ದಿತ್ತು..
ಕ್ಯಾಬ್ ಚಾಲಕ — “ಬೆಳಗಿನಿಂದ ಊಟಕ್ಕೆ ನಿಲ್ಸಿರ್ಲಿಲ್ಲ.. ಹಸಿವು ಕಿತ್ಕೊಂಡು ಇನ್ನೇನು ನಿಲ್ಸಿದೆ, ಯೆಜಮಾನ್ರಿಗೆ ಆಕ್ಸಿಡೆಂಟ್ ಆಯ್ತು ನೋಡಿ.. ಮತ್ತೆ ಅಲ್ಲಿಂದ ಹೊರಟೆ.. ಹಸಿವು ಮರ್ತೆ ಹೋಯ್ತು.. ಒಳ್ಳೆ ಊಟ ಮಾಡಿಬಿಡೋಣ ಅಂದ್ರೆ ಊಟ ಖಾಲಿ ಅಂತೇ” ನಕ್ಕ..
ಅಜಯ — “ನಮ್ಮಿಂದ ಬಹಳ ತೊಂದ್ರೆ ಆಯಿತು ನಿಮಗೆ.. ಇಲ್ಲೇ ಹೊರಗೆ ಸಮೀಪದಲ್ಲಿ ನಿಮಗೆ ಗೊತ್ತಿರುವ ಯಾವದಾದ್ರು ಒಳ್ಳೆ ಹೋಟೆಲ್ ಇದ್ರೆ ಹೇಳಿ.. ಹೋಗೋಣ.. ಆರಾಮಾಗಿ ಊಟ ಮಾಡಿ..”
ಕ್ಯಾಬ್ ಚಾಲಕ — “ನಂಗ್ಯಾವ ಹೋಟೆಲ್ ಗೊತ್ತು ತೆಗೀರಿ.. ನಂದೇನಿದ್ರೂ ರೋಡ್ ಸೈಡ್ ಬಂಡಿ, ಇಲ್ಲವೇ ಯಾವುದಾದ್ರೂ ಚಿಕ್ಕ ಪುಟ್ಟ ದರ್ಶಿನಿ ಅಷ್ಟೇ.. ಕೂತು ತಿನ್ನುವ ಹೋಟೆಲ್ ಬೆಂಗಳೂರು ಬಂದು 2–3 ತಿಂಗಳಾದ್ರು ಇನ್ನು ಹೋಗೋದಿಕ್ಕೆ ಆಗಿಲ್ಲ ನೋಡಿ” ಎಂದು ಮತ್ತೆ ನಕ್ಕ..
ಅಜಯ — “ಒಹ್.. ನಿಮ್ ಹೆಸ್ರೇ ಗೊತ್ತಾಗ್ಲಿಲ್ಲ.. ಸಾರೀ… ಇಲ್ಲೇ ಏನೇನಿದೆ ಎಲ್ಲ ಎರಡೆರಡು ಪ್ಲೇಟ್ ತೊಗೊಳ್ಳಿ ಹಾಗಿದ್ರೆ..” ಎಂದು ಮುಜುಗರದಿಂದಲೇ ಹೇಳಿದನು..
ಕ್ಯಾಬ್ ಚಾಲಕ — “ಈಗ ಅದೇ ನಾನು ಮಾಡಿರೋದು.. ಎರಡು ಇಡ್ಲಿ ತಂದಿದಿನಿ.. ಎರಡು ದೋಸೆ ಹಾಕೋದಿಕ್ಕೆ ಹೇಳಿದೀನಿ.. ಪಾಪ ಭಟ್ಟರು ಹೊರಡೋ ತಯಾರಿ ಅಲ್ಲಿ ಇದ್ರೂ ಅನ್ಸುತ್ತೆ.. ನನ್ನ ಆರ್ಡರ್ ನೋಡಿ ಮುಖ ಪೆಚ್ಚ ಮಾಡ್ಕೊಂಡ್ರು..” ಇಡ್ಲಿಗೆ ಚಟ್ನಿಯನ್ನು ಹಚ್ಚುತ್ತಾ ನಗುತ್ತಲೇ ಹೇಳಿದನು..
“ನನ್ನ ಹೆಸರು ಕೇಳಿದ್ರಿ ಅಲ್ವ.. ಅರುಣ್..”
ಅಜಯ — “ಎಲ್ಲಿರ್ತಿರಾ ಅರುಣ್ ಬೆಂಗಳೂರಲ್ಲಿ.. ನಮ್ಮಿಂದ ನಿಮಗೆ ಇವತ್ತು ತುಂಬಾನೇ ತೊಂದ್ರೆ ಆಗಿದೆ.. ನನ್ನ ಮನೆ ಅಡ್ರೆಸ್ ಕಳಿಸ್ತೀನಿ.. ಅಪ್ಪ ಮನೆಗೆ ಬಂದ್ಮೇಲೆ ಒಂದು ಸಾರಿ ಬನ್ನಿ.. ಅವ್ರಿಗೂ ಖುಷಿ ಆಗುತ್ತೆ.. ನಿಮಗೆ ಏನಾದ್ರು ಬೇಕಿದ್ರೆ ಕೇಳಿ ಹಾಗೆ.. ಸಹಾಯ ಅನ್ಕೋಬೇಡಿ ಮತ್ತೆ.. ನೀವ್ ಮಾಡಿರೋ ಉಪಕಾರಕ್ಕೆ ನಮ ಪ್ರತಿ ಉಪಕಾರ ಅಂದ್ಕೊಳಿ” ವಿನಯದಿಂದಲೇ ನುಡಿದನು..
ಅರುಣ — “ಮೂರು ತಿಂಗಳಾಯ್ತು ಇಲ್ಲಿಗ್ ಬಂದು ಕ್ಯಾಬ್ ಇಟ್ಕೊಂಡು.. ತಿಂಗಳಿಗೆ ಒಬ್ಬ ದೋಸ್ತರ ರೂಮಲ್ಲಿ ಇದ್ದು ಓಡಾಡ್ಕೊಂಡ್ ಇದೀನಿ.. ಇಲ್ಲೇ ಅಲ್ಲೇ ಅಂತ ಏನು ಇಲ್ಲ ಇನ್ನು.. ಈಗ ಸದ್ಯ ಇಲ್ಲೇ ಉತ್ತರಹಳ್ಳಿ ಕಡೆ ಇದ್ದೀನಿ.. ಊರ ಕಡೆ ಸ್ವಲ್ಪ ಕಷ್ಟ.. ಏನಾದ್ರು ಮಾಡೋಣ ಅಂತ ಕ್ಯಾಬ್ ಓಡಿಸೋದಿಕ್ಕೆ ಇಲ್ಲಿಗೆ ಬಂದೆ.. ಆದ್ರೆ ಈ ಊರಲ್ಲಿ ಕ್ಯಾಬ್ ಓಡಿಸೋ ಕಷ್ಟದ ಮುಂದೆ ಊರಲ್ಲಿರೋ ಕಷ್ಟ ಏನು ಇಲ್ಲ ಬಿಡಿ ಅನ್ಸುತ್ತೆ ಒಮ್ಮೊಮ್ಮೆ” ವಾಡಿಕೆಯಂತೆ ಮತ್ತೆ ನಕ್ಕನು ಅರುಣ್..
ಅಜಯ — “ಒಹ್ ಹೌದ.. ಯಾವ ಊರು ಅರುಣ್ ನಿಮ್ಮದು ?”
ಅರುಣ — “ಇಲ್ಲಿಂದ ಒಂದು 65–70 km ದೂರ ಹೈವೇ ಬಲಕ್ಕೆ ಅರೆಕೆರೆ ಅಂತ ಊರಿದೆ ಅಣ್ಣ.. ಅಲ್ಲೇ ಒಂದೂವರೆ ಎಕ್ರೆ ಹೊಲ ಇದೆ.. ಅದೇ ಏನೋ ಮಾಡ್ಕೊಂಡ್ ಇದ್ವಿ.. ಅದರಲ್ಲಿ ಎಷ್ಟು ದಿನ ಅಂತ ಆಗುತ್ತೆ ಹೇಳಿ.. ಈಗಂತೂ ತಂಗಿಗೆ ಮದ್ವೆ ಬೇರೆ ಸೆಟ್ ಆಗಿದೆಯಂತ ಅಪ್ಪ ಫೋನ್ ಮಾಡಿದ್ರು.. ಕ್ಯಾಬಿಗಂತ ಸಾಲ ಮಾಡಿ ಇನ್ನು ಎರಡು ತಿಂಗಳೂ ಆಗಿಲ್ಲ ನಮ್ಮ ಅಪ್ಪ.. ಅದೇನೋ ಇಷ್ಟು ವರ್ಷ ಬರದೇ ಇರೋ ನೆಂಟರು ಈಗ್ಲೇ ಬಂದು ತಂಗಿ ಸಂಬಂಧ ಕೇಳಿದರೆ ನೋಡಿ ನನ್ನ ಅದೃಷ್ಟಕ್ಕೆ.. ಇಲ್ಲ ಅಂತ ಅಂದ್ರೆ ಮತ್ತೆ ಮುಂದೆ ಅದೇನೇನ್ ಕಷ್ಟಗಳು ಆಗುತ್ತೋ, ಆಗಿದ್ದು ಈಗ ಶಕ್ತಿ ಇರ್ಬೇಕಾದ್ರೆನೇ ಆಗ್ಲಿ, ಮಾಡಿಬಿಡೋಣ ಮದುವೆ ಅಂತ ಅದಕ್ಕೂ ಹ್ಞೂ ಅಂದಿದಾನೆ ಅಪ್ಪ.. ವಾರದಿಂದ ಹಣ ಹೆಂಗೆ ಹೊಂದಿಸೋದು ಅಂತಾನೆ ತಲೆ ಕೆಡಿಸಿಕೊಂಡಿದಾನೆ.. ಇವತ್ತೇನೋ ಇಲ್ಲಿಗೆ ಬಂದಿದ್ನಂತೆ.. ಆದ್ರೆ ನಾನು ಯಾವ್ದೋ ಡ್ರಾಪ್ ಮೇಲೆ ಏರ್ಪೋರ್ಟ್ ಕಡೆ ಹೋಗಿದ್ದೆ.. ಇಲ್ಲೇ ಬಂದಿದ್ರು ಅಪ್ಪನ್ನ ಭೆಟ್ಟಿ ಅಗೊದಿಕ್ಕೆ ಆಗ್ಲಿಲ್ಲ. ಆದ್ರೆ ಅಪ್ಪ, ಎಲ್ಲಿ ಮದುವೆಗೆ ಹಣ ಬೇಕು ಅಂತ ಕೇಳ್ತೀನಿ ಅಂತ ಅವ್ನು ಬಂದಿಲ್ಲ ಅಂತ ಸೂಕ್ಷ್ಮ ಅನ್ಕೊಂಡಿರ್ತಾನೆ.. ಅದೇ ಯೋಚನೆ ಮಾಡ್ಕೋತಾ ನಿಂತಿದ್ದೆ, ಯೆಜಮಾನ್ರ ಆಕ್ಸಿಡೆಂಟ್ ಆಯ್ತು..” ಮುಗ್ದತೆಯಿಂದ ಕೂಡಿದ ತನ್ನ ವ್ಯಥೆ-ಕಥೆಯ ಸಾರಾಂಶವನ್ನು ಅಜೇಯನಿಗೆ ಒಪ್ಪಿಸಿದ..
ಅರುಣನ ಮಾತುಗಳು ಕೇಳುತ್ತ ಅಜಯನಲ್ಲಿ ಒಂದು ಬಗೆಯ ಸಂಚೇಲನವೇ ಆಗಿ ಹೋಯ್ತು. ಇದೆಂತ ಕಾಕತಾಳೀಯ.. ಇದೆಲ್ಲವೂ ಯಾರು ಯೋಜಿಸದೆ ಇಷ್ಟು ಕರಾರುವಕ್ಕಾಗಿ ಒಂದೇ ದಿನದಲ್ಲಿ ಆಗಲು ಹೇಗೆ ಸಾಧ್ಯ.. ಅಥವಾ ಯೋಜಿತವೇ.. ಯೋಜಿತವೇ ಆಗಿದ್ದರೆ ಯಾರ ಯೋಜನೆ ? ದೇವರದ್ದೇ.. ? ಇಂದು ಬೆಳಗ್ಗೆ ಅಷ್ಟೇ ದೇವರ ಬಗ್ಗೆ ಕೂಲಂಕುಷ ಚರ್ಚೆಯಾಯಿತಲ್ಲ..? ದೇವರದ್ದಲ್ಲ ಎಂದರೆ ಮತ್ತೇನಿರಬಹುದು.. ? ಋಣದ್ದಿರಬಹುದೇ ? ಎಲ್ಲಿಯ ರಾಮಣ್ಣ, ಎಲ್ಲಿಯ ರಾಮಣ್ಣನ ಹೊಲ, ಎಲ್ಲಿಯ ಅರುಣ.. ? ಅವರೆಲ್ಲರ ಕ್ರಿಯೆಗಳು ನಮ್ಮ ಮೇಲೆ ಒಂದೇ ದಿನದಲ್ಲಿ ಇಷ್ಟು ಪ್ರಭಾವಿತವಾಗಲು ಹೇಗೆ ಸಾಧ್ಯ ? ಇಲ್ಲವೇ ಇದೆಲ್ಲವೂ ಬರಿಯ ವಿಶಿಷ್ಟ ಸಂಧರ್ಬಗಳಷ್ಟೇಯೇ ? ಮಾತು ಹೊರಡದೆ ಮಂಕಾಗಿ ಕುಳಿತಿದ್ದನು.. ಅವನಿಗೆ ತಾನು ಯಾವುದೊ ವಿಚಿತ್ರವಾದ ಆವರ್ತದಲ್ಲಿ ಸಿಲುಕಿದಂತೆ ಭಾಸವಾಗುತಿತ್ತು.. ಇದೆಲ್ಲವನ್ನು ಹೇಗೆ ಅರ್ಥಯಿಸಬೇಕು ಎಂದು ಯೋಚಿಸುತ್ತಲೇ ಅರುಣನತ್ತ ದಿಟ್ಟಿಸಿ ಕುಳಿತಿದ್ದ..
ಅರುಣ — “ಯಾಕ್ರೀ ಅಣ್ಣ.. ಹೋಗೋಣ ಬನ್ನಿ” ಎಂದು ಅಜಯನನ್ನು ಎಬ್ಬಿಸಿ ಕೊಂಡು ಹೊರಟ..
ಅಜಯ — “ಅರುಣ್.. ನೀವು ಇಷ್ಟೆಲ್ಲ ಉಪಕಾರ ಮಾಡಿದ್ದೀರಾ.. ನಿಮಗೆ ಏನಾದ್ರು ಅಪೇಕ್ಷೆ ಇದ್ರೆ ಹೇಳಿ.. ನಮಗೆ ಮುಜುಗುರ ಆಗುತ್ತೆ ಇಲ್ಲವಾದರೆ”..
ಅರುಣ — “ಯಜಮಾನ್ರು ಆರಾಮಾಗಲಿ ಬಿಡ್ರಿ.. ಈಗ್ಯಾಕೆ ಅದೆಲ್ಲ ಮಾತು.. ಅವ್ರು ಆರಾಮಾಗಿ ಮನೆಗೆ ಬಂದಮೇಲೆ ಫೋನ್ ಮಾಡ್ತೀನಿ ಅಂದಿದ್ದೀರಿ ಅಲ್ವ.. ಆಗ ಮಾತಾಡೋಣ ಬಿಡ್ರಿ.. ಈಗ ಮೊದ್ಲು ಇಲ್ಲಿ ಖರ್ಚು ನೋಡ್ಕೊಳ್ರಿ.. ಹಂಗಂತ ನಾನೇನು ಕೇಳಲ್ಲ ಬಿಡ್ರಿ.. ಗಾಬ್ರಿ ಆಗಬೇಡ್ರಿ ಮತ್ತೆ.. ಹೆಚ್ಚು ಅಂದ್ರೆ ಬನಶಂಕರಿಯ ಪಾರ್ಕಿನಿಂದ ಇಲ್ಲಿಗೆ ಬಂದ ಕ್ಯಾಬಿನ ಬಾಡಿಗೆ ಕೇಳ್ತೀನಿ ಅಷ್ಟೇ.. ಹೊಟ್ಟೆ ತುಂಬಾ ಊಟ ಹೇಂಗೂ ನೀವೇ ಕೊಡ್ಸಿದ್ರಿ.. ಮುಗಿತಲ್ಲ ಅಲ್ಲಿಗೆ.. ಎಲ್ಲವು ವ್ಯವಹಾರದ ಲೆಕ್ಕಕ್ಕೆ ಬರಲ್ಲ.. ಯಾರೇ ಆಗಿದ್ರು ಇದು ಮಾಡಿರೋರು ಬಿಡಿ.. ಹಂಗೆ ನೋಡಿದ್ರೆ ನಾನು ಬೆಳಗ್ಗೆ 5 ಗಂಟೆಗೆ ರೋಡಿಗೆ ಕ್ಯಾಬ್ ತೆಗದ್ರೆ ಮತ್ತೆ ರಾತ್ರಿ 11–12ಗೆ ಮಲಗೋದು.. ಇವತ್ತು ನಾನು ಸಹಾಯ ಮಾಡಿದ್ರೆ ಅಲ್ವ ನನಗೆ ನಾಳೆ ರಸ್ತೆಯಲ್ಲಿ ಏನಾದ್ರು ಆದ್ರೆ ಮತ್ತೊಬ್ರು ಮಾಡೋದು.. ಅದಕ್ಕೆ ನೀವು ಸಹಾಯ ಅಂತೀರೋ ಕರ್ತವ್ಯ ಅಂತೀರೋ ಕರ್ಮ ಅಂತೀರೋ ನಿಮಗೆ ಬಿಟ್ಟಿದ್ದು.. “
ಮತ್ತೇನು ಹೇಳಲು ಮಾತುಗಳು ಹೊರಡದೆ ಧನ್ಯವಾದ ಸೂಚಿಸುವಂತೆ ಮುಗುಳ್ನಗೆ ಬೀರಿ ಅರುಣನ ಕೈ ಗಟ್ಟಿಯಾಗಿ ಕುಲುಕಿದನು ಅಜಯ..
ಅರುಣನನ್ನು ಬೀಳ್ಕೊಟ್ಟು ಮತ್ತೆ ಕ್ಯಾಂಟೀನ್ ಕಡೆ ಹೋಗಿ ಒಂದು ಕಾಫಿ ಹಿಡಿದು ತಟಸ್ಥನಾಗಿ ಕೆಲ ಕಾಲ ಕುಳಿತುಬಿಟ್ಟನು..
ಗೌರಿ — “ಇಷ್ಟೋತ್ತಾಯ್ತು, ಎಲ್ಲೋ ಇದ್ದೀಯ.. ಡಾಕ್ಟರ್ ಬರ್ತಾರಂತೆ ಈಗ ಮತ್ತೆ.. ನೀನು ಬಾ” ಎಂದರು ಫೋನಿನಲ್ಲಿ..
ಅವರ ಕರೆಯಿಂದ ಎಚ್ಚೆತ್ತು ತನ್ನ ವಿಚಾರಗಳ ಗೊಂದಲದಿಂದ ಹೊರಬಂದು ಅಜಯ ವಾರ್ಡಿನ ಕಡೆ ನಡೆದ..
ಗೌರಿ — “ಅವರೆಲ್ಲಿ ? ಹೋದ್ರ ಮನೆಗೆ” ಅಜಯ ಒಬ್ಬನೇ ಬಂದದ್ದನ್ನು ಕಂಡು ಕೇಳಿದರು..
ಅಜಯ — “ಹಾಂ ಹೋದ್ರು.. ಮತ್ತೆ ಮುಂದೆ ಯಾವಾಗ್ಲಾದ್ರೂ ಮನೆಗೆ ಕರೀತೀನಿ, ಅಪ್ಪ ಉಷಾರಾಗಿ ಮನೆ ಬಂದ್ಮೇಲೆ ಬಿಡಿ”
ರಂಗನಾಥ್ — “ಅವ್ರಿಗೆ ಏನಾದ್ರು ಕೊಟ್ಟು ಕಳ್ಸಿದ್ಯೋ ಇಲ್ವೋ ಅಲ್ಲೂ ಅವ್ರು ಆ ದುಡ್ಡನ್ನ ಕುಡುದು ಹಾಳು ಮಾಡಬೋದು, ಸಿಗರೆಟ್ ಸೇದಬಹುದು ಅಂತ ಯೋಚಿಸ್ಕೊತ ಮರ್ತ್ಯೋ” ಎಂದು ವ್ಯಂಗ್ಯವಾಗಿ ಕೇಳಿದರು..
ಅಜಯ — “ಅಪ್ಪ.. ನಾನು ಒಂದು ಮಾತು ಹೇಳ್ತಿನಿ ಕೇಳಿ.. ನೀವು ರಾಮಣ್ಣನ ವಿಷ್ಯದಲ್ಲಿ ತೀರ್ಮಾನಿಸಿದ್ದೆ ಸರಿ.. ಅವರಿಗೆ ಸಹಾಯ ಮಾಡಿ.. ಅವರ ಹೊಲ ಅವರಿಗೆ ಇರಲಿ..” ಎಂದು ಗಂಭೀರವಾಗಿ ಹೇಳಿದನು ಅಜಯ..
ರಂಗನಾಥ್ — “ಅಯ್ಯೋ ಸುಮ್ನೆ ಅಂದೇ ಕಣೋ.. ನಿಂಗೆ ಬೇಸರ ಮಾಡೋದಿಕ್ಕೆ ಅಲ್ಲ.. ರಾಮಣ್ಣ ವಿಷ್ಯ ಈಗ್ಯಾಕೆ ಬಿಡು.. ಸದ್ಯಕ್ಕೆ ಪಾಪ ಈ ಡ್ರೈವರಿನದ್ದೇನು ಅಂತ ಕೇಳ್ದೆ ಅಷ್ಟೇ”.
ಅಜಯ — “ರಾಮಣ್ಣ ಬೇರೆ ,ಈ ಡ್ರೈವರ್ ಅರುಣ ಬೇರೆ ಅಂತ ಯಾಕೆ ಅಂದ್ಕೊಳೋದು.. ನಾವು ಏನು ಮಾಡ್ತೀವೋ, ಅದೇ ನಮಗೆ ಮತ್ತೊಂದು ರೂಪದಲ್ಲಿ ತಿರುಗಿ ಬರುತ್ತೆ.. ನಮ್ಮ ಎಲ್ಲ ಕ್ರಿಯೆಗಳು, ಅದಕ್ಕನುಗುಣವಾದ ಪ್ರತಿಕ್ರಿಯೆಗಳು, ಎಲ್ಲವೂ ಒಂದು ರೀತಿಯ ಆವರ್ತ ಅಲ್ಲವೇ” ಎಂದು ತನ್ನ ನಿಲುವನ್ನು ತಿಳಿಸಿದನು.. ಮತ್ತ್ಯಾವ ಸಮರ್ಥನೆಯ ಅವಶ್ಯಕತೆಯೂ ಸುಳಿಯಲಿಲ್ಲ..
karma cycle
ಸಿಗರೇಟ್ ಹತ್ತಿಸಿ ಮತ್ತೊಂದು ಕೈಯಲ್ಲಿ ಚಹಾದ ಪೇಪರ್ ಕಪ್ ಹಿಡಿದು ಧನಂಜಯ ಗೂಡಂಗಡಿಯ ಪಕ್ಕವೇ ಇದ್ದ ಬೇವಿನ ಮರದಡಿಯ ಕಟ್ಟೆಯ ಮೇಲೆ ಬಂದು ಕುಳಿತ. ಸಾಮಾನ್ಯವಾಗಿ ತನ್ನ ಸಹೋದ್ಯೋಗಿಗಳೊಟ್ಟಿಗೆ ಲಘು ವಿರಾಮಕ್ಕೆಂದೋ ಇಲ್ಲವೇ ತತ್ಕ್ಷಣದ ಉದ್ಯೋಗ ಸಹಜ ಆವೇಗದ ಉಪಶಮನಕ್ಕೆಂದೋ ಅಲ್ಲಿಗೆ ಬಂದು, ತಮ್ಮ ಹಲವು ಭೇಟಿಗಳಿಂದ ಪರಿಚಿತರಾಗಿ ಈಗ “ಅಕ್ಕ” ಎಂದು ಸಂಭೋದಿಸುವ ಗೂಡಂಗಡಿಯ ಮಾಲೀಕರಿಗೆ ಕಿರು ನಗೆಯೊಂದನ್ನು ಬೀರಿ ಚಹಾ ಸಿಗರೆಟ್ಟನ್ನು ಹಿಡಿದು ಮರದಡಿ ಕುಳಿತು ಹರಟೆ ಹೊಡೆಯುವುದು ವಾಡಿಕೆ. ಇಂದೇಕೋ ಧನಂಜಯ ಏಕಾಂಗಿಯಾಗಿ, ಮೌನ ಬಯಸಿ, ಒಬ್ಬನೇ ಬಂದು ಜಂಗುಳಿಯಿಂದ ಕೊಂಚ ದೂರವೇ ಕೂತನು. ತನ್ನ ಕಿಸಿಯಿಂದ ಮೊಬೈಲನ್ನು ಹೊರ ತೆಗೆದು ಬಂದಿದ್ದ ಮೆಸೇಜನ್ನು ಮತ್ತೊಮ್ಮೆ ನೋಡಿದನು. “…ನಿಮ್ಮ ಖಾತೆಗೆ 2,5೦,೦೦೦ rs ಗಳ ವೇತನ ಪಾವತಿಸಲಾಗಿದೆ….” ಎಂಬುದನ್ನು ನಾಲ್ಕೈದು ಬಾರಿ ಓದಿದನು. ಧನಂಜಯನನ್ನು ಉನ್ನತ ವೇತನದ ಖುಷಿಗೂ ಮೀರಿ ಮನಸ್ಸು ಬೇರೊಂದು ಭಾವ ಲಹರಿಗೆ ನೂಕುತಿತ್ತು..
9 ನೆಯ ತರಗತಿಯ ವಾರ್ಷಿಕ ಪರೀಕ್ಷೆಗೆ ಇನ್ನೇನು ಹೊರಡಲು 20–25 ನಿಮಿಷಗಳಿವೆ.. ಧನಂಜಯನು ತನ್ನ ಕೋಣೆಯಲ್ಲಿ ಕುಳಿತು ತಾನು ತಯಾರಿಸಿದ್ದ ಮುಖ್ಯಾಂಶಗಳನ್ನೊಮ್ಮೆ ಪುನರಾವರ್ತಿಸುತ್ತಿದ್ದನು. ಪಕ್ಕದ ಕೋಣೆಯಲ್ಲಿ ಅಣ್ಣನು ಸಹ ಜೋರಾಗಿ ಅಭ್ಯಸಿಸುತಿದ್ದು ಕೇಳಿಸುತಿತ್ತು.. ಅಣ್ಣನ ಬಾಯ್ಪಾಠದ ಜೋರು ಧನಿಯನ್ನು ಸೀಳಿಕೊಂಡು ಯಾರೋ ಕೂಗಾಡುತ್ತಿರುವುದು ಕೇಳಿಸಿತು. ತಟ್ಟನೆ ತನ್ನ ಮೇಜಿನಿಂದ ಎದ್ದು ಕುರ್ಚಿಯನ್ನ ಸರಿಸಿ ಬಾಗಿಲ ಬಳಿ ಬಂದು ಇನ್ನೇನು ತೆರೆಯಬೇಕೆಂಬುವಷ್ಟರಲ್ಲಿ ಅವನಿಗೆ ಪರಿಸ್ಥಿತಿಯ ಅರಿವಾಯಿತು. ಅಪ್ಪನಿಗೆ ನೀಡಿದ ಕೈಸಾಲ ಕೇಳಲು ಬಂದಿದ್ದವರು ಸಿಟ್ಟಿನಿಂದ ಏರು ಧನಿಯಲ್ಲಿ ರಂಪವೆಬ್ಬಿಸುತ್ತಿದ್ದರು. ಅವರ ಕುಟುಂಬವಿದ್ದದ್ದು ಸರ್ಕಾರೀ ನೌಕರರಿಗೆಂದು ನೀಡುವ ವಸತಿ ಗೃಹದಲ್ಲಿ. ಅಕ್ಕ ಪಕ್ಕದವರೆಲ್ಲರೂ ಸರ್ಕಾರಿ ನೌಕರರೇ ಆಗಿದ್ದು ಕಾಲೋನಿಯ ಎಲ್ಲರಿಗು ಒಂದು ಬಗೆಯ ಪರಿಚಯವಿದ್ದಿತ್ತು. ಬೆಳ್ಳಂಬೆಳಗ್ಗೆ ಮನೆಯಿಂದ ಬರುತಿದ್ದ ಕಿರುಚಾಟದ ಸದ್ದು ಅವರಿಗೆಲ್ಲ ಕೇಳಿಸುವುದೆಂಬ ಮುಜುಗರ ಒಂದು ಕಡೆ ಆದರೆ ಮನೆಯ ಪರಿಸ್ಥಿತಿ ಸುಧಾರಿಸಲು ಆ ಸದ್ಯ ಏನು ಮಾಡಲಾಗುವುದಿಲ್ಲವಲ್ಲ ಎಂಬ ನಿಸ್ಸಹಾಯಕ ಭಾವ ಇನ್ನೊಂದೆಡೆ. ಹೇಗೋ 10–15 ನಿಮಿಷಗಳಲ್ಲಿ ಅಪ್ಪ ಸಮಸ್ಯೆ ಬಗೆ ಹರಿಸಿ ಬೇಜಾರಿನಿಂದ ಎಲ್ಲೋ ಹೊರಗೆ ಹೋಗಿದ್ದನ್ನು ಗಮನಿಸಿದ ಧನಂಜಯ, ಮೆತ್ತಗೆ ತನ್ನ ಬ್ಯಾಗ್ ಹಿಡಿದು ಪರೀಕ್ಷೆಗೆ ಹೊರಟಿದ್ದ. ದಾರಿಯುದ್ದಕ್ಕೂ ತಾನು ಇನ್ನೆಷ್ಟು ವರ್ಷ ಹೀಗೆ ಓದುತ್ತಿರಬೇಕು, ಎಂತಹ ನೌಕರಿ ಹಿಡಿಯಬೇಕು, ಯಾವ ಕೆಲ್ಸದಲ್ಲಿ ಉನ್ನತ ವೇತನದ ಸೌಕರ್ಯಗಳಿವೆ, ಎಷ್ಟು ದುಡಿದರೆ ತಮ್ಮ ಸಂಕಷ್ಟಗಳು ತೀರುವವು ಎಂಬುದನ್ನೇ ಯೋಚಿಸುತ್ತ ತನ್ನ ಸೋಶಿಯಲ್ ಎಕ್ಸಾಮಿನ ಬಗ್ಗೆ ಸಂಪೂರ್ಣ ಮರೆತಿದ್ದ.
ಧನಂಜಯನ ಬಾಲ್ಯ ಬಹುತೇಕ ಹೀಗೆಯೇ ಒಂದು ರೀತಿಯ ಆರ್ಥಿಕ ಮುಜುಗರದಲ್ಲೇ ಕಳೆದಿತ್ತು. ಅವನಿಗೆ ಮತ್ತು ಅಣ್ಣನಿಗೆ ವಿದ್ಯಾಭ್ಯಾಸಕ್ಕೆ ಆಗಲಿ ಇಲ್ಲ ಬಾಲ್ಯಾವಸ್ಥೆಯ ಯಾವುದೇ ಮೂಲಭೂತಗಳಿಗಾಗಲಿ ತಮ್ಮ ಆರ್ಥಿಕ ಕುಂದಿನ ಯಾವುದೇ ಅಡಚಣೆ ಇಲ್ಲದಂತೆ ಅವರ ತಂದೆ ತಾಯಿ ನಿಭಾಯಿಸಿದ್ದರೂ ಸಹ, ಮನ ಸಹಜವಾದ ತಮ್ಮ ಪರಿಸ್ಥಿತಿಯ ಅರಿವು ಅಣ್ಣ ತಮ್ಮಂದಿರಿಗಿತ್ತು. ಎಷ್ಟೋ ಬಾರಿ ಅವರ ತಂದೆಯು ತಮ್ಮ ಬಳಗದವರೊಟ್ಟಿಗೆ ಹರಟುತ್ತ ಕುಳಿತಾಗ ಬರುತಿದ್ದ ಮನೆ, ಸೈಟು, ಬಂಗಾರ ಇಲ್ಲವೇ ಮತ್ಯಾವುದೋ ಆಸ್ತಿ ಮಾಡುವ ವಿಚಾರಗಳಲ್ಲಿ “ಮಕ್ಕಳೇ ನನ್ನ ಆಸ್ತಿ. ಬೇರೆ ಯಾವ ಆಸ್ತಿ ಮಾಡುವ ಶಕ್ತಿಯು ನನಗಿಲ್ಲ” ಎಂದು ಅವರು ಹೇಳುತ್ತಿದ್ದದ್ದು ಧನಂಜಯನ ಕಿವಿಗೆ ಬಿದ್ದಿತ್ತು. ಒಮ್ಮೆ ಕೆಲಸದ ನಿಮಿತ್ತ ಮನೆಗೆ ಬಂದಿದ್ದ ದೊಡ್ಡಪ್ಪ, ಹೊರಡುವಾಗ ಧನಂಜಯನ ಕೋಣೆಗೆ ಹೋಗಿ, ಅವನ ಕೈಯಲ್ಲಿ 100 rs ಕೊಟ್ಟು “ಎಲ್ಲ ತಂದೆ ತಾಯಿಯರು ಮಕ್ಕಳಿಗೆ ಆಸ್ತಿ ಮಾಡುತ್ತಾರೆ. ಆದರೆ ನಿಮಗೆ ನಿಮ್ಮ ತಂದೆ ತಾಯಿಗಳಿಗೆ ಆಸ್ತಿ ಮಾಡುವ ಒಂದು ವಿಶಿಷ್ಟ ಅವಕಾಶ ಇದೆ. ಚೆನ್ನಾಗಿ ಓದಿ ಅದನ್ನ ನಿಜ ಮಾಡಿ” ಎಂದು ಹೇಳಿ ಹೋದದ್ದು ಅವನ ತಲೆಯಲ್ಲಿ ಅಚ್ಚೋತ್ತಿತ್ತು. ಅಲ್ಲಿಯವರೆಗೂ ತಮ್ಮ ಪರಿಸ್ಥಿತಯ ಬಗ್ಗೆ ಮುಜುಗರ, ಬೇಸರವೇ ಇದ್ದ ಅವನಿಗೆ ಅವರ ಮಾತುಗಳು ಒಂದು ಬೇರೆಯದೇ ಆಯಾಮ ಸೃಷ್ಟಿಸಿದಂತಾಯಿತು. ಮುಜುಗರಕ್ಕಿಂತ ಜವಾಬ್ದಾರಿಯ ಭಾವ ಮೂಡಿದಂತಾಯಿತು. ಬಹುಷಃ ಆ ರೀತಿ ಭಾಸಿಸುವುದು ಅಂದಿಗೆ ಅವನಿಗೆ ಕೊಂಚ ನಿರಾಳವು ತಂದಿದ್ದಿರಬಹುದು.
SSLC ತರಗತಿಗಳು ಆರಂಭವಾಗಿ 10 ದಿನಗಳೇ ಕಳೆದಿವೆ. ಧನಂಜಯನು ಓದುತಿದ್ದ ಸರ್ಕಾರಿ ಸಹಭಾಗಿತ್ವದಲ್ಲಿ ನಡೆಸುತ್ತಿದ್ದ ಖಾಸಗಿ ಶಾಲೆಯಲ್ಲಿ. ವಾರ್ಷಿಕ ಶುಲ್ಕ ಖಾಸಗಿ ಶಾಲೆಗಳ ಮಾಸಿಕ ಶುಲ್ಕದಷ್ಟು. ಆ ಸಾಲಿನ ಶುಲ್ಕ ಭರಿಸಲು ಅಂದೇ ಕೊನೆಯ ದಿನಾಂಕ. ತರಗತಿಗೆ ಬರುವ ಎಲ್ಲಾ ವಿದ್ಯಾರ್ಥಿಗಳ ಶುಲ್ಕ ಭರ್ತಿಯ ರಸೀತಿಯನ್ನು ತನ್ನ ಕ್ಲಾಸಿನ ಲೀಡರ್ ಆಗಿದ್ದ ಧನಂಜಯನೇ ಮೇಲ್ವಿಚಾರಿಸಿ ಒಳಗೆ ಬಿಡಬೇಕಿತ್ತು. ಶುಲ್ಕ ಭರಿಸದವರನ್ನು ಪ್ರಿನ್ಸಿಪಾಲರ ಕೋಣೆಗೆ ಕರೆದೊಯ್ಯುವುದು ಲೀಡರಿನ ಕೆಲಸವಾಗಿತ್ತು. ಹಿಂದಿನ ದಿನದಿಂದಲೇ ಮನೆಯಲ್ಲಿ “ನಾಳೆ ಶುಲ್ಕ ಭರಿಸದೆ ನಾನು ಶಾಲೆಗೇ ಹೋಗುವುದಿಲ್ಲ. ಲೀಡರ್ ನಾನು, ನನಗೆ ಅವಮಾನ ಆಗುತ್ತೆ” ಎಂದು ರಚ್ಚೆ ಹಿಡಿದಿದ್ದ. ಅವನ ಕಾಟ ತಾಳಲಾಗದೆ ಅವರಪ್ಪ “ಶುಲ್ಕ ಭರಿಸಲು ದಯಮಾಡಿ ಇನ್ನೊಂದು ವಾರದ ವಿಸ್ತರಣೆ ಕೊಡಿ” ಎಂದು ವಿನಂತಿ ಪತ್ರವನ್ನು ಬರೆದು ಕಳುಹಿಸಿ ಕೊಟ್ಟಿದ್ದರು. ಎಲ್ಲ ವಿದ್ಯಾರ್ಥಿಗಳ ರಸೀತಿಯನ್ನು ಪರೀಕ್ಷಿಸಿ, ಎಲ್ಲರೂ ನಿಗದಿ ಪಡಿಸಿದ್ದ ದಿನಾಂಕದಲ್ಲೇ ಪಾವತಿಸಿದ್ದನ್ನು ನೋಡಿ ಮತ್ತಷ್ಟು ಅನಾಥ ಭಾವನೆಯಿಂದ ಪೇಚು ಮೊರೆ ಹಾಕಿ, ತನ್ನ ಜೇಬಿನಲ್ಲಿದ್ದ ವಿನಂತಿ ಪತ್ರವನ್ನು ಕೈಯಲ್ಲಿ ಹಿಡಿದು, ನೀರು ಕುಡಿದು ಬರುವೆನೆಂದು ಸುಳ್ಳು ನೆಪವೊಡ್ಡಿ ಪ್ರಿನ್ಸಿಪಾಲರ ರೂಮಿಗೆ ಬಂದ. ಅಂದಿನವರೆಗೂ ಪ್ರಶಸ್ತಿಗಳಿಗೋ ಇಲ್ಲವೇ ಶಾಲಾ ಜವಾಬ್ದಾರಿಗಳಿಗಷ್ಟೇ ಪ್ರಿನ್ಸಿಪಾಲರನ್ನು ಭೇಟಿ ಮಾಡುತಿದ್ದ ಅವನಿಗೆ, ಪರಿಸ್ಥಿತಿಯು ತೀರವೇ ಅವಮಾನಕರ ಎನ್ನಿಸಿ ತನ್ನ ಕೈಯಲ್ಲಿದ್ದ ಪತ್ರವನ್ನು ಪ್ರಿನ್ಸಿಪಾಲರಿಗೆ ಮುಖ ತಗ್ಗಿಸಿಯೇ ಇತ್ತ. ಪ್ರಿನ್ಸಿಪಾಲರು ಮರು ಮಾತಾಡದೆ ತಮ್ಮ ಗ್ರೀನ್ ಪೆನ್ನಿನ್ನಲ್ಲಿ “Extension granted “ ಎಂದು ವಿನಂತಿ ಪತ್ರದ ಮೇಲೆ ಬರೆದು ಕಳಿಸಿದ್ದು ಅವನಿಗೆ ಕೊಂಚ ನಿರಾಳವಾಯಿತು. ಅವರೇನು ಪ್ರಶ್ನೆ ಕೇಳುವರೋ, ನಾನೇನು ಉತ್ತರ ಕೊಡಬೇಕೋ, ಎಂದೇ ಯೋಚಿಸುತಿದ್ದ ಅವನಿಗೆ ತಲೆಯ ಮೇಲಿನ ಭಾರ ಇಳಿದಂತಾಯಿತು. ಆದರೆ ಇನ್ನೊಂದು ವಾರದಲ್ಲಾದರೂ ಅವನ ತಂದೆಗೆ ಶುಲ್ಕ ಪಾವತಿಸಲಾಗುವುದಾ ?ಎಂಬುದನ್ನೇ ಯೋಚಿಸುತ್ತ ತನ್ನ ಕ್ಲಾಸ್ ರೂಮಿನ ಕಡೆ ಬಂದನು. ಅಂದಿನ ಮೊದಲ ಪಿರಿಯಡ್ ಸಂಸ್ಕೃತ. ಸುಭಾಷಿತಗಳ ಪಾಠ ನಡೆಯುತಿತ್ತು. “ನಾ ಭಂದು ಮಧ್ಯೆ ಧನ ಹೀನ ಜೀವಿತಂ” ಎಂಬ ಸುಭಾಷಿತದ ಸಾಲಿನ ಅರ್ಥ ತಿಳಿಸುತ್ತಿದ್ದರು ಪಂಡಿತರು. ಧನಂಜಯನಿಗೆ ಅವನ ಕುರಿತಾಗಿಯೇ ಹೇಳುತಿದ್ದರೇನೋ ಎಂಬಂತೆ ಭಾಸ. ಭಂದುಗಳ ಮದ್ಯೆ ಧನ ಹೀನನಾದವನು, ಬೇಟೆಯಾಡಲು ಶಕ್ತಿಯಿಲ್ಲದ ಸಿಂಹ ಕಾಡಿನಲ್ಲಿದ್ದಂತೆ ಎಂದು ವಿಸ್ತಾರಿಸಿ ಹೇಳಿದ್ದು ಅವನ ಜೀವನದ ರೂಪಕವೆನ್ನಿಸಿತು.
ದ್ವಿತೀಯ PUC ಪರೀಕ್ಷೆ ಮುಗಿದು CET ರಾಂಕಿನ ಅಂಕಪಟ್ಟಿಯು ಬಿಡಿಗಡೆಯಾಗಿತ್ತು. ಇಂಜಿನಿಯರಿಂಗ್ ರಾಂಕಿಂಗಿಂತಲೂ ಮೆಡಿಕಲ್ ರಾಂಕ್ ಉತ್ತಮವಾಗೇ ಬಂದಿತ್ತು ಧನಂಜಯನಿಗೆ. ಅವನಿಗೊಂದು ಬಗೆಯ ಆಶ್ಚರ್ಯ ಮತ್ತು ಹತಾಶೆ. PUCಯ ಎರಡು ವರ್ಷಗಳ ವ್ಯಾಸಂಗದಲ್ಲಿ ಮೆಡಿಕಲ್ ಗೆ ಬೇಕಾಗುವ ಬಯಾಲಜಿಯನ್ನು ಅವನೆಂದಿಗೂ ಅಭ್ಯಸಿಸಿದ್ದೇ ಇಲ್ಲ. ಕ್ಲಾಸ್ಸಿನಲ್ಲಿ ಕೇಳಿಸಿಕೊಂಡಿದ್ದಷ್ಟೇ ತಯಾರಿ. ಪಾಸಾಗಲು ಎಷ್ಟು ಬೇಕೋ ಅಷ್ಟೇ ಓದುತಿದ್ದನು. ಅವನ ಮನೆಯ ಸ್ಥಿತಿಗೆ ಮೆಡಿಕಲ್, ಹಸಿದವನಿಗೆ ಮೋಕ್ಷದ ಪಾಠ ಮಾಡಿದಂತಿತ್ತು. ಅದು ಸಾಧ್ಯವೇ ಇಲ್ಲ ಎಂದು ಅವನು ನಿಶ್ಚಯಿಸಿಬಿಟ್ಟಿದ್ದನು. ಇಂಜಿನಿಯರಿಂಗ್ ಆದರೆ ಕಡಿಮೆ ಶುಲ್ಕದಲ್ಲಿ, ಬಹು ಬೇಗದಲ್ಲಿ ವ್ಯಾಸಾಂಗ ಮುಗಿಸಿ ಉದ್ಯೋಗ ಹುಡುಕಿಕೊಳ್ಳಬಹುದು ಎಂಬುದವನ ಅನಿಸಿಕೆ. ಮೆಡಿಕಲ್ ಗೆ ಬೇಕಾದ ದೀರ್ಘ ಕಾಲದ ಪರಿಶ್ರಮವಾಗಲಿ, ಅದಕ್ಕೆ ಹಿಡಿಯುವ ಖರ್ಚನ್ನು ಭರಿಸುವ ಶಕ್ತಿಯಾಗಲಿ, ಇಲ್ಲದ್ದು ಅವನಿಗೆ ತಿಳಿದಿತ್ತು. ಹಠ ಹಿಡಿದ್ದಿದ್ದರೆ ಅವರಪ್ಪ ಮತ್ತಷ್ಟು ಸಾಲ ಮಾಡಿ ಓದಿಸುತ್ತಿದ್ದರೇನೋ ಬಹುಷಃ, ಆದರೆ ಅವರನ್ನು ಆ ಸಂಕಷ್ಟಕ್ಕೆ ಸಿಲುಕಿಸ ಬಾರದೆಂಬುದು ಅವನರಿತಿದ್ದನು. ಒಂದು ಬಗೆಯ ಬೇಸರದಿಂದ “ಛೆ ! ಮೆಡಿಕಲ್ ರಾಂಕಿಂಗೆ ಎಂಜಿನೀರಿಂಗೆ ಬಂದಿದ್ದಾರೆ ಎಷ್ಟು ಒಳ್ಳೆದಿತ್ತಲ್ಲ” ಎಂದು ಶಪಿಸಿದನು. ಬಾಲ್ಯದಲ್ಲಿ ಅವನಿಗೆ ಆಸಕ್ತಿಯಿದ್ದ ಆರ್ಟ್ಸ್, ಎಕನಾಮಿಕ್ಸ್ & ಲಿಟರೇಚರ್ ಗಳನ್ನು, ದುಡಿಮೆಯ ಅನುಕೂಲಕ್ಕಾಗುವ ಎಂಜಿನೀರಿಂಗಿಗಾಗಿ ಎಂದೋ ತ್ಯಜಿಸಿಬಿಟ್ಟಿದ್ದನು. ಯಾವ ಇಂಜಿನಿಯರಿಂಗ್ ಕಾಲೇಜು ಸೇರಬೇಕೆಂಬ ಪಟ್ಟಿಯನ್ನು ಸಿದ್ಧಪಡಿಸಿಕೊಂಡಿದ್ದನು. ಆದರೆ ಈಗ ಅವನ ರಾಂಕಿಂಗೆ ಅದು ಸಿಗುವುದೋ ಇಲ್ಲವೋ ಎಂದು ತಿಳಿಯದು. ಮನೆಯಲ್ಲಿ ಎಲ್ಲರು ಚರ್ಚಿಸಿ ಧಾರವಾಡದ SDM, ಹುಬ್ಬಳ್ಳಿಯ BVB ಕಾಲೇಜುಗಳನ್ನು ಆಯ್ಕೆಮಾಡಿದ್ದರು. ನಿಗದಿ ಪಡಿಸಿದ ದಿನದಂದು ಬೆಂಗಳೂರಿನ ಮಲ್ಲೇಶ್ವರದ ಕೌನ್ಸೆಲಿಂಗ್ ಸೆಂಟರಿಗೆ ಬಂದು ಆ ಎರಡು ಕಾಲೇಜಿನ ಸೀಟುಗಳ ಹಂಚಿಕೆಯ ಪ್ರಕ್ರಿಯೆಯನ್ನು ತವಕದಿಂದ ಎದುರು ನೋಡುತಿದ್ದರು. ಇನ್ನೇನು ಅವನ ಆಯ್ಕೆ ಬರುವ ೫ ನಿಮಿಷದ ಮುನ್ನ ಧನಂಜಯನ ತಂದೆ “ನಮ್ಮೂರಿನ ಕಾಲೇಜೇ ತೊಗೊಂಡುಬಿಡು. ಯಾಕೆ ಬೇರೆ ಊರಿನ ಕಾಲೇಜೆಲ್ಲ” ಎಂದು ಮೆಲುದನಿಯಲ್ಲಿ ಹೇಳಿದರು. ಇಷ್ಟು ದಿನಗಳ ತಯಾರಿಯ ನಂತರ ಕೊನೆಯ ಕ್ಷಣದಲ್ಲಿ ಅಪ್ಪ ಹೀಗೆ ಹೇಳಿಬಿಟ್ಟರಲ್ಲ ಎಂದು ಅವನಿಗೆ ಎಲ್ಲಿಲ್ಲದ ಸಿಟ್ಟು ಬಂದಿತು. “ಎಜುಕೇಶನ್ ಲೋನ್ ತೊಗೊಂಡು ಓದಿಸಿ. ನೀವೇನು ಖರ್ಚು ಮಾಡ್ಬೇಡಿ. ನಾನೆ ಕೆಲಸ ಮಾಡಿ ಸಾಲ ತೀರ್ಸ್ಕೊತಿನಿ” ಎಂದು ಕಟುವಾಗಿ ಹೇಳಿದ. ಅದನ್ನು ಕೇಳಿ ಅವನ ತಂದೆ ಸಣ್ಣ ಮುಖ ಮಾಡಿ “ಹಾಗಲ್ಲ ಬಿಡು. ನೀನು ದುಡ್ಡಿನ ಯೋಚನೆ ಮಾಡ್ಬೇಡ. ನಾವದೆಲ್ಲ ನೋಡ್ಕೋತೀವಿ. ಸರಿ, ನಿನಗಿಷ್ಟದ ಕಾಲೇಜಲ್ಲೇ ಓದು” ಎಂದರು. ಆಯ್ಕೆ ಪ್ರಕ್ರಿಯೆ ಮುಗಿಸಿ ಹೊರಬಂದನಂತರ, ಧನಂಜಯನ ಕೈ ಕುಲಿಕಿ ನಗುತ್ತ “ಕಂಗ್ರಾಟ್ಸ್” ಎಂದರು ಅಪ್ಪ. ಅದನ್ನು ಹೇಗೆ ಅರ್ಥೈಸಬೇಕು ಎಂದು ಅರಿವಾಗದೇ, ಕೆಲ ಕ್ಷಣಗಳ ಹಿಂದೆಯ ತನ್ನ ಕೋಪಕ್ಕೆ ಮೊರಗಿದ. ಅಷ್ಟು ದಿನಗಳ ತಯ್ಯಾರಿಯಲ್ಲಿ ಹೇಳಲಾಗದೆ ನುಂಗಿಕೊಂಡಿದ್ದನ್ನು ಆ ಕೊನೆಯ ಘಳಿಗೆಯಲ್ಲಿ ತಮ್ಮ ಇಚ್ಛೆಗೂ ಮೀರಿ ಅಪ್ಪ ಹಾಗೆ ಹೇಳಿರಬಹುದಾದ ಸಂಕಷ್ಟದ ಸ್ಥಿತಿಯ ಪರಿಗಣೆನೆಯೇ ಇಲ್ಲದೆ ಕಟುವಾಗಿ ವರ್ತಿಸಿದೆನಲ್ಲ ಎಂಬ ಇರುಸು ಮುರುಸಿನ ಭಾವದಲ್ಲಿ ನಗೆಯೇ ಇಲ್ಲದೆ ಅಪ್ಪನ ಕೈ ಕುಲುಕಿದ.
ಇಂಜಿನಿಯರಿಂಗ್ ಮೊದಲ ವರ್ಷದ ರಜೆಗೆಂದು ಅತ್ತೆಯ ಮನೆಗೆ ಬಂದಿದ್ದ ಧನಂಜಯ. ಅಷ್ಟಾಗಿ ಭಂದುಗಳ ಒಡನಾಟ ಇರದಿದ್ದರಿಂದ ರಜೆಗೆ ಹೋಗುತ್ತಿದ್ದದ್ದು ತನ್ನ ಇಬ್ಬರು ಅತ್ತೆಗಳ ಮನೆಗಷ್ಟೇ. ಒಂದು ದಿನ ಬೆಳಗ್ಗೆಯೇ ತನ್ನ ಅಪ್ಪನಿಗೆ ಆರೋಗ್ಯ ಸರಿಯಿಲ್ಲದ ಕಾರಣ ಆಸ್ಪತ್ರೆ ಸೇರಿಸಿದ್ದಾರೆಂದು, ಅವನು ಬೇಗ ಹೊರಟು ಬರಬೇಕೆಂದು ಅಮ್ಮ ಅತ್ತೆಗೆ ಫೋನ್ ಮಾಡಿ ಹೇಳಿದ್ದರು. ಎರಡು ದಿನಗಳ ಹಿಂದೆಯಷ್ಟೇ ಊರಿನಿಂದ ಬಂದಿದ್ದ ಅವನಿಗೆ ದಿಗ್ಭ್ರಮೆ. ತಾನು ಹೊರಟಾಗ ಆರಾಮಾಗೆ ಇದ್ದರು ಅಪ್ಪ. ಅವರೇ ಬಸ್ ಸ್ಟ್ಯಾಂಡಿಗೆ ತಮ್ಮ ಲೂನಾದಲ್ಲಿ ಬಿಟ್ಟಿದ್ದರು. ಎರಡು ದಿನಗಳಲ್ಲೇ ಏನಾಗಿರಬಹುದು ಎಂದು ಯೋಚಿಸುತ್ತ ಊರಿನ ಬಸ್ ಏರಿದ್ದ. ಬಂದವನೇ ಆಸ್ಪತ್ರೆಗೆ ಹೋಗಿ ನೋಡಿದರೆ, ತಾನು ಎಣಿಸಿಯೂ ಇರದಷ್ಟು ಗಂಭೀರ ಪರಿಸ್ಥಿತಿಯಲ್ಲಿ ಮಲಗಿದ್ದರು ಅಪ್ಪ. ಧನಂಜಯನಿಗೆ ಮಾತೆ ಹೊರಡದೆ ದಿಗ್ಬ್ರಮೆಯಿಂದಲೇ ಹೋಗಿ ಅವರ ಬಳಿ ಹಾಸಿಗೆಯ ಮೇಲೆ ಕುಳಿತುಕೊಂಡ. ಉಸಿರಾಡಲು ಕಷ್ಟ ಪಡುತಿದ್ದ ಅಪ್ಪ, ಆಗ್ಗಾಗ್ಗೆ ಜೋರಾಗಿ ಉಸಿರೆಳೆದುಕೊಂಡಾಗ ಹೊರಡುವ ಶಬ್ಧ ಧನಂಜಯನನ್ನು ಮತ್ತಷ್ಟು ಕುಗ್ಗಿಸಿತು. ಮಾತು ಸಹ ನೇರವಾಗಿ ಹೊರಡಿಸಲಾಗದ ಅವರು ಧನಂಜಯ ಬಂದು ಕುಳಿತದನ್ನು ಅರೆ ಪ್ರಜ್ಞಾ ಸ್ಥಿತಿಯಲ್ಲಿ ಗಮನಿಸಿ “ಯಾರು ? ಯಾರು ಬಂದಿದ್ದು ? ಯಾರು ನೀನು” ಎಂದು ಕೇಳಿದರು. ಧನಂಜಯನ ಧಿಗ್ಬ್ರಮೆಯ ಕಟ್ಟೆಯೊಡೆದು ತನಗರಿವಿಲ್ಲದೆಯೇ ಕಣ್ಣೀರು ಸುರಿಯತೊಡಗಿತು. “ಅಪ್ಪ ನಾನು. ಧನಂಜಯ. ಈಗಷ್ಟೇ ಊರಿಂದ ಬಂದೆ. ಮಾತಾಡಬೇಡಿ. ವಿಶ್ರಮಿಸಿ” ಎಂದು ಗಂಟಲು ಬಿಗಿದಿಟ್ಟುಕೊಂಡು ಹೇಳಿದ. “ನೀನಾ. ಬಾ ಇಲ್ಲಿ. ಕೇಳು. ನಾನು ಕೆಲವರಿಗೆ ದುಡ್ಡು ಕೊಡೋದಿದೆ. ಕೊಟ್ಟುಬಿಡಿ.” “ಅಮ್ಮನ್ನ ಚೆನ್ನಾಗಿ ನೋಡಿಕೊಳ್ಳಿ” ಎಂದರು. ಅದೇ ಅವರಾಡಿದ ಕೊನೆಯ ಮಾತು. ತನ್ನ ಕುಟುಂಬವನ್ನು ಆರ್ಥಿಕವಾಗಿ ನೆಲೆ ಮುಟ್ಟಿಸಲಿಲ್ಲವೆಂಬುದು ಎಷ್ಟಾಗಿ ಕಾಡಿರಬಹುದು ಅವರಿಗೆ. ಆ ಅರೆ ಪ್ರಜ್ಞಾ ಸ್ಥಿತಿಯಲ್ಲೂ ಅದನ್ನೇ ನೆನೆದಿದ್ದರೆಂದರೆ ಆ ಚಿಂತೆಯ ಭಾರ ಎಷ್ಟಿರಬಹುದು ಎಂದು ಎಷ್ಟೋ ಬಾರಿ ಧನಂಜಯನು ಏಕಾಂಗಿಯಾಗಿ ನೆನೆದು ಮರುಗಿದ್ದನು.
ಅಪ್ಪನ 14 ದಿನಗಳ ಎಲ್ಲಾ ಕಾರ್ಯಗಳು ಮುಗಿಸಿ, ಅಮ್ಮ ಅಣ್ಣನೊಟ್ಟಿಗೆ ಧನಂಜಯನು ಕುಳಿತಿದ್ದನು. ಇರುವ ಸಾಲಗಳೆಷ್ಟು. ಯಾರಿಗೆ ಎಷ್ಟೆಷ್ಟು ಕೊಡಬೇಕು. ಮಾಸಿಕವಾಗಿ ಯಾವ ತಾರೀಕಿಗೆ ಏನೇನು ಪಾವತಿಸಬೇಕು ಎಂದೆಲ್ಲ ಲೆಕ್ಕ ಹಾಕುತಿದ್ದರು. ಅಲ್ಲಿಯವರೆಗೂ ಮನೆಯ ವಹಿವಾಟುಗಳ ಗಾಳಿಯೇ ಅವರ್ಯಾರಿಗೂ ಇರಲಿಲ್ಲ. ಇದ್ದಕ್ಕಿದ್ದಂತೆ ಅಲೆಯೊಂದು ಸಮುದ್ರಕ್ಕೆಳೆದಂತ ಭಾವ. ಈಜುವುದೊಂದೇ ಮಾರ್ಗ. ಇಷ್ಟು ವರ್ಷಗಳೇ ಆರ್ಥಿಕವಾಗಿ ಶ್ರಮಿಸಿ ಗಟ್ಟಿಯಾಗಿದ್ದ ಅವರಿಗೆ ಮುಳುಗುವುವೆಂಬ ಭಯ ಇರಲಿಲ್ಲ. ಆದರೆ ಎಲ್ಲಿಗೆ ಈಜುವುದು ಎಂಬ ಅನಿಷ್ಚಿತತೆ, ಆತಂಕ. ಎಲ್ಲವೂ ಲೆಕ್ಕಿಸಿದ ನಂತರ ೨ ಲಕ್ಷಗಳ ಸಾಲ ಇದ್ದದು ತಿಳಿಯಿತು. ಆ ಎರಡು ಲಕ್ಷಗಳು ಅಂದಿಗೆ ಅಪ್ಪನನ್ನು ಎಷ್ಟು ಬಾಧಿಸಿದ್ದವು ಎಂಬುದರ ಅರಿವು ಅವನಿಗೆ ಮನದಟ್ಟಾಗಿತ್ತು. ಹೇಗಾದರೂ ಆ ಸಾಲವನ್ನು ಆದಷ್ಟು ಶೀಘ್ರವಾಗಿ ತೀರಿಸಿಕೊಳ್ಳಬೇಕು ಎಂಬುದೊಂದೇ ಅವರ ಅಂದಿನ ಶ್ರಮದ ಕೇಂದ್ರವಾಗಿತ್ತು. “ಟೈಮ್ ಹೀಲ್ಸ್” ಎಂದು ಆಂಗ್ಲದಲ್ಲಿ ಹೇಳುವ ಹಾಗೆ ಕಾಲ ಕ್ರಮೇಣ ಸಾಲದ ಹೊರೆಯು ತೀರಿತು, ಅಣ್ಣ ಧನಂಜಯರಿಬ್ಬರು ದುಡಿಯಲಾರಂಬಿಸಿ ತಾವೆಂದು ಯೋಚಿಸದ ಅನುಕೂಲವೆಂಬಂತಿದ್ದ ತಮ್ಮ ಊರಿನಲ್ಲಿ ಆಸ್ತಿಯೊಂದನ್ನು ಮಾಡಿಕೊಂಡರು.
ಹೀಗೆಯೇ ಮತ್ತಷ್ಟು ಘಟನೆಗಳು ಸ್ಮೃತಿಸುವಷ್ಟರಲ್ಲಿ ಕೈಲಿದ್ದ ಸಿಗರೇಟ್ ಮತ್ತು ಚಹಾ ಮುಗಿಯಿತು. ತನ್ನ ವೇತನ ಪಾವತಿಯ ಮೆಸೇಜು ಧನಂಜಯನಿಗೆ ತನ್ನ ಜೀವನದ ಒಂದು ಕಾಲಘಟ್ಟವನ್ನೇ ಮೆಲುಕಿಸಿತು. ಇಂದಿಗೆ ಅವನ ಮಾಸಿಕ ವೇತನ, ಜೀವನದುದ್ದಕೂ ಅವರಪ್ಪನನ್ನು ಭಾದಿಸಿದ ಸಾಲಕ್ಕಿಂತ ಹೆಚ್ಚು. ಈ ಒಂದು ತಿಂಗಳ ಹಣ ಅಂದು ಸಿಕ್ಕಿದ್ದರು ಅಪ್ಪನ ಹರ್ಷಕ್ಕೆ ಪಾರವೇ ಇರುತ್ತಿರಲಿಲ್ಲ ಎಂಬುದನ್ನು ನೆನೆದಾಗ, ಆ ವೇತನದ ಹಿಗ್ಗು ಇಂಗುತ್ತದೆ. ಇಂದು ಅನುಕೂಲಕ್ಕು ಕೊಂಚ ಹೆಚ್ಚು ಹಣವಿದೆ, ಆದರೆ ಧನಂಜಯನಿಗೆ ಅದರ ಸಮಾಧಾನವಿಲ್ಲ. ಜಾಬ್ ಸ್ವಿಚ್ ಪ್ರಯುಕ್ತ ಬಹು ಮೊತ್ತದ ವೇತನ ದೊರಕಿದಾಗಲೆಲ್ಲ ತನ್ನ ಬಾಲ್ಯಾವಸ್ಥೆಯ, ತನ್ನ ಅಪ್ಪನ ಅಸಹಾಯಕ ಘಟನೆಗಳ ನೆನಪಾಗಿ, ಆ ಹಣವು ಎಷ್ಟು ನಿರರ್ಥಕ ಎನಿಸಿಬಿಡುತ್ತದೆ. ಅಂದಿಗೆ ಯಾವ ಆಸ್ತಿಯ ಪ್ರಾಪ್ತಿಯಾಗಲಿ, ಧನದ ವ್ಯಾಪ್ತಿಯಾಗಲಿ ಅವರಿಗೆ ಇರಲಿಲ್ಲ. ಆದರೆ, ಅಪ್ಪ ನಿಭಾಯಿಸುವರೆಂಬ, ತಮ್ಮ ಶೈಕ್ಷಣಿಕ ಏಳಿಗೆಯ ಹಿಗ್ಗು ಅವರಿಗಿದೆಯೆಂಬ ತೃಪ್ತಿ ಇತ್ತು. ಇಂದಿಗೆ ಧನದ ವ್ಯಾಪ್ತಿಯೂ ಇದೆ, ಆಸ್ತಿಯ ಪ್ರಾಪ್ತಿಯೂ ಇದೆ, ಆದರೆ ತಮ್ಮ ಅನುಕೂಲಗಳ ಅರಿವೇ ಅಪ್ಪನಿಗಿಲ್ಲ ಎಂಬ ತೃಪ್ತಿಯ ಕೊರಗಿದೆ. “ಧನ”ವಿದ್ದರೂ ಜಯವಿಲ್ಲ ಎಂಬುದು ತನ್ನ ಹೆಸರಿನಲ್ಲೇ ಅಡಗಿರುವ ಕುಹಕ ಎನ್ನುಸಿತು ಧನ(Un)ಜಯನಿಗೆ.
Book Review : Birds, Beasts and Bandits. 14 days with Veerappan
There is a saying in Kannada “Ravi kaanaddanna kavi kanda” translates to “What cannot be seen by a sun can be seen by a poet” or symbolically you can put it to say “every happening can wonder when seen in its own lens”. This probably can strike all through the journey of this novel unlike any other doccumentaries of a Veerappan.
Krupakar & Senani who are naturalists based out of Bandipur, working on forest & animal doccumentaries for BBC and other esteemed channels/magazines paint their 14 day kidnapping much through the lens of what they are used to, as naturalists or simply put nature enthusiasts. Veerappan lands on theri doorstep in a case of mistaken identity and the ensuing ordeal is the narration of the book.
As you go on to read the novel you only end up wondering how deep is Veerappan’s understanding of forests, nature in general and his sharp animal instincts. At times you even envy Veerappan and also start to imagine having kidnapped by him to experience his skills at display at close quarters and the tryst his gang of men have with nature. A scientist Dr. Maithi also goes on to say “Many foreign companies do come in contact with such people of high nature accumen, document their experiences and file patents for these discoveries without having any shame of plagiarism while we are force taught of these discoveries to be made by these skilled scientists in their labs while they aquired all this knowledge from people of such rich forest experience but no social reach, mostly tribes (referring to Veerappan and his narrations of various behaviors of animals & vegetations that grow in deciduous forests of Bandipur) and you cannot but agree to that. By the end of it all the novel only leaves you richer with random wanderings in a thick deciduous forests and brings Veerappan under a close lens in which he mostly shines for major part.
As I neared the end, I also had a wicked wish that Veerappan should prolong the kidnapping for a while more so that the song of forests can last a bit more long !
My rating on good reads : 4 *
Book Review : An Indian Spy in Pakistan
— Raw to the core and not for the faint hearted !
Image Source : Amazon
Huh ! This one was a horrible read and I literally mean it. 90% of the 186 pages book is about tortures the Indian spies undergo in Pakistan jails, their trials, bonding with other jail inmates and the labour they are forced to do.
It makes you cringe to your flesh by the time you get to even quarter of read but I generally don’t give up on a book once started. It put me off balance multiple times with the narration of horrors meted out at Indian spies but with some stomach, I managed to continue.. The only saviour was the point on political narration of Pakistan-India-Bangladesh relations and series of events that occurred during 1970s.
It also gives a fine detail of how America and China always influenced the turmoil in Asia for needs of their own. It leaves a sore in the tongue in multiple dimensions, to call out a few, not every spy takes up the profession out of sheer passion, no matter how much you like to believe but home government’s never show aggression or rather don’t bother much about their own spies trapped elsewhere and mostly disown them for reasons “patriotic”, also not every spy is a hero as we like to believe and few of them work as double agents trapping their own men to languish in foreign cells. All these revelations take you away from the sweet imagination of “patriotism” we have built mostly based upon how things are shown in movies.
Nevertheless, Mohanlal Bhaskar’s dairy of “Indian spy in Pakistan” is too raw and realistic and I would say its for readers who only have the stomach to digest accounts of atrocities and heinous treatment of fellow humans.
The translated version to English which I read was also full of spelling mistakes which at times irk and punctuation is all over the place making it a bit more tiresome.
Definitely not for the faint hearted !
My rating for the same on GoodReads : 3
— 10 musings of career and life
As I complete 10 years as a software professional, I try to write down 10 points I realized in the course of this journey. I have pushed through my career with ebbs and flows being thankful at times for the industry that offered me extreme goodness and loathed at times too. After all what job does guarantee a utopia? Every walk of human life is analogous and a career is no different. You cannot just sit back with a beverage in hand and call a thing right or wrong as the context in which a decision made would not be the same when you relax and reflect. So, how does it all go about? Is there something like a career plan or template that can probably work for a software professional? No plan works for all but the following may help the most, I suppose. Cheers!
Passion and profession can be different! It’s absolutely “OK”!
This is one thing that haunts every software engineer at some point. More so when you are at the troughs of your curve and start questioning whether the world had a different plan and you foolishly landed up here to make money. The guitar that always dusts at some corner starts calling for you and some idea which never saw the light of the day starts yelling at you for not being an entrepreneur. When no idea or hobby is bad, passion is mostly an extrapolated state of mind which keeps changing mostly due to the external factors that you are put into. Hold on! Isn’t passion something that should drive someone from within? Now is this new liking due to a missed promotion or a forgettable appraisal? Layback, give it a thought! After all, you can still succeed enormously in your profession as you figure out your passions and pursue them. The right-hand thumb rule being, don’t let them fight out your brain, rather work them out to co-exist. Don’t believe it? A star whom I have huge admiration towards, ABDeVilliers, considered one of the greats to have ever walked the 22-yards, hardly practices or talks cricket when he is not part of any tournaments or leagues. When asked about how does he come back from yak-shipping and puts even the best to shame, his simple mantra, I don’t worry about it, the more I think or push myself to it, I stop enjoying the game which is essential to be a performer! Now, let’s take a thing or two from the wise man :)
2. The college you graduate from will not matter as significantly as you think.
As life happens, we do mature and progress in our thoughts and it only hurts when the lack of seriousness in the past, hurdles our future. While it’s absolutely ok to enjoy your college, what if it becomes a bottleneck to excel in your career because of the mediocrity or lack of seriousness at that phase of life? Have you ever blamed yourselves or at times even your elders for not enlightening you on how important it is to graduate from top-notch colleges? So, you don’t need to any further. I don’t boast of any great college background but I can say I had the chance to knock on the doors of many top companies or simply put the ones in trillion-dollar leagues and the ones that are about to make it there. I have even been asked in some interviews as to why is that I graduate from a college that not many are even aware of, and, with some confidence, I can say that I’ve been always able to convert that to my strength than weakness. Doesn’t it show a great deal of pursuit to have made it to the doors of the same company, from a college that’s not very heard off, than being there from a campus that already offered a head start?
3. Product vs Service: Yes, the difference is real and the former is always the better!
As a professional, you do know that most of the happenings in your career is a factor of the organization you associate with. Your organization will have a business model and no matter how you excel, there is always an umbrella of scope beyond which you are throttled. Now, can you really blame the organization for that? Maybe not. I did start my career with a service company and it did not take a Bodhi tree for me to realize that I’m under the wrong umbrella given my ambitions. I quickly put myself out of all the apprehensions and made a risky move of joining a start up of 15 odd devs that paid off so significantly for years to come. To put in cinematic style, in the long run, it’s not the movie that matters, it’s the role you get to play that keeps you happy. Needless to say, the kind of movie and the remuneration are major factors too and they are directly proportional to the role!
4. It’s ok if that “Dream Company” remains a dream
Now, who better than a hardcore RCB fan to vouch for unfulfilled dreams. Every one of us has dream companies we always wanted to work for multi-fold reasons. Its human psychology to have dream traits in every dimension of life and career is no different. Should that dream always put you to sleep as that’s the state when it’s closest to you? You strive for it with all your might and if just doesn’t happen it’s totally fine. Have seen many instances of dream companies turning into house of frowns and desperation, again it wasn’t the fault of the dream or the dreamer, it’s just how reality is. So it may not be a great idea to be hard bent on that dream company if that’s taking you down a negative spiral. On the contrary, if the same can instil discipline in how you approach your work then go for it! Beware that it takes a wink of an eye for the latter to turn to the former.
5. You need not be a gifted developer to stand out and excel
Isn’t it a common thing for us to think of how gifted someone is when it comes to understanding tech and being flexible for coding in any language you ask? At times, it feels as if the person was made to be a techie and this is where his “Nirvana” is, while on the other hand you don’t get to understand anything in the first go and it takes few repetitive loops to get a hang of things. Bluntly putting, this is a form of classic debate of hard work vs smart work discourse. This is one topic that’s been all over the place and I don’t need to re-iterate the same but will give you a one-liner that always rings in my mind whenever I think I was probably not gifted at something. “Any form of engineering can be engineered,” said one of my professors at a conversation when I asked him on how to deal with skills that don’t come inherently, like in my case, computers are a thing that doesn’t come naturally to me while I grasp things quickly in other disciplines. However, can I not engineer to be a better computer engineer? Come on, that’s the course you do to graduate after all :D Keep revisiting different aspects of the course you did few times over the years and I bet every revisit will be more enriching than the original itself was. A puppy has to eat 5 times a day while a dog eats only once. It’s just about the time it takes to transition.
6. There is no supplement to Family!
Of all the points I write, this seems to be the one that’s most cliche, but this is something that one should never ever trade for. After all, what’s the first thing that led you to go out there and work? Wasn’t that in some way associated with the family? For some, it may be to afford their family a better lifestyle, and for some, it may be to excel and make their family proud in social circles. With no further judging, can you try and talk to yourself out, for the question “why do you work?” for straight 2 mins without so and so of any family aspect creeping in there? Eventually, all you do in your career is in a way to complement your family and it shouldn’t let become a supplement. When push comes to the shove, it’s your family that shows up and holds your back and at no cost should that be traded. Anomalies do exist in every system, but, don’t let them become bugs and further escalate to crash the same and you know what I mean :wink
7. Watch out on your health — mental and physical both
Late-night works, pressure situations, corporate parties, and many habits do become a part of your routine. A significant portion of your social circle will be your colleagues. Needless to say, one-off situations are always welcome, overdoing anything is just going to hurt. A software professional is no less than a sportsperson, so think of yourself as one and don’t give in to too many habits that will only take a toll on the body in the days to come. Be vocal about regular meetings that may not match your time zone and that’s a no compromise. Do have time to engage with your friends outside the workspace circle as that may totally throw you off to have none around in case you happen to switch jobs. I was as reckless as it can get for the first 5 years of my career and switched paths drastically in the latter 5. Having seen both sides of it, I can say it’s only better to course correct than to know it the hard way as health in any form is too costly an asset to learn from self-experiments.
8. Delaying a life goal to accommodate a milestone at career? Think twice, or, may be thrice, or, may be till you are sure. Period.
Now, this is something that comes down to the core of what you want in life and what you prioritize more? Unlike the health, family or any other pointers mentioned above, where the aspects hold true in a generic sense, this is very contexed and personality-driven. I’ve been an audience to cases where a delay in life goal, say, to be married or rather to have a kid to accommodate a taxing project that positions someone better for a career upgrade, has at times paid off and at times has collapsed what otherwise would have been a perfect life for the fence-sitters. Coming to me, I have never switched goalposts of any personal milestones to accommodate things at work. It can totally vary based on the conditions at home and phases of life one is at, but this is something that can be gained clarity with inclusion of the people who would be directly impacted if your decision happens to go the other way. A collective decision is the only better way to choose a path at crossroads as no matter where the it leads you, you still have to walk it together and an uninformed decision would only cause troubles down the road.
9. Make hay when the sun shines and create a sufficient nest egg for the days of slumber
I have always felt that the life of a software professional is almost identical to that of sportsperson. You always need to be on your A-game and an iota of laziness can bench you. You will be outpaced with skills very soon and experience never gives that great an edge as you like to believe. So, make hay when the sun shines. Prepare yourself financially for the days when you can no more bring your A-game to the fore. Once you are financially sound, that does stipulate emotional strength to be ok with not being ambitious as you don’t run the fear of “what if not this ?”. Invest, right from day 1. Investment is as good as adopting a child. You have to let it grow to reap the benefits, you can’t cut it short for some luxuries midway only to lack a caretaker when the sunsets. Start with 80:20 equity to debt and keep re-balancing by 5% every 3 years to reduce the risk associated.
Cover yourself for risk, go for 6 months of salary as liquid savings, and once you meet both these goalposts head towards Investments. When all are taken care of, it’s guilt-free expenses!
10. The million dollar question, when to retire and how do I plan?
Go back to that analogy of a sportsperson. Your career is short-lived. Play it aggressively with full potential till you can take it, and in the process, plan for retirement too. Don’t taboo discussions about your retirement as it may sound daunting. Let your own retirement not surprise you as it comes. Accept the fact that you will have only yourself to support maybe around 45. Don’t risk planning anything beyond that number as that may only extrapolate your plans and your body does deteriorate with all the toiling and may cause panic to creep in as you near. Please do consult a financial planner as we are not pensioners and need to have a sense of discipline to channelize our finances to be relaxed as we age and not panic. Financial planners are very economical and are highly underrated. You may not need to sustain with them if you can grasp the ideas and tend to build upon them over the years which is called “personal finance”. I have hardly come across my fellow colleagues who are really disciplined in their finances and lead of life of denial when it comes to retirement. I have set myself a retirement goal of 40 in the worst case complexity and 35 in the best case complexity and the average is 37! Typical time complexity analysis tells me I’ve 5–6 more years of runway left to hit my O(n) milestone as I rest this lengthy write-up and get back to my desk!
ಶೃಂಗೇರಿಯ ಮಾರುತಿ ಟಿಫನ್ ಸೆಂಟರಿಗೆ ಬೆಳಗ್ಗಿನ ಉಪಹಾರಕ್ಕೆಂದು ನಾನು ಅಣ್ಣ ಹೋಗಿದ್ದೆವು. ನಾವು ತಂಗಿದ್ದ ಲಾಡ್ಜಿಗೆ ಅಂಟಿಕೊಂಡೇ ಇದ್ದ ಅದು ತುಂಬಾ ಹೆಸರುವಾಸಿಯೂ ಹೌದು. ಹೊರಗಿನಿಂದ ನೋಡಿದರೆ ಕೋಣೆಯು ಭರ್ತಿಯಾದಂತೆ ಕಂಡು ಅಲ್ಲಿಯೇ ಕಾಯುವುದೋ ಇಲ್ಲವೇ ಮತ್ತೆಲ್ಲಿಯಾದರು ಹೋಗುವುದೋ ಎಂದು ಹರಟುತ್ತ ನಿಂತಿದ್ದೆವು. ಭಟ್ಟರು ಹೊರ ಬಂದು ಒಳಗಿನ ಕೋಣೆಯಲ್ಲಿ ಜಾಗವಿದೆಯೆಂದು ತಿಳಿಸಿ ನಮ್ಮನ್ನು ಕರೆದೊಯ್ದರು. ಆ ಪುಟ್ಟದಾದ ಕೋಣೆಯಲ್ಲಿ ರೆಡ್ ಆಕ್ಸೈಡ್ ಬಂಡೆಯ ಮೇಲೆ ಕುಳಿತು, ಬಾಳೆಯೆಲೆಯನ್ನು ಹರಡಿ ಉಪಹಾರ ಸೇವಿಸುವುದು ಒಂದು ಸಂಭ್ರಮದ ಅನುಭವವೇ ಹೌದು. ನಮ್ಮಂತೆಯೇ ಆ ಕಿರು ಕೋಣೆಯಲ್ಲಿ ಕುಳಿತಿರುವ ಇನ್ನು ಹಲವರ ಸಂಭಾಷಣೆ, ಕಿರುದಾಗಿ ಸ್ಪೀಕರ್ ಒಂದರಲ್ಲಿ ಕೇಳುವ “ಶ್ರೀ ರಾಮ್ ಜೈ ರಾಮ್ ಜೈ ಜೈ ರಾಮ್” ಭಜನೆ ಎಲ್ಲವು ನನಗೆ ಚಿಕ್ಕಂದಿನ ಹಬ್ಬದ ದಿನಗಳ ನೆನಪು ತರಿಸಿತ್ತು. ಅಮ್ಮ ಮತ್ತು ಚಿಕ್ಕಪ್ಪ ಬಳ್ಳಾರಿಯಲ್ಲಿ ಸರ್ಕಾರೀ ಹುದ್ದೆಯಲ್ಲಿದ್ದರಿಂದ ಅವರಿಗೆ ನಿಯೋಜಿಸಿದ್ದ KHB ಕಾಲೋನಿಯ ಬ್ರಿಟೀಷರ ಕಾಲದಲ್ಲಿ ನಿರ್ಮಿತವಾದ ಗವರ್ನಮೆಂಟ್ ಕ್ವಾಟ್ರಸ್ಸಿನಲ್ಲೇ ಬಾಲ್ಯವನ್ನು ಬಹುಶವಾಗಿ ಕಳೆದದ್ದು. ಅಲ್ಲಿಯೂ ಹೀಗೆಯೇ ರೆಡ್ ಆಕ್ಸೈಡ್ ಬಂಡೆ, ದೊಡ್ಡ ಸಾಮಾನು ಸಾಗಿಸುವಾಗ ನೆಲದ ಮೇಲೆ ಬಿದ್ದು ಹಲವು ಕಡೆ ಉಂಟಾದ ಒಡಕು, ಆ ಒಡಕಿನಿಂದ ಪೆನ್ಸಿಲ್, ಸ್ಕೇಲ್ ಬಳಸಿ ಮಣ್ಣನ್ನು ತೆಗೆದು ಅದನ್ನು ಇನ್ನಷ್ಟು ದೊಡ್ಡದಾಗಿ ಮಾಡುವ ನಮ್ಮ ಹುಡುಗಾಟ, ಒಮ್ಮೊಮ್ಮೆ ಅದನ್ನು ಗಮನಿಸಿದ ಹಿರಿಯರಿಂದ ಬೈಗುಳ ಇದೆಲ್ಲವೂ ನೆನಪಾಗತೊಡಗಿತು. ಹೊಟ್ಟೆ ಹಸಿವೆಯನ್ನು ಮರೆಸಲು ನನ್ನ ಎದುರಿಗೆ ಕುಳಿತಿದ್ದ ಸಂಸಾರವೊಂದರ ಗಡಿ ಬಿಡಿಯ ಸಂಭಾಷಣೆ ಆಲಿಸ ತೊಡಗಿದ್ದೆ. ಶೃಂಗೇರಿಯು ಪುಣ್ಯ ಕ್ಷೇತ್ರವಾದ್ದರಿಂದ ನಾನಾ ಬಗೆಯ ಪ್ರವಾಸಿಗರು ನೋಡ ಸಿಗುತ್ತಾರೆ. ಕೆಲವರು ಸುತ್ತಲಿನ ಮಲೆನಾಡಿನ ಮೋಜು ಮಸ್ತಿಗೆಂದು ಬಂದರೆ ಬಹುತೇಕರು ಅಲ್ಲಿಯ ಆದಿ ಗುರು ಶಂಕರಾಚಾರ್ಯರಿಂದ ಪ್ರತಿಷ್ಠಾಪಿಸಲ್ಪಟ್ಟಿರುವ ಶಾರದಾಂಬೆಯ ಅನುಗ್ರಹಕ್ಕೆಂದು ಬರುತ್ತಾರೆ.
ರಜೆ ದಿನಗಳಲ್ಲಿ ಹೆಚ್ಚಾಗಿ ಪ್ರವಾಸಿಗರು ಬರುವುದರಿಂದ ಮಠದ ಸುತ್ತ ಮುತ್ತಲಿನ ಹೋಟೆಲುಗಳು ಕಿಕ್ಕಿರುದು ಒಂದು ಮಿನಿ ಭಾರತದಂತೆಯೇ ತೋರುತ್ತವೆ. ನಾವು ಉಪಹಾರಕ್ಕೆಂದು ಕುಳಿತಿದ್ದ ಕೋಣೆಯು ಕೊಂಚ ಕಿರಿದಾದ್ದರಿಂದ ನಾನು ಅಣ್ಣ ಅಡುಗೆ ಮನೆಗೆ ಸಾಗುವ ಓಣಿಯ ಒಂದು ಬದಿಯಲ್ಲಿ ಮುದುಡಿ ಕುಳಿತಿದ್ದರೆ, ಕೊಂಚ ವಿಶಾಲವಾದ ಇನ್ನೊಂದು ಬದಿಯಲ್ಲಿ 6 ಜನರ ಸಂಸಾರವೊಂದು ಕುಳಿತಿತ್ತು. 65–70 ರ ವಯಸ್ಸಿನ ತಂದೆ ತಾಯಿ, 35–36 ರ ಆಸು ಪಾಸಿನ ಗಂಡ ಹೆಂಡತಿ ಮತ್ತು ನಮ್ಮ ಬಾಲ್ಯವನ್ನು ನೆನಪಿಸುತ್ತಿದ್ದ 7–8 ರ ವಯಸ್ಸಿನ ಎರಡು ಪುಟ್ಟ ಮಕ್ಕಳು. ಹಿರಿಯ ಯಜಮಾನರಿಗೆ ಅವರ ಹೆಂಡಿತಿಯು ಎಡಬಿಡದೆ ವಡೆ ಮತ್ತೆ ಬೇರೆ ಎಣ್ಣೆ ತಿನಿಸುಗಳು ಹಾಕಿಸಿಕೊಳ್ಳಬೇಡಿ ಎಂದು ಬೋಧನೆ ಮಾಡುತಿದ್ದರೆ ಅದನ್ನು ನಿರ್ಲಕ್ಷಸಿಸಿ “ಶ್ರೀ ರಾಮ್ ಜೈ ರಾಮ್” ಭಜನೆಯನ್ನು ಕೇಳಿಸಿಕೊಳ್ಳುತ್ತಾ ಅದನ್ನೇ ಅನುರಣಿಸುತ್ತಿರುವಂತೆ ತುಟಿಗಳನ್ನು ಮೆಲ್ಲನೆ ಹೊರಳಿಸುತ್ತಾ ಅಡಿಗೆ ಮನೆಯೆಡೆಗೆ ದಿಟ್ಟಿಸಿದ್ದರು ಯಜಮಾನರು. ಇನ್ನೊಂದು ಬದಿಯಲ್ಲಿ ವಿಧಾನ ಸಭೆಯಲ್ಲಿಯೂ ಚರ್ಚಿಸದಷ್ಟು ಗಂಭೀರವಾಗಿ ಯಾರಿಗೆಲ್ಲ ಏನೆಲ್ಲಾ ತೆಗೆದುಕೊಳ್ಳಬೇಕು ಎಂದು ಗಂಡ ಹೆಂಡಿರ ಸಂಭಾಷಣೆ ಜೋರಾಗಿಯೇ ನಡೆದಿತ್ತು. ಬದಿಯಲ್ಲಿ ತಮಗೆ ಇದೆಲ್ಲವೂ ಸಂಭಂದವಿರದಂತೆ ಕುಳಿತಿದ್ದ ಎರಡು ಪುಟ್ಟ ಮಕ್ಕಳು ಅಲ್ಲಿಯ ಬಂಡೆಯ ಮೇಲೆ ಇದ್ದ ಒಂದು ಒಡಕಿನಿಂದ ನಮ್ಮ ಬಾಲ್ಯ ನೆನಪಿಸುವಂತೆ ಮಣ್ಣನ್ನು ತೆಗೆಯುತ್ತಿದ್ದರು.
ಉಪಹಾರ ಶುರುವಾದದ್ದು ಕೊನೆಯಾದದ್ದು ಗೊತ್ತಾಗಲೇ ಇಲ್ಲ. ಭರ ಭರನೆ ಒಂದರ ಹಿಂದೊಂದರಂತೆ ಇಡ್ಲಿ ವಡೆ ಪೂರಿ ಎಲ್ಲವು ಬಂದು ಹೋದವು. ಅವರೊಟ್ಟಿಗೆ ಸಾಗು ಗಟ್ಟಿ ಚಟ್ನಿಯ ಸಮಾರಾಧನೆಯೂ ನಡೆದು ಹೋಯಿತು. ಇನ್ನು ಉಳಿದದ್ದೊಂದೇ ಕಾಫಿ ಟೀ ಸಮಾರೋಪ ಸಮಾರಂಭ. ವಾಡಿಕೆಯಂತೆ ಭಟ್ಟರು “ಕಾಫಿಯ ? ಟೀಯಾ ?” ಎಂದು ಎಲ್ಲರನ್ನು ಕೇಳುತ್ತ ಹೊರಟರು. 10 ಗಂಟೆಯ ಸುಮಾರಿಗೆ ಟಿಫನ್ ಮಾಡುವ ನನಗೆ ಈಗಾಗಲೇ 8 ಗಂಟೆಗೆ ಬಿರಿಯುವಂತೆ ಇಡ್ಲಿ ಪೂರಿ ಬೋಂಡಗಳನ್ನು ಹೊಟ್ಟೆಗಿಳಿಸಿ ಕಾಫಿ ಟೀ ಬೇಕೆಂದೆನಿಸಲಿಲ್ಲ. ಆದರೂ, ಅವುಗಳಿಲ್ಲದೆ ಉಪಹಾರ ಮುಗಿಸಿದರೆ ಅರ್ಧಕ್ಕೆ ಬಿಟ್ಟ ಮಂತ್ರದಂತೆನಿಸುವುದೆಂದು “ಕಾಫಿ” ಎಂದು ಮುದುಡಿ ಕುಳಿತಲ್ಲಿಯೇ ಕೊಂಚ ಜಾಗಮಾಡಿಕೊಂಡು ನಯವಾಗಿ ಹೊರಳಾಡುವಂತೆ ಉದರವನ್ನು ಅಲ್ಲಾಡಿಸಿ ಮುಂಬರುವ ಕಾಫಿಗೆಂದು ಸ್ಥಳ ಸೃಷ್ಟಿಸಿಕೊಂಡೆ.
“ರೀ ಮಾವ ಅವ್ರಿಗೆ ಲೆಸ್ ಅಂತ ಹೇಳಿ”.
“ಅಪ್ಪ, ಎಲ್ಲ ಕಡೆ ನಾನೆ ಹೇಳ್ಬೇಕಾ ? ನಿಂಗೆ ಹೇಳೋಕೆ ಆಗಲ್ವಾ ? ಭಟ್ರೇ ಇವ್ರಿಗೆ ಒಂದು ಲೆಸ್” ಇದನ್ನು ಕೇಳಿದ ಯಜಮಾನರ ಮುಖ ಗಂಟಿಕ್ಕಿಕೊಂಡಿತು.
ಎಲ್ಲರ ಬಳಿ ಆರ್ಡರ್ ಪಡೆದು ಹೊರಟಿದ್ದ ಭಟ್ಟರು ಮತ್ತೊಮ್ಮೆ ಹೊರ ಬಂದು ಯಾರ್ಯಾರಿಗೆ ಲೆಸ್ಸು ಎಂದರು. ಹೊಟ್ಟೆ ತುಂಬಿತ್ತು, ಆ ಕಿರು ಕೋಣೆಯ ಇಕ್ಕಟ್ಟಿಗೆ ಬೆವರು ಹರಿಯುತಿತ್ತು.
“ಏನೋ ಮಾರಾಯ ಇದು ಲೆಸ್ಸು” ಎಂದು ಅಣ್ಣನಿಗೆ ಹೇಳಿ ಕಿರಿದಾಗಿ ನಕ್ಕೆ.
ಕಾಫಿ ಮತ್ತು ಟೀ ಹಿಡಿದು ತಂದು ಮತ್ತೋರ್ವ ಹುಡುಗ “ಲೆಸ್ಸು ತೊಗೋಳಿ” ಎನ್ನುತ್ತಾ ಹೊರಟ.
“ಅಪ್ಪ, ಲೆಸ್ ಬಂದಿದೆ ತೊಗೋಳಿ” ಎಂದು ಗದರಿತು ಆ ಬದಿಯಿಂದೊಂದು ಧ್ವನಿ.
ಹೇಗಾದರೂ ಲೆಸ್ಸಿಂದ ತಪ್ಪಿಸಿಕೊಳ್ಳೋಣ ಎನ್ನುವಂತೆ ಕುಳಿತಿದ್ದ ಯಜಮಾನರು ಪುನಃ “ಶ್ರೀ ರಾಮ್ ಜೈ ರಾಮ್” ಎನ್ನುವಂತೆ ತುಟಿ ಆಡಿಸುತ್ತಾ ರಾಮೇಶ್ವರಕ್ಕೆ ಬಂದ್ರು ಶನೈಶ್ಚರನ ಕಾಟ ತಪ್ಪಲಿಲ್ಲ ಎನ್ನುವಂತೆ ಮನದಲ್ಲೇ ಗೊಣಗುತ್ತ ಲೆಸ್ಸಿನ ಪ್ಲೇಟಿಗೆ ಕೈಹಾಕಿದರು. ಯಜಮಾನರ ಸಂದಿಗ್ದತೆ ನನ್ನದೇ ಕೆಲವು ಗೋಜಿನ ಸನ್ನಿವೇಶಗಳ ನೆನಪಿಸಿತು.
ಎಂದಿನಂತೆ ಸಂಜೆ 6:30 ರ ಸುಮಾರಿಗೆ ಶಾರ್ಟ್ಸ್ ಹಾಕಿಕೊಂಡು, ಕೈಗೆ ಸ್ಟ್ರಾಪಿನಲ್ಲಿ ಮೊಬೈಲ್ ಸಿಕ್ಕಿಸಿಕೊಂಡು, ಜೆರ್ಸಿ ತೊಟ್ಟು ಮನೆಯಿಂದ ರನ್ನಿಂಗ್ ಶುರು ಮಾಡಿದೆ. ನಮ್ಮ ಮನೆಯಿಂದ ಬನಶಂಕರಿಯ BDA ಪಾರ್ಕ್ ಹತ್ತಿರವೇ ಇದ್ದದ್ದರಿಂದ ಅದರ ಸುತ್ತಲೂ 4–5 ರೌಂಡುಗಳ ರನ್ನಿಂಗ್ ಮುಗಿಸಿ, ಅಲ್ಲಿಯೇ ಇರುವ ಚಾಯ್ ಪಾಯಿಂಟಿನಲ್ಲಿ ಚಹಾ ಹೀರಿ ಮನೆ ಸೇರುವುದು ವಾಡಿಕೆ. ಅಂದು ಸಂಜೆ ರನ್ನಿಂಗ್ ಮುಗಿಸಿದನಂತರ, ಚಾಯ್ ಪಾಯಿಂಟ್ ಹೋಗದೆ ಬದಲಾವಣೆಗೆಂದು ಅದೇ ಬೀದಿಯ ಹೆಸರು ವಾಸಿಯಾದ SLV ಹೋಟೆಲಿಗೆ ಹೋದೆ. ಕಿಕ್ಕಿರಿದಿದ್ದ ಕೌಂಟರಿನಲ್ಲಿ ಬೆವರುತ್ತ ಶಾರ್ಟ್ಸ್ ತೊಟ್ಟು ನಿಲ್ಲಲು ಏಕೋ ಕಸಿವಿಸಿಯೆನ್ನಿಸಿತು. ಚಹಾ ಸೇವಿಸುತ್ತಾ ತಮ್ಮ ಮಿತ್ರಕೂಟದೊಂದಿಗೆ ಎಂದಿನಂತೆ ಹರಟುತ್ತ ನಿಂತಿದ್ದ ಹಿರಿಯರ ಗುಂಪುಗಳು ತಮ್ಮ ಪಾವಿತ್ರ್ಯ ಸ್ಥಳಕ್ಕೆ ಈ ರೀತಿ ಬಂದು ನಿಂತು ಪಾಪವೇ ಮಾಡಿಬಿಟ್ಟಿನೆನ್ನುವಂತೆ ನನ್ನನ್ನು ದಿಟ್ಟಿಸಿದ್ದವು. ಇಷ್ಟು ಹೊತ್ತು ಕಾದು ಈಗ ಹೊರಟರೆ ಇನ್ನಷ್ಟು ಮುಜುಗರವಾಗುವುದೆಂದು, ಕ್ಯೂನಲ್ಲಿ ಇನ್ನು ಕೊಂಚ ಹೊತ್ತು ನಿಂತು ಚಹಾದ ಚೀಟಿ ಪಡೆದೆ. ನನ್ನ ಸ್ಥಿತಿಯೋ ಅಥವಾ ಅಲ್ಲಿಯ ವಾಸ್ತವವೋ ತಿಳಿಯದು, ಆದರೆ ಕೌಂಟರಿನಿಂದ ಹೊರ ಬಂದು ಹೋಟೆಲಿನ ಹೊರ ಬದಿಯಲ್ಲಿರುವ ಟೀ ಸ್ಟಾಲಿಗೆ ಇದ್ದ ನಡಿಗೆ ಬಹಳ ಪ್ರಯಾಸ ತರಿಸುವಂತದ್ದು ಮತ್ತು ಮುಜುಗರ ತರಿಸುವಂತಿತ್ತು. ಹಲವು ಕಣ್ಣಗಳು ನನ್ನನ್ನೇ ಹಿಂಬಾಲಿಸುವ ಭಾಸ. ಯಾವುದನ್ನೂ ಲೆಕ್ಕಿಸನದಂತೆ ನಟಿಸಲು, ಟೋಕನನ್ನು ಟೀ ಸ್ಟಾಲಿನಲಿದ್ದವನ ಕೈಗಿತ್ತು ಮೊಬೈಲಿನಲ್ಲಿ ನನ್ನ ರನ್ನಿಂಗ್ ಡಿಸ್ಟೆನ್ಸ್, ಸ್ಪೀಡ್, ಕೆಡೆನ್ಸ್ ಎಲ್ಲವನ್ನು ಪರೀಕ್ಷಿಸುತ್ತಾ ನಿಂತುಕೊಂಡೆ. “ಛೆ” ಕೊನೆಯ 3೦೦-4೦೦ ಮೀಟರ್ ಕೊಂಚ ವೇಗದಿಂದ ಮುಗಿಸಬಹುದಿತ್ತು ಎಂದು ನನ್ನ ರನ್ನಿಂಗ್ ಡೇಟಾ ನೋಡುತ್ತಾ ನಿಂತಿದ್ದವನಿಗೆ ಸ್ಟಾಲಿನವನು
“ಸರ್, ಲೆಸ್ಸಾ ?” ಎಂದು ಕೇಳಿದ್ದು ಅರಿಯಲೇಯಿಲ್ಲ. ಕೊಂಚ ಸಮಯ ಕಳೆದರು ನನ್ನ ಉತ್ತರ ಬಾರದೆ ಅವನು ಜೋರಾಗಿಯೇ
“ಸಾsssರ್ ಲೆಸ್ಸಾ ?” ಎಂದು ಅರಚಿಕೊಂಡ.
ಅವನ ಧ್ವನಿ, ಈಗಾಗಲೇ ನನ್ನನ್ನು ಮುಜುಗರಗೊಳಿಸಿದ್ದ ಹಲವಾರು ಕಣ್ಣುಗಳನ್ನು ಮತ್ತೆ ನನ್ನೆಡೆಗೆ ತಿರುಗುವಂತೆ ಮಾಡಿತು. ಇನ್ನಷ್ಟು ಪೇಚಿಗೆಗೇ ಸಿಕ್ಕ ನನಗೆ ಗಾಬರಿಯಿಂದ ತಿಳಿಯದೆ “ಹಾಂ” ಎಂದುಬಿಟ್ಟೆ.
“ಏನೋ ನೋಡಿ, ನಾವೇ ಎಷ್ಟೋ ಗಟ್ಟಿ. ಈಗಂತೂ ಇನ್ನು ಮಕ್ಳು ಮರಿ ಆಗಿರೋದಿಲ್ಲ ಆವಾಗ್ಲೇ ಶುಗರ್, BP, ಎಲ್ಲಾ ಬಂದಿರುತ್ತೆ” ಎಂದು ಯೆಜಮಾನರೊಬ್ಬರು ತಮ್ಮ ಗುಂಪಿಗೆ ಹೇಳಿದರು.
“ಗಾಳಿನೇ ಸರಿ ಇಲ್ಲ ಬಿಡಿ. ಈ ವಿಷ ಗಾಳಿಯಲ್ಲಿ ಚಡ್ಡಿ ಹಾಕೊಂಡು ಓಡಿದ್ರೂ ಅಷ್ಟೇ ಮನೇಲೆ ಮಲಗಿದ್ರು ಅಷ್ಟೇ. ಆಗಿನಂತೆ ಇಲ್ಲ ರೀ ಕಾಲ ಇದು” ಎಂದರು ಮತ್ತೊಬ್ಬರು.
“ನಾವೇ ಪರವಾಗಿಲ್ಲ ನೋಡಿ, ಬೆಳಗ್ಗೆ ಏಳ್ತಿದ್ದ ಹಾಗೆ ಲೆಸ್ ಕುಡದ್ರೆ ಸಂಜೆ ಫುಲ್ ಕುಡಿತೀವಿ. ವಯಸ್ಸಾದ್ರೂ ಪರವಾಗಿಲ್ಲ ನಾವೇ ಗಟ್ಟಿ” ಎಂದು ನಗುತ್ತ ಪ್ರಶಂಸಿಸಿಕೊಂಡರು ಮತ್ತೊಬ್ಬರು ತಮ್ಮ “ಲೆಸ್” ಮತ್ತು “ಫುಲ್” ಗಳ ದಿನಚರಿ ಎಲ್ಲರಿಗೂ ಒಪ್ಪಿಸುತ್ತಾ.
ಹೀಗೆಯೇ ಹಲವಾರು ತಮ್ಮ ತಮ್ಮ ಅಭಿಪ್ರಾಯಗಳ ವಾದಗಳ ಮಂಡಿಸುತ್ತಾ, ಪರಿಸರ, ಜೀವನಶೈಲಿ ಹತ್ತು ಹಲವಾರು ಅಂಶಗಳನ್ನು ಶಪಿಸುತ್ತ “ಲೆಸ್ಸನ್ನು” ತಮ್ಮ ಅಂದಿನ ಹರಟೆಯ ಕೇಂದ್ರಬಿಂದುವಾಗಿಸಿಬಿಟ್ಟರು.
ಕಾಫಿ ಟೀ ನಮ್ಮ ದಿನಚರಿಯ ಅವಿಭಾಜ್ಯಗಳಾಗಿ ಹೋಗಿವೆ ನಿಜ, ಕಾಲ ಕ್ರಮೇಣ ಅವುಗಳ ವಿಶೇಷಣಗಳೂ “ಲೆಸ್” “ಫುಲ್” ಮತ್ತು ಮಿಶ್ರಣಗಳೂ ಬಹಳ ಧೀರ್ಘ ಚರ್ಚೆಗೆ ಗ್ರಾಸವಾಗುವಷ್ಟು ಸಾಮಾನ್ಯವಾಗಿರುವುದು ಸೋಜಿಗವೇ ಸರಿ. ನನ್ನ ಒಂದು ಗಾಬರಿಯ “ಲೆಸ್ಸಿನ” ಉತ್ತರ ಅಲ್ಲಿ ನೆರೆದವರ ಸಂಜೆಯ ಚರ್ಚೆಗೆ ಉಪಹಾರವಾಗಿ, ಗಾಳಿ, ನೀರು ಇತ್ಯಾದಿ ಪಂಚಭೂತಗಳಿಗೂ ಶಾಪಹಾಕುವಂತೆ ಮಾಡಿದ್ದೂ ಒಂದು ವಿನೋದವೆ ಹೌದು. ಈಗಾಗಲೇ ಹಲವರ ಬಾಯಿಗೆ ಸಿಕ್ಕಿ, ಕಬ್ಬಿನಂತಾಗಿದ್ದ ನನಗೆ, “ಲೆಸ್ಸಿ”ನ ಚಹಾ ಕುಡಿದದ್ದು ಅನುಭವಕ್ಕೂ ಬರಲಿಲ್ಲ. ಇನ್ನಷ್ಟು ಗೊಂದಲ ಉಂಟು ಮಾಡಿಕೊಳ್ಳುವ ಮುಂಚೆ ಅಲ್ಲಿಂದ ಹಿಂತುರುಗಿಯೂ ನೋಡದೆ ನನ್ನ ಲೇಸು ಲೆಸ್ ಶೂಸನ್ನು ಕೊಡವಿ ಹಾಕಿಕೊಂಡು ಮನೆಯತ್ತ ರನ್ನಿಂಗ್ ಮಾಡಲು ಶುರು ಮಾಡಿದೆ.
ಪರಿಸರ ಸಂರಕ್ಷಣೆ — ಯಾರ ಹೊಣೆ ?
— ಕಿರು ಚಿತ್ರ/ನಾಟಕದ ಮಾದರಿಯಲ್ಲಿ ರೂಪಿಸಿರುವ ಕತೆ
ದೃಶ್ಯ ೧
( ನಗರದ ಅತ್ಯಂತ ಬಿಸಲಿನ ದಿನ. ಶಾಲೆಗೆಂದು ಹೊರಟ ೪-೫ ಮಕ್ಕಳು, ಸುಮಾರು ೨-೩ ತರಗತಿಯವರು )
ಸುಮುಖ : “ನಾವು ಹೋಗಬೇಕಂತಿದ್ದ ಫ್ಯಾಮಿಲಿ ಟ್ರಿಪ್ ಅಪ್ಪ ಕ್ಯಾನ್ಸಲ್ ಮಾಡಿದ್ರು ಕಣ್ರೋ”
ಪ್ರವೀಣ : “ಯಾಕೋ ? ಏನಾಯ್ತೋ ?”
ಸುಮುಖ : “ನಮ್ಮ ಅಪ್ಪ ಮೊನ್ನೆ ಆಫೀಸ್ ಮುಂದೆ ಮರದ ಕೆಳಗೆ ಕಾರ್ ನಿಲ್ಸಿದ್ರಂತೆ. ಅವತ್ತು ಜೋರಾಗಿ ಗಾಳಿ ಬೀಸ್ತಲ್ಲ, ಅವಾಗ ಮರದ ಒಂದು ಕೊಂಬೆ ಮುರುದು ಕಾರ್ ಮೇಲೆ ಬಿದ್ದು ಕಾರ್ ಸ್ವಲ್ಪ ಹಾಳಾಯ್ತನಂತೆ. ನಾವು ಹೋಗ್ಬೇಕಂತಿದ್ದ ಟ್ರಿಪ್ ಖರ್ಚು ರಿಪೇರ್ ಮಾಡ್ಸ್ಲಿಕ್ಕೆ ಸರಿ ಹೊಯ್ತಂತೆ” ನುಡಿದ ಬೇಸರದಿಂದ.
ಪ್ರವೀಣ : “ಅಲ್ವೋ ಎಲ್ಲ ಬಿಟ್ಟು ಮರದ ಕೆಳಗೆ ಯಾಕೋ ನಿಲ್ಸಿದ್ರು ? ನಮ್ಮ ಮನೇಲಿ ಅಪ್ಪ ಅದಿಕ್ಕೆ ಬೇಸ್ಮೆಂಟ್ ಪಾರ್ಕಿಂಗ್ ಮಾಡ್ಸಿದ್ದಾರಪ್ಪ. ಮೊನ್ನೆ ಮನೆ ಮುಂದೆ ಇದ್ದ ಮರ ಕೂಡ ತೆಗ್ಸಿದ್ವಿ. ಅದರ ಬೇರು ನಮ್ಮ ಮನೆ ಡ್ರೈನೇಜ್ ಪೈಪ್ ಹಾಳು ಮಾಡಿ ಡ್ರೈನೇಜ್ ಎಲ್ಲ ಲೇಕ್ ಆಗ್ತಿತ್ತು. ಕೆಟ್ಟ ವಾಸನೆ ಬರ್ತಿತ್ತು. ಅದರ ಎಲೆ ಎಲ್ಲ ಮನೆ ಮುಂದೆ ದಿನ ಉದುರಿ ಕಸದ ರಾಶಿ ಆಗಿ ಸೊಳ್ಳೆ ಕೂಡ ಬರ್ತಿತ್ತು ಅಂತ ಅಮ್ಮ ಬಹಳ ದಿನದಿಂದ ಪೇಚಾಡ್ತಿದ್ರು. ಹಾಳು ಮರ ಅಂತ ಅಪ್ಪ ತೇಗ್ಸ್ಬಿಟ್ರು”
(ಇವರೊಟ್ಟಿಗೆ ನಡೆದು ಹೊರಟಿದ್ದ ನಮ್ಮ ಪುಟ್ಟಿ ಬಿಸಿಲಿನ ಬೇಗೆಗೆ ತಡವರಿಸಿ ಕುಸಿದು ನೆಲಕ್ಕೆ ಬಿದ್ದಳು)
ದೃಶ್ಯ ೨
( ಆಫೀಸಿಗೆ ಹೊರಡಲು ರೆಡಿ ಆಗಿ ಶೂ ಹಾಕಿ ಕೊಳ್ಳುತ್ತಿರುವ ಪುಟ್ಟಿಯ ತಂದೆ. ಅವರಿಗೆ ಕ್ಯಾರಿಯರ್ ಪ್ಯಾಕ್ ಮಾಡುತ್ತಿರುವ ಪುಟ್ಟಿಯ ತಾಯಿ )
ತಂದೆ : (ಸಿಟ್ಟಿನಿಂದ ಬೆಸತ್ತಂತೆ. ಮೈ ಎಲ್ಲಾ ಬೆವತಿರುವನು) “ ಥು ! ಯಾವ ಸುಖಕ್ಕೆ ಅಂತ ಸ್ನಾನ ಮಾಡಿ ಬಟ್ಟೆ ಹಾಕೊಂಡು ರೆಡಿ ಆಗ್ಬೇಕೋ ಏನೋ, ಕರ್ಮ ಕಣೆ ಇದು. ಸ್ನಾನ ಮಾಡಿ 5 ನಿಮಿಷ ಆಗಿಲ್ಲ ಮೈಯೆಲ್ಲಾ ಒದ್ದೆ ಮುದ್ದೆ. ಫ್ಯಾನ್ ಇನ್ನು ಜೋರು ಮಾಡ್ಲಿಕ್ಕಾಗುತ್ತ ನೋಡು. ಈ ಬೇಸಿಗೆ ಮುಗಿಯೋದ್ರಲ್ಲಿ ಒಂದು AC ತರ್ಬೇಕು ಕಣೆ. ಏನ್ ಗ್ಲೋಬಲ್ ವಾರ್ಮಿಂಗೋ ಏನ್ ಕಥೆನೋ. ಬರೀ ಉಸಿರು ತೊಗೊಂಡ್ರು ಒಳ್ಳೆ ಬೆಂಕಿ ನುಂಗಿದಂಗೆ ಆಗ್ತದೆ “
ತಾಯಿ : “ರೀ, ಮನೆ ಮಹಡಿಗೆ ಸುಣ್ಣ ಹೊಡ್ಸೋಣ, ಇಲ್ಲ ಈ ವೀಕೆಂಡ್ ಶಾಪಿಂಗ್ ಹೋದಾಗ ನಾನು ಲಾಸ್ಟ ಟೈಮ್ ನೋಡಿದ ಲಾನ್ ಮ್ಯಾಟ್ ತೊಗೊಂಡ್ ಬರೋಣ. ಅವಾಗ ಸ್ವಲ್ಪ ಬಿಸಿಲಿನ ಝಳ ಕಡಿಮೆ ಆಗಬೋದು. ಎಷ್ಟು ಅಂತ ನಾನು ಹಗಲೆಲ್ಲ ಮೇಲೆ ಹೋಗಿ ನೀರು ಹಾಕಿ ಬರ್ಲಿ ಹೇಳಿ ? ಮೊದ್ಲೇ ನೀರು ಕೂಡ ೧೦ ದಿನಕ್ಕೊಮ್ಮೆ ಬಿಡ್ತಿದ್ದಾರೆ. ದುಡ್ಡು ಕೊಟ್ಟು ಟ್ಯಾಂಕರ್ ನೀರು ಹೊಡ್ಸಿ ಬರಿ ಮಹಡಿ ಮೇಲೆ ಸುರಿಯೋದೆ ಆಗಿದೆ. AC ತರೋದೆ ಪರಿಹಾರ ನೋಡಿ”
( ಕುಸಿದು ಬಿದ್ದ ಪುಟ್ಟಿಯನ್ನು ಮನೆಗೆ ಕರೆದು ತಂದ ಶಾಲೆಯ ಸಹಾಯಕ ಕಾಲಿಂಗ್ ಬೆಲ್ ಬಾರಿಸುತ್ತಾನೆ )
ತಾಯಿ : ( ಶಾಲೆಗೆಂದು ಹೊರಟ ಮಗಳು ಮನೆಯ ಬಾಗಿಲಲ್ಲಿ ನಿತ್ರಾಣಗೊಂಡು ಸಹಾಯಕನೊಂದಿಗೆ ನಿಂತಿರೋದನ್ನ ಕಂಡು ಗಾಬರಿಯಿಂದ ) “ರೀ, ಇಲ್ಲಿ ಬನ್ನಿ ಬೇಗ. ಪುಟ್ಟಿ ವಾಪಾಸ್ ಮನೆಗೆ ಬಂದಿದ್ದಾಳೆ. ಸ್ಕೂಲ್ ಇಂದ ಯಾರೋ ಕರ್ಕೊಂಡ್ ಬಂದಿದಾರೆ ಅನ್ಸುತ್ತೆ. ಏನಾಯ್ತು ಪುಟ್ಟಿ ? ಏನಾಯ್ತು ಪುಟ್ಟಿಗೆ” ಎಂದು ಮಗಳತ್ತ ಧಾವಿಸುತ್ತಾಳೆ.
ಸಹಾಯಕ : “ಗೊತ್ತಿಲ್ವಮ್ಮ. ಶಾಲೆಗೇ ಬರ್ತಾ ದಾರಿಯಲ್ಲಿ ಇದ್ದಕ್ಕಿದ್ದಂತೆ ಬಿದ್ಳಂತೆ. ಜೊತೆಗಿದ್ದ ಬೇರೆ ಮಕ್ಕಳು ಓಡಿ ಬಂದು ಪ್ರಿನ್ಸಿಪಾಲರಿಗೆ ತಿಳ್ಸಿದ್ರು. ಅವ್ರು ನಂಗೆ ಪುಟ್ಟಿನ ಮನೆಗೆ ಕರ್ಕೊಂಡ್ ಹೋಗಿ ಬಿಟ್ಟು ಬಾ ಅಂತ ಕಳ್ಸಿದ್ರು.”
ದೃಶ್ಯ ೩
(ಪುಟ್ಟಿಯನ್ನು ಡಾಕ್ಟರ್ ಕ್ಲಿನಿಕ್ ಇಗೆ ಕರೆದು ತಂದಿರುವ ತಂದೆ ಗಾಬರಿಯಿಂದ ಡಾಕ್ಟರ್ ಏನು ಹೇಳುವರೋ ಎಂದು ಕಾದು ಬೆವರುತ್ತ ಕುಳಿತಿರುವನು. ಏನೂ ಲವಲವಿಕೆ ಇಲ್ಲದ ನಿತ್ರಾಣ ಗೊಂಡಿರುವ ಪುಟ್ಟಿಯು ಡಾಕ್ಟರ್ ಕಡೆ ಪೇಚು ಮೊರೆ ಹಾಕಿ ಕುಳಿತಿರುವಳು)
ಡಾಕ್ಟರ್ : “ಏನೂ ಇಲ್ಲ ಕಣ್ರೀ. ಸನ್ ಸ್ಟ್ರೋಕ್ ಆಗಿದೆ ಮಗೂಗೆ ಅನ್ಸುತ್ತೆ. ಸ್ವಲ್ಪ ಡಿಹೈಡ್ರೇಶನ್ ಕೂಡ ಆಗಿದೆ. TV ನೋಡೋಲ್ವೇನ್ರಿ ನೀವು. ಟೆಂಪರೇಚರ್ ಏರ್ತಾ ಇದೆ ಕಣ್ರೀ ದಿನದಿಂದ ದಿನಕ್ಕೆ. ವಾರಕ್ಕೆ ಮಿನಿಮಂ ೧೦-೧೨ ಮಕ್ಕಳು ಬರ್ತವೆ ನೋಡಿ ಸನ್ ಸ್ಟ್ರೋಕ್ ಡಿಹೈಡ್ರೇಶನ್ ಅಂತ. ಇದೆಲ್ಲ ಕಂಪ್ಲೇಂಟ್ ಬರೋ ವಯಸ್ಸೇನ್ರಿ ಇವ್ರದ್ದೆಲ್ಲ. ಮಗೂನ ಈ ರಣ ಬಿಸಿಲಲ್ಲಿ ಹೊರಗಡೆ ಕಳೆಸಬೇಡ್ರಿ. ಸ್ಕೂಲ್ ಗೆ ಆಟೋ ಇಲ್ಲ ಬಸ್ ಮಾಡಬೋದಲ್ಲ. ಎಲ್ಲ ಸ್ಕೂಲ್ ಗಳು ರಕ್ತ ಹೀರಿ ಫೀಸ್ ಕಿತ್ಕೊಳ್ತಾರೆ ಬಸ್ ಫೆಸಿಲಿಟಿ ಕೊಡೋದಿಲ್ಲ ಅಂತಾರ ?” (ಮುಖದ ಮೇಲೆ ಪ್ರಶ್ನೆಯ ಗಂಟೋದನ್ನು ಹೊತ್ತು ಕುಹಕ ನಗೆ ನಗುತ್ತಾ ಕೇಳುವನು)
ತಂದೆ : “ಇಲ್ಲ ಸರ್. ಮನೆಯಿಂದ ಸ್ಕೂಲ್ ತುಂಬಾ ಹತ್ರ ಅಂತ ಅವಳ ಫ್ರೆಂಡ್ಸ್ ಜೊತೆ ಪುಟ್ಟಿನ ಕಳ್ಸ್ತೀವಿ. ಇನ್ಫ್ಯಾಕ್ಟ್ ಅವಳನ್ನ ನಾವು ಹೊರಗಡೆ ಆಟಾಡಲಿಕ್ಕೂ ಕಳಸೋದಿಲ್ಲ ಹೀಗೆಲ್ಲ ಆಗ್ಬಾರ್ದು ಅಂತ. ಮನೇಲೆ ಒಂದು ರಾಶಿ ಆಟದ ಸಾಮಾನು ತಂದು ಹಾಕಿದೀವಿ. ಅವಳ ಫ್ರೆಂಡ್ಸ್ ಹತ್ರ ಇರೋ ಎಲ್ಲಾ ವಿಡಿಯೋ ಗೇಮ್ಸ್, ಟಾಯ್ಸ್ ಎಲ್ಲಾ ಮನೇಲೆ ಆಟಾಡ್ಕೊಂಡ್ ಇರ್ಲಿ ಅಂತ ಕೊಡ್ಸಿದೀವಿ. ಆದರು ಹೀಗಾಗಿದೆ ನೋಡಿ” (ತನ್ನ ಪೋಷಕತ್ವದ ಸಂಪೂರ್ಣ ಜವಾಬ್ದಾರಿ ನಿಭಾಯಿಸಿರಿವವನಂತೆ ಒಂದೇ ಉಸಿರಿಗೆ ಉತ್ತರಿಸಿದನು)
ಡಾಕ್ಟರ್ : “ಆದರು ಬಿಸಿಲಲ್ಲಿ ನಡ್ಕೊಂಡ್ ಹೋಗೋದ್ ಡೇಂಜರ್ ಕಣ್ರೀ. ಹೇಳಿ ಕೇಳಿ ಈ ಬಿಸಿಲಲ್ಲೋ ಯಾಕೆ ಕೇಳ್ತೀರಾ. ನಮಿಗೇ ತಡ್ಕೊಳೋದಿಕ್ ಆಗೋದಿಲ್ಲ, ಆ ಪುಟ್ಟ ಮಗು ಹೆಂಗ್ರಿ ತಡಕೋತದೆ. ಈಗೇನ್ರಿ ದಿನಕ್ಕೊಂದರಂತೆ ಕ್ಯಾಬ್ ಸರ್ವಿಸ್ ಶುರು ಆಗ್ತಿವೆ. ಅಷ್ಟೆಲ್ಲ ಖರ್ಚು ಮಾಡಿ ಓದಿಸೋರಿಗೆ ಒಂದು ಕ್ಯಾಬ್ ಬುಕ್ ಮಾಡಿ ಕೊಡೋದ್ ಕಷ್ಟನಾ ? ನಿಮ್ ಉಷಾರಲ್ಲಿ ನೀವು ಇರೋದ್ ಒಳ್ಳೇದು. ಗ್ಲೋಬಲ್ ವಾರ್ಮಿಂಗ್ ಬೇರೆ ದಿನೇ ದಿನೇ ಹೆಚ್ಚಾಗ್ತಾ ಇದೆ. ನೋಡಿ ನಿಮ್ಮಿಷ್ಟ .”
ದೃಶ್ಯ ೪
(ಪುಟ್ಟಿಯ ಸ್ಕೂಲಿನ ಪ್ರಿನ್ಸಿಪಾಲ ಆಫೀಸ್ ರೂಮಿನಲ್ಲಿ ಪುಟ್ಟಿಯೊಂದಿಗೆ ಕುಳಿತಿರುವ ತಂದೆ)
ತಂದೆ : “ಸರ್. ನಮ್ಮ ಪುಟ್ಟಿ ಕೂಡ ನಿಮ್ಮ ಸ್ಕೂಲ್ ಬಸ್ ಅಲ್ಲೇ ಬರ್ತಾಳೆ ಇನ್ಮೇಲೆ. ಫೀಸ್ ಎಷ್ಟಾಗುತ್ತೆ ಅಂತ ಹೇಳಿದ್ರೆ ಕಟ್ಟಿ ಹೋಗೋಣ ಅಂತ ಬಂದೆ”
ಪ್ರಿನ್ಸಿಪಾಲ : “ಒಹ್ ! ಗುಡ್ ಗುಡ್. ಅಂದ ಹಾಗೆ ನಿನ್ನೆ ಪುಟ್ಟಿ ತಲೆ ತಿರಗಿ ಬಿದ್ದಿದ್ಳಂತಲ್ಲ ? ತೋರಿಸ್ಕೊಂಡ್ ಬಂದ್ರ ಡಾಕ್ಟರ್ ಕಡೆ ? ಏನ್ ಹೇಳಿದ್ರು ? ಎನಿಥಿಂಗ್ ಟು ವರಿ ?”
ತಂದೆ : “ವರಿ ಮಾಡ್ಕೊಳೋ ಅಂತದ್ದು ಏನು ಇಲ್ಲ ಸರ್. ಬಿಸಿಲಿಗೆ ತಲೆ ತಿರಗಿ ಸನ್ ಸ್ಟ್ರೋಕ್ ಆಗಿದೆ ಅಂದ್ರು. ಡಿಹೈಡ್ರೇಶನ್ ಕೂಡ ಆಗಿತ್ತಂತೆ ಪುಟ್ಟಿಗೆ. ಹಾಗಾಗಿ ಹೊರಗಡೆ ಜಾಸ್ತಿ ಅಡ್ಡಾಡಿಸ್ಬೇಡಿ ಅಂತ ಹೇಳಿದ್ರು”
ಪ್ರಿನ್ಸಿಪಾಲ : “ ನೋಡಿ ನಾವು ಮುಂಚೆನೇ ಹೇಳಿದ್ವಿ ನಿಮಗೆ ಸ್ಕೂಲ್ ಬಸ್ ಫೆಸಿಲಿಟಿ ಇದೆ, ಯೂಸ್ ಮಾಡ್ಕೊಳಿ ಅಂತ. ನೀವು ಒಂದು ೩-೪ ಸಾವಿರ ಮುಖ ನೋಡಿ ಬೇಡ ಅಂದ್ದ್ಬಿಡ್ತೀರಾ, ಆಮೇಲೆ ಕೆಟ್ಟ ಮೇಲೆ ಬುದ್ದಿ ಬಂತು ಅಂತ ಬರ್ತೀರಾ ನಮ್ ಹತ್ರ. ಎನಿವೇಸ್, ಈಗ್ಲಾದ್ರೂ ನಿಮಗೆ ಅರ್ಥವಾಯ್ತಲ್ಲ. ಗುಡ್. ಅಲ್ಲಿ ಹೋಗಿ ಅಕೌಂಟೆಂಟ್ ರೂಮ್ ಅಲ್ಲಿ ಸ್ಕೂಲ್ ಬಸ್ ಫೀಸ್ ಅಂತ ಹೇಳಿ ಕಟ್ಟಿ”
( ಥಾಂಕ್ ಯು ಸರ್ ಎಂದು ಹೇಳಿ ಅಕೌಂಟೆಂಟ್ ರೂಮ್ ಕಡೆ ನಡೆದು ಹೊರಟ ತಂದೆ ಪುಟ್ಟಿಯೊಂದಿಗೆ. ಇನ್ನೇನು ಬಾಗಿಲು ಮುಚ್ಚಿ ಹೊರ ನಡೆಯಬೇಕು ಎನ್ನುವಾಗ )
ಪ್ರಿನ್ಸಿಪಾಲ : “ಇಲ್ಲಿ ಕೇಳಿ. ಒಂದು ನಿಮಿಷ ಬನ್ನಿ. ಇನ್ನೊಂದ್ ವಿಚಾರ ಹೇಳೋದಿತ್ತು ಮರೆತು ಹೋದೆ” (ತನ್ನ ಕನ್ನಡಕ ಸರಿ ಮಾಡಿಕೊಂಡು ಸಿಕ್ಕ ಅವಕಾಶ ಬಳಸಿ ಇಲ್ಲ ಸಲ್ಲದ ಭೀತಿ ಹುಟ್ಟಿಸಿ ಮತ್ತಷ್ಟು ಹಣ ಕೀಳಲು ಹೊಂಚು ಹಾಕಿದವನಂತೆ ನುಡಿದನು)
ತಂದೆ : “ ಏನು ಸರ್ ವಿಷಯ ?”
ಪ್ರಿನ್ಸಿಪಾಲ : “ಈ ತರಹದ ರಗಳೆ ಬೇಡ ಅಂತ ನಾವು ಮೊನ್ನೆ ಬೋರ್ಡ್ ಮೀಟಿಂಗ್ ಅಲ್ಲಿ ಒಂದು ನಿರ್ಧಾರ ಮಾಡಿದೀವಿ. ಹೊರಗಡೆ ಟೆಂಪರೇಚರ್ ದಿನದಿಂದ ದಿನಕ್ಕೆ ಎರ್ಥಾನೇ ಇದೆ. ಸೊ, ಮಕ್ಕಳಿಗೆ ಬೆನಿಫಿಟ್ ಆಗ್ಲಿ ಅಂತ ಈಗ ಇದೆ ಅಲ್ವ ಗ್ರೌಂಡ್, ಅಲ್ಲಿ ಇರೋ ಅಲ್ಪ ಸ್ವಲ್ಪ ಮರಗಳನೆಲ್ಲ ತೆಗಿಸಿ, ಸ್ವಲ್ಪ ಕ್ಲೀನ್ ಮಾಡಿಸಿ, ಇಂಡೋರ್ ಸ್ಟೇಡಿಯಂ ಕಟಿಸೋಣ ಅಂತ. ಕ್ರಿಕೆಟ್ ಕೋರ್ಟ್, ಬ್ಯಾಡ್ಮಿಂಟನ್ ಕೋರ್ಟ್, ವಾಲಿ ಬಾಲ್ ಎಲ್ಲಾ ಇಂಡೋರ್ ಆಗುತ್ತೆ. ಅವಾಗ ನೋಡಿ ಮಕ್ಳು ಇದೆಲ್ಲ ತಾಪತ್ರಯ ಇಲ್ದೆ ಆರಾಮವಾಗಿ ಆಟವಾಡ್ಕೋಬೋದು. ಇದೆಲ್ಲ ಮಾಡ್ಲಿಕ್ಕೆ ಬಹಳಷ್ಟು ಖರ್ಚ್ ಆಗುತ್ತೆ, ಆದರು ನಮ್ ಶಾಲೆಯಲ್ಲಿ ಮಕ್ಕಳಿಗೇ ಮೊದಲ ಆದ್ಯತೆ. ಎಷ್ಟೇ ಖರ್ಚ್ ಆದರು ಪರವಾಗಿಲ್ಲ ಮಕ್ಕಳಿಗೆ ಫೆಸಿಲಿಟಿ ಮಾಡ್ಕೊಡ್ಬೇಕು ಅಂತ ತೀರ್ಮಾನಿಸಿದ್ದೇವೆ. ಅವರ ಆರೋಗ್ಯ ಕೂಡ ನೋಡ್ಕೊಳ್ಳೋದ್ ನಮ್ ಜವಾಬ್ದಾರಿ ಅಲ್ವ. ಅದಿಕ್ಕೆ ನೀವು ಪೇರೆಂಟ್ಸ್ ಸ್ವಲ್ಪ ಕೋ-ಆಪರೇಟ್ ಮಾಡಿ ಬಿಲ್ಡಿಂಗ್ ಫಂಡ್ ಅಂತ ಸ್ವಲ್ಪ ಕಟ್ಟಿಬಿಡಿ. ಎಲ್ಲ ನಿಮ್ ಮಕ್ಕಳ ಒಳ್ಳೇದಕ್ಕೆ ಮಾಡ್ತಿರೋದು”
ತಂದೆ : “ಒಹ್ ! ಒಳ್ಳೆ ಐಡಿಯಾ ಬಿಡಿ ಸರ್. ನಮಿಗೂ ಮಕ್ಕಳ ಆರೋಗ್ಯನೇ ಮುಖ್ಯ ಅಲ್ವ. ಇಷ್ಟೇ ಖರ್ಚು ಮಾಡಿ ಓದಿಸ್ತಿವಂತೆ ಇನ್ನು ಸ್ವಲ್ಪ ಅಧಿಕವಾಗಿ ಅವರಿಗೆ ಒಳ್ಳೆ ಫೆಸಿಲಿಟಿ ಸಿಗುತ್ತೆ ಅನ್ನೋದಾದ್ರೆ ತೊಂದ್ರೆ ಇಲ್ಲ ಬಿಡಿ ಕಟ್ಟೋಣ”
ದೃಶ್ಯ ೫
(ಸಂಜೆ ಮನೆಯಲ್ಲಿ ಗಂಡನಿಗೆ ಒಂದು ಲೋಟ ಚಹಾ ಮಾಡಿ ಕೊಟ್ಟು, ಪುಟ್ಟಿಗೆ ತಿನ್ನಲು ತಿಂಡಿ ಕೊಟ್ಟು ಮಾತಿಗೆ ಕೂತಳು ತಾಯಿ)
ತಾಯಿ : “ಏನಂದ್ರು ಶಾಲೇಲಿ ? “
ತಂದೆ : “ಸ್ಕೂಲ್ ಬಸ್ ಫೀಸ್ ಕಟ್ಟಿ ಬಂದೆ. ಬಿಲ್ಡಿಂಗ್ ಫೀಸ್ ಅಂತ ಬೇರೆ ಏನೋ ಕಟ್ಟಿಸಿಕೊಂಡ್ರು. ಏನೋ ಇಂಡೋರ್ ಸ್ಟೇಡಿಯಂ ಕಟ್ಟಿಸ್ತಾರಂತೆ. ಸಾಕಷ್ಟು ಮಕ್ಕಳ ತಂದೆ ತಾಯಿ ಇದೆ ಕಂಪ್ಲೇಂಟ್ ಹೇಳ್ತಿರೋದ್ರಿಂದ ಎಲ್ಲ ಇಂಡೋರ್ ಮಾಡಿಸ್ಬೇಕು ಅಂತ ನಿರ್ಧರಿಸಿದ್ದಾರಂತೆ. ಇನ್ಮೇಲೆ ನಮ ಪುಟ್ಟಿ, ಅವಳಿಗೆ ಬೇಕಾದ ಆಟ ಒಳಗಡೆನೇ, ಬಿಸಿಲಿನ ಯೋಚನೆ ಇಲ್ದೆ ಆರಾಮವಾಗಿ ಆಡ್ಕೋಬೋದು” (ಸ್ಮೈಲ್ ಮಾಡಿ ಪುಟ್ಟಿಯ ಹಣೆಗೆ ಮುತ್ತಿಟ್ಟನು)
ತಾಯಿ : “ಅದೇನೋ ಸರಿ. ಆದ್ರೆ ಜಾಗ ಎಲ್ಲಿದೆ ಅಲ್ಲಿ ?”
ತಂದೆ : “ಆ ಗ್ರೌಂಡ್ ಹೆಂಗಿದ್ರು ಉಪಯೋಗ ಇಲ್ಲ ಇನ್ನು. ಈ ಬಿಸಿಲಲ್ಲಿ ಯಾರು ಅಡ್ಲಿಕ್ಕಾಗೋದಿಲ್ಲ ಅಲ್ವ. ಅದಿಕ್ಕೆ ಅಲ್ಲಿನ ಮರಗಳನ್ನೆಲ್ಲ ತೆಗಿಸಿ ಕ್ಲೀನ್ ಮಾಡಿಸಿ ಅಲ್ಲೇ ಕಟ್ಟಿಸ್ತಾರಂತೆ”
ತಾಯಿ : “ಒಹ್ ಹೌದ. ಒಳ್ಳೆದಾಯ್ತು ಬಿಡಿ. ರೀ ನಾನು ಈ ವಾರ ಊರಿಗೆ ಹೋಗ್ತಿದೀನಲ್ಲ ಪುಟ್ಟಿನ ಕೂಡ ಕರ್ಕೊಂಡ್ ಹೋಗ್ತೀನಿ. ಅವಳು ತುಂಬಾ ಮಂಕಾಗಿದ್ದಾಳೆ. ಊರಲ್ಲಿ ಸ್ವಲ್ಪ ಸರಿ ಹೋಗ್ಬೋದೇನೋ ನೋಡೋಣ. ಅಲ್ಲಿ ಹೇಗಿದ್ರು ಇಲ್ಲಿ ಅಷ್ಟು ಬಿಸಿಲು ಧೂಳು ಪೊಲ್ಲ್ಯೂಷನ್ ಎಲ್ಲ ಇಲ್ಲ.”
ದೃಶ್ಯ ೬
(ತಾಯಿ ಮತ್ತು ಪುಟ್ಟಿ ಅವರ ಊರಿನ ಬಸ್ಸಿನ ಸೀಟ್ ಒಂದರಲ್ಲಿ ಕುಳಿತಿದ್ದಾರೆ)
ಪುಟ್ಟಿ : “ಅಮ್ಮ. ನಮ್ಮ ಹಳ್ಳಿಯಲ್ಲಿ ಇಷ್ಟೊಂದು ಬಿಸಿಲು ಧೂಳು ಯಾಕಿರಲ್ಲಮ್ಮ. ಅಲ್ಲಿ ನಾನು ಎಷ್ಟೋತ್ತು ಆಟಾಡಿದ್ರು ಸುಸ್ತಾಗಲ್ವಲ್ಲ ಯಾಕಮ್ಮ ?”
ತಾಯಿ : “ನಮ್ಮ ಹಳ್ಳಿಯ ಮನೆಯ ಸುತ್ತಲೂ ಮರಗಳಿವೆ ಅಲ್ವ ಪುಟ್ಟಿ. ತಣ್ಣನೆ ಗಾಳಿ ಬಿಸುತ್ತೆ ಮತ್ತು ನೆರಳಲ್ಲಿ ಆಡ್ತಿಯಲ್ಲ ಹಾಗಾಗಿ ನಿಂಗೆ ಸುಸ್ತಾಗಲ್ಲ ಅಲ್ಲಿ”
ಪುಟ್ಟಿ : “ಮತ್ತೆ ನಮ್ ಮನೆ ಮುಂದೆ ಒಂದು ಮರ ಹಾಕ್ಬೋದಲ್ವಾಮ್ಮಾ? ಮಹಡಿಗೆ ಸುಣ್ಣ ಹೊಡ್ಸೋದು, ಲಾನ್ ಮ್ಯಾಟ್ ,ಹಾಕ್ಸೋದು ಇಲ್ಲ AC ತರೋ ಬದಲಿಗೆ ಮರ ಹಾಕೋಣವ ?”
ತಾಯಿ : “ಮರ ಹಾಕಿದ್ರೆ ಅದು ಬೆಳೆದು ದೊಡ್ಡದಾದ್ಮೇಲೆ ಅದರ ಬೇರು ಮನೆ ಫೌಂಡೇಶನ್ ಎಲ್ಲ ಹಾಳು ಮಾಡ್ತದೆ ಪುಟ್ಟಿ. ಅದರ ಕೊಂಬೆಗಳೆಲ್ಲ ನಮ್ ಮನೆ ಮುಂದಿರೋ ಎಲೆಕ್ಟ್ರಿಕ್ ವಯರುಗಳಿಗೆ ಅಡ್ಡಿ ಬರುತ್ತೆ. ಸುಮ್ನೆ ಆ ಕಿರಿ ಕಿರಿ ಎಲ್ಲ ಯಾಕೆ ಬೇಕು ಹೇಳು.”
ಪುಟ್ಟಿ : “ಆದ್ರೆ ಹಳ್ಳಿಯಲ್ಲಿರೋ ನಮ್ಮ ಮನೆ ಗಟ್ಟಿಯಾಗೇ ಇದೆ ಅಲ್ವಾಮ್ಮಾ ? ಅದರ ಫೌಂಡೇಶನ್ ಹಾಳಾಗಿದೆಯಾ ? ಎಷ್ಟು ಆರಾಮವಾಗಿ ಆಟ ಕೂಡ ಅಡಬೋದು.. ಅಲ್ಲಿ ಬರೋ ಪಕ್ಷಿಗಳಿಗೆ ಊಟ ಕೂಡ ಮಾಡಿಸಬಹುದು. ಪ್ಲೀಸ್ ಅಮ್ಮ, ನಮ್ಮ ಮನೆ ಮುಂದೆ ಒಂದು ಚಿಕ್ಕ ಗಿಡ ಹಾಕೋಣ ಅಮ್ಮಾ”
ತಾಯಿ : “ಸುಮ್ನೆ ಮಲ್ಕೋ ಈಗ. ನಿಂಗೆ ಮೊದ್ಲೇ ಒಂದು ವಾರದಿಂದ ಮೈಯಲ್ಲಿ ಉಷಾರಿಲ್ಲ. ಡಿಹೈಡ್ರೇಶನ್, ಸನ್ ಸ್ಟ್ರೋಕ್ ಅಂತ ತಲೆ ನೋವು ಬೇರೆ ಬಂದಿವೆ. ಈಗ ನಿದ್ದೆ ಮಾಡು. ಇಲ್ಲ ಹಳ್ಳಿಗೆ ಹೋಗಿ ಆಟವಾಡಲಿಕ್ಕಾಗೋದಿಲ್ಲ ನೋಡು”
ಎಂದು ತಾಯಿ ಗದರಲು ತಾಯಿಗೆ ವೊರಗಿ ಮಲಗಿದಳು ಪುಟ್ಟಿ.
ದೃಶ್ಯ ೭
(ಕೈಯಲ್ಲಿ ದೊಡ್ಡದೊಂದು ಮಾವಿ ಹಣ್ಣಿನ ಬುಟ್ಟಿ ಹಿಡಿದು ಒಳ ಬಂದ ಪುಟ್ಟಿಯ ಮಾವ ಸುರೇಶ)
ಸುರೇಶ : “ಪುಟ್ಟಿ….. ನೋಡು ನಿಂಗೆ ಅಂತ ಮಾವಿನ ಹಣ್ಣು ಕಿತ್ಕೊಂಡ್ ಬಂದ್ದಿದ್ದೀನಿ. ನಮ್ಮ ಮನೆ ಹಿಂದೆ ಮರ ಇದೆ ಅಲ್ವ ಪುಟ್ಟಿ, ಅದೇ ನಿನ್ನ ಫೇವರಿಟ್ ಜೋಕಾಲಿ ಮರ, ಅದ್ರದ್ದು ರುಚಿಯಾದ ಹಣ್ಣು”
ಪುಟ್ಟಿ : “ಹೌದಾ ಮಾಮ !!” (ಖುಷಿ ಇಂದ ಓಡಿ ಬಂದು ಹಣ್ಣನ್ನು ತೆಗೆದು ಕೊಂಡಳು ಪುಟ್ಟಿ). “ಮಾಮ ನಾನು ಊರಿಗೆ ಹೋಗೋದಿಲ್ಲ, ನಾನು ಇಲ್ಲೇ ಇರ್ತೀನಿ ಮಾಮ. ಪ್ಲೀಸ್ ನನ್ನ ವಾಪಾಸ್ ಕಳಿಸಬೇಡ.”
ಸುರೇಶ : (ನಗುತ್ತ) “ಐಯೋ ಪುಟ್ಟು. ಈಗಿನ್ನು ಬಂದ್ದಿದ್ದೀಯ, ಆವಾಗ್ಲೇ ಹೋಗೋ ಚಿಂತೆ ಯಾಕೆ” (ಪುಟ್ಟಿಯನ್ನು ಎತ್ತಿಕೊಂಡು ಮುತ್ತಿಟ್ಟನು) “ನೀನು ಇನ್ನು ನಿನ್ನ ಮರದ ಜೋಕಾಲಿ ಆಟ ಆಡ್ಬೇಕು, ನಿಂಗೆ ಇನ್ನು ಎಷ್ಟೊಂದ್ ಫ್ರೆಂಡ್ಸ್ ಪರಿಚಯ ಮಾಡಿಸ್ಬೇಕು.. ಅಷ್ಟು ಬೇಗ ಕಳ್ಸೋದಿಲ್ಲ ನಾನು ನಿನ್ನ.”
ತಾಯಿ : “ಶುರು ಮಾಡಿದ್ಲಾ ಇವಳ ಕ್ಯಾತೆ ಆವಾಗ್ಲೇ. ಅಲ್ಲಿ ಲಕ್ಷ ಲಕ್ಷ ಫೀಸ್ ಕೊಟ್ಟು ಸ್ಕೂಲಿಗೆ ಕಳಸೋದು ನೀನು ಓದ್ಲಿ ಅಂತಾನಾ, ಇಲ್ಲ ನಾನು ನಿಮ್ಮಪ್ಪ ಓದ್ಲಿ ಅಂತಾನಾ ?”
ಸುರೇಶ : “ಪುಟ್ಟಿ, ನೀನು ಕಳೆದ ಸಾರಿ ಬಂದಾಗ ಒಂದು ಕರಿಬೇವಿನ ಗಿಡ ಹಾಕಿದ್ಯಲ್ಲ ಹಿತ್ತಿಲಲ್ಲಿ, ತೋರಿಸ್ತೀನಿ ಬಾ ನಿಂಗೆ. ನೀನು ಅದಕ್ಕೆ ಬೋರ್ ಆಗ್ಬಾರ್ದು ಅಂತ, ಅದಕ್ಕೊಂದು ಫ್ರೆಂಡ್ ಇರ್ಲಿ ಅಂತ ಪಕ್ಕದಲ್ಲಿ ಬೇವಿನ ಮರ ಹಾಕಿದ್ಯಲ್ಲ ಪುಟ್ಟಿ, ಅದೂ ನಿನ್ನಷ್ಟೇ ಎತ್ತರ ಆಗಿದೆ. ನಿಂಗೊತ್ತಾ ಪುಟ್ಟಿ, ಆ ನಿನ್ನ ಫೆವರೇಟ್ ಮಲ್ಲಿಗೆ ಹೂವಿನ ಬಳ್ಳಿ ಇದೆಯಲ್ಲ, ಅದರಲ್ಲಿ ನಿನ್ನಂತದ್ದೇ ಮುದ್ದಾದ ಟುವ್ವಿ ಹಕ್ಕಿ ಬಂದು ಗೂಡು ಕಟ್ಟಿದೆ ಪುಟ್ಟಿ. ಆ ಟುವ್ವಿ ಹಕ್ಕಿಗೆ ನಿಂದೆ ಹೆಸರು ಇಟ್ಟಿದೀವಿ, ಪುಟ್ಟ್ಟಿಇಇಇಇ ಅಂತಾ “ (ಎಂದು ಜೊರ್ರಗಿ ನಕ್ಕು ಪುಟ್ಟಿಯ ಕೆನ್ನೆಗೆ ಮುತ್ತು ಕೊಟ್ಟನು)
“ಹಾಂ ಪುಟ್ಟಿ. ಇವತ್ತು ಮದ್ಯಾನ ಊಟಕ್ಕೆ ಏನ್ ಸ್ಪೆಷಲ್ ಹೇಳು… !! ಸಾರಿಗೆ ನಿನ್ನ ಕರಿಬೇವಿನ ಗಿಡದ ಎಲೆಗಳದ್ದೇ ಪರಿಮಳ” (ಎಂದು ನಕ್ಕನು. ಪುಟ್ಟಿಯೂ ಸಂತಸಕ್ಕೆ ಪಾರವೇ ಇಲ್ಲವೆಂಬಂತೆ ಜೋರಾಗಿ ಚಪ್ಪಾಳೆ ಹೊಡೆದಳು)
ಪುಟ್ಟಿ : “ಮಾಮ.. ಬಾ ಮಾಮ ಹೋಗಿ ನೋಡ್ಕೊಂಡ್ ಬರೋಣ ಎಲ್ಲಾ”
ದೃಶ್ಯ ೮
(ಪುಟ್ಟಿಯನ್ನು ಎತ್ತಿಕೊಂಡು ಮನೆಯ ಹಿತ್ತಲಿನ ತೋಟಕ್ಕೆ ಕರೆ ತಂದಿರುವ ಮಾಮ ಪುಟ್ಟಿಯ ಕೌತುಕತೆಯನ್ನು ಕಂಡು ಅವಳನ್ನು ಕೆಳಗಿಳಿಸಿದನು)
ಪುಟ್ಟಿ : “ಮಾಮ.. ಪ್ಲೀಸ್, ಈ ಬೇವಿನ ಗಿಡ ಬೆಳೆದು ದೊಡ್ಡ ಮರ ಆದ್ಮೇಲೆ ಕಡಿಬೇಡ ಮಾಮ.. ಗಿಡನ್ನ ಕೂಡ ಪ್ಲೀಸ್.” (ಅಳು ಮುಖ ಮಾಡಿ ಗೋಗರೆದಳು ಪುಟ್ಟಿ. ಇದನ್ನು ಕಂಡು ಬೆರಗಾದ ಸುರೇಶ)
ಸುರೇಶ: “ಅಲ್ವೇ ಪುಟ್ಟಿ.. ಇದು ನಿನ್ನ ಮುದ್ದು ಕೈಯಿಂದ ಬೆಳೆಸಿರೋ ಗಿಡ.. ನಾನ್ಯಾಕೆ ಕಡಿತೀನಿ. ನಾನು ನಿನ್ನಿಂದ ಇನ್ನೊಂದು ಮಾವಿನ ಮರ ಹಾಕ್ಸೋಣ ಅಂತ ಇದೀನಿ, ನೀನು ನೋಡಿದ್ರೆ ಅಳು ಮುಖ ಮಾಡ್ಕೊಂಡು ಮರ ಕಡಿಬೇಡ ಅಂತೀಯಲ್ಲ. ನಿನ್ನ ಕೈಯಿಂದ ಬೆಳೆದ ಮಾವಿನ ಹಣ್ಣಿನ ರುಚಿ ಎಷ್ಟು ಇರ್ಬೇಡ !! ಆಹ್ಹಾ.. ಹಾಂ ಮತ್ತೆ ಆ ಮರದಲ್ಲಿ ಇನ್ನಷ್ಟು ಪಕ್ಷಿ ಬಂದು ಗೂಡು ಕಟ್ಟಿ ಮರಿ ಮಾಡ್ತವಲ್ಲ ಅದನ್ನ ನಿಂಗೆ ಫ್ರೆಂಡ್ ಮಾಡಿಸಿ ನಿನ್ ಜೊತೆ ಊರಿಗೆ ಕಳಿಸ್ತೀನಿ.. ಹೇ ಹೇ ಹೇ “ (ನಗುವನು ಸುರೇಶ)
ಪುಟ್ಟಿ : “ಮತ್ತೆ ಮರದ ಬೇರು ಮನೆ ಫೌಂಡೇಶನ್ ಹಾಳು ಮಾಡ್ತದಂತೆ ಆಲ್ವಾ ಮಾಮ. ಕರೆಂಟ್ ವೈರ್ ಮೇಲೆ ಬಿದ್ದು ಮನೆಗೆ ಅಡ್ಡಿ ಮಾಡ್ತದಂತೆ. ಅದರ ಬೇರುಗಳು ಡ್ರೈನೇಜ್ ಮತ್ತೆ ವಾಟರ್ ಪೈಪಿಗೆಲ್ಲ ತಾಗಿ ತೊಂದ್ರೆ ಮಾಡ್ತದಂತೆ. ಅದಿಕ್ಕೆ ನಮ್ಮೂರಲ್ಲಿ ಎಲ್ಲರು ಮರಗಳನ್ನೆಲ್ಲ ತೇಗ್ಸ್ಬಿಟ್ಟಿದ್ದಾರೆ” ಎಂದು ಪುಟ್ಟಿ ತನ್ನ ಎಲ್ಲಾ ತಿಳಿಯದ ಗೊಂದಲಗಳನ್ನು ಉಸುರಿದಳು ಪ್ರಶ್ನಾರ್ಥಕವಾಗಿ ಮುಗ್ದತೆಯಿಂದ.
(ಪುಟ್ಟಿಯ ಎಲ್ಲ ಪ್ರಶ್ನೆಗಳ ಮೂಲ ಗ್ರಹಿಸಿದ ಸುರೇಶ ಧೀರ್ಘ ಊಸಿರೆಳೆದು ಮಕ್ಕಳಿಗೆ ಕಲಿಸುತ್ತಿರುವ ನಕಾರಾತ್ಮಕ ಪಾಠಗಳಿಗೆ ಮನದಲ್ಲೇ ವಿಷಾದಿಸಿ ಉತ್ತರಿಸಲಾರಂಭಿಸಿದನು)
ಸುರೇಶ : “ಪುಟ್ಟಿ.. ಪ್ರಕೃತಿ ಮುಂದೆ ನಾನು, ನೀನು, ನಮ್ಮ ಮನೆ, ನಿಮ್ಮ ಊರು ಒಂದು ಲೆಕ್ಕವೇನೆ ? ಪ್ರಕೃತಿಗೆ ನಾವೊಂದು ಹುಲ್ಲಿನ ಕಡ್ಡಿಗೆ ಸಮ. ಮನೆ ಬೀಳಿಸಲೇಬೇಕೆಂದಾದರೆ ಈ ಪ್ರಕೃತಿ ಈ ಮರ ಬೆಳೆದು ದೊಡ್ಡದಾಗೋವರಿಗೆ ಕಾಯುತ್ತಾ ಪುಟ್ಟಿ ? ಮರ ಹಾಕಿದ್ರೆ ಫೌಂಡೇಶನ್ ವೀಕ್ ಆಗ್ತದೆ, ಡ್ರೈನೇಜ್ ಕನೆಕ್ಷನಿಗೆ ತೊಂದ್ರೆ ಆಗ್ತದೆ, ರಸ್ತೆ ಚಿಕ್ಕದಾಗ್ತವೆ ಅಂತ ಮರ ಬೆಳ್ಸೋದೇ ಇಲ್ಲ ಅಂದ್ರೆ ನಾಳೆ ಅಂತರ್ಜಲ ಕುಸಿದು ನಿಮ್ಮ ಎಲ್ಲಾ ಬೋರ್ ವೆಲ್ ಪ್ರಭಾವದಿಂದ ಭೂಕಂಪ ಬರ್ತದಲ್ಲಾ, ಅವಾಗ ನಿಮ್ಮಮ್ಮ ಏನು ಅವಳ ಹೇರ್ ಕ್ಲಿಪ್ ಹಾಕಿ ಭೂಮಿ ತಾಯಿಯ ಬಾಯಿ ಮುಚ್ಚಿಸ್ತಾಳ ಕೇಳು ?” (ನಗುವನು)
ಪುಟ್ಟಿಯು ಸಂಭ್ರಮ ಸಡಗರದಿಂದ ತೋಟದ ಸುತ್ತಲೆಲ್ಲ ಓಡುತ್ತಾ ಆಟವಾಡಿ, ತನ್ನ ಮಲ್ಲಿಗೆ ಬಳ್ಳಿಯಲ್ಲಿ ಗೂಡು ಕಟ್ಟಿದ ಟುವ್ವಿ ಹಕ್ಕಿಯನ್ನು ತನ್ನ ಒಡಹುಟ್ಟಿದವರಂತೆ ಪ್ರೀತಿಯಿಂದ ಮಾತಾಡಿಸಿ, ಇನ್ನಿಲ್ಲದಷ್ಟು ಜೋಕಾಲಿಯಾಡಿ, ಅಡಿಗೆಗಾಗಿ ಕರಿಬೇವನ್ನು ಕೀಳಲು ಅಮ್ಮ ಬರುವುದನ್ನು ಕಂಡು ಪುಟ್ಟಿ ಅವಳ ಕೈಯಿಂದ ಪಾತ್ರೆ ಕಸಿದು “ನಾನೇ ಕಿತ್ತು ತರುತ್ತೇನೆ.. ನನ್ನ ಗಿಡ ಅದು” ಎಂದು ಖುಷಿ ಇಂದ ಹಿಗ್ಗಿ ಓಡಿದಳು.. ಜೋರಾಗಿ ಕಿತ್ತರೆ ಗಿಡಕ್ಕೆ ಎಲ್ಲಿ ನೋವಾದೀತೋ ಎಂಬಂತೆ ೪-೫ ಎಲೆ ಕಿತ್ತು ತಂದು ಪುಟ್ಟಿ ಅಡಿಗೆ ಮನೆಯಲ್ಲಿ ಇಟ್ಟಳು.. ಇವತ್ತು ನನ್ನ ಗಿಡದಿಂದಲೇ ನಿಮಗೆಲ್ಲ ರುಚಿಯಾದ ಊಟ ಎಂದು ಖುಷಿಯಿಂದ ಕೂಗಿದಳು. ಹೊಟ್ಟೆಯ ತುಂಬಾ ಊಟ ಮಾಡಿ, ತನ್ನ ಜೋಕಾಲಿ, ಮಾವಿನ ಮರದ ಹಣ್ಣು ಸವಿದು, ಇನ್ನಿಲ್ಲದಷ್ಟು ಹಕ್ಕಿಗಳೊಟ್ಟಿಗೆ ಆಡಿ ತನಗಿದ್ದ ಎಲ್ಲಾ ವೀಕ್ನೆಸ್ಸ್, ಜ್ವರ, ಎಷ್ಟು ವರ್ಷಗಳ ಹಿಂದೆ ಬಂದಿತ್ತೋ ಎನ್ನುವಷ್ಟು ಲವ ಲವಿಕೆಯಿಂದ ಹಿಗ್ಗುತ್ತಿದ್ದಳು.
ದೃಶ್ಯ ೯
(ರಾತ್ರಿಯಾಯಿತು. ಬೆಳಗ್ಗೆದ್ದರೆ ಊರಿಗೆ ಹೋರಾಡಬೇಕಲ್ಲಾ ಅನ್ನೋ ಚಿಂತೆ ಪುಟ್ಟಿಗೆ. ಊರಿಗೆ ಹೋಗಲು ಸ್ವಲ್ಪವೂ ಮನಸ್ಸಿಲ್ಲದ ಪುಟ್ಟಿ ಸಂಜೆ ಪೂರವು ತನ್ನನ್ನು ಕಳಸದಂತೆ ಮಾಮನನ್ನು ಗೋಗರೆದಳು. ಮಾಮನನ್ನ ಗಟ್ಟಿಯಾಗಿ ಹಿಡಿದು ಮಲಗಿದರೆ ಬೆಳಗ್ಗೆ ಅಮ್ಮ ಕರೆದೊಯುಯ್ಯುವುದನ್ನು ಮಾಮ ತಡೆಯಬಹುದು ಎಂದು ಮನದಲ್ಲೇ ಲೆಕ್ಕಿಸಿದ ಪುಟ್ಟಿ ಹಠ ಮಾಡಿ ಮಾಮನ ಪಕ್ಕದಲ್ಲಿ ಅವನನ್ನು ಗಟ್ಟಿಯಾಗಿ ಹಿಡಿದು ಮಲಗಿರುವಳು)
“ನನ್ನನ್ನು ಬಿಟ್ಟು ಹೋಗಬೇಡ ಪುಟ್ಟಿ.. ನಾನು ನಿನ್ನ ಒಳ್ಳೆಯ ಗೆಳೆಯ ಆಲ್ವಾ !!” ಎಂದು ಟುವ್ವಿ ಹಕ್ಕಿ ಪುಟ್ಟಿಯ ಕನಸ್ಸಲ್ಲಿ ಅಂದಿತು.
“ನನ್ನ ಜೊತೆ ಆಡೋದಿಲ್ವಾ ಪುಟ್ಟಿ. ನಿನ್ನ ಮೇಲೆ ಸ್ವಲ್ಪವೂ ಬಿಸಿಲು ಬೀಳದೆ ಇರುವ ಹಾಗೆ ನೋಡಿಕೊಳ್ಳುವ ಜವಾಬ್ದಾರಿ ನನ್ನದು” ಅಂದಿತು ಪುಟ್ಟಿಯ ಕನಸ್ಸಲ್ಲಿ ಮಾವಿನ ಮರ
ಪುಟ್ಟಿ : “ನಾನು ಎಲ್ಲಿಯೂ ಹೋಗೋದಿಲ್ಲಾಆಆ” ಜೋರಾಗಿ ಕನವರಿಸಿದಳು.
(ಪುಟ್ಟಿಯ ಜೋರಾದ ಕನವರಿಕೆ ಇಂದ ಎಚ್ಚ್ಚೆತ್ತ ಮನೆಯವರು)
ಸುರೇಶ : “ಪುಟ್ಟಿ,.. ಏನಾಯ್ತು ?”
ತಾಯಿ : “ಏನಾಯ್ತೋ ?”
(ಪುಟ್ಟಿ ಇನ್ನು ಕನವರಿಸುತ್ತಲೇ ಇರುವಳು)
ಸುರೇಶ : “ಅಕ್ಕ.. ಪುಟ್ಟಿಯ ಮೈ ಬಿಸಿಯಾಗಿದೆ. ಅವಳಿಗೆ ಮತ್ತೆ ಜ್ವರ ಬಂದಂತಿದೆ. ಈಗ ಡಿಸ್ಟರ್ಬ್ ಮಾಡೋದು ಬೇಡ. ನೀನು ಮಲ್ಕೋ ಹೋಗು. ಬೆಳಗ್ಗೆ ಡಾಕ್ಟರ್ ಕರ್ಕೊಂಡ್ ಬರ್ತೀನಿ. ನಾನಿದೀನಿ, ನೀನು ಸುಮ್ನೆ ತಲೆ ಕೆಡಿಸ್ಕೊಬೇಡ ಮಲ್ಕೋ ನಡಿ” ಎಂದು ಧೈರ್ಯ ಹೇಳಿ ಕಳಿಸಿದನು ಮಾಮ.
ತಾಯಿ : “ಬಡ್ಕೊಂಡೇ.. ಆಡ್ಬೇಡ ಹೊರಗಡೆ ಬಿಸಿಲಲ್ಲಿ ಅಂತ. ನನ್ ಮರ ನನ್ ಟುವ್ವಿ ಹಕ್ಕಿ ನನ್ ಜೋಕಾಲಿ ಅಂತ ಕತ್ತೆ ಕುಣಿದ ಹಾಗೆ ಕುಣಿದಳು. ನೋಡು ಈ ಹುಚ್ಚಾಟದಿಂದ ಯಾರು ಈಗ ಒದ್ದಾಡೋದು ಅಂತ” (ಸಿಟ್ಟಿನಿಂದ ಹಣೆ ಮೇಲೆ ಕೈ ಇಟ್ಕೊಂಡ್ಲು ತಾಯಿ)
ಮಾಮ : “ಈಗ ಕೂಗಾಡಿ ಅವ್ಳ್ನ ಎಬ್ಬಿಸಬೇಡ. ಮಲ್ಕೋ ನಡಿ”
ದೃಶ್ಯ ೧೦
(ಹಾಸಿಗೆಯಲ್ಲಿ ಮಲಗಿರುವಳು ಪುಟ್ಟಿ. ಮನೆಗೆ ಡಾಕ್ಟರ್ ಕರೆ ತಂದಿರುವ ಸುರೇಶ. ಗಾಬರಿಯಿಂದ ಕುಳಿತಿರುವ ಅತ್ತೆ ಮತ್ತು ಅಮ್ಮ.)
ಡಾಕ್ಟರ್ : “ಏನು ಟೆನ್ಶನ್ ಇಲ್ಲ ರೀ. ಮಗು ಏನೋ ಮನಸ್ಸಿಗೆ ಹಚ್ಚಿಕೊಂಡಿದೆ. ಮಗೂಗೆ ಜಾಸ್ತಿ ಬಲವಂತ ಮಾಡ್ಬೇಡ್ರಿ. ಅವಳಿಗಿಷ್ಟ ಬಂದಂತೆ ಇರ್ಲಿ ಬಿಡಿ. ಪುಟ್ಟ ಹುಡುಗಿ ಇನ್ನು ಅದು.”
ತಾಯಿ : “ಸರ್. ಅವಳ ಈ ಮರ, ಪಕ್ಷಿ ಹುಚ್ಚಾಟ ಎಲ್ಲಿಂದ ನಿಲ್ಸೋದು ಹೇಳಿ. ಸಿಟಿಯಲ್ಲಿ ಎಲ್ಲಿಂದ ತರೋಣ ಇದೆಲ್ಲ. ಮನೆಯಲ್ಲಿ ರಾಶಿ ರಾಶಿ ವಿಡಿಯೋ ಗೇಮ್, ಟಾಯ್ಸ್, ಕಂಪ್ಯೂಟರ್ ಎಲ್ಲಾ ಬಿದ್ದಿದೆ ಇವಳಿಗಂತ. ಇವಳಿಗಾಗಿ ನಾವು ಏನು ಮಾಡಿಲ್ಲ ಹೇಳಿ. ಒಳ್ಳೆ ಸ್ಕೂಲ್, ಇಂಡೋರ್ ಸ್ಟೇಡಿಯಂ ಫೆಸಿಲಿಟಿ, AC, ಸ್ಕೂಲ್ ಬಸ್ ಎಲ್ಲಾ ವ್ಯವಸ್ಥೆ ಮಾಡಿದೀವಿ.. ಆದರು ಇವ್ಳು ಮರ ಪಕ್ಷಿ ಅಂತ ಗೋಳಾಡಿಸ್ತಾಳೆ. ಏನ್ ಮಾಡೋದು ಅಂತಾನೆ ತಿಳಿತಿಲ್ಲ”
ಡಾಕ್ಟರ್ : “ತಲೆ ಕೆಟ್ಟಿದೆ ಏನ್ರಿ ನಿಮಗೆ. ಮಗು ಮರ ಪಕ್ಷಿ ಅಂತದೇ ಅಂತ ಖುಷಿ ಪಡೋದು ಬಿಟ್ಟು, ಮನೆಯಲ್ಲೇ ಕೂತ್ಕೊಂಡ್ ಆಡು ಅಂತ ಒತ್ತಾಯ ಮಾಡ್ತೀರಾ !? ಮರ ಬೇಡ, ಗಿಡ ಬೇಡ, ಪಕ್ಷಿ ಬೇಡ ಅಂತ ಎಲ್ಲಾ ಕಡಿದು ಬಿಸಾಕ್ತೀರ ಆಮೇಲೆ ಮಕ್ಕಳಿಗೇ ಗ್ಲೋಬಲ್ ವಾರ್ಮಿಂಗ್, ಗ್ರೌಂಡ್ ವಾಟರ್ ರಿಚಾರ್ಜ್, ಎಕಾಲಾಜಿಕಲ್ ಬ್ಯಾಲೆನ್ಸ್ ಅಂತ ೫-೧೦ ಮಾರ್ಕ್ಸ್ ಉತ್ತರಗಳು ಬೈ ಹಾರ್ಟ್ ಮಾಡ್ಸ್ತೀರಾ. ಡಿಹೈಡ್ರೇಶನ್, ಸನ್ ಸ್ಟ್ರೋಕ್ ಇಷ್ಟು ಚಿಕ್ಕ ವಯಸ್ಸಲ್ಲಿ ಆಗ್ತಿದೆ ಅಂದ್ರೆ ನೀವೆಲ್ಲ ಸೇರ್ಕೊಂಡ್ ಮಕ್ಕಳ ಮನಸ್ಸನ್ನ, ಪರಿಸರವನ್ನ ಎಷ್ಟು ಹಾಳು ಮಾಡಿದಿರಾ ಯೋಚಿಸಿ. ಇಷ್ಟಾದ್ರೂ ನಿಮ್ಮಂತ ಸೋ ಕಾಲ್ಡ್ ಎಜುಕೇಟೆಡ್ ಜನಕ್ಕೆ ತಿಳಿತಿಲ್ಲ ಅಂದ್ರೆ ನಿಮ್ಮಿಷ್ಟ. ಇವತ್ತು ನಿಮ್ ಮಗೂನ ಕನ್ವಿನ್ಸ್ ಮಾಡಿ ಕರ್ಕೊಂಡ್ ಹೋಗ್ತೀರಾ, ನಾಳೆ ಸಾವಿರಾರು ಮಕ್ಳು ರಸ್ತೆ ರಸ್ತೆಯಲ್ಲಿ ಕುಸಿದು ಬೀಳ್ತಾರೆ, ೧೦ ದಿನಕ್ಕೊಮ್ಮೆ ಬರೋ ನೀರು ೧೦೦ ದಿನಕ್ಕೊಮ್ಮೆ ಬರುತ್ತೆ, ೧೦೦೦ ಅಡಿ ಅಲ್ಲ, ೧೦೦೦೦ ಸಾವಿರ ಅಡಿ ತೋಡಿದ್ರು ಅಂತರ್ಜಲ ಸಿಗೋದಿಲ್ಲ ತಿಳ್ಕೊಳಿ. ಕರ್ಮಾ, ನಿಮ್ಮಂತವರಿಗೆ ಹೇಳಿ ಉಪಯೋಗವಿಲ್ಲ.. ಏನಾದ್ರು ಮಾಡ್ಕೊಳಿ” (ಎಂದು ಸಿಟ್ಟಿನಿಂದ ತನ್ನ ಸೂಟ್ ಕೇಸ್ ಎತ್ತುಕೊಂಡು ಹೊರ ನಡೆದರು ಡಾಕ್ಟರ್)
ಸುರೇಶ : “ಅಕ್ಕ, ಇದು ಬರೀ ನಮ್ಮ ಪುಟ್ಟಿಯ ಸಮಸ್ಯೆ ಅಷ್ಟೇ ಅಲ್ಲ.. ಇವಳಂತೆ ಇನ್ನು ಎಷ್ಟು ಮಕ್ಕಳು ಇದೆ ರೀತಿ ಕೊರಗ್ತಿದಾರೋ ಏನೋ.. ಪರಿಸರಕ್ಕಿಂತ ಚೆನ್ನಾಗಿ ಪೋಷಿಸಲು ನಿನ್ನಿಂದ ನನ್ನಿಂದ ಆಗುತ್ತೇನೆ ? ಬರಿ ವಿದ್ಯೆ ಅಷ್ಟೇ ಅಲ್ಲ, ಒಳ್ಳೆ ಪರಿಸರ ಮಕ್ಕಳಿಗೆ ಕೊಡೋದು ನಮ್ಮ ಜವಾಬ್ದಾರಿ ಅಲ್ವೇನೆ ? ಪುಟ್ಟಿಗೇನೋ ಕಡೆಯ ಪಕ್ಷ ಅವಳ ಹಳ್ಳಿ ಆದ್ರೂ ಇದೆ. ಇದೆ ಸಮಸ್ಯೆ ಇರೋ ಎಲ್ಲಾ ಮಕ್ಳಿಗೆ ಈ ಭಾಗ್ಯ ಇರುತ್ತೇನೆ ? ಅಷ್ಟೆಲ್ಲ ದುಡ್ಡು ವ್ಯಯಿಸಿ ಆಟಿಕೆ ಕೊಡ್ಸಿದ್ದೀವಿ ಅಂತೀಯಲ್ಲ, ಅವಳು ಕೇಳ್ತಿರೋದು ಫ್ರೀ ಆಗಿ ಸಿಗೋ ಒಂದು ಮರ, ಅದರಲ್ಲಿ ಹಾಡುವ ಪಕ್ಷಿಗಳು.. ! ಹ್ಮ್ಮ್ಮ್.. ನಿನ್ನಿಷ್ಟ ಕಣೆ” (ಬೇಸರದಿಂದ ಹೊರ ನಡೆದ ಸುರೇಶ)
(ಕಣ್ಣಂಚಲ್ಲಿ ನೀರು ತುಂಬಿಕೊಂಡು ಗದ್ಗತಿಸುತ್ತ ಪುಟ್ಟಿಯ ಹಣೆಗೆ ಮುತ್ತಿಟ್ಟ ತಾಯಿ)
“ಸಾರೀ ಪುಟ್ಟಿ.. ನೀನಗೆ ಉತ್ತಮವಾದ ಪರಿಸರ, ಪ್ರಕೃತಿ ಕೊಡೊ ಜವಾಬ್ದಾರಿ ನನ್ನದು ! ಪ್ಲೀಸ್ ಕ್ಷಮಿಸಿಬಿಡು !”
ಮಲೆನಾಡ ನೆನಪುಗಳು : ಕುಪ್ಪಳ್ಳಿ ಪ್ರವಾಸ
— ಕಗ್ಗತ್ತಲಲ್ಲಿ ಝಳಪಿಸಿದ ನಿಶ್ಚಲ ಕಣ್ಣುಗಳ ಸರಹದ್ದಿನಲ್ಲಿ
ದ್ವಿತೀಯ ಪ್ರೀ ಯೂನಿವರ್ಸಿಟಿಯ ರಜೆ ದಿನಗಳು. ಅಣ್ಣನಿಗೆ ಇಂಜಿನಿಯರಿಂಗ್ ೬ ನೇ ಸೆಮಿಸ್ಟರಿನ ಬಿಡುವು. ಬಳ್ಳಾರಿಯಲ್ಲಿ ಕಡು ಬೇಸಿಗೆ. ರಜೆಗಳಲ್ಲಿ ಹೆಚ್ಚಾಗಿ ನಾನಾ ಬಗೆಯ ಸಾಹಿತ್ಯ ಓದುವುದೇ ದಿನಚರಿ. ನನಗೆ ಮತ್ತು ಅಣ್ಣನಿಗೆ ಒಂದು ಬಗೆಯ ಅವ್ಯಕ್ತ ಸ್ಪರ್ಧೆ, ಯಾರು ಹೆಚ್ಚು ಕೃತಿಗಳನನ್ನು ಓದಿ ಮುಗಿಸುವೆವು ಎಂದು. ಓದಿದ ನಂತರ, ಕೊಂಚ ಅದರ ವಿಮರ್ಶೆ, ಆ ವಯಸ್ಸಿಗೆ ಹಾಗು ಅಂದಿನ ನಮ್ಮ ಸಾಹಿತ್ಯ ಕೃಷಿಗೆ ತಿಳಿದಷ್ಟು. ನನಗೆ ನೆನಪಿರುವ ಹಾಗೆ ನಾವು ಓದಿದ ಮೊದಲ ಕೃತಿಯೆಂದರೆ ಪೂರ್ಣ ಚಂದ್ರ ತೇಜಸ್ವಿಯವರ “ಕರ್ವಾಲೋ”. ಅಣ್ಣ ಓದಿದ. ಅವನು ಅದರಲ್ಲಿಯ ಪಾತ್ರಗಳು, ಸನ್ನಿವೇಶಗಳು, ವರ್ಣಿಸಿದ ರೀತಿ ನನ್ನನ್ನು ಓದುವಂತೆ ಮಾಡಿತು. ತದನಂತರ ಮನೆಯಲ್ಲಿದ್ದ ತೇಜಸ್ವಿಯವರ ಪ್ರತಿಯೊಂದು ಕೃತಿಯನ್ನು ಯಾವುದೊ ಪರೀಕ್ಷೆ ಕಟ್ಟಿರುವುವರಂತೆ ಹಗಲು ರಾತ್ರಿ ಓದಿ ಮುಗಿಸಿದೆವು. ಕಾಡಿನ ಕಥೆಗಳ ಸರಣಿ, ವಿಸ್ಮಯ ಲೋಕ ಸರಣಿ, ಅಣ್ಣನ ನೆನಪು ಹೀಗೆಯೇ ಎಲ್ಲವು ಮುಗಿದವು. ಊಟಕ್ಕೆ ಕೂತಾಗ ಅವರ ಸಾಹಿತ್ಯಗಳಲ್ಲಿ ಬರುವ ಕಾಡಿನ, ಪ್ರಾಣಿ ಪಕ್ಷಿಗಳ ಚರ್ಚೆ. ಆಗಿನ ದಿಸೆಯಲ್ಲಿ ನಮ್ಮದೇನು ಆರ್ಥಿಕವಾಗಿ ಅಷ್ಟು ಅನುಕೂಲಸ್ಥ ಕುಟುಂಬವಾಗಿರಲಿಲ್ಲ. ಬೆಳ್ಳಾರಿಯಿಂದಾಚೆಗೆ ತಿರುಗಾಡಿಯೊ ಪ್ರವಾಸಕ್ಕೋ ಹೋಗಿ ಅನುಭವವಿರಲಿಲ್ಲ. ಬಿಸಿಲ ಹೊರತಾಗಿ ಬೇರ್ಯಾವ ಋತುವು ನಮಗೆ ಅಷ್ಟಾಗಿ ಸಂಭಂದಿಸಿರಲಿಲ್ಲ. ಬಯಲುಸೀಮೆಯ ಪರಿಸರ ಬಿಟ್ಟರೆ ನಮಗೆ ಮಲೆನಾಡು, ದೂರದರ್ಶನದ ಕೆಲವು ಧಾರಾವಾಹಿಗಳಲ್ಲಿ ನೋಡಿಯಷ್ಟೇ ಪರಿಚಯ. ತೇಜಸ್ವಿಯವರ ಮಲೆನಾಡಿನ ಚಿತ್ರಗಳ ಬಣ್ಣನೆ ಗಾಢವಾಗೇ ಪರಿಣಾಮ ಬೀರಿತು. ಓದಿಯಷ್ಟೇ ತಿಳಿದಿದ್ದ ಚಿತ್ರಣಗಳನ್ನೊಮ್ಮೆ ಸಾದೃಶ್ಯ ನೋಡುವ ಇಂಗಿತವಾಯಿತು. ರಜೆ ಇದ್ದರಿಂದ ನಾವು ಕುಪ್ಪಳ್ಳಿಗೆ ಹೋಗಿ ಬರೋಣ ಎಂದು ಮಾತಾಡಿಕೊಂಡೆವು.
ದಿನ ಪತ್ರಿಕೆಯಲ್ಲಿ ಪ್ರಕಟವಾದ ಯಾವುದೊ ಸಾಹಿತ್ಯ ಶಿಬಿರದ ಮಾಹಿತಿಗೆ ಸ್ಪಂದಿಸಿ ಅಣ್ಣನು ಬರೆದು ಕಳೆಸಿದ ಲೇಖನವು ಆಯ್ಕೆಯಾಗಿ ೫-೬ ದಿನಗಳ ಕಾಲ ಕುಪ್ಪಳ್ಳಿಯ ಶಿಬಿರಕ್ಕೆ ಹೋಗಿ ಬಂದಿದ್ದ. ಪಾಕೆಟ್ ಮನಿ ಎಂಬ ಸಂಸ್ಕಾರಕ್ಕೂ ನಾವು ಬೆಳೆದ ವಾತಾವರಣಕ್ಕೂ ಯಾವುದೇ ಬಾದರಾಯಣ ಸಂಭಂದವೂ ಇರಲಿಲ್ಲ. ಹಿರಿಯರ ಜೊತೆಗೂಡಿಯಲ್ಲದೆ ಒಂಟಿಯಾಗಿ ಎಲ್ಲಿಗೂ ಹೋಗಿ ತಿಳಿದಿರಲೂ ಇಲ್ಲ. ಅಂತರ್ಜಾಲ ಆಗಿನ್ನೂ ಬಾಲ್ಯಾವಸ್ಥೆಯಲ್ಲಿತ್ತಷ್ಟೆ. ಈಗಿನ ಪ್ರಮಾಣದಲ್ಲಿ ಬೆಳೆದಿರಲಿಲ್ಲ. ವಿಚಾರ ಒಂದರ ಮಾಹಿತಿ ಪಡೆಯಲು ಬಹಳಷ್ಟು ಜನಗಳ ಸಂಪರ್ಕಿಸಬೇಕಾಗುತಿತ್ತು. ಹಾಗೆ ದೊರೆತಂತ ಮಾಹಿತಿಯ ಸತ್ಯ ಅಸತ್ಯತೆಯ ಪರೀಶೀಲನೆಗೂ ಯಾವುದೇ ಮಾದ್ಯಮವಿರಲಿಲ್ಲ. ಮಾಹಿತಿಯ ಪಕ್ವತೆ ಹೆಚ್ಚಾಗಿ ಅದನ್ನು ನೀಡಿದ ವ್ಯಕ್ತಿಯನುಗುಣ ನಿರ್ಧಾರವಾಗುತ್ತಿತ್ತು. ಸೀಮೆಯ ಜನ ಕುಪ್ಪಳ್ಳಿ ಕಡೆ ಹೋಗುವುದು ವಿರಳ. ಪುಸ್ತಕದಲ್ಲಿ ಓದಿ ಕುಪ್ಪಳ್ಳಿ ಎಲ್ಲಿದೆಯೆಂಬುದು ಖಚಿತವಾಗಿಯೇ ತಿಳಿದಿತ್ತು, ಆದರೆ ಹೋಗುವ ಮಾರ್ಗದ ಕುರಿತಾಗಿ ಕೆಲವು ಗೊಂದಲಗಳಿದ್ದವು. ಇಷ್ಟಾಗಿಯೂ ಕುಪ್ಪಳ್ಳಿ ಹೋಗುವ ಉತ್ಕಟವಾದ ಛಲ. ದುರ್ಗಕ್ಕೆ ಹೋಗಿ, ಅಲ್ಲಿಂದ ಶಿವಮೊಗ್ಗೆಗೆ ಹೋಗಿ, ತರುವಾಯ ಕುಪ್ಪಳ್ಳಿ ಸೇರಿಕೊಳ್ಳುವುದೆಂದು ನಿರ್ಧರಿಸಿದೆವು. ಹಣ ಕಾಸಿನ ವ್ಯವಸ್ಥೆ ಮತ್ತು ಅಪ್ಪ ಅಮ್ಮನನ್ನು ಒಪ್ಪಿಸುವ ಎಲ್ಲ ಕಾರ್ಯಗಳು ಅಣ್ಣನೇ ನಿಭಾಯಿಸಿದ. ನನಗೆ ಮೊದಲನೆ ಬಾರಿಗೆ ರಜೆಗೆಂದು ಸಂಬಂಧಿಕರ ಮನೆಗಳಲ್ಲದೆ ಎಲ್ಲಿಯೋ ತೆರೆಳುತ್ತಿರುವ ಆ ಯೋಚನೆಯೇ ಒಂದು ರೋಮಾಂಚನ. ದಿನವೊಂದು ನಿಗದಿ ಪಡಿಸಿ ಸಂಚಾರ ಸೌಲಭ್ಯಗಳೆಲ್ಲ ತಿಳಿದುಕೊಂಡು ಹೊರಡಲು ಸಜ್ಜಾದೆವು.
ಬೆಳಗಿನ ಜಾವ ೪-೫ ಗಂಟೆ ಸುಮಾರಿಗೆ ಬಳ್ಳಾರಿಯಿಂದ ದುರ್ಗದ ಬಸ್ಸೊಂದನ್ನು ಏರಿದೆವು. ಕುಪ್ಪಳ್ಳಿಗೆ ಎಷ್ಟು ಹೊತ್ತಿಗೆ ಸೇರುವೆವು ? ಅಲ್ಲಿ ಹೋಗಿ ಮಾಡುವುದೇನು ? ಯಾವುದರ ಪರಿವೆಯೂ ಇರಲಿಲ್ಲ ನನಗೆ. ಕುಪ್ಪಳ್ಳಿಗೆ ಹೋಗಬೇಕು, ಪುಸ್ತಕದಲ್ಲಿ ಓದಿ ನನ್ನ ಕಲ್ಪನೆಯಲ್ಲಿ ಚಿತ್ರಿಸಿಕೊಂಡಂತಹ ವರ್ಣಮಯ ಚಿತ್ರಗಳನ್ನು ಗೋಚರಿಸಿಕೊಳ್ಳಬೇಕು. ಕಲ್ಪನೆಯ ಸೌಂದರ್ಯದ ಪ್ರಮಾಣಕ್ಕೂ, ನೈಜತೆಗೂ ಇರುವ ಭಿನ್ನತೆ ಅಳೆಯಬೇಕು, ತಲೆಯಲ್ಲಿ ಓಡುತಿದ್ದ ನನ್ನದೆಯಾದ ವಿಚಾರ ಲಹರಿಯಲ್ಲಿ ಮಗ್ನನಾಗಿದ್ದೆ. ಶಿವಮೊಗ್ಗೆ ಬಸ್ ಸ್ಟ್ಯಾಂಡಿಗೆ ಬಂದು ಇಳಿದಾಗ ೧೧ ಗಂಟೆಯ ಆಸು ಪಾಸು. ಮನೆಯಿಂದ ಅಮ್ಮ ಕಟ್ಟಿಕೊಟ್ಟಿದ್ದ ತಿಂಡಿಯನ್ನು ಎಲ್ಲಿ ಮಾಡುವುದೆಂದು ಚರ್ಚಿಸುವ ವೇಳೆಗೆ ತೀರ್ಥಹಳ್ಳಿಯ ಬಸ್ಸೊಂದು ಹೊರಟು ನಿಂತಿತು. ಕುಪ್ಪಳ್ಳಿಗೆ ಹೋಗಿ ಅಲ್ಲಿಯೇ ಮಾಡೋಣವೆಂದು ನಿರ್ಧರಿಸಿದೆವು.
ಬಸ್ಸು ಹೊರಟ ಕೆಲವು ನಿಮಿಷಗಳಲ್ಲೇ ರಸ್ತೆಯ ಇಕ್ಕೆಲಗಳು ಹಸಿರಿನ ಹಾಸಿನಿಂದ ಸಿಂಗಾರಗೊಂಡಿದ್ದವು. ಈ ಪ್ರಮಾಣದಲ್ಲಿ ಹಸಿರನ್ನ ನಾನು ಅಂದಿನವರೆಗೂ ನೋಡಿರಲಿಲ್ಲ. ಮಾರ್ಗ ಸಾಗಿದಂತೆಲ್ಲ ಹಸುರಿನ ಸ್ವರೂಪ ಇನ್ನಷ್ಟು ದಟ್ಟವಾಗುತಿತ್ತು. ಏನೋ ಒಂದು ಪುಳಕ. ರೆಪ್ಪೆಯಾಡಿಸದೆ ಬೇಧಿಸಲಾಗುವಷ್ಟು ದೂರಕ್ಕೆ ನೆರೆದಿರುವ ಎಲ್ಲ ಮರಗಳನ್ನು ನೋಡಿ ಕಣ್ತುಂಬಿಕೊಳ್ಳುವ ಪ್ರಯತ್ನದಲ್ಲಿ ನಿರತ. “ಹಾರುವ ಓತಿಕೇತ ಇದೆ ಕಾಡಿನಲ್ಲಿ ಇದ್ದಿತಾ. ಈಗಲೂ ಇದರಲ್ಲಿ ಹೊಕ್ಕು ಅನ್ವೇಷಿಸಿದರೆ ನಮಗೂ ಕಾಣಿಸಬಹುದಾ” ಹೀಗೆಯೇ ತೇಜಸ್ವಿಯವರ ಪ್ರತೀ ಕಾದಂಬರಿಯ ನೆಚ್ಚಿನ ಸನ್ನಿವೇಶಗಳಲ್ಲಿ ನನಗೊಂದು ಪಾತ್ರ ಕೊಟ್ಟುಕೊಂಡು ಆ ಸುತ್ತನೆಯ ಕಾಡಿನಲ್ಲಿ ನನ್ನ ಆ ಪಾತ್ರವನ್ನು ಚಿತ್ರೀಕರಿಸುವ ಹುಚ್ಚು ವಿಚಾರದಲ್ಲೇ ತೀರ್ಥಹಳ್ಳಿಯ ಮಾರ್ಗ ಕಳೆದೆ. ತೀರ್ಥಹಳ್ಳಿಯಿಂದ ಕುಪ್ಪಳ್ಳಿಗೆ ಮತ್ತೊಂದು ಬುಸ್ಸನು ಏರಿ ಹೊರಟಾಗ ನನ್ನನು ಅತಿಯಾಗಿ ಆಕರ್ಷಿಸಿದ್ದು ಬಿದಿರಿನ ಮೆಳೆಗಳು. ಬೀಸುವ ಗಾಳಿಗೆ ಆ ಮೆಳೆಗಳು ಹೊರಡಿಸುವ ವಿಚಿತ್ರ ನಾದ. ಮಂಡಗದ್ದೆಯ ಸುತ್ತುವರಿಸಿ ಸಾಗುವಾಗ ಅಲ್ಲಿ ಕಾಣಿಸಿಗಬಹುದಾದ ಪಕ್ಷಿಗಳ ಕಲ್ಪನೆ. ಹಿಂತಿರುಗಿ ಹೊರಡುವಾಗ ಅಲ್ಲಿಗೊಂದು ಭೇಟಿ ನೀಡಬೇಕೆನ್ನುವ ಕಿರಿದಾದ ಚರ್ಚೆ ನಮ್ಮಲ್ಲೆ. ಹೆಜ್ಜೆ ಮೂಡದ ಹಾದಿಯ ಕೆಲವು ಅಂಕಣಗಳು ಸ್ಮ್ರಿತಿಯ ಪಟಲದಲ್ಲಿ ಹಾಗೆಯೇ ತಿರುವಿ ಹೋದವು.
“ಇಲ್ಲೇ ಇಳ್ಕೊಳ್ಳಿ. ೨ ಕಿಲೋಮೀಟರು ಒಳಗೆ ನಡ್ಕೊಂಡ್ ಹೋಗಿ” ಎಂದು ಹೇಳಿ ನಮ್ಮನ್ನು ಕುಪ್ಪಳ್ಳಿ ಕ್ರಾಸಿನಲ್ಲಿ ಇಳಿಸಿದ ಕಂಡಕ್ಟರ್ ಮಹಾಶಯ. ರಸ್ತೆಯ ಮಧ್ಯಕ್ಕೆ ಇರುವ ಬೃಹದಾಕಾರದ ಮರ. “ಕವಿ ಮನೆಗೆ ದಾರಿ” ದಿಕ್ಸೂಚಿ ಫಲಕವೊಂದು ಮರಕ್ಕೆ ನೇತು ಹಾಕಿತ್ತು. ಫೋಟೋ ತೆಗೆದುಕೊಳ್ಳಲು ಸ್ಮಾರ್ಟ್ ಫೋನ್ ಬಂದಿರದ ಕಾಲವದು. ಕ್ಯಾಮೆರಾ ಒಂದು ಅನುಕೂಲಸ್ತರ ಸಾಧನ. ಇಂದಿನ ಹಾಗೆ ಇಳಿದೊಡನೆ ೧೦ ಫೋಟೋ, ನಡೆಯುತ್ತಾ ೧೦ ಹೀಗೆ ತೆಗೆದುಕೊಳ್ಳುವ ಪ್ರಮೇಯವಿರಲಿಲ್ಲ. ಗಂಟೆ ಸುಮಾರು ೧. ಬಿಸಿಲು ಕೊಂಚ ಏರಿತ್ತು. ಫಲಕ ಸೂಚಿಸಿದ ಮಾರ್ಗದಲ್ಲಿ ಮೆಲ್ಲನೆ ನಡೆದು ಹೊರಟೆವು. ಯಾವುದೇ ಬಾಹ್ಯ ಮಜಲುಗಳಿರದ ಸುಂದರ ಮೌನ. ಪರಿಸರದೊಟ್ಟಿಗೆ ಮನಸೋ ಇಚ್ಛೆ ಸಂವೇದಿಸಲೆಂದೇ ಸೃಷ್ಟಿಸಿದ ತಾಣವೆನ್ನಿಸಿತು ನನಗೆ. ಕೊಂಚ ದೂರ ಸಾಗಿದಾಗ ದೂರದಲ್ಲೊಂದು ಮನೆ ಕಂಡಿತು. ಕುಪ್ಪಳ್ಳಿಯಲ್ಲಿ ಇರುವುದು ಮೂರೇ ಮನೆಗಳು. ೩ ಮನೆಗಳ ಊರು ಇದ್ದೀತು ಎಂದು ಕಲ್ಪಿಸುವುದೇ ಉದ್ಗಾರ ನನಗೆ. ನಾವು ಸಾಗಿದಂತೆ ನಮ್ಮ ಇಕ್ಕೆಲಗಳಲ್ಲೂ ಆಗುವ ತೃಣ ಮಾತ್ರ ಸಂಚಾರವನ್ನು ಆಲಿಸಿ ಸ್ಪಂದಿಸಿ ಅದರ ಕುರಿತಾಗಿ ಚರ್ಚಿಸಿದೆವು. ದಾರಿ ಕವಲಾಯಿತು. ಅಣ್ಣನಿಗೆ ಅದರ ಪರಿಚಯವಿತ್ತು. “ಹೀಗೆ ಹೋದರೆ ಕವಿ ಮನೆ ಬರುತ್ತೆ. ಮೊದ್ಲು ಕವಿ ಮನೆ ನೋಡ್ಕೊಂಡ್ ಊಟ ಮಾಡ್ಕೊಂಡ್ ಆಮೇಲೆ ಹೇಮಾಂಗಣಕ್ಕೆ ಬರೋಣ” ಎಂದ. ವಸ್ತು ಸ್ಥಿತಿ ತಿಳಿದಿದ್ದರೆ ಇಲ್ಲವೇ ಅದರ ಮಾಹಿತಿ ಇದ್ದರೆ ಅಭಿಪ್ರಾಯ ಸಹಜ. ಅವೆರಡು ಇರದೇ ನಾನು “ಹ್ಞೂ” ಎಂದು ಸಮ್ಮತಿಸಿದೆ.
ಎಂತ ಚಂದ ಕವಿ ಮನೆ. ಅದರ ಬಾಹ್ಯ ಸೌಂದರ್ಯವಷ್ಟೇ ಅಲ್ಲದೆ ಅದರೊಳಗೆ ಸಂಗ್ರಹಿಸಿ ಇಟ್ಟಿರುವ ವಸ್ತುಗಳು ಎಷ್ಟು ಅದ್ಬುತ. ಪ್ರತಿ ವಸ್ತುವೂ “ಅಣ್ಣನ ನೆನಪು” ಪುಸ್ತಕದ ಅಂಕಣಗಳ ನೆನಪುಗಳನ್ನು ಅನಾವರಣ ಗೊಳಿಸುತ್ತಿತ್ತು. ಕುವೆಂಪುರವರ ವಿಶ್ವ ಮಾನವ ಸಂದೇಶ ಉಚ್ಚರಿಸಿದಾಗಲೊಮ್ಮೆ ಆಗುವ ಸಂಚಲನ, ಕವಿ ಮನೆಯಲ್ಲಿ ಆ ಸಾಲುಗಳನ್ನು ಬರೆದು ಹಾಕಿದ ಫಲಕವನ್ನು ನೋಡಿದಾಗ ಇಮ್ಮಡಿಗೊಂಡಿತು. ಕುವೆಂಪುರವರ ಸಾಹಿತ್ಯ ಕುರಿತಾಗಿ ಇಂದಿಗೂ ನನಗೆ ಕಾಡುವ ಜಿಜ್ಞಾಸೆಯೊಂದಿದೆ. ಕವಿ ಮನೆಯ ಪ್ರಾಂಗಣದಲ್ಲಿ ಅವರ “ಮನೆ ಮನೆ ಮುದ್ದು ಮನೆ” ಕವಿತೆಯನ್ನು ಹೊತ್ತಿರುವ ಕಲ್ಲೊಂದನ್ನು ನಿಲ್ಲಿಸಲಾಗಿದೆ. ಮನೆಯೊಳಗೇ ಕುವೆಂಪುರವರ ವಿಶ್ವ ಮಾನವ ಸಂದೇಶದ ಸಾಲುಗಳು “ಓ ನನ್ನ ಚೇತನ ಆಗು ನೀ ಅನಿಕೇತನ”. ಕವಿತೆಯಲ್ಲಿ ಬರುವ ಸಾಲೊಂದು “ಎಲ್ಲಿಯೂ ನೀನು ನಿಲ್ಲದಿರು, ಮನೆಯನೆಂದು ಕಟ್ಟದಿರು, ಓ ಅನಂತವಾಗಿರು” ಎಂದು. ತಮ್ಮ ಮನೆಯನ್ನು ಅಷ್ಟು ಉತ್ಕಟವಾಗಿ ಪ್ರೀತಿಸಿ, ಬಣ್ಣಿಸಿದ ಕುವೆಂಪುರವರು ತಮ್ಮ ಚೇತನಕ್ಕೆ, ಮನೆಯನೆಂದು ಕಟ್ಟದಿರು ಎಂದು ಹೇಳುವ ಪರಿಯೇ ಒಂದು ಸೊಜುಗ. ಇದನ್ನು ತಕ್ಕ ಮಟ್ಟಿಗೆ ಸಾಹಿತ್ಯ ಓದಿ ಅರ್ಥಯಿಸಿಕೊಳ್ಳದಿದ್ದರೆ ಅದರ ದ್ವಂದ್ವ ಭಾಸವೇ ಎದ್ದು ಕಾಣುತ್ತದೆ. ಕವಿ ಮನೆಯ ನಮ್ಮ ಪರ್ಯಟನೆ ಮುಗಿಸಿ ಕವಿಶೈಲದ ದಾರಿ ಹಿಡಿದೆವು. ೧.೩೦ ಗಂಟೆ. ನಮ್ಮಲ್ಲಿ ಕಿರಿದಾದ ಪ್ರಶ್ನೆಯೊಂದು ಉದ್ಭವಿಸಲು ಶುರುವಿಟ್ಟಿತು. “ಮುಂದೆ ಏನು ?” ಕುಪ್ಪಳ್ಳಿಗೆಂದು ಬಂದಿದ್ದಾಯಿತು, ಇಲ್ಲಿ ನೋಡುವುದು ಕೆಲ ಹೊತ್ತಿನಲ್ಲೇ ಮುಗಿಯುವುದು. ಮುಂದೆ ಎಲ್ಲಿಗೆ ? ಇಲ್ಲಿಯೇ ಇರೋಣವೆಂದರೆ ಮನೆಗಳೇ ಹೆಚ್ಚಾಗಿ ಇರದ ಹಳ್ಳಿಯದು. ಇಲ್ಲಿ ವಾಸವಾದರೂ ಎಲ್ಲಿ ? ಬೆಳಗಿನಿಂದ ಏನು ತಿಂದಿರದೆ ಅಲೆದಾಡಿದ್ದ ಕಾರಣ ಹೊಟ್ಟೆಯೂ ಹಸಿಯ ತೊಡಗಿತ್ತು. ಮೊದಲು ಕವಿ ಶೈಲದಲ್ಲಿ ಊಟ ಮುಗಿಸೋಣ, ಆಮೇಲೆ ಮುಂದಿನದು ಯೋಚಿಸೋಣವೆಂದು ನಿರ್ಧರಿಸಿದೆವು.
ಮನೆಯಿಂದ ಕಟ್ಟಿ ತಂದಿದ್ದ ಊಟ ಮುಗಿಸಿ ಕವಿಶೈಲಕ್ಕೆ ಬಂದೆವು. ಕವಿಶೈಲದಲ್ಲಿಯ ಹಲವು ಆಕರ್ಷಣೆಗಳಲ್ಲಿ ಮುಖ್ಯವಾದದ್ದು ಹಲವು ಸಾಹಿತಿಗಳು ತಮ್ಮ ಹೆಸರುಗಳನ್ನೂ ಬರೆದಿರುವ ಬಂಡೆಯೊಂದು. ಕವಿ ಶೈಲದ ಹಲವೆಡೆಗಳಲ್ಲಿ ಲಂಬಾಕಾರದ ಕಲ್ಲುಗಳನ್ನು ಕೆಲವೆಡೆ ಕಮಾನಿನ ರೂಪದಲ್ಲಿ, ಇನ್ನು ಕೆಲವಡೆ ಹಾಗೆಯೇ ಉದ್ದನೆಯಾಗಿ ಜೋಡಿಸಿದ್ದಾರೆ. ಕವಿಶೈಲದ ಹಿಂಬದಿಯಿಂದ ಮಾರ್ಗವೊಂದು ಸಂಜೆಗಿರಿ ಎಂಬ ಕಿರು ಪರ್ವತಕ್ಕೆ ಹೋಗುವುದಾಗಿಯೂ, ತಾನು ಅಲ್ಲಿ ಶಿಬಿರಕ್ಕೆಂದು ಬಂದಾಗ ಕವಿ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಗುಂಡಣ್ಣ ಎನ್ನುವರೊಬ್ಬರು, ಆ ಪರ್ವತದ ತಪ್ಪಲಿನ ಕಾಡಿನಿಂದ ಹಲಸಿನ ಹಣ್ಣು ಕಿತ್ತು ತರುತ್ತಿದ್ದರೆಂದು ಅಣ್ಣನು ಹೇಳಿದನು. ನಾವು ಏಕೆ ಕೊಂಚ ದೂರ ಕಾಡಿನೊಳಗೆ ಹೋಗಿ ಬರಬಾರದೆಂದು ಆಲೋಚಿಸಿ ಕಿರು ಹಾದಿಯೊಂದನ್ನು ಹಿಡಿದು ಸಾಗಿದೆವು. ಸಾಗಿದ ೪-೫ ನಿಮಿಷಗೊಳೊಳಗೆ ಆ ಕಿರು ಹಾದಿಯು ನಿರ್ಗಮಿಸಿ ಬರಿಯ ಪೊದೆಗಳೇ ಆವರಿಸಿದವು. ನಮ್ಮಲ್ಲಿಯ ಆ ಹುಮ್ಮಸ್ಸು ಪೊದೆಗಳ ಜಿಗ್ಗಿಗಿಂತಲೂ ಕೊಂಚ ಗಟ್ಟಿಯಾಗಿತ್ತು. ಪೊದೆಗಳನ್ನು ಲೆಕ್ಕಿಸದೆ ನುಸುಳಿ ಹೊರಳಿ ಸ್ವಲ್ಪ ದೂರ ಸಾಗಿದೆವು. ಹೀಗೆಯೇ ೫-೬ ನಿಮಿಷಗಳ ಪೊದೆಗಳೊಂದಿಗಿನ ಗುದ್ದಾಟ ನಮ್ಮ ಹುಮ್ಮಸ್ಸಿನ ಪೆಟ್ಟಿಗೆಯನ್ನು ಬರಿದಾಗಿಸಿತು. ಇಬ್ಬರೂ ಒಂದೆರಡು ಮುಳ್ಳುಗಳನ್ನು ತೆರಚಿಸಿಕೊಂಡಿದ್ದೆವು. ಇನ್ನು ಮುಂದೆ ಹೋದರೆ ಹಲಸಿನ ಹಣ್ಣು ಸಿಕ್ಕರೂ ತಿನ್ನಲು ತ್ರಾಣವೇ ಇರುವುದಿಲ್ಲವೆಂದು ಅರಿತು ಹಿಂತಿರುಗಿದೆವು. ಕವಿ ಶೈಲದ ಒಂದು ಮೂಲೆಯಲ್ಲಿ ಸೆಕ್ಯೂರಿಟಿ ಪೋಸ್ಟ್ ಇದ್ದದ್ದು ಗಮನಿಸಿದ್ದೆವು. ಅವರ ಬಳಿ ಹೋಗಿ ಸಂಜೆಗಿರಿ ಪರ್ವತದ ಬಗ್ಗೆ ಕೇಳೋಣ, ಹೀಗೆ ಪೊದೆಗಳಲ್ಲಿ ನುಸುಳಾಡಿ ಬಟ್ಟೆ ಹರೆದುಕೊಳ್ಳುವುದರಲ್ಲಿ ಏನು ಸಾಧನೆಯಿಲ್ಲ ಎಂದು ನಿಶ್ಚಯಿಸಿ ಸೆಕ್ಯೂರಿಟಿ ಪೋಸ್ಟಿನ ಕಡೆ ಬಂದೆವು.
“ಇಲ್ಲಿ ಸಂಜೆಗಿರಿ ಗುಡ್ಡ ಇದೆಯಂತಲ್ಲ. ಹೋಗಿ ಬರುವುದಕ್ಕಾಗುವುದಾ ?” ಎನ್ನುವುದಾಗಿ ಗಾರ್ಡಿಗೆ ಕೇಳಿದೆವು. ಕವಿ ಶೈಲದ ಹಿಂಬಾಗದಲ್ಲಿರುವುದೆಲ್ಲವು ಕಾಡು. ಸ್ವಲ್ಪ ದಟ್ಟವಾಗಿಯೇ ಇದೆ. ಕಾಡಿನಲ್ಲಿ ಗಂಧದ ಮರಗಳು ಹೇರಳವಾಗಿಯೇ ಇವೆ. ಇತ್ತೀಚಿಗೆ ಗಂಧ ಕದಿಯುವವರ ಉಪಟಳ ಹೆಚ್ಚಿದೆ. ಅದನ್ನು ನಿಯಂತ್ರಿಸಲು ಸರ್ಕಾರ ಒಂದೆರಡು ಹುಲಿ ಚಿರತೆ ತಂದು ಕಾಡಿನಲ್ಲಿ ಬಿಟ್ಟಿದ್ದಾರೆ. ಅವುಗಳ ಹೆದರಿಕೆಗೆ ಕಾಡಿಗೆ ಹೋಗದಿರಲಿ ಎಂದು. ಹೀಗೆಯೇ ಗಾರ್ಡ್ ಮಹಾಶಯ ತನಗೆ ತಿಳಿದದ್ದು, ಅನಿಸಿದ್ದು ಎಲ್ಲವು ಸೇರಿಸಿ ಹೇಳಿರಬಹುದು. ಆದರೆ ಅವನ ಆ ವಿವರಣೆ, ಒಂದು ಕ್ಷಣ ನಮ್ಮ ಜಂಗಾ ಭಲಾ ಉಡುಗಿಸಿತು. ಹಾಗಿದ್ದರೆ ನಾವು ಈಗಷ್ಟೇ ನುಸುಳಾಡಿ ಹೊರಳಾಡಿ ಬಂದ ಕಾಡಿನಲ್ಲಿ ಚಿರತೆ ಹುಲಿಯಿದ್ದಿತೇ. ನಮ್ಮ ಸರ್ಕಸ್ ನಡೆಯುತ್ತಿರುವಾಗ ಏನಾದರು ಬಂದಿದ್ದರೆ ಏನು ಮಾಡುವುದಿತ್ತು ಎಂದು ನಾವು ಸ್ವಲ್ಪ ಉತ್ಪ್ರೇಕ್ಷೆಯಿಂದಲೇ ಯೋಚಿಸಿದೆವು. ಈಗಾಗಲೇ ೩ ಗಂಟೆ. ಉಳಿಯುವ ವ್ಯವಸ್ಥೆಯ ಕುರಿತಾಗಿ ಗಾರ್ಡಿನ ಬಳಿ ಕೇಳಿದಾಗ ಅವನು ಹೇಮಾಂಗಣಕ್ಕೆ ಹೋಗಿ ವಿಚಾರಿಸುವಂತೆ ಸಲಹೆ ನೀಡಿದನು. ನಾವು ತಡ ಮಾಡದೆ ಹೇಮಾಂಗಣಕ್ಕೆ ಓಡಿದೆವು.
ಕೊಂಚ ಹೊತ್ತು ಹೇಮಾಂಗಣದ ಸುತ್ತ ಓಡಾಡಿ, ಅಲ್ಲಿ ಇರುವ ಕಛೇರಿಯಲ್ಲಿ ನಮ್ಮ ಪರಿಚಯೋಕ್ತಿಗಳನ್ನು ತಿಳಿಸಿ ವಾಸ್ತವ್ಯಕ್ಕೆ ಏನಾದರು ವ್ಯವಸ್ಥೆ ಇದೆಯೇ ಎಂದು ವಿಚಾರಿಸಿದೆವು. ಅಂದಿಗೆ ಅಲ್ಲಿ ಶಿವಾರೆಡ್ಡಿ ಎನ್ನುವ ವ್ಯವಸ್ಥಾಪಕರಿದ್ದರು. ಫೋಟೋಗ್ರಫಿ ಅವರ ಹವ್ಯಾಸ. ಅವರು ತೆಗೆದಿದ್ದ ಹಲವು ಚಿತ್ರಗಳು ಕುವೆಂಪು ಮತ್ತು ತೇಜಸ್ವಿಯವರ ಕಾದಂಬರಿಗಳ ಮರು ಮುದ್ರಣದ ಕವರ್ ಶೀಟಿನಲ್ಲಿ ಬಿತ್ತಿಯಾಗಿದ್ದವು. ಅವರಿಗೆ ನಮ್ಮ ವಯಸ್ಸಿನವರು ಆಸಕ್ತಿಯಿಂದ ದೂರದ ಬಳ್ಳಾರಿಯಿಂದ ಬಂದಿರುವುದು ನೋಡಿ ಖುಷಿಯಾದಂತೆ ತೋರಿತು. ಸಮಾನ್ಯವಾಗಿ ಶಿಬಿರಕ್ಕೆಂದೋ ಇಲ್ಲವೇ ಮತ್ತ್ಯಾವುದೋ ಕಾರ್ಯಾಗಾರಕ್ಕೆಂದೋ ಅಲ್ಲಿ ಹುಡುಗರು ಸೇರುವರು. ತೇಜಸ್ವಿಯವರನ್ನು, ಕುವೆಂಪುರವರನ್ನು ಓದಿಕೊಂಡೆ ಹಂಬಲದಿಂದ ಬಂದವರು ವಿರಳವೆಂದು ಹೇಳಿ ನಮ್ಮ ಸಾಹಿತ್ಯಾಸಕ್ತಿ ಬಗ್ಗೆ ಇನ್ನಷ್ಟು ವಿಚಾರಿಸಿ, ಸಾಹಿತ್ಯ ಕುರಿತಾಗಿ, ಅಲ್ಲಿನ ಪ್ರಾಣಿ ಪಕ್ಷಿ ಸಂಕುಲ ಕುರಿತಾಗಿ ಕೇಳಿದ ಹಲವಾರು ಪ್ರಶ್ನೆಗಳಿಗೆ ಅವರು ಉತ್ತರಿಸಿದರು. ಹೀಗೆಯೇ ಕೆಲ ಹೊತ್ತು ಚರ್ಚಿಸಿ ನಮಗೆ ಉಳಿದುಕೊಳ್ಳಲು ಏನಾದರು ವ್ಯವಸ್ಥೆಯಿದೆಯೇ ಎಂದು ವಿಚಾರಿಸಿದೆವು. ಹೇಮಾಂಗಣದಲ್ಲಿ ಕೆಲವು ಕೊಠಡಿಗಳಿವೆ, ಒಂದು ದಿನಕ್ಕೆ ೩೦೦ ರೂಪಾಯಿಗಳಾಗುತ್ತದೆ ಎಂದು ತಿಳಿಸಿದರು. ನಾವು ಎಷ್ಟು ಹಣ ತೆಗೆದುಕೊಂಡು ಹೋಗಿದ್ದೆವೆಂದು ಸರಿಯಾಗಿ ನೆನಪಿಲ್ಲ, ಆದರೆ ೩೦೦ ರೂಪಾಯಿ ಒಂದೇ ರಾತ್ರಿಗೆ ವ್ಯಯಿಸಲು ಖಂಡಿತವಾಗಿಯೂ ನಮ್ಮಿಂದ ಸಾದ್ಯವಿರಲಿಲ್ಲ. ನಾನು, ಅಣ್ಣ ಲೆಕ್ಕ ಹಾಕಿ ನೋಡಿದಾಗ, ನಾವೇನಾದರೂ ಅಷ್ಟು ಹಣ ನೀಡಿ ಅಲ್ಲಿ ಉಳಿದರೆ, ನಮಗೆ ಹಿಂತಿರುಗಿ ಬರಲೂ ಹಣ ಸರಿಹೊಂದುತ್ತಿರಲಿಲ್ಲ. ಸುತ್ತ ಮುತ್ತಲ ಯಾವುದಾದರು ಊರಿನಲ್ಲಿ ವ್ಯವಸ್ಥೆಗಳಿವೆಯೇ ವಿಚಾರಿಸಿದೆವು. ಅಣ್ಣನಿಗೆ ದೇವಂಗಿ ಎಂದು ಕೇಳಿ ನೆನಪಿತ್ತು, ಅಲ್ಲಿ ಏನಾದರು ವ್ಯವಸ್ಥೆ ಆಗಬಹುದೇ ವಿಚಾರಿಸಿದೆವು. ಸುತ್ತ ಮುತ್ತಲ ಯಾವುದೇ ಹಳ್ಳಿಯಲ್ಲೂ ಅಂದಿಗೆ ವಾಸದ ವ್ಯವಸ್ಥೆ ಇರಲಿಲ್ಲ. ನೀವು ಶೃಂಗೇರಿಗೆ ಹೋದರೆ ದೇವಸ್ಥಾನದ ಲಾಡ್ಜಿನಲ್ಲಿ ಕಡಿಮೆ ದರದಲ್ಲಿ ಉಳಿದುಕೊಳ್ಳ ಬಹುದೆಂದು ಸಲಹೆ ನೀಡಿದರು. ಆಗಲೇ ೪.೩೦. ಇನ್ನೊಂದು ಘಂಟೆ ಕಳೆದರೆ ಸೂರ್ಯಾಸ್ತಮಾನ. ಪರಿಚಯವಿರದ ಊರು. ಬಹುತೇಕ ಕಾಡು. ಇಬ್ಬರಿಗೂ ಈಗ ವಾಸದ ವ್ಯವಸ್ಥೆಯ ಯೋಚನೆ ಕಾಡತೊಡಗಿತು. ಶೃಂಗೇರಿ ಹೋಗಬೇಕೆಂದರೆ ಬಸ್ಸುಗಳ ಸಿಗುವವೋ ಇಲ್ಲವೋ, ಎಷ್ಟು ಘಂಟೆಗಳ ಪ್ರಯಾಣವೋ, ಹೀಗೆಯೇ ನಾವು ಚರ್ಚಿಸುವುದನ್ನು ಶಿವಾರೆಡ್ಡಿಯವರು ಗಮನಿಸುತ್ತಿದ್ದರು. ನಮ್ಮ ಮೇಲೆ ಕನಿಕರ ಉಂಟಾಗಿರಬೇಕು ಅವರಿಗೆ. ಹೇಮಾಂಗಣದ ಕೆಲಸಗಾರರೊಬ್ಬರನ್ನು ಕರೆದು, “ಇವತ್ತು ಸಂಜೆ ಆ ಫಸ್ಟ್ ರೂಮಿನಲ್ಲಿ ಉಳಿದುಕೊಂಡಿದ್ದ ಮೇಡಂ ಚೆಕ್ ಔಟ್ ಮಾಡ್ತಿದ್ದಾರಲ್ಲ. ಅಲ್ಲಿ ಈ ಹುಡುಗ್ರು ಇರ್ಲಿ ಇವತ್ತು ರಾತ್ರಿ. ಬಳ್ಳಾರಿಯಿಂದ ಬಂದ್ದಿದ್ದಾರೆ ಪಾಪ. ಇಲ್ಲೇನು ಗೊತ್ತಿಲ್ಲ ಇವ್ರಿಗೆ” ಎಂದು ಹೇಳಿದರು. ಅದನ್ನು ಕೇಳಿ ನಮಗೆ ಎಲ್ಲಿಲ್ಲದ ಖುಷಿ. ಶಿವಾರೆಡ್ಡಿ ಅವರಿಗೆ ಬಹಳಷ್ಟು ಧನ್ಯವಾದ ತಿಳಿಸಿ ಅಂಗಳದಲ್ಲೇ ಕೊಂಚ ಹೊತ್ತು ಕಾದು ರೂಮ್ ಸಿಕ್ಕೊಡನೆ ಬ್ಯಾಗ್ ಇರಿಸಿ ಸನ್ ಸೆಟ್ ನೋಡಲೆಂದು ಮತ್ತೆ ಕವಿ ಶೈಲಕ್ಕೆ ತೆರಳಿದೆವು.
“ಶಿವಮಂದಿರ ಸಮ ವನಸುಂದರ ಸುಮ ಶೃಂಗಾರದ ಗಿರಿಶೃಂಗಕೆ ಬಾ!
ಬಾ ಫಾಲ್ಗುಣ ರವಿ ದರ್ಶನಕೆ!”
ಎಂತಹ ಅದ್ಭುತ ಕುವೆಂಪುರವರ ಈ ಸಾಲುಗಳು. ಇದು ಸೂರ್ಯೋದಯವನ್ನು ವರ್ಣಿಸಿದರೂ ಅದರ ಅಂತರಾಳವನ್ನು ಸೂರ್ಯಾಸ್ತಮಾನಕ್ಕೂ ಮೇಳೈಸಿ ಆನಂದಿಸಬಹುದು. ಕವಿ ಶೈಲದಲ್ಲಿ ಕುಳಿತು ಆ ಸಾಲುಗಳನ್ನು ಗುನುಗುತ್ತ ಸೂರ್ಯಾಸ್ತ ನೋಡುವುದು ಒಂದು ಆನಂದವೇ ಹೌದು. ಸುಮಾರು ೬ ಗಂಟೆಯವರೆಗೂ ಅಲ್ಲೇ ಕುಳಿತಿದ್ದೆವು. ಇನ್ನೇನು ಕತ್ತಲಾಗುತ್ತಿದೆ ಎನ್ನುವ ಸಮಯಕ್ಕೆ ಎದ್ದು ಹೇಮಾಂಗಣದ ಕಡೆ ಹೆಜ್ಜೆ ಹಾಕಿದೆವು. ಹೇಮಾಂಗಣದಲ್ಲಿ ತಂಗುವ ವ್ಯವಸ್ಥೆಯೇನೋ ಆಯಿತು. ಊಟಕ್ಕೆ ಏನು ಗತಿ ? ಈಗಾಗಲೇ ಕವಿ ಮನೆ, ಹೇಮಾಂಗಣ, ಕವಿ ಶೈಲ ಎಂದು ೪-೫ ಬಾರಿ ಅಡ್ಡಾಡಿ ಧಣಿದಿದ್ದೆವು. ಊಟಕ್ಕೂ ಮತ್ತೆ ಹೋಗಿ ಶಿವಾರೆಡ್ಡಿಯವರನ್ನ ಕೇಳೋದು ಸರಿಯಾಗುವುದಿಲ್ಲ ಎನಿಸಿ ಅಲ್ಲಿಯೇ ಕೆಲಸ ಮಾಡುತ್ತಿದ್ದವರನ್ನು ವಿಚಾರಿಸಿದೆವು. ಅವರು ನಮಗೆ ಕುಪ್ಪಳ್ಳಿ ಕ್ರಾಸಿನಿಂದ ೧ ಕಿಲೋಮೀಟರು ನಡೆದು ಹೋದರೆ ಗಡಿಕಲ್ಲು ಸಿಗುವುದೆಂದು, ಅಲ್ಲಿ ಹೋಟೆಲುಗಳಿರುವವೆಂದು ತಿಳಿಸಿದರು. ಈಗಿನ್ನು ೬.೩೦-೭, ಸ್ವಲ್ಪ ಮುಖ ತೊಳೆದು ಶುಭ್ರವಾಗಿ ಗಡಿಕಲ್ಲಿಗೆ ಹೋಗಿ ಊಟ ತರೋಣವೆಂದು ನಿರ್ಧರಿಸಿದೆವು. ನಾವು ಯಾವುದೇ ತಯಾರಿಗಳಿಲ್ಲದೆ ಬಂದಿದ್ದೆವು. ನಮಗೆ ಯಾವುದೇ ಯಾಜನೆಯಾಗಲಿ, ಅದನ್ನ ಕಾರ್ಯಗತಗೊಳಿಸುವ ಯೋಚನೆಯಾಗಲಿ ಇರಲಿಲ್ಲ. ಆ ಹೊತ್ತಿನ ವ್ಯವಸ್ಥೆ ಆದರೆ ಸಾಕಿತ್ತು ನಮಗೆ. ವಾಸಕ್ಕೆ ವ್ಯವಸ್ಥೆ ಆಯಿತು, ಈಗ ಊಟಕ್ಕೂ ಆಯಿತು ಎಂದಷ್ಟೇ ಅಂದುಕೊಂಡೆವು. ಅದರ ಸವಾಲುಗಳಿನ್ನು ನಮಗೆ ತಿಳಿದಿರಲಿಲ್ಲ.
“ಇದೇನು ಇಷ್ಟು ಕತ್ತಲಿದೆ. ರಸ್ತೇನೆ ಕಾಣ್ತಾ ಇಲ್ಲವಲ್ಲೋ” ಇಬ್ಬರಿಗೂ ಕೊಂಚ ದಿಗಿಲು. ಹೇಮಾಂಗಣದಿಂದ ಹೊರಟು ಇನ್ನು ಒಂದೇ ನಿಮಿಷ ಆಗಿರಬೇಕು, ರಸ್ತೆಯೇ ಕಾಣದಷ್ಟು ಕಗ್ಗತ್ತಲು. ಕಿವಿ ಗಡುಚಿಕ್ಕುವಂತೆ ಮಾರ್ದನಿಸುತ್ತಿರುವ ಕಾಡಿನ ಹಲವು ಬಗೆಯ ಕೀಟಗಳ ಕೂಗು. ಒಂದು ಕ್ಷಣಕ್ಕೆ ಗಾರ್ಡ್ ಮಹಾಶಯ ಹೇಳಿದ ಹುಲಿ ಚಿರತೆಗಳ ನೆನಪಾಯಿತು. ಹೇಮಾಂಗಣದಲ್ಲಿ ಇದ್ದ ಹಸಿವು ಎಲ್ಲಿ ಮಾಯವಾಯಿತೋ ಗೊತ್ತಿಲ್ಲ, ನನಗೆ ಊಟವೇ ಬೇಡವೆನಿಸುವಷ್ಟು ಭಯವಾಯಿತು. ಪಕ್ಕದಲ್ಲೇ ನಡೆದರೂ ಒಬ್ಬರಿಗೊಬ್ಬರು ಕಾಣದಷ್ಟು ಕಪ್ಪು. ಭಯವಾದರೂ ಅದನ್ನು ಹೇಳಿ ಅಭಿವ್ಯಕ್ತ ಪಡಿಸದ ಹೊರತಾಗಿ ಚರ್ಯೆಗಳಿಂದ ತಿಳಿಯಲು ಸಾದ್ಯವಿರಲಿಲ್ಲ ಕತ್ತಲಲ್ಲಿ. ಭಯ ಹೇಳಿಕೊಂಡರೆ ಎಲ್ಲಿ ನಗೆಪಾಟಿಲಾಗಿಬಿಡುವೆನೋ ಎಂಬ ಗೊಂದಲ. ಅಣ್ಣನಿಗೂ ಭಯವಾಗಿತ್ತೋ ಇಲ್ಲವೋ ತಿಳಿದಿಲ್ಲ. ಆದರೆ ಒಂದು ಕ್ಷಣ ಹಿಂತಿರುಗಿ ಓಡಿ ಹೋಗಿಬಿಡಲೋ ಎಂಬ ಯೋಚನೆ ? ಪಕ್ಕದಲ್ಲಿರಿವವನೇ ಕಾಣುತ್ತಿಲ್ಲ, ಇನ್ನು ಓಡಿ ಹೋದರಂತೂ ತಿಳಿಯುವುದಿಲ್ಲ. “ಹೊಟ್ಟೆ ಸರಿ ಇರ್ಲಿಲ್ಲ”, ಹೀಗಯೇ ಏನಾದರು ಹೇಳಿ ನಿಭಾಯಿಸಿದರಾಯ್ತು. ಈಗಾಗಲೇ ಬಹಳ ದೂರ ಬಂದಿದ್ದೇವೆ. ಇನ್ನೇನು ಕುಪ್ಪಳ್ಳಿ ಕ್ರಾಸ್, ನಾವು ಬಸ್ಸು ಇಳಿದ ಜಾಗ ಒಂದು ೧೦ ಹೆಜ್ಜೆ ಇರಬಹುದಷ್ಟೆ. ಈಗ ಹಿಂತಿರುಗಿ ಹೋಗುವ ಹಾದಿಯೇ ದೂರ. ಅದರ ಬದಲು ಒಟ್ಟಿಗೆ ಮುಂದೆ ಹೋಗುವುದೇ ಲೇಸೆನಿಸಿತು. ಹೇಗೋ ತಳಮಳದಲ್ಲೇ ಗಡಿಕಲ್ಲು ಬಂದು ಸೇರಿದೆವು. ಗಡಿಕಲ್ಲಿನ ಆರಂಭದಲ್ಲೇ ಕಿರಿದಾದ ಹೋಟೆಲೊಂದು ಕಾಣಿಸಿತು. ಎರಡು ಊಟ ಪಾರ್ಸೆಲ್ ತೆಗುದುಕೊಂಡು ಬಂದ ಅಣ್ಣ. ಇಷ್ಟೊಂದು ಅನ್ನ ಕೊಟ್ಟಿದ್ದಾರಾ ಎಂದು ಅವನು ಹಿಡಿದು ತಂದ ಪಾರ್ಸೆಲ್ ಗಾತ್ರ ನೋಡಿ ಉದ್ಗರಿಸಿದೆ. “ಎಷ್ಟು ಕೊಟ್ರೋ ತೊಗೊಂಡ್ ಬಂದೆ, ಹಣವೇನು ಹೆಚ್ಚಿಗೆ ಇರಲಿಲ್ಲ. ನಮ್ಮಲ್ಲಿ ಒಂದು ಊಟಕ್ಕೆ ಆಗುವಷ್ಟು ಇಲ್ಲಿ ಎರಡಕ್ಕೆ ಆಯಿತು. ಆದರೂ ಕ್ವಾಂಟಿಟಿ ಬಹಳವೇ ಇದೆ” ಎಂದು ವಿವರಿಸಿದ. ಮತ್ತಷ್ಟು ಮಾತಾಡಿ ಸಮಯ ವ್ಯಯಿಸದೆ ಗಡಿಬಿಡಿಯಿಂದ ಪಾರ್ಸೆಲ್ ಹಿಡಿದು ಹೇಮಾಂಗಣದ ಕಡೆಗೆ ನಡೆದೆವು.
ಕುಪ್ಪಳ್ಳಿ ಕ್ರಾಸಿನವೆರೆಗೂ ಆಗೊಮ್ಮೆ ಈಗೊಮ್ಮೆ ವಾಹನಗಳ ಸಂಚಾರ ಇರುವುದರಿಂದ ಅಲ್ಲಿ ಅಷ್ಟಾಗಿ ಭಯವಾಗಲಿಲ್ಲ. ಅದನ್ನು ದಾಟಿ ಹೇಮಾಂಗಣದ ದಾರಿ ಹೊಕ್ಕಿ ಇನ್ನು ನಿಮಿಷವೂ ಆಗಿರಲಿಲ್ಲ, ರಸ್ತೆಯ ಎಡ ಬದಿಯಲ್ಲಿ ಬೆಕ್ಕಿನ ಕಣ್ಣುಗಳನ್ನು ಹೋಲುವ ಎರಡು ಕಣ್ಣುಗಳು ನಮ್ಮನ್ನು ದಿಟ್ಟಿಸಿ ನೋಡುತ್ತಿರುವುದು ಕಾಣಿಸಿತು. ಈಗಾಗಲೇ ಕೊಂಚ ಹೆದರಿದ್ದ ನನಗೆ ಅದನ್ನು ಕಂಡೊಡನೆ ಕಾಲು ಬೇರೂರಿದವು. ಮನುಷ್ಯ ಪ್ರಕೃತಿಯಲ್ಲಿ ಎರಡು ಸ್ವಭಾವವಂತೆ. ಒಂದು ಬಗೆಯ ಸ್ವಭಾವದವರು, ಅಪಾಯ ಗ್ರಹಿಸಿದಾಗ ಕಾಲು ಕೀಳುವವರಾದರೆ ಇನ್ನೊಂದು ಸ್ವಭಾವದವರಿಗೆ ಭಯದ ಉತ್ಕಟತೆಯಿಂದ ಏನು ತೋಚದೆ ಕಾಲು ಬೇರೂರುವಂತೆ. ನಾನು ಎರಡನೇ ವರ್ಗದವ. ನನಗೆ ಭಯವಾದಾಗ ನಾನು ಏನನ್ನು ನಿಶ್ಚಯಿಸದೆ ಆ ಕ್ಷಣ ಕಳೆದುಬಿಡಲು ಸ್ತಬ್ಧನಾಗಿ ಕಾಯುತ್ತೇನೆ. ಆ ಎರಡು ಕಣ್ಣುಗಳನ್ನು ಕಂಡು ನನಗಾಗಿದ್ದು ಅದೇ. ಹೆಜ್ಜೆ ಮುಂದಿಡಲು ಧೈರ್ಯ ಸಾಲದು. ಪಕ್ಕದಲ್ಲಿರುವ ಅಣ್ಣನು ಅದನ್ನು ಗಮನಿಸಿದ್ದು ತಿಳಿಯಿತು. “ಏನು ಮಾರಾಯ ಅದು” ಎಂದು ಇಬ್ಬರು ಉದ್ಗಾರ ತೆಗೆದೆವು. ಬೆಕ್ಕಂತೂ ಇಷ್ಟ ದೊಡ್ಡಕಿರುವುದಿಲ್ಲ. ನಾಯಿಗೆ ಈ ತರಹದ ಕಣ್ಣಿರುವುದಿಲ್ಲ. ಇದೇನು ಕರ್ಮ. ಅಣ್ಣ ಸ್ವಲ್ಪ ವೇಗವಾಗಿ ಹೆಜ್ಜೆ ಹಾಕ ತೊಡಗಿದ. ಅವನ ನಡಿಗೆ ಲಘು ಓಟದಂತೆ ಇತ್ತು. ಅವನನ್ನು ಗಮನಿಸಿ ನಾನು ವೇಗವಾಗಿ ಹೆಜ್ಜೆ ಹಾಕಿದೆ. ಸ್ವಲ್ಪ ಜೋರಾಗಿ ಯಾವುದೊ ಹಾಡನ್ನು ಗುನುಗ ತೊಡಗಿದೆ. ತೇಜಸ್ವಿಯವರ ಕಾಡಿನ ಕಥೆಗಳು ಓದಿದ್ದಾಗ ಇದ್ದ ರೋಮಾಂಚನ ಈಗಿರಲಿಲ್ಲ. ಇದೇ ಹಾದಿಯಲ್ಲಿ ,ಮಧ್ಯಾಹ್ನ ಇಳಿದು ಹೊರಟಾಗ ಕಾಡು ಎಷ್ಟು ಸುಂದರವೆನಿಸಿತ್ತು. ನಸುಕಾಗುತಿದ್ದಂತೆ ಅದೇ ಕಾಡು ನಮ್ಮನ್ನು ಭಯಭೀತಿಗೊಳಿಸಿತ್ತು. ಕಾಡಲ್ಲಿ ಏನು ಬದಲಾವಣೆ ಇರಲಿಲ್ಲ. ಬದಲಾವಣೆ ಇದ್ದದ್ದು ನಮ್ಮ ಅನುಭವಗಳಲ್ಲಿ. ಪುಸ್ತಕವಷ್ಟೇ ಓದಿ ಒಂದು ಛಾಯೆ ಕಲ್ಪಿಸಿಕೊಂಡಿದ್ದ ನಮಗೆ, ಗಾರ್ಡ್ ಮಹಾಶಯನ ಉಸುರುವಿಕೆಯ ಪರಿಣಾಮ ಬೀರಿರಬಹುದು. ಇನ್ನೇನು ಹೇಮಾಂಗಣ ೨೦೦ ಮೀಟರ್ ದೂರದಲ್ಲಿದೆ ಎಂದು ತಿಳಿಯುತ್ತಿದ್ದಂತೆ ಇಬ್ಬರು ಒಡಲು ಶುರು ಮಾಡಿದೆವು. ಅಕ್ಕ ಪಕ್ಕ ಹಿಂದೆ ಎಲ್ಲಿಯೂ ನೋಡುವಷ್ಟು ಧೈರ್ಯವಿರಲಿಲ್ಲ. ಏದುಸಿರು ಬಿಡುತ್ತ ಹೇಮಾಂಗಣದ ಅಂಗಳದಲ್ಲಿ ಬಂದು ನಿಂತು ಜೋರಾಗಿ ನಕ್ಕೆವು. ಖುಷಿಯ ನಗುವೋ, ಭಯದ ನಗುವೋ ತಿಳಿಯದು. ಊಟ ಮಾಡಿ ಮಲಗಿ ಮಾರನೆಯ ಬೆಳಗ್ಗೆ ಶಿವಾರೆಡ್ಡಿಯವರಿಗೆ ಇನ್ನಿಲ್ಲದಷ್ಟು ಧನ್ಯವಾದಗಳನ್ನು ತಿಳಿಸಿ, ಕವಿ ಶೈಲದಲ್ಲಿ ಸೂರ್ಯೋದಯದ ದರ್ಶನ ಮಾಡಿ ಶೃಂಗೇರಿಯ ಮಾರ್ಗವಾಗಿ ಹೊರಟೆವು.
ಇಂದಿಗೂ ಆ ಪ್ರಸಂಗ ನೆನೆಸಿಕೊಂಡಾಗಲೊಮ್ಮೆ ನಗು ತರಿಸುತ್ತದೆ. ಅದು ಮನದಲ್ಲಿ ಅಚ್ಚಾಗಿ ಉಳಿದರಲು ಕಾರಣ, ಆ ಸಂಧರ್ಭದಲ್ಲಿ ಆದ ತೀವ್ರ ಭಯವೇ ಇರಬೇಕು. ಯಾವುದೇ ಸನ್ನಿವೇಶವೊಂದು ನಿಮಗೆ ತೀವ್ರ ಭಾವ ಮೂಡಿಸಿದಾಗ ನಿಮ್ಮ ಸ್ಮ್ರಿತಿಯಲ್ಲಿ ಅದು ಅಚ್ಚಾಗಿ ಬಿಡುತ್ತದೆ. ಇದು ಹಾಗೆಯೇ. ವಿಶೇಷವೇನೆಂದರೆ ಆ ಒಂದೇ ದಿನದಲ್ಲಿ ಮೂಡಿದ ಹಲವು ಬಗೆಯ ತೀವ್ರ ಭಾವಗಳು ಆ ಇಡೀ ದಿನದ ಚಿತ್ರಣವನ್ನು ಹಾಗೆಯೇ ಅಚ್ಚಾಗಿಸಿದೆ. ಎಲ್ಲಾ ಭಾವಗಳು ಅಲ್ಲಿಯ ಪರಿಸರದ, ಅಲ್ಲಿಯ ಕಾಡಿನ, ಅಲ್ಲಿಯ ಜೀವರಾಶಿಗಳ, ಇನ್ನಷ್ಟು ಬಹಳಷ್ಟು ಸೂಕ್ಷ್ಮತೆಗಳ ಒಂದು ಅಭಿರೂಪ. ತದನಂತರ ಹಲವು ಬಾರಿ ಕುಪ್ಪಳ್ಳಿಗೆ ಹೋಗಿ ಬಂದಿದ್ದೇನೆ, ಮೊದಲನೆಯ ಭೇಟಿಯ ರೋಚಕತೆ ಆನಂತರ ಸಿಕ್ಕಿಲ್ಲ.
— ಡೆಲಿವರಿಯೇ ಆಗದೆ ಹೊಟ್ಟೆ ತುಂಬಿಸಿ ಮುಗುಳ್ನಗೆ ಮೂಡಿಸಿತು
ಮುಖದ ಮೇಲೆ ಮೂಡಿದ್ದ ಬೆವರು ಮತ್ತು ಧೂಳಿನ ಕಲೆಗಳನ್ನು ಒರೆಸಿಕೊಳ್ಳುತ್ತಾ ಮನೆಯೊಳಗೆ ನಡೆದೆ. ನೀರಿನ ಬಾಟಲಿ ಹಾಗು ಒಂದು ಚಿಕ್ಕ ಟವೆಲನ್ನು ಟ್ರೆಕ್ಕಿಂಗಿಗೆ ಒಯ್ಯಲು ತೆಗೆದುಕೊಂಡು ಹೋಗಿದ್ದ ಬಾಲ್ ಬ್ಯಾಗನ್ನು ಮೂಲೆಗೆ ಎಸೆದು ಹಾಸಿಗೆಯ ಮೇಲೆ ಧೊಪ್ಪನೆ ಬಿದ್ದೆ. ಬಿಸಿಲಿಗೆ ಕೊಂಚ ತಲೆಯು ನೋಯಿಸತೊಡಗಿತ್ತು. ಹಿಂದಿನ ರಾತ್ರಿ ನಿದ್ರೆಯು ಸರಿಯಾಗಿರಲಿಲ್ಲ. ಬೆಳಗಿನ ಜಾವ 6 ಕ್ಕೆ ಎದ್ದು ಸ್ನೇಹಿತರೊಡನೆ ನಿಶ್ಚಯಿಸಿದ್ದಂತೆ ಗುಡಿಬಂಡೆಗೆ ಬೈಕ್ ರೈಡ್ ಮತ್ತು ಟ್ರೆಕಿಂಗ್ ಮಾಡಲು ತೆರಳಿದ್ದೆ. ಗುಡಿಬಂಡೆ ಬೆಂಗಳೂರಿನಿಂದ ಸುಮಾರು 110 ಕಿಲೋಮೀಟರ್ ದೂರದಲ್ಲಿದೆ. ಹೋಗುವಾಗ ಅಷ್ಟಾಗಿ ಬಿಸಿಲಿನ ಬೇಗೆ ತಿಳಿಯಲಿಲ್ಲ ಮತ್ತು ವಾಹನ ದಟ್ಟಣೆಯು ಇರಲಿಲ್ಲ. ಹಿಂತಿರುಗುವಾಗ ಮಾತ್ರ ಟ್ರೆಕಿಂಗ್ ಮಾಡಿ ಆಗಲೇ ಕೊಂಚ ಸುಸ್ತಾಗಿದ್ದರಿಂದ, ವಾಹನಗಳ ಜಂಗುಳಿ, ಬಿಸಿಲಿನ ಬೇಗೆ ಎಲ್ಲವು ರೇಜಿಗೆ ಉಂಟು ಮಾಡಿಸಿದವು. ಹೆಬ್ಬಾಳದಿಂದ ನಮ್ಮ ಮನೆಯಿರುವ ಪದ್ಮನಾಭನಗರಕ್ಕೆ ಬರುವಷ್ಟರಲ್ಲಿ ಕೊಂಕಣ ಸುತ್ತಿ ಮೈಲಾರಕ್ಕೆ ಬಂದಂತೆ ಅನುಭವ. ಸ್ವಲ್ಪ ಹೊತ್ತು ವಿಶ್ರಮಸಿ ಎದ್ದು ಫ್ರೆಶ್ ಆಗೋಣ ಎಂದುಕೊಂಡು ಗಡಿಯಾರ ನೋಡಿದೆ. ಆಗಲೇ 3 ಆಗಿತ್ತು. ಮನೆಯ ಎಲ್ಲರು ಊರಿಗೆ ತೆರಳಿದ್ದರಿಂದ ಊಟದ ಏರ್ಪಾಡು ನಾನೆ ಮಾಡಿಕೊಳ್ಳಬೇಕಿತ್ತು. ಮತ್ತೆ ಹೊರಗೆ ಹೋಗುವ ತ್ರಾಣವಿಲ್ಲದೆ ಆನ್ ಲೈನ್ ಆರ್ಡರ್ ಮಾಡೋಣವೆಂದು ಫುಡ್ ಡೆಲಿವರಿ ಆಪ್ ಒಂದನ್ನು ತೆರೆದೆ. ಹಸಿವು ಜೋರಾಗಿದ್ದರಿಂದ ನನ್ನ ನೆಚ್ಚಿನ ಹೋಟೆಲಿನೊಂದರಿಂದ ಊಟ ಆರ್ಡರ್ ಮಾಡಿ ಅದು ಬರುವೆ ವೇಳೆಗೆ ಎದ್ದರಾಯಿತು ಎಂದು ಹಾಗೆಯೆ ಕಣ್ಣು ಮುಚ್ಚಿದೆ.
ಫೋನಿನ ಕರ್ಕಶ ರಿಂಗಣ ನನ್ನ ನಿದ್ದೆಯ ಮೇಲೆ ಮಾಡಿದ ಗಧಾ ಪ್ರಹಾರದಂತೆ ಭಾಸವಾಗಿ ತಟಕ್ಕನೆ ಎದ್ದು ಕೂತೆ.
“ಸರ್ ನಿಮ್ಮ ಲೊಕೇಶನ್ ಹತ್ರಾನೇ ಇದೀನಿ. ಮನೆ ಯಾವುದು ಗೊತ್ತಾಗ್ತಿಲ್ಲ. ಸ್ವಲ್ಪ ಹೊರಗೆ ಬನ್ನಿ” ಎಂದಿತು ಆಚೆಯ ಧ್ವನಿ. ನಾನು ಆರ್ಡರ್ ಮಾಡಿದ್ದ ಊಟದ ಡೆಲಿವರಿ ನೀಡುಲು ಬಂದವರ ಕರೆಯದು.
“ನೀವು ಎಲ್ಲಿದಿರಾ ಹೇಳಿ. ಮನೆಯ ಮುಂದೆ ಹಳದಿ ಬಣ್ಣದ ಪಲ್ಸರ್ ಗಾಡಿ ನಿಂತಿರುತ್ತೆ ನೋಡಿ” ಎಂದು ಹೀಗೆಯೇ ಹಲವಾರು ರೀತಿಯ ಸುಳಿಹುಗಳು ನೀಡುತ್ತಾ ಮನೆಯ ಬಾಗಿಲ ಬಳಿ ತೆರಳಿದೆ.
“ಇಲ್ಲಿ ನಂಗೆ ನೀವು ಹೇಳ್ತಿರೋ ಮನೆ ಎಲ್ಲೂ ಕಾಣುತ್ತಿಲ್ಲ ಸರ್. ಹಳದಿ ಬಣ್ಣದ ಪಲ್ಸರ್ ಬೈಕ್ ಸಹ ಕಾಣುತ್ತಿಲ್ಲ. ಇದು 18th ಮೇನ್ ರೋಡಿನಲ್ಲೇ ಬರುತ್ತಾ ಇಲ್ವಾ ಪಕ್ಕದಲ್ಲಿ ಎಲ್ಲಾದ್ರೂ ಇದಿಯಾ ?”
ಆ ಪ್ರಶ್ನೆ ಕೇಳಿದ ಕೂಡಲೇ ನನಗೆ ಸನ್ನಿವೇಶದ ಗೊಂದಲ, ಗೊಂದಲಕ್ಕಣಿವು ಮಾಡಿಕೊಟ್ಟ ನನ್ನ ತಪ್ಪು ತಿಳಿಯಿತು. ನಾನು ನನ್ನ ಸಂಶಯ ಖಚಿತ ಪಡಿಸಿಕೊಳ್ಲಲು ಮತ್ತೆ ಫುಡ್ ಆರ್ಡರ್ ಆಪ್ ತೆರೆದು ಆರ್ಡರ್ ನ ವಿವರ ನೋಡಿದೆ. ಆರ್ಡರ್ ಮಾಡುವಾಗ ನಾನು ಈ ಮುಂಚೆ ವಾಸವಿದ್ದ BTM ಲೇಔಟಿನ ರೂಮಿನ ಅಡ್ರೆಸ್ ಹಾಕಿಬಿಟ್ಟಿದ್ದೆ. ಆರ್ಡರ್ ಮಾಡುವ ಗಡಿಬಿಡಿಯಲ್ಲಿ ಸರಿಯಾಗಿ ಗಮನಿಸದೆ ಎಡವಟ್ಟು ಮಾಡಿದ್ದೆ. ಹಿಂದೆಯೂ ಒಮ್ಮೆ ಹೀಗೆ ಆಗಿತ್ತು. ಆದರೆ ಆಗ ಆರ್ಡರ್ ಡೆಲಿವರಿ ಬರುವ ಮುಂಚೆಯೇ ಗಮನಿಸಿ ಕ್ಯಾನ್ಸಲ್ ಮಾಡಿದ್ದೆ. ಈ ಬಾರಿ ತುಂಬಾ ತಡವಾಗಿತ್ತು. ಏನು ಮಾಡುವುದು ತತ್ ಕ್ಷಣ ತಿಳಿಯಲಿಲ್ಲ.
“ಸರ್ ನಾನು ಬೇರೆ ವಿಳಾಸಕ್ಕೆ ಆರ್ಡರ್ ಮಾಡಿಬಿಟ್ಟಿದೀನಿ. ಈಗ ನಾನು ಅಲ್ಲಿಲ್ಲ. ಡೆಲಿವರಿ ಅಡ್ರೆಸ್ ಚೇಂಜ್ ಮಾಡ್ಬೇಕಲ್ಲ” ಎಂದು ಬಂದಿದ್ದವರಿಗೆ ತಿಳಿಸಿದೆ.
“ಅಯ್ಯೋ ! ಹೌದಾ ಸರ್. ಎಲ್ಲಿ ಸರ್ ನಿಮ್ಮ ಹೊಸ ಅಡ್ರೆಸ್” ಎಂದರು ವಿನಯದಿಂದಲೇ.
“ಪದ್ಮನಾಭನಗರ ಸರ್” ಎಂದೇ. ಸಹಕರಿಸುವಂತೆಯೇ ಇಲ್ಲಿಯವರೆಗೂ ಸಂವೇದಿಸಿದ್ದ ಧನಿ ಪದ್ಮನಾಭನಗರ ಎಂದು ತಿಳಿದ ಕೂಡಲೇ
“ಆಗಲ್ಲ ಬಾಸ್. 6 ಕಿಲೋಮೀಟರ್ ದೂರ ಅಡ್ರೆಸ್ ಚೇಂಜಿಗೆ ಅಂತ ಬರೋದೆಲ್ಲ ಆಗಲ್ಲ” ಎಂದು ಸ್ವಲ್ಪ ಘಡುಸಾಗೆ ನುಡಿಯಿತು.
“ಒಂದ್ ಕೆಲಸ ಮಾಡಿ. ನಂಗೆ ಎರಡು ನಿಮಿಷ ಟೈಮ್ ಕೊಡಿ. ನಾನು ಕಸ್ಟಮರ್ ಕೇರಿಗೆ ಕರೆ ಮಾಡಿ ವಿವರಿಸಿ ನಂತರ ನಿಮಗೆ ತಿಳಿಸ್ತೀನಿ” ಎಂದೆ.
ಈಗಾಗಲೇ ತಲೆಯ ನೋವಿಗೆ, ಬಿಸಿಲಿಗೆ, ಧೂಳಿಗೆ ಬಳಲಿ ಅರೆನಿದ್ರೆಯಿಂದ ಎದ್ದಿದ್ದ ನನಗೆ ಈ ಡೆಲಿವರಿ ಕೊಡುವರೊಟ್ಟಿಗೆ ವಾದ ಮಾಡುವಷ್ಟು ಸಂಯಮವಿರಲಿಲ್ಲ. ಅವರಾದರೂ ಏನು ಮಾಡಿಯಾರು. ತಪ್ಪು ನನ್ನದು. ಎಕಾ ಏಕಿ 6 ಕಿಲೋಮೀಟರು ಬಂದು ಡೆಲಿವರಿ ಕೊಡಿ ಎಂದರೆ ಯಾರು ಒಪ್ಪರು ಎಂದು ನನ್ನ ದುಡುಕಿಗೆ ಶಪಿಸುತ್ತ ಕಸ್ಟಮರ್ ಕೇರಿನ ನಂಬರ್ ಹುಡುಕುತ್ತ ಬೇಸರದಿಂದ ಮನೆಯೊಳಗೆ ಬಂದೆ.
“ನಮಸ್ಕಾರ. ಹೇಳಿ ಸರ್ ಏನು ಪ್ರಾಬ್ಲಮ್, ನಾವು ಸಾಲ್ವ್ ಮಾಡ್ತೀವಿ” ಎಂದು ಪರಿಸ್ಥಿತಿ ಅರಿಯುವ ಮುನ್ನವೇ ಪರಿಹಾರದ ಆಶ್ವಾಸನೆ ನೀಡುತ್ತಾ ಮಾತು ಪ್ರಾರಂಭಿಸಿದರು ಕಸ್ಟಮರ್ ಕೇರಿನ ಸಿಬ್ಬಂದಿ. ಕರೆಯ ಉತ್ತರಕ್ಕಾಗಿ ಕೆಲ ಸಮಯ ಕಾದು ಸಹನೆ ಈಗಾಗಲೇ ಇಂಗುತಿತ್ತು. ನನ್ನ ಪರಿಸ್ಥಿತಿಯನ್ನು ಅವರಿಗೆ ವಿವರಿಸಿ
“4 ವರ್ಷಗಳಿಂದ ನಿಮ್ಮ ಕಸ್ಟಮರ್ ನಾನು. ಒಂದು ಚಿಕ್ಕ ತಪ್ಪಾಗಿದೆ, ಸಹಕರಿಸಿ ಬಗೆಹರಿಸುವುದು ನಿಮ್ಮ ಕರ್ತವ್ಯವಲ್ಲವೇ” ಎಂದು ಬೇಕಿಲ್ಲದ ಎಲ್ಲ ರೀತಿಯ ಮುಲಾಜುಗಳನ್ನು ಆ ನಿಸ್ಸಹಾಯಕ ವ್ಯಕ್ತಿಯ ಮೇಲೆ ಹೇರಿ, ನನಗೆ ವ್ಯಥಾ ತೊಂದರೆಯುಂಟು ಮಾಡಿತ್ತುರುವರೆನ್ನುವಂತೆ ಕೋಪದಿಂದ ಕೊಂಚ ಕೂಗಾಡಿದೆ.
“ಸರ್ ನಾನು ನಮ್ಮ ಮ್ಯಾನೇಜರ್ ಹತ್ರ ಚೆಕ್ ಮಾಡಿ ಹೇಳ್ತಿನಿ. ಕಾಲ್ ಹೋಲ್ಡ್ ಮಾಡಿ”, ನನ್ನ ಕೋಪ ನೋಡಿ ಅಚ್ಚರಿಯಾಗಿರಬೇಕು ಅವರಿಗೆ. ಅವನೇ ತಪ್ಪೆಸಗಿ ವಿನಂತಿಸುವ ಬದಲು ಆದೇಶಿಸುತ್ತಿರುವನಲ್ಲ, ಎಷ್ಟು ದರ್ಪ, ಎನಿಸರಲೂಬಹುದು. ಆ ದರ್ಪದ ಮೂಲ ನನ್ನ ಹಸಿವಾಗಿತ್ತು. ಹಸಿವಿಗೆ ತಪ್ಪು ಯಾರದ್ದು ಎಂದು ಯೋಚುಸುವ ಪರಿಜ್ಞಾನವೂ ಇರದೇ, ನಾನು ಈಗಾಗಲೇ ಆನ್ಲೈನ್ ಪೇಮೆಂಟ್ ಮಾಡಿ ಖರೀದಿಸಿರುವ ಊಟವನ್ನು ನನ್ನಿಂದ ಕಸೆಯುತ್ತಿದ್ದಾರಲ್ಲ ಎನ್ನುವುದೊಂದೇ ಗೋಚರಿಸುತ್ತಿತ್ತು.
“ಸರ್, ವೀ ಆರ್ ಸಾರೀ. 2 ಕಿಲೋಮೀಟರ್ಸ್ ಅಂತರದಲ್ಲಾಗಿದ್ರೆ ನಾವು ಅಡ್ರೆಸ್ ಚೇಂಜ್ ಮಾಡಿ ಕಳಿಸ್ತಿದ್ವಿ ಸರ್. 6 ಕಿಲೋಮೀಟರ್ಸ್ ಅಂದ್ರೆ ಆಗೋದಿಲ್ಲ ಸರ್. ಡೆಲಿವರಿ ಮಾಡೋರಿಗೂ ಕಷ್ಟ ಆಗುತ್ತೆ”.
“ಹಾಗಿದ್ರೆ ಆರ್ಡರ್ ಕ್ಯಾನ್ಸಲ್ ಮಾಡಿ, ನನ್ ದುಡ್ಡು ವಾಪಾಸ್ ಕ್ರೆಡಿಟ್ ಮಾಡಿ” ಕೋಪದಿಂದ ಕಿರುಚಾಡಿದೆ.
“ಸರ್ ಈಗಾಗ್ಲೇ ಊಟ ತಯಾರಿಸಿ, ಪ್ಯಾಕ್ ಮಾಡಿ, ಡೆಲಿವೆರಿ ಕೊಡೋದಿಕ್ಕೆ ನೀವು ಸೂಚಿಸಿದ್ದ ಸ್ಥಳಕ್ಕೆ ಸಹ ಕಳಿಸಲಾಗಿದೆ. ಈಗ ಕ್ಯಾನ್ಸಲ್ ಮಾಡೋದು ಆಗೋದಿಲ್ಲ ಸರ್. ಸಾರೀ”.
“ಹಾಗಿದ್ರೆ ನಾನು ಏನ್ ಮಾಡಬೇಕು. ನೀವ್ ಹೇಳೋ ಪ್ರಕಾರ ದುಡ್ಡು ಕೊಡೋದಿಲ್ಲ, ಊಟ ಕೂಡ ಕೊಡೋದಿಲ್ಲ ಅನ್ನೋ ಲೆಕ್ಕಕ್ಕೆ ಬಂತಲ್ಲ”.
“ನಿಮಗೆ ಅಲ್ಲಿ ಯಾರಾದ್ರೂ ಪರಿಚಯದವರಿದ್ದರೆ ಹೇಳಿ ತೆಗೆದುಕೊಳ್ಳಿ. ನಮ್ಮ ಕಡೆಯಿಂದ ಬೇರೇನೂ ಆಗೋದಿಲ್ಲ ಸರ್. ಸಾರೀ”.
ಯಾಕೋ ಈ ವಾದ ಇತ್ಯರ್ಥಗೊಳ್ಳುವ ಲಕ್ಷಣ ತೋರಲಿಲ್ಲ. ಹಾಗೆ ನೋಡಿದರೆ ನಾನು ಗಟ್ಟಿಯಾಗಿ ವಾದ ಮಾಡುವ ಯಾವುದೇ ಪಾತಳಿಯೂ ನನಗಿರಲಿಲ್ಲ. ಏನು ಮಾಡುವುದು ತೋಚದೆ
“ಸರಿ. ಅಲ್ಲಿ ಆರ್ಡರ್ ತೆಗೆದುಕೊಳ್ಳಲು ಯಾರು ಇಲ್ಲ. ಈಗ ನಾನು ಏನ್ ಮಾಡಬೇಕು ?” ಎಂದೆ ಕೊಂಚ ನಯವಾಗಿ.
“ಆಪ್ ಅಲ್ಲಿ ಹೋಗಿ ಆರ್ಡರ್ ಕ್ಯಾನ್ಸಲ್ ಮಾಡಿ ಸರ್ ಅಷ್ಟೇ. ಅದು ಕ್ಯಾನ್ಸಲ್ಲೇಷನ್ ಚಾರ್ಜಸ್ ತೋರ್ಸುತ್ತೆ. ಅದನ್ನ ಕನ್ಫರ್ಮ್ ಮಾಡ್ಬಿಡಿ. ಈಗಾಗಲೇ ಡೆಲಿವರಿಗೆಂದು ಬಂದಿರೋದರಿಂದ ಆರ್ಡರಿನ ಪೂರಾ ಮೊತ್ತ ಚಾರ್ಜ್ ಆಗಬಹುದು. ಬೇರೆ ಏನಾದರು ಪ್ರಶ್ನೆ ಇದ್ದಾರೆ ಕೇಳಿ ಸರ್”.
“ಏನು ಇಲ್ಲ. ಥ್ಯಾಂಕ್ಸ್” ಎಂದು ಕರೆಯನ್ನು ಅಂತ್ಯಗೊಳಿಸಿದೆ.
“ಸರ್, 15 ನಿಮಿಷದಿಂದ ಇಲ್ಲೇ ಕಾಯ್ತಾ ಇದ್ದೀನಿ. ನಮ್ಮಂತವರಿಗೆ ಸಮಯವೇ ಹಣ ಸರ್. ಜಾಸ್ತಿ ಡೆಲಿವರಿ ಮಾಡಿದಷ್ಟು ಇನ್ಸೆನ್ಟಿವ್ (ಕ್ಷಮತೆಗೆ ನೀಡುವ ಅಧಿಕ ಹಣ) ಇರುತ್ತೆ. ಪ್ಲೀಸ್ ಬೇಗ ಏನಾದ್ರು ಹೇಳಿ” ಎಂದು ಉಸುರಿದನು ಆ ಡೆಲಿವರಿ ಮಾಡಲು ಬಂದವ. ನಾನು ಕಸ್ಟಮರ್ ಕೆರಿನವರೊಡನೆ ಮಾತಾಡುವಾಗಲು ಅವರು ನನ್ನನ್ನ ಸಂಪರ್ಕಿಸಲು ಹಲವು ಬಾರಿ ಪ್ರಯತ್ನಿಸಿದ್ದು ನನಗೆ ತಿಳಿಯುತ್ತಿತ್ತು. ಬಹುಷಃ ಕಸ್ಟಮರ್ ಕೆರಿನೊಡನೆ ಮಾತಾಡುತ್ತಿರಬೇಕು ಹೀಗಾಗಿ ನಂಬರ್ ಬ್ಯುಸಿ ಬರುತ್ತಿದೆ ಎಂದು ಅವರು ಲೆಕ್ಕಿಸಿ ನನ್ನ ಕರೆಗಾಗಿಯೇ ನಿರೀಕ್ಷಿಸುತ್ತಿದ್ದರು. ಅವರ ಸತತ 4 ಮಿಸ್ಡ್ ಕರೆಗಳನ್ನು ನೋಡಿ ಕಸ್ಟಮರ್ ಕೇರಿನಲ್ಲಿ ತಿಳಿಸಿದ್ದನ್ನು ಅವರಿಗೆ ತಿಳಿಸಿಬಿಡೋಣವೆಂದು ಕರೆ ಮಾಡಿದೆ.
“ಸರ್, ಏನು ಮಾಡೋದಾಗೋದಿಲ್ಲ ಅಂತಾರೆ ನಿಮ್ಮ ಕಸ್ಟಮರ್ ಕೇರಿನವರು. ಆರ್ಡರ್ ಕ್ಯಾನ್ಸಲ್ ಮಾಡಿ ಅಂದ್ರು”.
“ಮತ್ತೆ ಕ್ಯಾನ್ಸಲ್ ಮಾಡ್ಬಿಡಿ ಸರ್. ನಾನು ಮುಂದಿನ ಡೆಲಿವೆರಿಗಾದ್ರು ಹೋಗ್ತೀನಿ” ವಿನಂತಿಸಿದರು.
“ಕ್ಯಾನ್ಸಲ್ ಮಾಡಿದ್ರು ಪೂರಾ ಮೊತ್ತ ಚಾರ್ಜಸ್ ಹಾಕ್ತಾರಂತೆ. ಕ್ಯಾನ್ಸಲ್ ಮಾಡಿ ಉಪಯೋಗವಾದ್ರೂ ಏನು. ನಿಮ್ಮ ಸ್ನೇಹಿತರು ಅಲ್ಲೇ ಯಾರಾದರೂ ಇದ್ರೆ ಅವರಿಗೆ ತೆಗೆದುಕೊಳ್ಳಲು ಹೇಳಿ ಅಂತಾರೆ. ಒಂದು ಕೆಲಸ ಮಾಡಿ. ನೀವೇ ನನ್ನ ಫ್ರೆಂಡ್ ಅಂದುಕೊಂಡುಬಿಡಿ. ಆರ್ಡರ್ ನೀವೇ ತೊಗೊಂಡ್ಬಿಡಿ” ಎಂದೆ.
“ಸರ್ ನಿಜವಾಗ್ಲೂ ? ನೀವು ಓಕೆ ಅನ್ನೋದಿದ್ರೆ ನಾನು ಆರ್ಡರ್ ಡೆಲಿವರ್ಡ್ ಅಂತ ಅಪ್ಡೇಟ್ ಮಾಡ್ತೀನಿ. ಕ್ಯಾನ್ಸಲ್ ಮಾಡಿದ್ರೆ ನಾನು ಇದನ್ನ ಹೋಗಿ ಮತ್ತೆ ಹೋಟೆಲಿಗೆ ತಿರುಗಿಸಬೇಕು. ನೀನೆ ಇಟ್ಕೋ ಅಂತಿದ್ದೀರಲ್ಲ. ಹಾಗಾಗಿ ಡೆಲಿವರ್ಡ್ ಅಂತ ಮಾಡ್ಲಾ”.
“ಓಕೆ. ಹಾಗೆ ಮಾಡಿ. ತೊಂದ್ರೆ ಇಲ್ಲ”
“ಸರ್ ಮತ್ತೆ ಕಸ್ಟಮರ್ ಕೇರಿನವರು ಕಾಲ್ ಮಾಡಿದ್ರೆ ನಾನೆ ಇಟ್ಕೊಂಡೇ ಅಂತ ಹೇಳ್ಬೇಡಿ ಪ್ಲೀಸ್. ನಿಮ್ ಸ್ನೇಹಿತರು ಬಂದು ತೆಗೆದುಕೊಂಡರು ಅಂತ ಹೇಳಿ” ಎಂದು ವಿನಂತಿಸಿದರು.
“ಆಯಿತು ಬಿಡಿ ಹೇಳೋದಿಲ್ಲ”.
“ಥ್ಯಾಂಕ್ಸ್ ಸರ್” ಎಂದು ಮಾತು ಮುಗಿಸಿದರು.
ನನ್ನ ಫೋನನ್ನು ಬದಿಗೆ ಎಸೆದು ಮುಖ ತೊಳೆದುಕೊಳ್ಳಲು ಹೊರಟೆ. ಈ ಆನ್ಲೈನ್ ಆರ್ಡರಿನ ಕರ್ಮ ಕಾಂಡದಿಂದ ರೋಸಿದ್ದರೂ, ಹೊರಗೆ ಹೋಗಿ ತಿನ್ನುವಷ್ಟು ತ್ರಾಣವಿಲ್ಲದ್ದುರಿಂದ, ಈ ಬಾರಿ ಸಮಾಧಾನದಿಂದ ಸರಿಯಾದ ವಿಳಾಸಕ್ಕೆ ಮತ್ತೊಮ್ಮೆ ಆರ್ಡರ್ ಮಾಡೋಣ ಎಂದುಕೊಂಡೆ.
ಈಗ ಆರ್ಡರ್ ಮಾಡಿದರೆ ಮನೆಗೆ ಬರುವುದು ಇನ್ನು ತಡವಾಗುವುದೆಂದು, ಮನೆಯಲ್ಲಿದ್ದ ಒಂದು ಬಿಸ್ಕತ್ತಿನ ಪ್ಯಾಕೆಟ್ ಹಿಡಿದುಕೊಂಡು ಹೊಸದೊಂದು ಊಟದ ಆರ್ಡರ್ ಮಾಡಲು ಮತ್ತೊಮ್ಮೆ ಫುಡ್ ಆರ್ಡರ್ ಆಪ್ ತೆರೆದೆ.
“ಈ ಪುಣ್ಯಾತ್ಮ ಆರ್ಡರ್ ಡೆಲಿವರ್ಡ್ ಮಾಡೋದು ಮರೆತನ ಹೇಗೆ. ಮಾತಾಡಿ 5 ನಿಮಿಷಗಳೇ ಆಯಿತು, ಇನ್ನು ಅಪ್ಡೇಟ್ ಆಗಿಲ್ಲವಲ್ಲ” ಎಂದು ಆಶ್ಚರ್ಯವಾದೆ. ಅವರಿಗೆ ಇನ್ನೊಮ್ಮೆ ನೆನಪಿಸೋಣ ಎಂದುಕೊಂಡು ಕರೆ ಮಾಡಿದೆ.
“ಸರ್, ನಾನು, ರಾಂಗ್ ಅಡ್ರೆಸ್ ಊಟದವನು. ಯಾಕೆ ಇನ್ನು ಅಪ್ಡೇಟ್ ಮಾಡಿಲ್ಲ” ಎಂದೆ.
ಅಲ್ಲಿಯವರೆಗೂ ನನಗೆ ಆ ಸನ್ನಿವೇಶದ ಒಂದೇ ಬದಿ, ಅಂದರೆ ನನ್ನ ಆಯಾಮವಷ್ಟೇ ಕಾಣಿಸುತಿತ್ತು. ಆದರೆ ನನ್ನ ಪ್ರಶ್ನೆಗೆ ದೊರೆತ ಉತ್ತರ, ನನಗೆ ಆ ಸನ್ನಿವೇಶದ ಮತ್ತೊಂದು ಮ್ಲಾನವಾದ ಆಯಾಮ ತಿಳಿಯುವಂತೆ ಮಾಡಿತು.
“ಸರ್ ಮಾಡ್ತೀನಿ. ನೀವು ಆರ್ಡರ್ ನೀವೇ ಇಟ್ಕೊಳಿ ಎಂದ ಖುಷಿಗೆ ನಾನು ಅದನ್ನ ಬಿಚ್ಚಿ ಊಟ ಮಾಡಲು ಕುಳಿತುಬಿಟ್ಟೆ. ತುಂಬಾ ಹಸಿವಾಗಿತ್ತು. ಬೆಳಗ್ಗೆ ಇಂದ ಏನು ತಿನ್ನೋದಿಕ್ಕು ಆಗಿರ್ಲಿಲ್ಲ. ಇನ್ಸೆನ್ಟಿವ್ ಸಿಗಬೇಕಂದ್ರೆ ಇನ್ನು ಬಹಳಷ್ಟು ಡೆಲಿವರಿ ಮಾಡ್ಬೇಕಿತ್ತು. ಹಾಗಾಗಿ ಒಂದರ ಹಿಂದೆ ಒಂದರಂತೆ ಡೆಲಿವರಿ ಮಾಡ್ತಾ, ತಿಂಡಿ ಊಟ ಮರೆತು ಹೋಗಿತ್ತು. 3–4 ತಿಂಗಳಿಂದ ಕೆಲಸ ಸಹ ಇರಲಿಲ್ಲ. ಇನ್ಸೆನ್ಟಿವ್ ಅವಶ್ಯಕ ಆಗ್ಬಿಟ್ಟಿದೆ ಸರ್. ನಾನು ಡೆಲಿವರಿಗೆ ಬಳೆಸುವ ಈ ಗಾಡಿಯ ಲೋನಿನ ಕಂತು ಕಟ್ಟಿ ಇದನ್ನ ಉಳಿಸಿಕೊಳ್ಳೋದಿಕ್ಕೆಯಾದರು ನಾನು ಏನು ಲೆಕ್ಕಿಸದೆ ಇನ್ಸೆನ್ಟಿವ್ ಪಡೆಯಲೇಬೇಕು. 4 ತಿಂಗಳಿಂದ ಕಂತು ಕಟ್ಟಲಾಗಿಲ್ಲ. ಈ ಬಾರಿಯೂ ಕಟ್ಟಿಲ್ಲವೆಂದರೆ ಗಾಡಿಯನ್ನ ತೊಗೊಂಡ್ಬಿಡ್ತಾರೆ ಅಂತ ಭಯ ಶುರುವಾಗ್ಬಿಟ್ಟಿದೆ. ಗಾಡಿ ಇಲ್ದೆ ಕೆಲಸ ಕಳೆದುಕೊಳ್ಳೋ ಬದಲಿಗೆ, ಒಂದು ತಿಂಗ್ಳು ಬೆಳಗ್ಗೆ ರಾತ್ರಿ ಕಷ್ಟ ಪಡೋದು ಉತ್ತಮ ಅಲ್ವ. ಹೀಗೆ ಅಡ್ಡಾಡ್ತಾ ನಿಮ್ಮ ಆರ್ಡರ್ ಹೇಗಿದ್ರು ನೀನೆ ಇಟ್ಕೋ ಅಂದ್ರಲ್ಲ, ಊಟ ಮಾಡ್ಕೊಂಡ್ಬಿಡೋಣ, ಮತ್ತೆ ರಾತ್ರಿಯವರಿಗೆ ಡೆಲಿವರಿ ಮಾಡಬಹುದು ಅಂತ ಊಟಕ್ಕೆ ಕೂತುಕೊಂಡುಬಿಟ್ಟೆ ನೋಡಿ. ಮತ್ತೊಮ್ಮೆ ಥ್ಯಾಂಕ್ಸ್ ಸರ್. ಈಗ್ಲೇ ಅಪ್ಡೇಟ್ ಮಾಡ್ತೀನಿ”.
ಆ ಕೆಲವು ಸಾಲುಗಳು ಹೇಳುವಾಗ ಈ ಹಿಂದೆ ಘಡಸು ಎನಿಸಿದ್ದ ಧ್ವನಿಯಲ್ಲಿ ಕೊಂಚ ಗದ್ಗದತೆ ಇದ್ದಂತೆ ಭಾಸವಾಯ್ತು. ಏನೂ ನುಡಿಯಲು ತೋಚದೆ ಕರೆಯನ್ನು ಅಂತ್ಯಗೊಳಿಸಿದೆ.
ಜೀವನದ ಪ್ರತಿಯೊಂದು ಸನ್ನಿವೇಶಕ್ಕೂ ಎಷ್ಟು ವಿಧವಾದ ಆಯಾಮಗಳಿರುತ್ತವೆ ಎನ್ನುವುದೇ ಆಶ್ಚರ್ಯ. ನನ್ನ ಅನುಕೂಲದ ಹಸಿವಿನ ಕೋಪದ ಮತ್ತೊಂದೆಡೆ ಹಸಿವನ್ನೇ ಮರೆಸುವ ಮೂಲಭೂತಗಳ ಅನಿಶ್ಚಿತತೆಯ ಅಲೆದಾಟದ ಆಯಾಮ. ನನಗೆ ಹೊರಗೆ ಹೋಗಿ ತಿನ್ನಲು ರೋಸಿಗೆ. ಅವರಿಗೆ ಹಸಿದಿದ್ದರು ಕೂತು ತಿನ್ನಲಾಗದೆ ನನ್ನಂತವರಿಗೆ ಊಟ ತಲುಪಿಸುವ ವ್ಯಂಗ್ಯ ಸ್ಥಿತಿ. ಹಸಿವು ಒಂದೇ, ಆದರೆ ಅದರ ಸ್ವರೂಪ ಎಷ್ಟು ವೈವಿಧ್ಯ. ಒಂದು ಕಡೆ ತಪ್ಪು ಮಾಡಿಯು ನನ್ನ ಸಮಯ ಸುಖಾ ಸುಮ್ಮನೆ ವ್ಯರ್ಥ ಮಾಡುತ್ತಿರುವರಂತೆ ಕೋಪದಿಂದ ಅದರ ಸಮರ್ಥನೆಗೆ ನಿಂತ ನಾನು, ಇನ್ನೊಂದೆಡೆ ತಾನು ಎಲ್ಲರಿಗು ತಲುಪಿಸುವ ಊಟವನ್ನು ನೆಮ್ಮದಿಯಿಂದ ಕೂತು ತಿನ್ನಲು ಸಮಯವಿರದ ಅವರು. ಈ ಪರಿಸ್ಥಿತಿಯ ಇನ್ನೊಂದು ನೋಟ ಅರಿಯದಿದ್ದರೆ, ನನಗೆ ಅವರು ನನ್ನ ಹಣ ಕಸಿದು, ಊಟವು ನೀಡದೆ, ಸಮಯವೂ ವ್ಯರ್ಥ ಮಾಡಿಸಿ, ಮೋಸ ಮಾಡಿದರೆಂಬ ಭಾವನೆಯೇ ಇರುತ್ತಿದ್ದಿತ್ತೇನೋ ಬಹುಷಃ. ಆ ಕೊನೆಯ ಸಂಭಾಷಣೆ ನನ್ನ ಭಾಸವನ್ನು ತಲೆ ಕೆಳಗಾಯಿಸಿತು. ನಮ್ಮ ಜೀವನದ ಎಲ್ಲ ಸನ್ನಿವೇಶಗಳಿಗೂ ಇಂತಹದೊಂದು ಸುಂದರವಾದ ಮತ್ತೊಂದು ಆಯಾಮವಿರಬಹುದೇ ? ಸಂಯಮದಿಂದ ತಿಳಿದು ಅಳೆದು ನೋಡುವ ತಾಳ್ಮೆ ಬೇಕಾಗಬಹುದಷ್ಟೆ. ಬಹುಷಃ ನಾನು ಮಾಡಿರುವ ಅನೇಕ ಒಳ್ಳೆಯ ಕೆಲಸಗಳಿಗೂ ಮೀರಿದ ಸುಂದರ ತಪ್ಪಿರಬಹುದು ಇದು. ನನ್ನಿಂದ ಅವರಿಗೆ ಕೂತು ಊಟ ಮಾಡುವಷ್ಟಾದರೂ ಸಹಾಯವಾಯಿತಲ್ಲ ಎಂದು ಸಂತಸವಾಯಿತು. ಅನ್ನ ಯಾರಿಗೆ ಮುಖ್ಯವೋ ಅವರಿಗೆ ಅದು ಸೇರಿದಲ್ಲಿ, ಆ ಸೇರುವಿಕೆಗೆ ನೀವೊಂದು ನಿಮಿತ್ತವಾದಾಗ, ನೀವೇ ಊಟ ಮಾಡಿ ತೇಗಿದಷ್ಟು ಹೊಟ್ಟೆ ತುಂಬುತ್ತದಲ್ಲವೇ !
“ನಮಸ್ಕಾರ ಸರ್. ಬಹಳ ದಿನಗಳಾಯ್ತು ಸುದ್ದಿನೇ ಇಲ್ವಲ್ಲ” ಎಂದರು ದಿನೇಶ್. ಸಹೋದ್ಯೋಗಿಗಳಾಗಿ ಕಿರಿದಾದ ಸ್ಟಾರ್ಟ್ ಅಪ್ ಕಂಪನಿಯೊಂದರಲ್ಲಿ ಕೆಲಸ ಪ್ರಾರಂಭಿಸಿದ ನಾವು ನಂತರದ ದಿನಗಳಲ್ಲಿ ಸ್ನೇಹಿತರಾಗಿದ್ದೆವು. ಆ ಕಂಪನಿಯಿಂದ ಹೊರಬಂದು ಹಲವು ದಿನಗಳ ನಂತರ ನಾನು ಅವರಿಗೆ ಫೋನಾಯಿಸಿದ್ದು ಅವರಿಗೆ ಖುಷಿ ಆಶ್ಚರ್ಯ ಎರಡು ಮೂಡಿಸಿದ್ದಿರಬಹುದು. ಹೀಗೇ ಹರಟುತ್ತಾ ನಾನು ಕೇಳಿದ ಪ್ರಶ್ನೆಯೊಂದಕ್ಕೆ “ಅದೇನ್ ಕೇಳ್ತೀರ ಬಿಡಿ. ಸ್ಕೂಬಿ ಸತ್ತೋಯ್ತಂತೆ” ಎಂದರು. ಅಲ್ಲಿಯವರೆಗೂ ಹಾಸ್ಯಭರಿತವಾಗಿದ್ದ ಮಾತು ಏಕಾಏಕಿ ನನ್ನನ್ನು ವಿಚಲಿತ ಗೊಳಿಸಿತು. ಏಕೆ ಏನು ಇತ್ಯಾದಿ ವಿವರಗಳನ್ನು ತಿಳಿದು ಖೇದದಿಂದ ಮಾತು ಮುಗಿಸಿ ಸ್ಕೂಬಿಯನ್ನೊಮ್ಮೆ ನೆನಯತೊಡಗಿದೆ. ಸ್ಕೂಬಿಯ ಮುದ್ದಾದ ವದನ, ಅದರ ಚೇಷ್ಟೆ, ಅದು ಶ್ವಾನ ಸಹಜ ವಿಚಿತ್ರ ಭಂಗಿಗಳಲ್ಲಿ ಮಲಗಿದ್ದಾಗ ನೋಡಿ ನಕ್ಕಿದ್ದು, ಇಂತಹದೊಂದು ನಾಯಿ ಮನೆಯಲ್ಲಿದ್ದರೆ ಎಷ್ಟು ಚೆಂದವೆಂದು ನೆನದದ್ದೆಲ್ಲವೂ ಹಾಗೆಯೇ ನನ್ನ ಸ್ಮ್ರಿತಿಯಲ್ಲೊಮ್ಮೆ ಮಿಂಚಿ ಹೋಯಿತು.
ಅನೇಕ ಎಂ ಏನ್ ಸೀ ಗಳಲ್ಲಿ ಕೆಲಸ ಮಾಡಿದ್ದ ನನಗೆ ಸ್ಟಾರ್ಟ್ ಅಪ್ ಕಂಪೆನಿಗಳಲ್ಲಿ ಕಾರ್ಯ ನಿರ್ವಹಿಸುವ ಅನುಭವ ಇರಲಿಲ್ಲ. ಸ್ನೇಹಿತನೋರ್ವನ ಸಲಹೆಯಿಂದ ಆ ಪುಟ್ಟ ಆಫೀಸಿನೊಳಗೆ ಬಂದ ನನಗೆ ಯಾವೊದೋ ಒಂದು ಕಾಲೇಜಿಗೆ ಬಂದಂತನಿಸಿತು. ಅಲ್ಲಿ ಯಾವುದೇ ಫಾರ್ಮಾಲಿಟಿಸ್ ಇರಲಿಲ್ಲ. ಸೀನಿಯರ್, ಜೂನಿಯರ್ ಬೇಧ ಕಾಣಲಿಲ್ಲ. ಮೇಲಾಗಿ ಎಲ್ಲರು ಇಪ್ಪತ್ತರ ಆಸು ಪಾಸಿನವರೇ. ಬೇಗನೆ ಹೊಂದಿಕೊಂಡೆ ಹೊಸ ಪರಿಸರಕ್ಕೆ. 15–16 ಇಂಜಿನೀರಿಯರುಗಳಷ್ಟೇ ಇದ್ದದ್ದರಿಂದ ಆಫೀಸ್ ಹೆಚ್ಚಾಗಿ ಮನೆಯಂತೆಯೇ ಇತ್ತು. ಒಂದು 3 BHK ಮನೆಯನ್ನು ಕೊಂಚವೇ ಮಾರ್ಪಡಿಸಿ ಅದಕ್ಕೆ ಆಫೀಸಿನ ರೂಪವನ್ನು ಕೊಡಲಾಗಿತ್ತು. ಮೂಲೆಯಲ್ಲೊಂದು ಫ್ರಿಡ್ಜ್, ಬಾಗಿಲಿನ ಎರಡು ಬದಿಗಳಲ್ಲಿ ಸೋಫಾ, ಒಂದು ಬೃಹದಾದ ಟಿವಿ, ಮತ್ತೊಂದು ಮೂಲೆಯಲ್ಲಿ ಗುಂಡನಾದ ಡೈನಿಂಗ್ ಟೇಬಲನ್ನು ಕಾನ್ಫರೆನ್ಸ್ ರೂಮಿನಂತೆ ಪರಿವರ್ತಿಸಲಾಗಿತ್ತು. ಅಲ್ಲದೆ ಯಾವುದೇ SEZ ನೊಳಗಿರದೆ ಪದ್ಮನಾಭನಗರದಂತಹ ರೆಸಿಡೆನ್ಷಿಯಲ್ ಏರಿಯದೊಳಗಿದ್ದು ನಮ್ಮ ಆಫೀಸಿನ ಮನೆಯಂತಹ ವಾತಾವರಣಕ್ಕೆ ಪುಷ್ಟಿ ನೀಡಿತ್ತು. ಆಫೀಸಾನಂತರ ಬೈಕ್ ರೈಡ್ ಹೋಗುವುದು, ಡಿನ್ನರಿಗೆಂದು ಸೇರುವುದು, ಟ್ರೆಕ್ ಟ್ರಿಪ್ ಹೋಗುವುದೆಲ್ಲವು ಸಾಮಾನ್ಯವಾಗಿತ್ತು. ಮ್ಯೂಸಿಕ್, ಸಿನಿಮಾ, ಕಾರುಗಳು, ಪಾಲಿಟಿಕ್ಸ್ ಹೀಗೆ ಹಲವಾರು ವಿಷಯಗಳ ಕುರಿತು ಎಲ್ಲರು ಹರಟುತ್ತಾ ಕೆಲಸ ಮಾಡುತ್ತಿದ್ದೆವು. ನಮ್ಮಲ್ಲಿ ಅನೇಕರಿಗೆ ಪ್ರಾಣಿಗಳ, ಅದರಲ್ಲೂ ಶ್ವಾನಗಳ ಕುರಿತಾಗಿ ವಿಶೇಷಾಸಕ್ತಿ ಇತ್ತು. ಹಲವಾರು ಬಾರಿ ವಿವಿಧ ತಳಿಯ ಶ್ವಾನಗಳ ಬಗ್ಗೆ, ಅವುಗಳ ಕುರಿತಾದ ಅನುಭವಗಳ ಬಗ್ಗೆ, ಎಲ್ಲೋ ಓದಿದ ಇಲ್ಲವೇ ಕೇಳಿದ ಕತೆಗಳ ಬಗ್ಗೆ ಚರ್ಚಿಸುತ್ತಿದ್ದೆವು. ನಮ್ಮಲ್ಲಿ ಕೊಂಚ ಸೀನಿಯರುಗಳಾದ ನವೀನ್, ಲಿಖಿತ್ ಅವರಿಗೆ ಶ್ವಾನಗಳ ಬಗ್ಗೆ ಎಲ್ಲಿಲ್ಲಿದ ಮಾಹಿತಿ ಇದ್ದಂತೆ ತೋರುತಿತ್ತು. ಬೆಂಗಳೂರಿನ ಯಾವ ಪಾರ್ಕಿನಲ್ಲಿ ಶ್ವಾನಗಳಿಗೆ ಎಂಟ್ರಿ ಇದೆ, ಎಲ್ಲಿ ಇಲ್ಲ, ಪೆಟ್ ಫ್ರೆಂಡ್ಲಿ ರೆಸ್ಟೋರಂಟುಗಳ್ಯಾವೂ, ಡಾಗ್ ಹೇರ್ ಕಟ್ ಮತ್ತು ಕ್ವೀನಿಂಗಿಗೆ ಯಾವ ಸಲೂನ್ ಬೆಸ್ಟ್, ಪಾಟ್ಟಿ(ಪಾಯಿಖಾನೆ) ಟ್ರೈನಿಂಗ್ ಹೇಗೆ ಮಾಡಿಸೋದು, ವ್ಯಾಕ್ಸಿನೇಷನ್ ಚಾರ್ಟ್ ಹೇಗೆ ಫಾಲೋ ಮಾಡೋದು ಹೀಗೆ ಪ್ರತಿಯೊಂದು ವಿಷಿಯಾದ ಕುರಿತಾಗಿ ಸುಮಾರು ಗಂಟೆಗಳು ಮಾತಾಡುತ್ತಿದ್ದರು. ಊರಿನಲ್ಲಿ ಕೇವಲ ಬೀದಿ ನಾಯಿಗಳನ್ನಷ್ಟೇ ಸಾಕಿದ್ದ ನನಗೆ ಇದೆಲ್ಲ ಮಾಹಿತಿ ಕೇಳಿಯೇ ಇವರೆಲ್ಲ ಎಷ್ಟು ಶ್ರೀಮಂತರಪ್ಪಾ ಎನ್ನಿಸಿದ್ದುಂಟು.
ಆಗ ಬ್ಯಾಚುಲರ್ ದಿಸೆಯಲ್ಲಿದ್ದ ನನಗೆ ಆಫೀಸಿಗೆ ತಡವಾಗಿ ಹೋಗುವುದು ವಾಡಿಕೆಯಾಗಿತ್ತು. ಎಂದಿನಂತೆ ಕೊಂಚ ತಡವಾಗಿ ತಲುಪಿ ಪಾರ್ಕಿಂಗಿಗಾಗಿ ತಡಕಾಡಿ ಸುಸ್ತಾಗಿ ಆಫೀಸ್ ಬಾಗಿಲು ತಳ್ಳಿದೆ. ವಿಚಿತ್ರವೆಂಬಂತೆ ಎಲ್ಲರು ಮೂಲೆಯೊಂದರಲ್ಲಿ ಗುಂಪುಗೂಡಿ ಏನೋ ಮಾಡುತ್ತಿದ್ದದ್ದು ಕಂಡಿತು. ಯಾರಾದರೂ ರೋಬೋಟ್ ಇಲ್ಲವೇ ಮತ್ತ್ಯಾವುದಾದರೂ ಗ್ಯಾಡ್ಜೆಟ್ ಅನ್ನು ಖರೀದಿಸಿ ಇಲ್ಲವೇ ಹವ್ಯಾಸಿಯಾಗಿ ನಿರ್ಮಿಸಿ ಪ್ರದರ್ಶಿಸುತ್ತಿರಬೇಕೆಂದು ತಿಳಿದು ನನ್ನ ಬ್ಯಾಗನ್ನು ಡೆಸ್ಕಿನ ಮೇಲಿರಿಸಿ ಎಲ್ಲರಿರುವೆಡೆಗೆ ಹೋದೆ. ದೊಡ್ಡ ಆಶ್ಚರ್ಯವೇ ಕಾದಿತ್ತು ನನಗೆ. ಪುಟ್ಟದಾದ ದಷ್ಟ ಪುಷ್ಟವಾದ ನಾಯಿ ಮರಿಯೊಂದು ಮಲಗಿ ನಿದ್ರಿಸುತಿದ್ದು, ಎಲ್ಲರೂ ಅದರ ಸುತ್ತ ಸೇರಿ ಸಾಕಷ್ಟು ಪ್ರಶ್ನೆಗಳನ್ನು ಲಿಖಿತ್ ಅವರಿಗೆ ಕೇಳುತ್ತಿದ್ದರು. ಲಿಖಿತ್ ಅವರು 50 ದಿನದ ಲ್ಯಾಬ್ರಡಾರ್ ಹೆಣ್ಣು ನಾಯಿಯನ್ನು ಕೊಂಡು ಅದನ್ನ ಸ್ಕೂಬಿಯೆಂದು ನಾಮಕರಿಸಿದ್ದರು. ಅವರು ವಾಸವಾಗಿದ್ದ ಅಪಾರ್ಟ್ಮೆಂಟಿನಲ್ಲಿ ಪುಟ್ಟದಾದ ಸ್ಕೂಬಿಯೊಂದನ್ನೇ ಬಿಟ್ಟು
ಬರಲಾರದೆ ಆಫಿಸೀಗೆ ತಂದಿದ್ದರು. ನಾಯಿ ಮರಿಗಳಿಗೆ 3–4 ತಿಂಗಳಾಗುವವರೆಗೂ ದಿನಕ್ಕೆ 5–6 ಬಾರಿ ಕೊಂಚವೇ ಊಟ ಮಾಡಿಸುವುದು ಒಳ್ಳೆಯದೆಂದು, ಅದನ್ನು ಮನೆಯಲ್ಲಿಯೇ ಬಿಟ್ಟರೆ ನೋಡಿಕೊಳ್ಳೋರು ಯಾರು ಇಲ್ಲವೆಂದು, ಅವರ ಹೆಂಡತಿಯೂ ಎಂ ಏನ್ ಸೀ ಒಂದರಲ್ಲಿ ಕೆಲಸ ಮಾಡೋದರಿಂದ ಅವರಿಗೆ ಸ್ಕೂಬಿಯನ್ನು ತಮ್ಮೊಟ್ಟಿಗೆ ಕರೆದೊಯ್ಯಲು ಕಷ್ಟವಾಗುವುದೆಂದು ತಿಳಿಸಿದರು. ಚಿಕ್ಕಂದಿನಿಂದಲೂ ಶ್ವಾನಗಳೆಂದರೆ ಬಹಳವಾಗಿ ಪ್ರೀತಿಯಿದ್ದ ನನಗೆ ಸ್ಕೂಬಿಯನ್ನ ನೋಡಿ ಮತ್ತು ಲಿಖಿತ್ ಹೇಳಿದ ಕತೆ ಕೇಳಿ ಏನಿಲ್ಲವೆಂದರೂ ಇನ್ನು 5–6 ತಿಂಗಳು ಸ್ಕೂಬಿ ಆಫೀಸಿಗೆ ಬರುವುದೆಂದೆಣಿಸಿ ಖುಷಿಯಾಯಿತು. ಬ್ರೇಕ್ ಎಂದು ಎರಡು ಬೀದಿಗಳಾಚೆ ಇದ್ದ ಕಿರಿದಾದ ಹೋಟೆಲಿಗೆ ಹೋಗಿ ಕಾಫಿ ಹೀರುವುದನ್ನು ಬಿಟ್ಟು ಸ್ಕೂಬಿಯೊಟ್ಟಿಗೆ ಕಾಲ ಕಳೆಯುವುದೇ ದೊಡ್ಡ ಸ್ಟ್ರೆಸ್ ಬಸ್ಟರ್ ಆಗಿತ್ತು ನನಗೆ. ಲ್ಯಾಬ್ರಡಾರ್ ನಾಯಿಗಳು ಸ್ಪೋರ್ಟ್ಸ್ ಬ್ರೀಡ್ ಆಗಿರೋದರಿಂದ ಸ್ಕೂಬಿಗೂ ಆಡುವುದೆಂದರೆ ಬಹಳವೇ ಪ್ರಿಯವಾಗಿತ್ತು. ನಮ್ಮ ಆಫೀಸಿನುದ್ದಕ್ಕೂ ತನ್ನ ಪುಟ್ಟ ಪಾದಗಳನ್ನ ನೃತ್ಯದಂತೆ ಕುಣಿಸುತ್ತ ಓಡಾಡುತಿತ್ತು. ಆಟವಾಡಿ ಸುಸ್ತಾದಾಗ ಮೂಲೆಯೊಂದರಲ್ಲೋ, ಸೋಫಾದ ಕೆಳಗೋ ಹೋಗಿ ಮಲಗುತಿತ್ತು. ಅದು ಮಲಗಿದಾಗ ಅದನ್ನ ನೋಡುವುದೇ ಆನಂದ. ಎಷ್ಟು ಮುದ್ದಾಗಿತ್ತು ಸ್ಕೂಬಿ. ಎಷ್ಟೋ ಬಾರಿ ಎದ್ದ ಕೂಡಲೇ ನಾನು ಕೆಲಸ ಮಾಡುವ ಡೆಸ್ಕಿನಡಿಗೆ ಬಂದು ನನ್ನ ಪ್ಯಾಂಟನ್ನು ನೆಕ್ಕಲು ಶುರು ಮಾಡುತಿತ್ತು. ಅದನ್ನ ತೊಡೆಯ ಮೇಲೆ ಕೂಡಿಸಿಕೊಂಡು ಕೆಲಸ ಮಾಡೋದೇ ಒಂದು ಮಜಾ. ಸ್ಕೂಬಿ ನನಗೆ ಎಷ್ಟೋ ಬಾರಿ ಆಫಿಸೀಗೆ ಹೋಗಲು ಒಂದು ಕಾರಣವೂ ಆಗಿತ್ತು.
“ಸರ್, ಇದು ಎಲ್ಲ ಕಡೆ ಗಲೀಜು ಮಾಡುತ್ತೆ. ನೀವು ಇದನ್ನ ಹೊರಗಡೆ ಕಟ್ಟಾಕಿ” ನಮ್ಮ ಆಫೀಸ್ ಮೆಂಟೆನೆನ್ಸ್ ನೋಡಿಕೊಳ್ಳುತ್ತಿದ್ದ ಪುಟ್ಟರಾಜ್ ಲಿಖಿತ್ ಅವರಿಗೆ ಹೇಳುತ್ತಿದ್ದರು. ನನ್ನ ಹೆಡ್ ಫೋನ್ಸ್ ಇಳಿಸಿ ಏನಾಗಬಹುದೆಂಬ ಕುತೂಹಲದಿಂದ ಅವರ ಸಂಭಾಷಣೆಯನ್ನು ಆಲಿಸಿದೆ. “ಚಿಕ್ಕದೋ ಅದು. ಕಟ್ಟಿ ಹಾಕಿದ್ರೆ ಅಳುತ್ತೆ. ನಾನು ಕ್ಲೀನ್ ಮಾಡ್ತೀನಿ ಬಿಡು” ಎಂದರು ಲಿಖಿತ್. “ಇಲ್ಲ ಸರ್. AC ಇದೆ ಇಲ್ಲಿ. ನೀವು ಕ್ಲೀನ್ ಮಾಡಿದ್ರು ವಾಸನೆ ಆಗುತ್ತೆ ಅಂತ ಎಷ್ಟೊಂದ್ ಎಂಪ್ಲಾಯೀಸ್ ಕಂಪ್ಲೇಂಟ್ ಮಾಡ್ತಾರೆ. ನೀವು ಮ್ಯಾನೇಜರ್ ಪರ್ಮಿಷನ್ ತೊಗೊಂಡ್ ಕರ್ಕೊಂಡ್ ಬನ್ನಿ ಇಲ್ಲ ಸುಮ್ನೆ ನಮಗೆ ಕಿರಿ ಕಿರಿ” ಎಂದು ಗೊಣಗಿದನು ಪುಟ್ಟರಾಜ್. ಪುಟ್ಟರಾಜ್ ಹೇಳುವುದರಲ್ಲಿ ನ್ಯಾಯವಿತ್ತು. 15–20 ಇಂಜಿನೀರ್ಯರುಗಳು ಕೆಲಸ ಮಾಡೋ ಜಾಗದಲ್ಲಿ ಎಲ್ಲರಿಗೂ ನಾಯಿ ಹಿಡಿಸಬೇಕೆಂದಿಲ್ಲ. ಹಲವರಿಗೆ ಸ್ಕೂಬಿಯಿಂದ ನೇರವಾಗಲ್ಲದಿದ್ದರೂ ಬೇರೆ ವಿಧಗಳಲ್ಲಿ ತೊಂದರೆಯಾಗುತ್ತಿದ್ದದ್ದು ನನಗೂ ತಿಳಿದಿತ್ತು. “ಓಕೆ. ಹೇಳ್ತಿನಿ ಬಿಡಪ್ಪ. ಇವತ್ತೊಂದಿನ ಇಲ್ಲೇ ಒಳಗೆ ಇರ್ಲಿ. ನಾಳೆಯಿಂದ ಪರ್ಮಿಷನ್ ತೊಗೊಂಡ್ ಕರ್ಕೊಂಡ್ ಬರ್ತೀನಿ” ಎಂದು ಮಾತು ಮುಗಿಸಿದರು ಲಿಖಿತ್.
“ಸ್ಕೂಬಿ ಎಲ್ಲಿ ಸರ್. ಬಂದಿಲ್ವ ಇವತ್ತು ? ಮನೇಲಿ ಒಂದೇ ಇರುತ್ತಾ ?” ಎಂದು ಸ್ಕೂಬಿ ಆಫೀಸಿನಲ್ಲಿರದಿದ್ದನ್ನು ಕಂಡು ನನ್ನ ಪಕ್ಕ ಕುಳಿತಿದ್ದ ದಿನೇಶ್ ಅವರಿಗೆ ಕೇಳಿದೆ. ಸ್ಕೂಬಿ ಇದ್ದಿದ್ದರೆ ನಾನು ಆಫಿಸಿನೊಳಗೆ ಹೋದಂತೆಯೇ ಓಡಿ ಬಂದು ತನ್ನ ಚೇಷ್ಟೆಗಳನ್ನು ಶುರು ಮಾಡಿಕೊಳ್ಳುತಿತ್ತು. “ಸ್ಕೂಬಿನ ಆಫಿಸೀಗೆ ಕರ್ಕೊಂಡ್ ಬರೋದು ಬೇಡ ಅಂತ ಹೇಳಿರಬೇಕು ಅನ್ಸುತ್ತೆ. ಅದಿಕ್ಕೆ ಕಾರ್ ಅಲ್ಲೇ ಮಲಗ್ಸಿದ್ದಾರಂತೆ. 2–3 ಗಂಟೆಗಳಿಗೊಮ್ಮೆ ಹೋಗಿ ಸ್ವಲ್ಪ ಓಡಾಡಿಸಿ ಊಟ ಮಾಡಿಸಿ ಬರ್ತಾರಂತೆ” ಎಂದರು ದಿನೇಶ್. ಮನಸ್ಸಿಗೆ ಕೊಂಚ ಬೇಸರವಾಯಿತು. ಅಷ್ಟು ಹೊತ್ತು ಕಾರಿನಲ್ಲಿ ಒಂದೇ ಹೇಗೆ ಇರಬೇಕು ಪಾಪ. ಇಷ್ಟು ದಿನವೂ ದೊಡ್ಡದಾದ ಜಾಗದಲ್ಲಿ ಎಲ್ಲರೊಟ್ಟಿಗೆ ಆತಡವಾಡುತ್ತ ಇದ್ದ ಅದನ್ನು ಈಗ ಚಿಕ್ಕದಾದ ಕಾರಿನೊಳಗೆ ಕೂಡಿಟ್ಟರೆ ಅದು ಹೆದರುವುದಿಲ್ಲವೇ ಎಂದು ಯೋಚಿಸುತ್ತ ಬ್ರೇಕ್ ಟೈಮಿನಲ್ಲಿ ಹೋಗಿ ಸ್ಕೂಬಿಯನ್ನು ಮಾತಾಡಿಸೋಣ ಎಂದುಕೊಂಡು ಕೆಲಸಕ್ಕೆ ಕುಳಿತೆ. ಹೀಗೆಯೇ ಸ್ವಲ್ಪ ದಿನಗಳ ಕಾಲ ಸ್ಕೂಬಿ ಕಾರಿನಲ್ಲೇ ಆಫೀಸಿಗೆ ಬಂದು ಅಲ್ಲೇ ಮಲಗಿ ಮನೆಗೆ ಹೋಗುತಿತ್ತು.
ಹಲವು ತಿಂಗಳುಗಳ ತರುವಾಯ ಸ್ಕೂಬಿಯನ್ನ ಆಫೀಸಿಗೆ ಕರೆದು ತರುವುದನ್ನ ಲಿಖಿತ್ ನಿಲ್ಲಿಸಿದರು. ಸ್ಕೂಬಿ ಈಗ ಸ್ವಲ್ಪ ದೊಡ್ದಾಗಿರುವುದರಿಂದ ತಮ್ಮ ಅಪಾರ್ಟ್ಮೆಂಟಿನಲ್ಲಿ ಅದನ್ನೊಂದೇ ಊಟ ನೀರು ಒದಗಿಸಿ ಬಿಟ್ಟು ಓಡಾಡಲು ತೊಂದರೆಯೇನಿಲ್ಲವೆಂಬುದನ್ನು ಲಿಖಿತ್ ತಿಳಿಸಿದರು. ದಿನವೂ ಸ್ಕೂಬಿಯ ಕುರಿತಾದ ಕತೆಗಳನ್ನ ಕೇಳುವುದು ನನಗೆ ಹವ್ಯಾಸವಾಗಿಬಿಟ್ಟಿತು. ಸ್ಕೂಬಿಯನ್ನ ವೀಕೆಂಡ್ ವಾಕಿಂಗ್ ಕರೆದುಕೊಂಡು ಹೋಗಿದ್ದ ವಿಡಿಯೋಗಳನ್ನ, ಅವರದ್ದೇ ಅಪರಾಟ್ಮೆಂಟಿನ ಸೊಸೈಟಿಯಲ್ಲಿ ಇರುವ ಮತ್ತೋರ್ವ ಶ್ವಾನದೊಟ್ಟಿಗೆ ಸ್ಕೂಬಿ ಆಡುತ್ತಿರುವ ವಿಡಿಯೋಗಳನ್ನ ನೋಡುವುದೇ ಒಂದು ಖುಷಿಯಾಗಿತ್ತು. “ಎಷ್ಟು ದೊಡ್ಡಕಾಗಿದೆ ಸ್ಕೂಬಿ” ಎಂದು ಉದ್ಗಾರ ತೆಗೆಯುತ್ತಿದ್ದೆವು. ಸ್ಕೂಬಿಯ ಫಸ್ಟ್ ಬರ್ತ್ಡೇ ಪಾರ್ಟಿ ಮಾಡಿದ್ದ ಫೋಟೋಸ್ ನೋಡಿ, ಶ್ವಾನಗಳಿಗೂ ಪಾರ್ಟಿ ಮಾಡುವರೇ ಎಂದು ಹುಬ್ಬೇರಿಸ್ಸಿದ್ದಷ್ಟೇಯಲ್ಲದೆ ಲಿಖಿತ್ ಸ್ಕೂಬಿಯನ್ನು ಪ್ರೀತಿಸುವ ಪರಿ ನೋಡಿ ತಬ್ಬಿಬ್ಬಾಗಿದ್ದೆವು. ಪಾರ್ಟಿಗೆ ಬಂದಿದ್ದ ಬಹಳಷ್ಟು ಇತರೆ ಶ್ವಾನಗಳೊಟ್ಟಿಗೆ ಸ್ಕೂಬಿ ಆಡುವುದನ್ನು ನೋಡುವುದು ಎಷ್ಟು ಚಂದ. ಸ್ಕೂಬಿ ಮರಿ ಹಾಕಿದರೆ ನಂಗೊಂದು ಬೇಕು ಎಂದು ಹಲವು ಬಾರಿ ಲಿಖಿತ್ ಅವರಿಗೆ ಹೇಳಿದ್ದೆ. ಎಷ್ಟೋ ಬಾರಿ ಶ್ವಾನವೊಂದನ್ನು ಸಾಕುವ ಮತ್ತು ಅದಕ್ಕೆ ಬೇಕಾದ ಎಲ್ಲ ಅನುಭವ ಹಾಗು ಮಾಹಿತಿ ನನಗೀಗ ಇದೆ ಎಂದು ಎನಿಸಿ ಹಲವಾರು ಬ್ರೀಡರ್ ಗಳಿಗೆ ಕರೆ ಮಾಡಿ ಇನ್ನೇನು ಹೋಗಿ ಪುಟ್ಟದೊಂದು ಮರಿಯನ್ನು ತರಬೇಕು ಎನ್ನುವ ಕೊನೆ ಹಂತದಲ್ಲಿ ಯಾವುದೊ ಒಂದು ಭಯ ನನ್ನ ತಡೆಯುತಿತ್ತು. ಅದು ಅಂದಿನ ಭಯವಾಗಷ್ಟೇ ಉಳಿದು ಇಂದು ನನ್ನ ಮುದ್ದಾದ ಲ್ಯಾಬ್ರಡಾರ್ ಗಂಡು ಶ್ವಾನ ಬಫಿ ಪಕ್ಕ ಕುಳಿತು ಇದನ್ನ ಬರೆಯುತ್ತಿರುವುದು ಸಂತಸ.
ಹೀಗೆಯೇ ಕಾಲಾನುಸಾರ ನಾನು ಉನ್ನತ ಕೆಲಸಕ್ಕಾಗಿ ಮತ್ತೊಂದು ಸಾಫ್ಟ್ವೇರ್ ಕಂಪನಿ ಸೇರಿದೆ. ಕೆಲಸದಲ್ಲಿ ಬಹಳಷ್ಟು ಬ್ಯುಸಿಯಾದೆ. ನನ್ನ ಹಳೆಯ ಕಂಪನಿಯ ಮಿತ್ರರೊಟ್ಟಿಗೆ ಸಂಪರ್ಕ ಕೊಂಚ ತಗ್ಗಿತು. ಆಗೊಮ್ಮೆ ಈಗೊಮ್ಮೆ ಭೆಟ್ಟಿಯಾದಾಗ ಎಲ್ಲರ ಬಗ್ಗೆ ಕೇಳಿ ತಿಳಿಯುತಿದ್ದೆ. ಹೀಗೆಯೇ ಒಮ್ಮೆ ಭೇಟಿಯಾದಾಗ ಲಿಖಿತ್ ಅವರು ಕಂಪನಿ ಬಿಟ್ಟು ಬೇರೊಂದು ಕಡೆ ಸೇರಲಿದ್ದಾರೆಂದು ದಿನೇಶರಿಂದ ತಿಳಿಯಿತು. ಸ್ಕೂಬಿಯ ಬಗ್ಗೆ ಲಿಖಿತ್ ಅವರ ಫೇಸ್ಬುಕ್ ಅಕೌಂಟಿನಲ್ಲಿ ಹಾಕುತಿದ್ದ ಅಪ್ಡೇಟ್ಸ್ ಹೊರತಾಗಿ ಮತ್ತೇನು ತಿಳಿಯುತ್ತಿರಲಿಲ್ಲ. ಹೀಗೆಯೇ ಒಂದು ದಿನ ಸ್ಕೂಬಿಯ ಬಗ್ಗೆ ತಿಳಿಯಲೆಂದು ಲಿಖಿತ್ ಅವರ ಅಪ್ಡೇಟ್ಸ್ ನೋಡಲು ಅವರ ಫೇಸ್ಬುಕ್ ಅಕೌಂಟ್ ತೆರೆದಾಗ, ಅವರು ಬೇರೊಂದು ದೇಶಕ್ಕೆ ಶಿಫ್ಟ್ ಆಗಿರುವುದು ತಿಳಿಯಿತು. “ಸ್ಕೂಬಿಯನ್ನೂ ಕರೆದೊಯ್ದರಾ ? ಅಷ್ಟು ಉತ್ಕಟವಾಗಿ ಪ್ರೀತಿಸುತ್ತಿದ್ದ ಸ್ಕೂಬಿಯನ್ನು ಬಿಟ್ಟು ಹೋಗಿರಲಾರರು. ಶ್ವಾನವೊಂದನ್ನು ವಿದೇಶಕ್ಕೆ ಹೇಗೆ ಕರೆದೊಯ್ದಿರಬಹುದು ?” ಹೀಗೆಯೇ ಪ್ರಶ್ನೆಗಳೊಂದಿಗೆ ಅವರ ಅಪ್ಡೇಟ್ಸ್ ಗಳನ್ನ ನೋಡುತ್ತಾ ಹೊರಟಾಗ, “ವಿಲ್ ಮಿಸ್ ಯು ಸ್ಕೂಬಿ” ಎಂದು ಬರೆದು ಅವರು ಸ್ಕೂಬಿಗೆ ಮುತ್ತಿಕ್ಕುತ್ತಿದ್ದಪೋಸ್ಟನ್ನೊಂದು ನೋಡಿ ಸ್ಕೂಬಿಯನ್ನು ಇಲ್ಲೇ ಬಿಟ್ಟು ಹೋಗಿದ್ದಾರೆಂದು ತಿಳಿಯಿತು. ಸ್ಕೂಬಿಗೀಗ ಎರಡು ವರ್ಷಗಳಿರಬೊಹುದು. ನನ್ನ ಮನದಲ್ಲಿ ಸ್ಕೂಬಿಯ ಕುರಿತಾಗಿ ಕಿರಿದಾದ ಮಂಥನವೇ ಶುರುವಿಟ್ಟಿತು. ತನ್ನನ್ನು ಅಷ್ಟಾಗಿ ಪ್ರೀತಿಸಿದ್ದ ಕುಟುಂಬವನ್ನು ಸಹಜವಾಗಿಯೇ ಸ್ಕೂಬಿಯೂ ತನ್ನ ಕುಟುಂಬವೆಂದು ಪರಿಗಣಿಸಿರಬೇಕು. ಪಾಪ ಅದಾದರೂ ಬೇರೇನನ್ನು ಮಾಡಿಯಾತು. 50 ದಿನಗಳ ಮರಿಯಿದ್ದಾಗಿನಿಂದಲೂ ಇವರನ್ನ ಹೊರತಾಗಿ ಬೇರೆ ಪ್ರಪಂಚವನ್ನು ಅರಿಯದು. ಹಾಗಿರುವಾಗ ತನಗರಿವಿಲ್ಲದಂತೆಯೇ ಒಂದು ದಿನ ತನಗೊಂದು ಮುತ್ತಿಕ್ಕಿ ಹೋದ ಕುಟುಂಬ ಹಿಂತಿರುಗಿ ಬಾರದ್ದನ್ನು ಕಂಡು ಸ್ಕೂಬಿಗೆ ಹೇಗನಿಸಿರಬಹುದು ? ಆ ಅಮಾಯಕ ಶ್ವಾನಕ್ಕೆ ಹೇಗೆ ತಾನೇ ತಿಳಿಯಬೇಕು ಇವರು ತನ್ನನ್ನು ಬಿಟ್ಟು ತಮ್ಮ ಏಳಿಗೆಗೂ ಅಥವಾ ಕಾರ್ಯ ಸಾಧನೆಗೋ ಇನ್ನೊಂದೆಡೆ ಹೊರಟಿದ್ದಾರೆಂದು ? ಎರಡು ವರ್ಷಗಳ ಕಾಲ ತನ್ನನ್ನು ಮುದ್ದಿನಿಂದ ಬೆಳೆಸಿದವರು ಈಗೇಕೆ ತನ್ನನ್ನು ತ್ಯಜಿಸಿದರು ಎಂದು ಎಷ್ಟಾಗಿ ಕೊರಗಿರಬಹುದು ಆ ಮೂಕ ಜೀವ ? ಯಾಕೋ ಬೇಜಾರಾಗಿ ಮಾತಾಡೋಣವೆನಿಸಿ ದಿನೇಶರಿಗೆ ಕರೆ ಮಾಡಿದೆ.
ಬೆಂಗಳೂರಿನಲ್ಲೇ ಇರುವ ಅವರ ಮಾವನ ಮನೆಯಲ್ಲಿ ಸ್ಕೂಬಿಯನ್ನು ಬಿಟ್ಟು ಹೋಗಿದ್ದರಂತೆ ಲಿಖಿತ್. ಈಗಾಗಲೇ ಹೋಗಿ ಒಂದು ತಿಂಗಳಾಗಿದ್ದರಿಂದ ಸ್ಕೂಬಿಯು ಹೊಂದಿಕೊಂಡಿರಬಹುದೆಂದು ದಿನೇಶ್ ತಿಳಿಸಿದರು. ಸಮಾಧಾನವೆನಿಸಲಿಲ್ಲ, ಆದರೂ ನಾನು ಈ ವಿಷಯದಲ್ಲಿ ನಿಸ್ಸಹಾಯಕನೆಂದು ಅರಿತು ಸುಮ್ಮನಾದೆ. ಹೀಗೆಯೇ ಇನ್ನೊಂದೆರಡು ತಿಂಗಳುಗಳ ಕಾಲದ ನಂತರ ದಿನೇಶವರಿಗೆ ಮತ್ತೊಮ್ಮೆ ಕರೆ ಮಾಡಿದ್ದೆ. ನಾನು ಸಾಮಾನ್ಯವಾಗಿ ಸ್ಕೂಬಿಯ ಬಗ್ಗೆ ತಿಳಿಯಲು ಆಧರಿಸಿದ್ದ ಫೇಸ್ಬುಕ್ ಪೋಸ್ಟುಗಳು ಈಗ ಲಿಖಿತ್ ಮತ್ತು ಅವರ ಫ್ಯಾಮಿಲಿಯ ವಿಚಾರಗಳಿಂದ ತುಂಬಿತ್ತೇ ಹೊರತು ಸ್ಕೂಬಿಯ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಆಗ ನನಗೆ ದಿನೇಶ್ ಅವರು ತಿಳಿಸಿದ್ದು, ಸ್ಕೂಬಿ ಸತ್ತು ಹೋಗಿದೆಯೆಂದು. 2.5 ವರ್ಷಗಳ ಶ್ವಾನ ಸ್ಕೂಬಿ. ಸಾಯುವ ವಯಸ್ಸಂತೂ ಅಲ್ಲವೇ ಅಲ್ಲ. ಲ್ಯಾಬ್ರಡಾರ್ ಶ್ವಾನಗಳು 10–15 ವರ್ಷಗಳ ಕಾಲ ಬದುಕುವವು. 2 ವರ್ಷಗಳ ಕಾಲ ಮುದ್ದಾಗಿ ಬೆಳೆದಿತ್ತು. ಆದರೆ ಕೇವಲ 2–3 ತಿಂಗಳುಗಳ ಅಂತರದಲ್ಲಿ ತನ್ನ ಜೀವನವೇ ಬದಲಾಗಿ ಹೋಗಿ, ಕೊನೆಗೆ ಸತ್ತು ಹೋಯಿತು. ಮನೆಯ ಗೇಟ್ ತೆರೆದಿದ್ದಾಗ ಏನನ್ನೋ ಅರಸಿ ಹೊರಗೆ ಹೋಗಿ ಆಕ್ಸಿಡೆಂಟಿನ್ಲಲಿ ಸತ್ತು ಹೋಯಿತೆಂದು ಮತ್ತು ಕೊನೆಯ 2–3 ತಿಂಗಳು ಹೆಚ್ಚಾಗಿ ಡಿಪ್ರೆಶನ್ ಅಲ್ಲಿಯೇ ಇದ್ದ ಸ್ಕೂಬಿ, ಮೂಲೆಯೊಂದನ್ನು ಹಿಡಿದು ಮಲಗುವುದು ಬಿಟ್ಟರೆ ಅಷ್ಟಾಗಿ ಬೇರೇನನ್ನು ಮಾಡುತ್ತಿರಲಿಲ್ಲವೆಂದೂ ತಿಳಿಯಿತು. ಅಂತೂ ಲಿಖಿತ್ ಅವರು ಇಲ್ಲದೆ ಸ್ಕೂಬಿ ಹೇಗೆ ಹೊಂದಿಕೊಳ್ಳುವುದೋ ಎಂದು ಯೋಚಿಸಿದ್ದ ನನಗೆ ಅಂತ್ಯ ಹೀಗಾಗಿದ್ದು ಏಕೋ ಆಶ್ಚರ್ಯವೆನಿಸಲಿಲ್ಲ. ಸ್ಕೂಬಿಯ ಹಳೆ ಬರ್ತ್ ಡೇ ಪಾರ್ಟಿಯ ಚಿತ್ರವೊಂದನ್ನು ನೋಡಿದೆ. ಮುಂದಿನ ಬರ್ತ್ ಡೇಗೆ ತನ್ನವರೇ ತನ್ನನ್ನು ಬಿಟ್ಟು ಹೋಗುವರೆಂದು ಸ್ಕೂಬಿ ತಿಳಿದಿದ್ದರೆ ಪಾರ್ಟಿಯೇ ಬೇಡವೆನ್ನುತ್ತಿತ್ತೇನೋ ಬಹುಷಃ. ಆ ಜೀವಿಯ ಅದ್ಭುತವೇ ಅದಲ್ಲವೇ ? ಅದು ಬದುಕುವುದು ಆ ಕ್ಷಣಕ್ಕೆ, ಭಾವನೆಗಳಿಗೆ, ಭವಿಷ್ಯಕ್ಕೆ ಮತ್ತು ಆಸೆಗಳಿಗಲ್ಲ.
ಎಷ್ಟೋ ಬಾರಿ “ನೀನ್ಯಾಕೆ ಅಮೇರಿಕಾ ಅಥವಾ ಲಂಡನ್ ಹೋಗಬಾರದು ? ಎರಡು ಮೂರು ವರ್ಷಗಳಲ್ಲಿ ಹೋಂ ಲೋನ್ ತೀರಿಸುವಷ್ಟು ದುಡಿದುಕೊಂಡು ಬಂದರಾಯಿತು” ಎಂದು ನನ್ನ ಅನೇಕ ಮಿತ್ರರು ಸಲೆಹೆ ನೀಡುತ್ತಾರೆ. ಆರ್ಥಿಕವಾಗಿ ಯೋಚಿಸಿದರೆ ಅದು ಸರಿಯೇ. ನಾನು ಪ್ರೀತಿಯಿಂದ ಮನೆಗೆ ಕರೆದುಕೊಂಡು ಬಂದು, ಎರಡು ವರ್ಷಗಳ ಕಾಲ ಮುದ್ದಾಗಿ ಸಾಕಿದ ಬಫಿಗೆ, ಹೇಗೆ ತಿಳಿಸಲಿ ಎರಡು ವರ್ಷಗಳ ಕಾಲ ಹೋಗಿ ದುಡ್ಡು ಮಾಡಿಕೊಂಡು ಬರುವೆನೆಂದು ? ಈ ದ್ವಂದ್ವ ತಿಳಿಸಿದಾಗ “ಎಷ್ಟೊಂದ್ ಜನ ತಂದೆ ತಾಯಿ ಬಂಧು ಬಳಗಾನ ಬಿಟ್ಟೋಗಲ್ವಾ ? ಬಿಟ್ಟು ಹೋದ ಮಾತ್ರಕ್ಕೆ ಅವ್ರನ್ನೆಲ್ಲ ಮರೆತರು ಅಂತಾನಾ ಇಲ್ಲ ವಾಪಾಸ್ ಬರೋದೇ ಇಲ್ಲ ಅಂತಾನಾ ? ನಾವು ಎರಡು ಮೂರು ವರ್ಷಗಳ ಕಾಲ ಸಣ್ಣದೊಂದು ತ್ಯಾಗ ಅಥವಾ ಅಡ್ಜಸ್ಟ್ಮೆಂಟ್ ಮಾಡ್ಕೊಳೋದ್ರಿಂದ ಎಲ್ಲರಿಗೂ ಹೆಲ್ಪ್ ಆಗುತ್ತೆ ಅಂತಾನೆ ಅಲ್ವ ಅವ್ರು ಕೋ-ಆಪರೇಟ್ ಮಾಡೋದು” ಎಂದು ನನ್ನ ಸ್ನೇಹಿತರು ತಮ್ಮ ತರ್ಕ ಮಂಡಿಸುತ್ತಾರೆ. ಹೌದು. ಅದು ನಿಜವೇ ಸರಿ. ಆದರೆ ಬಂಧು ಬಳಗವನ್ನು ಬಿಟ್ಟು ಹೋಗುವುದು ಮತ್ತು ನಿಸ್ಸಹಾಯಕ ಮೂಕ ಜೀವಿಯನ್ನು ಬಿಟ್ಟು ಹೋಗುವುದು ಸಮವೇ ? ಅವರಿಗೆ ನಾವು ತಿರುಗಿ ಬರುವೆವೆಂಬ ಆಶಯವನ್ನಾದರೂ ತಿಳಿಸಿ ಹೇಳಬಹುದು ಮತ್ತು ಅವರು ಆ ಆಶಯವನ್ನೇ ಆಸರೆಯಾಗಿಸಿ ಸುಮ್ಮನಾಗಬಹುದು. ಮೂಕ ಶ್ವಾನಕ್ಕೆ ಹೇಗೆ ತಿಳಿಸುವಿರಿ ಈ ನಿಮ್ಮ ತರ್ಕವನ್ನ ? ಅದಕ್ಕೆ ನೀವು ಅದನ್ನ ತ್ಯಜಿಸಿ ಹೋದರೆಂಬ ಖೇದವೆ ಕಾಡಿ, ಆ ಖೇದದಲ್ಲೂ ತಾನೇನು ತಪ್ಪು ಮಾಡಿದ್ದೇನೆಂದು ತನ್ನನ್ನು ತ್ಯಜಿಸಿದರು ಎಂದು ಘಾಡವಾಗಿ ಯೋಚಿಸುತ್ತಲೇ ತನ್ನ ಜೀವನ ಕಳೆದುಬಿಡುವುದೇ ಹೊರತು, ನೀವು ನಿಮ್ಮ ಆಮಿಷಗಳಿಗೆ ಅದನ್ನು ಬಿಟ್ಟು ಹೋದಿರಿ ಎಂದು ದೂಷಿಸದು. ಒಂದು ಶ್ವಾನವನ್ನು ತರುವುದೆಂದರೆ, ಶೋಕಿಗೆ ಅದನ್ನು ಸಾಕಿ ಬೇಸರವಾದಾಗಲೋ ಇಲ್ಲವೇ ಬೇರೊಂದು ಆಮಿಷ ಉಂಟಾದಾಗಲೋ ಅದನ್ನ ಹಸ್ತಾಂತರಿಸುವುದಲ್ಲ. ಮನೆಗೊಂದು ಪ್ರಾಣಿ ತರುವುದು ಒಂದು ದೀರ್ಘ ಕಾಲದ ತಪಸ್ಸಿನಂತೆ. ಆ ತಪಸ್ಸಿಗೆ ಭಾವನೆಗಳೇ ಶ್ವಾಸ, ಅನುಕೂಲಗಳಲ್ಲ. ಸಮಯಕ್ಕನುಗುಣವಾಗಿ, ಮಾನವ ಸಹಜವಾಗಿ, ನಮ್ಮ ಮನಸ್ಸಿಗೆ ಹಲವಾರು ಮೋಹಗಳಾಗಬಹುದು. ಆದರೆ, ಆ ಮೋಹಗಳನ್ನ ನಮ್ಮ ಭಾವನಾತ್ಮಕ ಸಂಬಂಧಗಳನ್ನ ಒಂದೇ ತಕ್ಕಡಿಗೆ ಹಾಕಿ ತೂಗುವುದೆಷ್ಟು ಸರಿ ? ಹೀಗೆ ಅಳೆದು ತೂಗಿ ಸ್ಕೂಬಿಯಂತೆ ತಿರಸ್ಕಾರ ಭಾವದಿಂದ ಸಾಯುವ ಹಲವಾರು ಶ್ವಾನಗಳು, ಸತ್ತವು ಎನ್ನುವುದ ಬದಲು ಕೊಲೆಯೆಂದೆನಿಸುವುದಲ್ಲವೇ ? ಮನುಷ್ಯನಿಗೆ ಪ್ರಾಣ ಹೋದರಷ್ಟೇ ಕೊಲೆಯಂದಾಗಬಹುದು, ಆದರೆ ನಿಷ್ಠೆಯನ್ನೇ ನಂಬಿ ಬದುಕುವ ಶ್ವಾನಕ್ಕೆ, ತಿರಸ್ಕಾರ ಭಾವನೆಯೇ ಒಂದು ಕೊಲೆಯಂತಲ್ಲವೇ ? ಮಾತನಾಡಿಯೂ ತಾನು ಹೇಳಬಯಸುವುದನ್ನ ತಿಳಿಸಲು ಎಡವುವ ಮನುಷ್ಯರೇ ತುಂಬಿರುವ ಇಂದಿನ ಸಮಾಜಗಳಲ್ಲಿ, ಪ್ರಾಣಿಗಳ ಮೂಕರಾಗವನ್ನು ಆಲಿಸುವ ವ್ಯವಧಾನ ಅತಿಶಯವೇ ಇದ್ದಿತು ಬಿಡಿ.