Stories by Hamsanandi on Medium
ನೀವು ಒಂದು ವೇಳೆ ಅಷ್ಟಾವಧಾನ ಕಾರ್ಯಕ್ರಮವನ್ನು ಯಾವಾಗಲಾದರೂ ನೋಡಿದ್ದರೆ, ಅದರಲ್ಲಿ ಸಮಸ್ಯಾಪೂರಣ ಅನ್ನುವ ಒಂದು ಸುತ್ತು ಇರುವುದನ್ನು ಗಮನಿಸಿರುತ್ತೀರಿ. ಏನಾದರೊಂದು ಸಾಲನ್ನು ಕೊಟ್ಟು, ಆ ಸಾಲನ್ನು ಪದ್ಯವೊಂದರಲ್ಲಿ ಬರುವಂತೆ ಮಾಡಬೇಕಾದ್ದು ಇಲ್ಲಿನ ಗುರಿ. ಎಷ್ಟೋ ಬಾರಿ ಸಾಮಾನ್ಯವಾಗಿ ಅರ್ಥವಿರದ, (ಅಥವಾ ವಿಪರೀತಾರ್ಥವುಳ್ಳ) ಸಾಲನ್ನು ಕೊಟ್ಟಿದ್ದರೂ ಅಂತಹ ಅರ್ಥವನ್ನೂ ಸವರಿಕೊಂಡು, ಛಂದಸ್ಸಿಗೆ ತಕ್ಕಂತೆ ಪದ್ಯ ಬರೆಯಬೇಕಾದ್ದು ಇಲ್ಲಿನ ಕೆಲಸ. ಹಾಗಾಗಿ ಒಂದು ಮಟ್ಟಕ್ಕೆ ಕನ್ನಡದಲ್ಲಿ ಸಾಂಪ್ರದಾಯಕವಾದ ಪದ್ಯದ ರಚನೆಯಲ್ಲಿ ಬಳಸುವ ಚಂದಸ್ಸುಗಳ ಒಂದು ಮಟ್ಟದ ಪರಿಚಯ ಇರಬೇಕಾಗುತ್ತೆ. ಅಥವಾ, ಇಂತಹ ಛಂದಸ್ಸುಗಳ ಪರಿಚಯ ಮಾಡಿಕೊಳ್ಳುವುದಕ್ಕೂ , ಇಂತಹ ಪ್ರಶ್ನೆಗಳಿಗೆ ಉತ್ತರವಾದ ಪದ್ಯಗಳನ್ನು ಬರೆಯುವುದೂ ಸಹಾಯವಾಗುತ್ತದೆ ಅಂತಲೂ ಹೇಳಬಹುದು.
ಇಂತಹ ಕೆಲವು ಸಮಸ್ಯೆಗಳಿಗೆ ನಾನು ಮಾಡಿರುವ ಪೂರಣಗಳನ್ನ ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಅಂದಹಾಗೆ ನಾನೇನೂ ಅವಧಾನಿಯಲ್ಲ! ಆದರೂ ಈ ಪ್ರಯತ್ನಗಳು ಆಸಕ್ತರಿಗೆ ಹಿಡಿಸಬಹುದೆಂದು ಈ ಬರಹ.
ಅವಧಾನದಲ್ಲಾದರೆ, ನಡೆಯುತ್ತಿರುವ ಹಲವು ಸಮಸ್ಯೆಗಳ ಜೊತೆಯಲ್ಲಿ ಸಮಸ್ಯಾಪೂರಣವನ್ನು ಒಟ್ಟಿಗೆ ನಡೆಸುತ್ತಿರುವುದರಿಂದ, ಅಲ್ಲಿ ಅದರ ಹರಿವು ತಿಳಿಯಲು ಕಷ್ಟ ಆಗಲೂಬಹುದು. ಈ ಉದಾಹರಣೆಗಳು ಆ ನಿಟ್ಟಿನಲ್ಲಿ ಅನುಕೂಲ ಆಗಬಹುದು ಅಂತ ಭಾವಿಸಿರುವೆ.
ಅವಧಾನದಲ್ಲೂ ಸಾಮಾನ್ಯವಾಗಿ ಒಂದು ಸಮಸ್ಯಾಪೂರಣಕ್ಕೆ ಎರಡು ಉತ್ತರವಾದರೂ ಇರುತ್ತದೆ — ಒಂದು ಸಮಸ್ಯೆಯನ್ನು ಒಡ್ಡಿದ ಪೃಚ್ಛಕರ ಉತ್ತರ, ಮತ್ತೊಂದು ಅವಧಾನಿಯ ಉತ್ತರ. ಇಲ್ಲಿಯೂ ಕೆಲವು ಪದ್ಯಗಳಿಗೆ ನಾನು (ಸುಮ್ಮನೇ) ಒಂದಕ್ಕಿಂತ ಹೆಚ್ಚು ಉತ್ತರವನ್ನು ಬರೆದಿದ್ದೇನೆ.
ತಂಗಿಯಾದಳು ಜಾನಕಿಯು ಪಾಂಚಾಲ ನಂದನೆಗೆ
ಸೀತೆ, ದ್ರೌಪದಿಯ ತಂಗಿಯೇ? ಇದು ಅಸಾಧ್ಯ ತಾನೇ? ಅಥವಾ ಹಲವಾರು ಅಸಾಧ್ಯ ಎನ್ನಿಸುವ ಸಂಗತಿಗಳು ನಡೆದರೆ, ಇದೂ ಸಾಧ್ಯ ಎನ್ನಬಹುದು!
ಅಂಗಿತೊಟ್ಟಿರೆ ಸಿಂಗದಾ ಮರಿ
ಮಂಗವಿಕ್ಕಿರೆ ರಂಗವಲ್ಲಿಯ
ಸಂಗತಿಯು ಕೇಳ್ವುದಕೆ ಸೈ ದಿಟದಲ್ಲಿ ನಡೆಯುವುದೆ?
ಪುಂಗಿ ಬಾರಿಸಿ ಕರಿಯ ಪಳಗಿಸೆ
ಹೊಂಗೆಮರದಲ್ಲಿಂಗು ಬೆಳೆದಿರೆ
ತಂಗಿಯಾದಳು ಜಾನಕಿಯು ಪಾಂಚಾಲ ನಂದನೆಗೆ!
ಈ ರೀತಿ ಸಮಸ್ಯಾ ಪೂರಣಗಳಲ್ಲಿ ಅರ್ಥವಿಲ್ಲದಂತಹ ಸಾಲನ್ನು ಕೊಟ್ಟು ಅದನ್ನು ಸಮರ್ಥಿಸುವಂತೆ ಕೇಳುವುದೇ ವಿಶೇಷ. ಇದರಲ್ಲಿ ಮೊದಲ ಪದಕ್ಕೆ ಪದವೊಂದನ್ನೋ, ಅಕ್ಷರವೊಂದನ್ನೋ ಸೇರಿಸಿ ಅರ್ಥ ಬದಲಾಯಿಸುವುದು ಒಂದು ವಿಧಾನವಾದರೆ ( ಉದಾ: ಕಂತಿಯ ಪ್ರಸಿದ್ಧ ಪೂರಣ - ಇಲಿಯಂ ತಿಂಬುದ ಕಂಡೆ ಜೈನರ ಮನೆಯೊಳ್ ಅನ್ನು ಚೆಕ್ಕಿಲಿಯಂ ತಿಂಬುದ ಕಂಡೆ ಜೈನರ ಮನೆಯೊಳ್ ಎಂದು ಬದಲಾಯಿಸಿದಂತೆ), ಅನರ್ಥಕಾರಿಯಾದ ಸಾಲಿನಂತಹದ್ದೇ ಇನ್ನೊಂದಷ್ಟು ಉದಾಹರಣೆಗಳನ್ನು ಸೇರಿಸಿ ಅವುಗಳನ್ನು ಬೆಸೆಯುವುದು ಇನ್ನೊಂದು ಬಗೆಯ ಪೂರಣ ವಿಧಾನ (ಕುಂತೀ ಸುತೋ ರಾವಣ ಕುಂಭಕರ್ಣಃ ಎಂಬ ಪ್ರಸಿದ್ಧ ಪೂರಣದ ಹಾಗೆ). ಹೇಗೆ ಪೂರಣ ಮಾಡುವಾಗ ಇದು ಅಂತಹದ್ದೇನೂ ಘನವಾದ ವಸ್ತುವಲ್ಲದಿದ್ದರೂ ಕೆಲವು ಶಬ್ದಾಲಂಕಾರಗಳನ್ನು ಬಳಸಿದ್ದರೆ, ಗಿಲೀಟು ಒಡವೆಗೆ, ಚಿನ್ನದ ನೀರು ಹಾಕಿ ಹೊಳಪು ಕೊಟ್ಟಂತೆ ಎಂದು ಅಂಗಿ-ಸಿಂಗ, ಮಂಗ-ರಂಗ, ಹೊಂಗೆ-ಇಂಗು ಮೊದಲಾದ ಅನುಪ್ರಾಸಗಳನ್ನೂ ಬಳಸಿದ್ದೇನೆ.
ಕಾಡಿನಲ್ಲಿರುವ ಸಿಂಹದ ಮರಿ ಬಟ್ಟೆ ತೊಟ್ಟಿದೆ ಎಂದರೆ, ಮರದ ಮೇಲೆ ನೆಗೆದಾಡುವ ಮಂಗ ಮನೆಯಮುಂದೆ ರಂಗೋಲಿ ಹಾಕಿತು ಎಂದರೆ, ಇವನ್ನೆಲ್ಲ ಸುಮ್ಮನೆ ತಮಾಷೆಯೆಂದು ಕೇಳಬಹುದಷ್ಟೇ ಹೊರತು ನಿಜ ಜೀವನದಲ್ಲಿ ನಡೆಯುವುದೇನು? ಹಾಗೇ ಹಾವನ್ನು ಪುಂಗಿ ಊದಿ ತಲೆಆಡಿಸುವಂತೆ ಮಾಡಬಹುದೇ ಹೊರತು ಆನೆಯನ್ನು ಮಾಡಬಹುದು ಎಂದರೆ, ಹೊಂಗೆಯ ಮರದಲ್ಲಿ ಇಂಗು ಬಿಡುತ್ತದೆ ಎಂದರೆ (ಇಂಗು ಕೂಡ ಒಂದು ಸಸ್ಯದ ಉತ್ಪನ್ನವೇ, ಆದರೆ ಅದು ಹಣ್ಣು ಅಥವಾ ಕಾಯಿ ಅಲ್ಲ), ಆಗ ಸೀತೆಯೂ ದ್ರೌಪದಿಯ ತಂಗಿ ಅನ್ನುವುದನ್ನೂ ನಂಬಬಹುದು ಪದ್ಯದ ಭಾವ.
ಈ ಮೇಲಿನ ಪದ್ಯ ಭಾಮಿನಿಷಟ್ಪದಿಯಲ್ಲಿದೆ. ಕೊಟ್ಟಿರುವ ಸಾಲಿನಿಂದಲೇ ಪದ್ಯ ಯಾವ ಛಂದಸ್ಸಿನಲ್ಲಿ ಇರಬೇಕೆಂಬುದು ನಿರ್ಧಾರವಾಗುತ್ತದೆ. ಕೆಲವು ಸಾಲುಗಳು ಒಂದಕ್ಕಿಂತ ಹೆಚ್ಚು ಛಂದಸ್ಸುಗಳಿಗೆ ಹೊಂದಬಹುದಾದರೂ, ಅಂತಹ ಪ್ರಸಂಗಗಳು ಕಡಿಮೆಯೇ. ಇನ್ನು ಅವಧಾನ ಕಾರ್ಯಕ್ರಮಗಳಲ್ಲಿ ಪ್ರಶ್ನೆ ಕೇಳುವ ಪೃಚ್ಛಕರು ಇಂತಹ ಛಂದಸ್ಸಿನಲ್ಲೇ ಪೂರಣ ಇರಬೇಕೆಂದು ಹೇಳುವುದರಿಂದ, ಅಲ್ಲಿ ಗಲಿಬಿಲಿಗೆ ಅವಕಾಶವೇನೂ ಇರುವುದಿಲ್ಲ.
2. ಪತಿಗಳ್ ಸೀತೆಗದೆಷ್ಟು ಮಂದಿ! ಗಣಿಸಲ್ಕೇನೊರ್ವರೇಯಿರ್ವರೇ?
ಶಿವಶಿವಾ! ಏನಿದು? ದ್ರೌಪದಿಗೆ ಏನೋ ಐದು ಜನ ಪತಿಗಳು. ಆದರೆ, ಸೀತೆಗೆ? ರಾಮ ಒಬ್ಬನೇ ಅಲ್ಲವೇ ಎನ್ನುವಿರಾ? ಸಮಸ್ಯಾಪೂರಣದಲ್ಲಿ ಇಂತಹ ಚುರುಕಾದ ಪ್ರಶ್ನೆಗಳನ್ನು ಕೊಡುವುದು ರಂಜನೆಗಾಗಿಯೇ. ಇದಕ್ಕೆ ನಾನು ಬರೆದ ಉತ್ತರವಿದು:
ಹಿತದೊಳ್ ತೋರ್ಪೆನು ಶಾಸ್ತ್ರಪಾಠಗಳ ನಾಂ ನೀ ಬೇಗ ಬಾರೆಂದೆನ-
ಲ್ಕತಿಸಂತೋಷದಿ ಬಂದ ಸೀತೆ ಮುದದೊಳ್ ಕಣ್ಣಲ್ಲೆ ಕಣ್ಣಾಗಿ ಜಾ-
ಗೃತಿಯಿಂ ಪಟ್ಟಕಮಂ ತಳೆರ್ದಿರೆ ಮೊದಲ್ ಬಾನಲ್ಲಿ ಕಂಡರ್ ದಿವ-
ಸ್ಪತಿಗಳ್ ಸೀತೆಗದೆಷ್ಟು ಮಂದಿ! ಗಣಿಸಲ್ಕೇನೊರ್ವರೇಯಿರ್ವರೇ ?
ಈ ಪದ್ಯದ ಸೀತೆ, ಬಹುಶಃ ಪ್ರೌಢಶಾಲೆಯ ವಿದ್ಯಾರ್ಥಿ ಎನ್ನೋಣ. ಅವಳಿಗೆ ಉಪಾಧ್ಯಾಯರು ಭೌತಶಾಸ್ತ್ರದ ತರಗತಿಯಲ್ಲಿ kaleidoscope ಒಂದನ್ನು ಕೊಟ್ಟಾಗ ( ಇಲ್ಲಿ ತ್ರಿಕೋಣ ಆಕೃತಿಯಲ್ಲಿರುವ ಅದಕ್ಕೆ prism = ಪಟ್ಟಕ ಎಂಬ ಪದ ಬಳಸಿದ್ದೇನೆ), ಅವಳು ಅದರಲ್ಲಿ ಆಕಾಶವನ್ನು ನೋಡಿದಾಗ ಅಲ್ಲಿ ಅವಳಿಗೆ ಆ ಉಪಕರಣದಲ್ಲಿ ಕಂಡ ಸೂರ್ಯರು (ದಿವಸ್ಪತಿ) ಒಬ್ಬರೇ ಇಬ್ಬರೇ , ಲೆಕ್ಕ ಹಾಕಲು ಸಾಧ್ಯವೇ ಎಂದು ಇಲ್ಲಿ ಸೀತೆಗೆ ಆರೋಪಿಸಲಾದ ಬಹುಪತಿತ್ವವನ್ನು ನಿವಾರಿಸಲಾಗಿದೆ!
3. ಸರವ ಕಾಲಿಗೆ ತೊಡಿಸಿ ಪೋದನು ಒಲವಿನಲಿ, ದುರುಳ
ಕಾಲಿಗೆ ಗೆಜ್ಜೆ ತೊಡಿಸಬಹುದು. ಸರವನ್ನು ಯಾರು ತೊಡಿಸುತ್ತಾರೆ? ಇನ್ನು ಒಲವಿನಲ್ಲಿ ತೊಡಿಸು ಹೋದವನು ದುರುಳನೇಕೆ ಆಗುವನು?
ಧರಣಿ ತೊಯ್ದಿರೆ ಮಳೆಯ ರಭಸಕೆ
ಹರಿದಿರಲು ಕೆನ್ನೀರ ಧಾರೆ ಕೆ-
ಸರನು ತುಂಬಿರೆ ಹಾದಿ ಬೀದಿಗೆ ಹೆಜ್ಜೆಯಿಡದಂತೆ
ಹೊರಡಲಾರದೆ ಮಾರುಕಟ್ಟೆಗೆ
ತರುಣಿ ಬೈದಳು ಮಳೆಗೆ “ಕಡು ಬೇ-
ಸರವ ಕಾಲಿಗೆ ತೊಡಿಸಿ ಪೋದನು, ಒಲವಿನಲಿ, ದುರುಳ!”
ಈ ಉತ್ತರದಲ್ಲಿ, ಸರವು ಬೇಸರವಾಗಿ, ಮನೆಯನ್ನು ಬಿಟ್ಟುಹೋಗದಂತೆ ಕಟ್ಟಿಹಾಕಿದ ಮಳೆಗೆ ತರುಣಿ ದುರುಳ ಎಂದು ಬಯ್ಯುವುದೂ ಯುಕ್ತವಾಗಿದೆ ಅಲ್ಲವೇ?
ಸಮಸ್ಯಾಪೂರಣದಲ್ಲಿ ಒಂದಕ್ಕಿಂತ ಹೆಚ್ಚು ಉತ್ತರಗಳು ಇದ್ದೇ ಇರುತ್ತವೆ, ಏಕೆಂದರೆ ಪ್ರಶ್ನೆ ಕೇಳುವವರು, ಕೇಳುವ ಮೊದಲೇ ತಮ್ಮದೇ ಒಂದು ಉತ್ತರವನ್ನೂ ಬರೆದುಕೊಂಡಿದ್ದರೆ ಮಾತ್ರ ಅವರು ಪ್ರಶ್ನಿಸುವುವುದು ಯುಕ್ತ, ತಾನೇ! ಇನ್ನು ಅವಧಾನಿಗಳ ಉತ್ತರವೂ ಇರುತ್ತದೆ. ಇನ್ನು ಪ್ರೇಕ್ಷಕರೂ ಕೂಡ ತಮ್ಮ ತಮ್ಮ ಉತ್ತರಗಳನ್ನು ಬರೆದುಕೊಳ್ಳುವುದನ್ನೂ ನೀವು ಅವಧಾನ ಕಾರ್ಯಕ್ರಮಗಳಲ್ಲಿ ಕಂಡಿರಬಹುದು. ಇಲ್ಲಿ ಸುಮ್ಮನೇ , ನಾನು ಇದೇ ಸಮಸ್ಯೆಗೆ ಇನ್ನೊಂದು ಉತ್ತರವನ್ನು ಬರೆದೆ.
ಸ್ವರ್ಗದಲ್ಲಿ ನಂದನವನದಿಂದ ಶ್ರೀಕೃಷ್ಣನು ಪತ್ನಿ ಸತ್ಯಭಾಮೆಗೆ ಎಂದು ಪಾರಿಜಾತ ಹೂಗಳ ಮರವನ್ನು ತಂದು ನೆಟ್ಟಿದ್ದೇನೋ ಸರಿ. ಆದರೆ ಅದಕ್ಕೆ ಇನ್ನೂ ಭೂಮಿಯ ವಾಸ ಸರಿ ಹೊಂದಿಲ್ಲ. ಅದಕ್ಕೆಂದೇ ಕೊರಗುತ್ತ, ತುಸು ಗಾಳಿ ಬೀಸಿದರೂ ಹೂಗಳನ್ನೆಲ್ಲ ಉದುರಿಸಿಬಿಟ್ಟು , ಕಾಲಿನ ಸುತ್ತ ಹೂಗಳ ಸರವನ್ನೇ ತೊಡಿಸಿದೆಯೆಂದು ಗಾಳಿಯನ್ನೇ ದೂರುತ್ತಿದೆಯಂತೆ.
ಸುರರ ನಂದನದಿಂದ ಪಾರಿಜ
ತರುವ ಭಾಮೆಯು ತಂದು ಬೆಳಸಿರೆ
ತಿರೆಯನಿನ್ನೂ ತನ್ನ ಮನೆಯೆಂದೆನುತ ಕಾಣದೆಯೇ
ಕೊರಗಿ ತುಸುವೇ ಗಾಳಿಯಲಿ ಹೂ-
ಸುರಿಸಿ ನುಡಿವುದು “ತಂಬೆಲರು ಪೂ
ಸರವ ಕಾಲಿಗೆ ತೊಡಿಸಿ ಪೋದನು, ಒಲವಿನಲಿ ದುರುಳ!”
ಇಂತಹ ಸಂದರ್ಭಗಳಲ್ಲಿ ಇಂತಹ ವಿವರಗಳು ಇಲ್ಲದಿದ್ದರೆ, ಪದ್ಯದ ಸ್ವಾರಸ್ಯವನ್ನು ತಿಳಿಯುವುದು ತುಸು ಕಷ್ಟವೇ ಆಗುತ್ತದೆ. ಅವಧಾನದಂತಹ ಬೌದ್ಧಿಕವಾದ ಕಲೆಯಲ್ಲಿ, ನಮ್ಮ ಸಂಸ್ಕೃತಿಯ ಹಲವು ಎಳೆಗಳು ಒಂದಕ್ಕೊಂದು ಬೆಸೆದುಕೊಂಡೇ ಬರುತ್ತವೆ ಎನ್ನುವುದನ್ನು ಗಮನಿಸಿದಾಗ, ಇಂತಹ ಉತ್ತರಗಳು ಸಹಜವೇ ಎನ್ನುವುದು ಕೂಡ ಮನದಟ್ಟಾಗುತ್ತದೆ.
4. ರಾಮಗಾಗದ ಕಾರ್ಯ ಕಪಿಗಳಗುಂಪಿಗತಿ ಸುಲಭ
ನೇಮದಲಿ ಹಂಬಲಿಸೆ ಸೀತೆಯು
ಕಾಮ ವೈರಿಯ ಮಡದಿ ಮಂಗಳ
ಧಾಮೆ ಗೌರಿಯ ಲಕ್ಷ ಪೂಜೆಗೆ ವಾನರರ ಸೈನ್ಯ
ಆಮರೀಮರಕೆಲ್ಲ ನೆಗೆದಾ-
ರಾಮದಲಿ ಹೂಗಳನು ಬಿಡಿಸಿರೆ
ರಾಮಗಾಗದ ಕಾರ್ಯ ಕಪಿಗಳಗುಂಪಿಗತಿ ಸುಲಭ!
ಸೀತೆ ರಾವಣನ ಬಂಧನದಿಂದ ಹೊರಬಂದು, ರಾಮನೊಡನೆ ಅಯೋಧ್ಯೆಗೆ ಮರಳಿದ್ದಾಳೆ.ವನವಾಸದಲ್ಲಿ ಏನು ಪೂಜೆ ಮಾಡಿದ್ದಳೋ ಇಲ್ಲವೋ ಪಾಪ,ಮಂಗಳಗೌರಿಗೆ ಲಕ್ಷಪೂಜೆಯನ್ನು ಮಾಡುವ ಹರಕೆ ಹೊತ್ತಿದ್ದಾಳೆ. ಆದರೆ ಲಕ್ಷ ಹೂಗಳನ್ನು ಕಿತ್ತಿ ಬಿಡಿಸುವುದೇನು ಸಾಮಾನ್ಯವೇ? ಆದರೆ ಸೀತೆಗೆ ಆ ಭಯವಿಲ್ಲ! ಯಾಕೆಂದರೆ ರಾಮನಿಗಾಗದಿದ್ದರೂ ವಾನರ ಸೈನ್ಯದ ಸಹಾಯವಿದೆಯಲ್ಲ ಅವಳಿಗೆ! ಮರದಿಂದ ಮರೆಕ್ಕೆ ಜಿಗಿದು ಸುಲಭವಾಗಿ ಲಕ್ಷ ಪುಷ್ಪಾರ್ಚನೆಗೆ ಸಿದ್ಧಗೊಳಿಸಿಯೇ ಬಿಟ್ಟರು.
5. ಮನಸಿಜನ ಬಳಿ ಹತ್ತುಬಾಣಗಳಿರುವುದೇ ನಿಜವೈ
ಸಮಸ್ಯಾಪೂರಣದಲ್ಲಿ ಸಾಮಾನ್ಯವಾಗಿ ತಿಳಿದ ಒಂದು ಸತ್ಯಕ್ಕೆ ವಿರುದ್ಧವಾಗಿ ಒಂದು ಮಾತನ್ನು ಹೇಳಿ, ಅದನ್ನು ಸತ್ಯವೆಂಬಂತೆ ತೋರಿಸಬೇಕಾದಂತಹ ಪ್ರಶ್ನೆಗಳು ಬರುತ್ತಲೇ ಇರುತ್ತವೆ. ಉದಾಹರಣೆಗೆ ಇಲ್ಲಿ — ಮನ್ಮಥನ ಬಳಿ ಐದು ಹೂಗಳ ಬಾಣಗಳು ಇವೆ ಅನ್ನುವುದು ಪ್ರಸಿದ್ಧ ಹೇಳಿಕೆ. ಹಲವು ಕವಿಗಳು ವಸಂತನನ್ನೂ, ಅವನ ಜೊತೆಬರುವ ಮನ್ಮಥನನ್ನೂ, ಅವನ ಐದು ಹೂಬಾಣಗಳನ್ನೂ ನೆನೆದು ಹಲವು ಪದ್ಯಗಳನ್ನು ಹೊಸೆದೇ ಇದ್ದಾರೆ. ಅಂತಹದ್ದರಲ್ಲಿ, ಮನ್ಮಥನ ಬಳಿ ಹತ್ತು ಬಾಣಗಳಿವೆಯೆಂದರೆ ಯಾರಾದರೂ ನಕ್ಕಾರು. ಆದರೆ ಸಮಸ್ಯಾಪೂರಣದ ಬಗೆಯೇ ಹೀಗೆ!
ಅನವರತದೊಳು ತ್ಯಾಗರಾಜನು
ವಿನಯದಲಿ ಜಾನಕಿಯ ಪತಿಯನೆ
ಕನವರಿಕೆಯಲು ಭಕ್ತಿವೈರಾಗ್ಯದಲಿ ನೆನೆದಾತ;
ಕೊನೆಯುಸಿರೆಳೆಯೆ ಮಡದಿ ಪಾರ್ವತಿ-
ಯನುಜೆಯನು ಮರುಲಗ್ನವಾದನೆ!
ಮನಸಿಜನ ಬಳಿ ಹತ್ತುಬಾಣಗಳಿರುವುದೇ ನಿಜವೈ !
ಕರ್ನಾಟಕ ಸಂಗೀತ ತ್ರಿಮೂರ್ತಿಗಳಲ್ಲೊಬ್ಬರಾದ ವಾಗ್ಗೇಯಕಾರ ತ್ಯಾಗರಾಜರು ತಮ್ಮ ಪತ್ನಿ ಪಾರ್ವತಿ ಸಾವನ್ನೈದಿರಲು,ಆಕೆಯ ತಂಗಿ ಕಮಲೆಯನ್ನೇ ಮದುವೆಯಾದರೆಂಬುದು ಅವರ ಜೀವನ ಚರಿತ್ರೆಯಿಂದ ತಿಳಿದು ಬರುವ ಸಂಗತಿ. ಏಕಪತ್ನೀವ್ರತನಾದ ರಾಮನ ಅಪರಿಮಿತ ಭಕ್ತರಾದಂಥಾ ತ್ಯಾಗರಾಜರೇ ಹೀಗೆ ಎರಡನೇ ಮದುವೆಯಾಗಿರಲು, ಮನ್ಮಥನ ಬಳಿ ಐದು ಬಾಣಗಳ ಬತ್ತಳಿಕೆಯಲ್ಲ, ಅದರ ಎರಡರಷ್ಟು, ಅಂದರೆ ಹತ್ತು ಬಾಣಗಳು ಇದ್ದಿರಬೇಕೆಂಬ ಕಲ್ಪನೆ ಹರಿಸಿ ಕೊಟ್ಟ ಉತ್ತರವಿದು.
ಈ ಮೇಲಿನ ಸಾಲನ್ನೇ, ಪ್ರಾಸದ ಅಕ್ಷರಕ್ಕಾಗಿ ತುಸು (ನಾನೇ) ಬದಲಾಯಿಸಿಕೊಂಡು, ಅರ್ಥವು ಮಾತ್ರ ಹಾಗೇ ಉಳಿಯುವಂತೆ ಮಾಡಿದ ಇನ್ನೊಂದು ಪೂರಣ ಇಲ್ಲಿದೆ. ಬದಲಾಯಿಸಿದ ಸಾಲು — ಹತ್ತುಬಾಣಗಳಿಹುದೆ ಸೈ ಮನ್ಮಥನ ಚೀಲದಲಿ.
ಉತ್ತರದಲರೆಭಾಗ ಪೃಥಿವಿಗೆ
ಚಿತ್ತಚೋರ ವಸಂತ ಕಾಲದ
ಲತ್ತ ಹೂಡುವನೈದು ಹೂವಿನ ಶರವ ಮುದದಿಂದ
ಮತ್ತೆ ಪೋಗುವ ದಕ್ಷಿಣದ ಕಡೆ
ಗತ್ತ ಪ್ರೀತಿಯ ಸೊದೆ*ಯ ಹಂಚಲು!
ಹತ್ತುಬಾಣಗಳಿಹುದೆ ಸೈ ಮನ್ಮಥನ ಚೀಲದಲಿ !
ಇಲ್ಲಿ ಭೂಮಿಯ ಉತ್ತರಾರ್ಧ ಮತ್ತು ದಕ್ಷಿಣಾರ್ಧಗಳಲ್ಲಿ ವಸಂತ ಋತುವು ಬೇರೆ ಬೇರೆ ಸಮಯಗಳಲ್ಲಿ ಬರುವ ವಿಷಯವನ್ನು ಗಮನಿಸಿ, ಮನ್ಮಥನು ಉತ್ತರಾರ್ಧದ ವಸಂತದಲ್ಲಿ ಐದು ಬಾಣಗಳನ್ನು ಪ್ರಯೋಗಿಸಿಬಿಟ್ಟಿದ್ದರೆ, ದಕ್ಷಿಣಾರ್ಧದಲ್ಲಿ ವಸಂತ ಬಂದಾಗ ಅಲ್ಲಿಗೆ ಏನು ಮಾಡುವನು? ಅಲ್ಲಿಗೆ ಮತ್ತೆ ಐದು ಬಾಣಗಳು ಇರಲೇಬೇಕು, ಹಾಗಾಗಿ ಅವನ ಬತ್ತಳಿಕೆಯಲ್ಲಿ ಹತ್ತು ಬಾಣಗಳಿವೆ ಎನ್ನುವ ಚಮತ್ಕಾರದ ಅರ್ಥವನ್ನು ಇಲ್ಲಿ ತರಲಾಗಿದೆ. (ಸೊದೆ = ಸುಧೆ = ಅಮೃತ)
6. ರಾಮನಾಮವ ಕೇಳಿ ಜಾನಕಿ ತಾನೆ ನಡುಗಿದಳು
ರಾಮನ ಪ್ರಿಯಪತ್ನಿ ಜಾನಕಿ. ಅವಳು ರಾಮನ ಹೆಸರನ್ನು ಕೇಳಿ ನಡುಗುವುದೇ? ಏಕಿರಬಹುದು?
“ನೇಮದಲಿ ರಾಮನ ಹೆಸರ ನೀ
ಜಾಮ ಜಾಮಕೆ ಕೋಟಿ ಸರತಿ ವಿ-
ರಾಮ ಕೊಡದೆಯೆ ಜಪಿಸೆ ರಾವಣ! ಕಾಳಗದಿ ಗೆಲುವೆ”
ಕಾಮಿಸಿದುದೇ ಕನಸಿನಲಿ ಬರೆ
ರಾಮ ರಾಮೆನುತಿರಲು ದಶಶಿರ
ರಾಮನಾಮವ ಕೇಳಿ ಜಾನಕಿ ತಾನೆ ನಡುಗಿದಳು
ಈ ಉತ್ತರ ಒಂದು ಕಲ್ಪನೆಯ ಸನ್ನಿವೇಶ. ರಾವಣನಿಗೆ, ರಾಮನಾಮವನ್ನು ಕೋಟಿ ಸರತಿ ಜಪ ಮಾಡಿದರೆ, ತಾನೇ ಗೆಲ್ಲುವೆ ಅನ್ನುವ ಕನಸಾಗಿದೆಯಂತೆ. ಹಾಗಾಗಿ ಅವನು ರಾಮನಾಮ ಜಪವನ್ನು ಆರಂಭಿಸಿದ್ದಾನೆ. ಇದನ್ನು ಕೇಳಿದ, ರಾಮನಾಮದ ಬಲವನ್ನು ತಿಳಿದ ಜಾನಕಿ ನಡುಗಿದ್ದೂ ಸಹಜವೇ ಅಲ್ಲವೇ? ಒಟ್ಟಿನಲ್ಲಿ ಇಂತಹ ಪದ್ಯಗಳನ್ನು ಅರ್ಥ ಮಾಡಿಕೊಳ್ಳಲು ನಮ್ಮ ಸಂಸ್ಕೃತಿಯ ಒಳಸುಳಿಗಳು ತಿಳಿದಿರಬೇಕಾಗುತ್ತದೆ. ಅಥವಾ ಇಂಥವನ್ನು ಓದಿದರೆ ನಮಗೆ ನಮ್ಮ ಪುರಾಣ ಮಹಾಕಾವ್ಯಗಳ ಬಗ್ಗೆ ಒಳಹೊಕ್ಕು ತಿಳಿದ್ದುಕೊಳ್ಳಲೂ ಮನಸ್ಸಾಗುತ್ತದೆ ಎನ್ನುವುದಂತೂ ಸತ್ಯ.
ಮೇಲಿನ ಪೂರಣವು ಭಾಮಿನಿ ಷಟ್ಪದಿಯಲ್ಲಿದ್ದರೆ, ಅದೇ ಅರ್ಥವನ್ನು ಕೊಡುವ ಇನ್ನೊಂದು ಸಾಲಿಗೆ, ಇದೇ ಪ್ರಸಂಗವನ್ನು ಅಳವಡಿಸಿರುವ ಉತ್ತರ ಕೆಳಗಿದೆ. ಇದು ಮಾತ್ರಾಮಲ್ಲಿಕಾಮಾಲೆ ಎಂಬ ಛಂದಸ್ಸಿನಲ್ಲಿ ಇದೆ.
“ನೇಮದಿಂದಲಿ ರಾಮನಾ ಹೆಸರನ್ನೆ ಕೋಟಿಯ ಲೆಕ್ಕದೊಳ್
ಜಾಮ ಜಾಮಕು ಜಪಿಸೆ ರಾವಣ ಕಾಳಗದಿ ನೀ ಗೆಲ್ಲುವೇ”
ಈ ಮಹಾವಾಕ್ಕನ್ನು ಕನಸಲಿ ಕೇಳಿ ದಶಶಿರ ತೊಡಗಿಸೇ
ರಾಮನಾಮವ ಕೇಳಿದಾ ಜಾನಕಿಯು ಭಯದಲಿ ನಡುಗಿದಳ್
7. ಚೆಲ್ವಾಯ್ತು ಚಂದ್ರೋದಯಂ
ಹದಿನಾರನೇ ಶತಮಾನದಲ್ಲಿ ನಡೆದಿರಬಹುದಾದ ಕಥೆ ಎಂದು –ಕೃಷ್ಣದೇವರಾಯನು ಯಾವುದೋ ಯುದ್ಧಕ್ಕೆ ಹೋಗಿರುವಾಗ ಅವನ ಮಡದಿ ಚಿನ್ನಾದೇವಿಯು ಒಂದು ಸಂಜೆ ತುಂಗಭದ್ರೆಯ ದಡದಲ್ಲಿ ಪತಿಗೆ ಗೆಲುವಾಗಲೆಂದು ದೇವರನ್ನು ಬೇಡುತ್ತಿರುವಾಗಲೇ ದೂತನೊಬ್ಬ ಬಂದು ಒಳ್ಳೆಯ ಸುದ್ದಿ (ಪತಿಯ ಗೆಲುವನ್ನೋ, ಊರಿಗೆ ಮರಳುತ್ತಿರುವುದನ್ನೋ) ಹೇಳಲಾಗಿ, ಉದಯಿಸುತ್ತಿದ್ದ ಚಂದ್ರ ಆಕೆಗೆ ಸೊಗಯಿಸಿದನು.
ಸತಿ ಚಿನ್ನಾಂಬಿಕೆ ಮಾಘದೊಂದಿರುಳೊಳಾ ಪಂಪಾನದೀ ತೀರದೊಳ್
ಮತಿಯೊಳ್ ಬೇಡುತ ರಾಯನಾವಿಜಯಮಂ ತಾ ಚಿಂತಿಸುತ್ತಿರ್ದಪಳ್
ಸ್ಮೃತಿಯೊಳ್ ವೇಂಕಟನಾಥನಂ ಬಗೆದಿರಲ್ ಬಂದೋರ್ವ ದೂತಂ ಸುಸಂ-
ಗತಿಯಂ ಪೇಳ್ದೊಡನಾಕೆಗಾದುದು ಮುದಂ! ಚೆಲ್ವಾಯ್ತು ಚಂದ್ರೋದಯಂ!
ಇದು ಮತ್ತೇಭವಿಕ್ರೀಡಿತ ಎಂಬ, ಕನ್ನಡದಲ್ಲಿ ಪೂರ್ವಪ್ರಸಿದ್ಧವಾಗಿರುವ ಒಂದು ವೃತ್ತದಲ್ಲಿ ಮಾಡಿರುವ ಪೂರಣ.
8. ಕುಣಿದಿರ್ಕುಂ ನಲಿವಿಂದೆ ಸೋಗೆಸೊಗದೊಳ್ ಕಾರ್ಗಾಲಕಿಂ ಮುನ್ನಮೇ
ನವಿಲು ಮಳೆಗಾಲದಲ್ಲಿ, ಮೋಡ ತುಂಬಿದ ಆಕಾಶವಿದ್ದಾಗ ಕೂಣಿಯುವುದು ಎಂದು ನಾವು ಬಲ್ಲೆವು. ಆದರೆ ಕಾರ್ಗಾಲ (ಮಳೆಗಾಲ) ಕ್ಕೂ ಮೊದಲೇ ಕುಣಿಯುವುದೇ? ಎಷ್ಟೋ ನಡೆಯಲಾರದ ಸಂಗತಿಗಳೂ ನಡೆಯುವಂತಿದ್ದರೆ ಇದೂ ಕೂಡ ನಡೆಯಬಹುದು! ಈ ಸಮಸ್ಯೆಯನ್ನು ಬಿಡಿಸಿದ ರೀತಿಗೂ, ಈ ಬರಹದ ಮೊದಲಿನ ಸಮಸ್ಯೆಯನ್ನು ಬಿಡಿಸಿರುವ ರೀತಿಯೂ ಒಂದೇ. ಛಂದಸ್ಸಿಗೆ ತಕ್ಕಂತೆ, ಪಡಿಯಾದೊಳಗೆ ಅಳವಡಿಸಿರುವ ಸಂಗತಿಗಳು ತುಸು ಬೇರೆ ಇರಬಹುದು.
ಉಣಿಸಂ ನೀಡಿರೆ ತಾಯಿ ತಾನು ಮುದದೊಳ್ ಬಾಯ್ಮುಚ್ಚೆ ತಾ ಕಂದನುಂ
ಸೊಣಗಂ ಬಾಲಮನೆಟ್ಟಗಿರ್ಟು ನಡೆಯಲ್ ಪುಲ್ಲಂ ತಿನಲ್ ಸಿಂಗಮುಂ
ಮಣಲೊಳ್ ಮೀನ್ಗಳು ಕಟ್ಟ ಪೋಗೆ ಮನೆಯಂ ನೀರಾನೆ ತಾ ನರ್ತಿಸಲ್
ಕುಣಿದಿರ್ಕುಂ ನಲಿವಿಂದೆ ಸೋಗೆಸೊಗದೊಳ್ ಕಾರ್ಗಾಲಕಿಂ ಮುನ್ನಮೇ
ಪ್ರೀತಿಯಿಂದ ತಾಯಿ ಹಾಲೂಡಿಸಿದರೆ, ಮಗು ಬೇಡ ಎಂದು ಬಾಯ್ಮುಚ್ಚುವುದೇ? ನಾಯಿ ಬಾಲ ಡೊಂಕಾಗಿರದೇ ನೆಟ್ಟಗಿರುವುದೇ? ಸಿಂಹವು ಹುಲ್ಲನ್ನು ತಿನ್ನುವುದೇ? ಮೀನುಗಳು ಮರಳಲ್ಲಿ ಮನೆ ಕಟ್ಟುವುವೇ? ಭಾರಿ ದೇಹದ ನೀರಾನೆ ಕುಣಿಯುವುದೇ?
ಇವೆಲ್ಲವೂ ಸಾಧ್ಯವಾದಾಗ, ಮೋಡವಿಲ್ಲದೆಯೂ ನವಿಲು ಕುಣಿದೀತು!
ಈ ಪದ್ಯ ಕೂಡ ಮತ್ತೇಭವಿಕ್ರೀಡಿತ ವೃತ್ತದಲ್ಲೇ ಇದೆ.
9. ಲಗ್ನಕುಡುದಾರಮಾದುದು ಭೂಷಣಂ
ಮದುವೆಗೆ ತಾಳಿಯೋ , ಬಾಸಿಂಗವೋ, ಭೂಷಣವಾದೀತು. ಉಡುದಾರ ಹೇಗಾಗುವುದು?
ಅಗ್ನಿಅಪಘಾತದಲಿ ಗಂಡನನು ಕಳಕೊಂಡು
ಭಗ್ನವಾಗಿರೆ ಬಾಳು ಕೈಗೂಸಿನೊಡನೆ
ಮಗ್ನವಾದಳು ಕಂದನಾಟದಲೆ ಭಾವಿಸುತ
ಲಗ್ನಕುಡುದಾರಮಾದುದು ಭೂಷಣಂ
ಇದೊಂದು ಕಲ್ಪಿತ ಸಂದರ್ಭ. ಯಾವುದೋ ಬೆಂಕಿ ಅನಾಹುತದಲ್ಲಿ ಗಂಡನನ್ನು ಕಳೆದುಕೊಂಡಿರುವ ಹೆಂಡತಿ ತನ್ನ ಪುಟ್ಟಮಗುವಿನ ಆಟಪಾಟಗಳಲ್ಲೇ ತನ್ನ ದುಃಖವನ್ನು ಮರೆತಿದ್ದರಿಂದ, ಅವಳ ವಿವಾಹದ ನೆನಪಾಗಿ, ಮಗುವಿನ ಉಡಿದಾರವೇ ಗುರುಟಾಗಿ ನಿಂತಿತು ಎನ್ನುವುದು ಭಾವಾರ್ಥ.
ಪ್ರಾಸಾಕ್ಷರ (2 ನೇ ಅಕ್ಷರ) ಗ್ನ ಇರುವುದರಿಂದ ಅದಕ್ಕೆ ತಕ್ಕ ಪದಗಳನ್ನು ಬಳಸಿ ಇಂತಹ ಸ್ವಲ್ಪ ವಿಲಕ್ಷಣವಾದ ಕಥೆಯನ್ನು ಈ ಪದ್ಯದಲ್ಲಿ ತರಬೇಕಾಯಿತು.
10. ಕೋಳಿಯಂ ಬಯಸಳಲ್ತೆ ಕಾಳಿತಾಂ
ಕಾಳಿದೇವಿಗೆ ಪ್ರಾಣಿ ಬಳಿ ಕೊಡುವುದು ಸಾಮಾನ್ಯ — ಆದರೆ ಇಲ್ಲಿ ಕಾಳಿ ಕೋಳಿಯನ್ನು ಬಯಸುತ್ತಿಲ್ಲ. ಹಾಗಿದ್ದರೆ, ದೇವಿ ಕೇಳುವುದೇನು?
ಗೂಳಿಯಂತೆ ಜನರನ್ನು ಪೀಡಿಪಾ
ಖೂಳ ರಕ್ಕಸರ ದಾಳಿಮಾಡಿ ನ-
ಲ್ವೇಳೆಯಲ್ಲವರ ಕೊಲ್ವಳಲ್ಲದೇ
ಕೋಳಿಯಂ ಬಯಸಳಲ್ತೆ ಕಾಳಿತಾಂ
ದುಷ್ಟರ ಸಂಹಾರವೇ ಜಾಗಕ್ಕೆ ಒಳ್ಳೆಯ ವೇಳೆ. ಅದನ್ನು ನಡೆಸುವುದನ್ನು ಬಯಸುವ ಕಾಳಿಕಾದೇವಿ, ಪಾಪದ ಪ್ರಾಣಿ ಪಕ್ಷಿಗಳ ಬಲಿಯನ್ನು ಬಯಸುವವಳೇನು? ಈ ಪೂರಣವು ಪಂಚಮಾತ್ರಾ ಚೌಪದಿಯಲ್ಲಿದೆ.
11. ಸತ್ತು ಸರಸತಿ ಭೂಮಿಯಲ್ಲವತರಿಸಿದಳು ಮಾತಾಡಲು
ಅತ್ತ ಲೋಕದ ಜನನಲೆಕ್ಕದಿ ಬಿಡುವೆ ಕಾಣದ ಗಂಡನು
ಇತ್ತಲೋ ಮಾತನರಿಯದೆಯೇ ನೀರಲಾಡುವ ಹಂಸವು
ಸುತ್ತಲಾರಿರದೇನೆ ನುಡಿಸಲು ಚಳಿಯ ಮಾನಸ ಸರದಿ ಬೇ-
ಸತ್ತ ಸರಸತಿ ಭೂಮಿಯಲ್ಲವತರಿಸಿದಳು ಮಾತಾಡಲು!
ಸರಸ್ವತಿ ಇರುವುದು ಮಂಜಿನಿಂದ ಕೂಡಿದ ಚಳಿಯ ಮಾನಸ ಸರೋವರದಲ್ಲಿ. ಅವಳ ಪತಿ ಬ್ರಹ್ಮದೇವ ದಿನಕ್ಕೆ ಇಪ್ಪತ್ತನಾಲ್ಕು ಗಂಟೆ ಈ ಪ್ರಪಂಚದಲ್ಲಿ ಜೀವಿಗಳನ್ನು ಹುಟ್ಟಿಸುವುದರಲ್ಲಿ ತೊಡಗಿರುತ್ತಾನೆ. ಅವಳ ಜೊತೆಗಿರುವುದು ಮಾತು ಬಾರದ, ಅವಳ ವಾಹಣವಾದ ಹಂಸ. ಹಾಗಾಗಿ ಬಾಯಿ ಕಟ್ಟಿದ ಸರಸ್ವತಿ, ಮಾತನಾಡುವ ಆಸೆಯಿಂದ ಭೂಮಿಯಲ್ಲಿ ಅವತರಿಸಿದಳು. ಅವಳ ಅವತಾರ ಹೇಗೆ? ಉತ್ತಮ ವಾಗ್ಮಿ , ಸಂಗೀತಗಾರ , ಕಲಾಕಾರ, ಸಾಹಿತಿಗಳಲ್ಲೇ ಅವಳ ವಾಸ — ಅವಳ ಅವತಾರ. (ಈ ವಿಷಯವನ್ನು ಈ ಪದ್ಯವು ಬಿಡಿಸಿ ಹೇಳಿಲ್ಲದೇ ಹೋದರೂ ಅದೇ ಉದ್ದೇಶ.
ಈ ಪದ್ಯವು ಮಾತ್ರಾಮಲ್ಲಿಕಾಮಾಲೆ ಎಂಬ ಛಂದಸ್ಸಿನಲ್ಲಿ ಇದೆ.
12. ಭಾರತದಿ ದುಶ್ಶಾಸನನೆ ದ್ರೌಪದಿಯ ಸಖನಲ್ತೆ
ದುಶ್ಶಾಸನನು ದ್ರೌಪದಿಯ ಮಿತ್ರನಾಗಬಲ್ಲನೇ ? ದೆಹಲಿ ಎಂಬ ಇಂದಿನ ಇಂದ್ರಪ್ರಸ್ಥದಲ್ಲಿ ನಡೆದ ಒಂದು ದುಸ್ತರವಾದ ಒಂದು ಪ್ರಸಂಗದ ಬಗ್ಗೆ ಬರೆದ ಪದ್ಯವಿದು.
ನಾರಿಯೋರ್ವಳ ಬೀದಿಬೀದಿಯ
ಲಾರು ಕೇಡಿಗ ದುರುಳರು ಬಲಾ-
ತ್ಕಾರಗೈದಿರೆ ಯಾರು ಕಾಯ್ದರು ರಾಜಧಾನಿಯಲಿ ?
ಕೌರವನ ಖಳಸಭೆಯಲೆನ್ನಯ
ಸೀರೆಯನ್ನೆಳೆದವನೆ ಲೇಸೀ
ಭಾರತದಿ ದುಶ್ಯಾಸನನೆ ದ್ರೌಪದಿಯ ಸಖನಲ್ತೆ !
13. ಹರುಷದಿಂದರ್ಜುನನು ಸಾರಥಿಯಾದ ಕೃಷ್ಣನಿಗೆ
ಕುರುಕ್ಷೇತ್ರದಲ್ಲಿ ಕೃಷ್ಣನು ಅರ್ಜುನನಿಗೆ ಸಾರಥಿಯಾದದ್ದೇನೋ ಪ್ರಸಿದ್ಧ ಸಂಗತಿ. ಅರ್ಜುನನು ಕೃಷ್ಣನಿಗೆ ಸಾರಥಿ ಆದದ್ದು ಯಾವಾಗ? ಈ ಪ್ರಶ್ನೆಗೆ ನಾನು ಸುಮಾರು 30 ಕ್ಕೂ ಹೆಚ್ಚು ಉತ್ತರಗಳನ್ನು ಬರೆದಿದ್ದೆ — ಅವುಗಳಲ್ಲಿ ಕೆಲವನ್ನು ಇಲ್ಲಿ ಹಂಚಿಕೊಂಡಿದ್ದೇನೆ. ಕೆಲವು ಉತ್ತರಗಳು ಮಹಾಭಾರತದ ಯುದ್ಧದ ಕಾಲದಲ್ಲೇ ನಡೆಯುವುವು. ಕೆಲವು ಮಹಾಭಾರತ ಕಾಲದಲ್ಲೇ ಆದರೂ , ಯುದ್ಧದ ಸಮಯದಲ್ಲಲ್ಲದೇ ಬೇರೆ ಸಂದರ್ಭದಲ್ಲಿ ನಡೆಯಬಹುದಾದವು. ಇನ್ನು ಕೆಲವು ಇಪ್ಪತ್ತೊಂದನೇ ಶತಮಾನದವು!
ಕೆಲವು ಪದ್ಯಗಳಲ್ಲಿ ಅರ್ಜುನನೇ ಕೃಷ್ಣನಿಗೆ ಸಾರಥಿಯಾಗುತ್ತಾನೆ. ಕೆಲವು ಕಡೆ ಅರ್ಜುನನು, ಸಾರಥಿಯಾದ ಕೃಷ್ಣನಿಗೆ ಏನನ್ನಾದರೂ ಹೇಳುವುದನ್ನು ಕೊನೆಯ ಸಾಲಿಗೆ ಹೊಂದಿಸಲಾಗಿದೆ.
ಯುದ್ಧ ಸಮಯದ ಪದ್ಯಗಳು:
ಕುರುಕ್ಷೇತ್ರದ ಕಾಳಗದಲಿದು
ಮರೆಯಲಾರದ ದಿನವಹುದು ಸೈ
ದುರುಳ ದುರ್ಯೋಧನನಿಗಾಸರೆಯಾದ ಕಲಿಕರ್ಣ ।
ಧರೆಗೆ ಬಿದ್ದನುಯೆನ್ನ ಮಡದಿಗೆ
ದೊರಕಿಸುವೆ ನಾ ನ್ಯಾಯವೆಂದನು
ಹರುಷದಿಂದರ್ಜುನನು ಸಾರಥಿಯಾದ ಕೃಷ್ಣನಿಗೆ ||1||
ತರಣಿಯಾಕಾಶದಲಿ ಕಂತು-
ತ್ತಿರಲು ಕರ್ಣನು ರಥದ ಚಕ್ರ ಕೆ-
ಸರಲಿ ಸಿಲುಕಲು ತಾನದನು ಬಿಡಿಸಲಿಕ್ಕಿಳಿದಿರಲು
ಸರಿಯ ಸಮಯವು ಕೊಲ್ಲಲೀತನ
ದುರುಳತನಕಿದು ತಕ್ಕುದೆಂದನು
ಹರುಷದಿಂದರ್ಜುನನು ಸಾರಥಿಯಾದ ಕೃಷ್ಣನಿಗೆ ॥2||
ಮರುಕವೊಂದನು ತೋರಬೇಡವು
ದುರುಳನೆಂಬುದೆ ದಿಟವು ಧರೆಯ ಕೆ-
ಸರಲಿ ಕರ್ಣನು ರಥದ ಗಾಲಿಯನೆತ್ತುತಿಹ ನೋಡೈ
ಸರಲು ಹೂಡುತಲಿವನ ಕೊಲ್ಲೆಂ-
ದಿರಲು ಹರಿ ಸರಿ ಮಾಳ್ಪೆನೆಂದನು
ಹರುಷದಿಂದರ್ಜುನನು ಸಾರಥಿಯಾದ ಕೃಷ್ಣನಿಗೆ ॥3||
ತರಣಿ ತನಯನು ಮತ್ತೆ ಭೂಮಿಗೆ
ಮರಳಿ ಗಾಲಿಯನೆತ್ತುತಿರೆ ತಾ
ಶರವ ಹೂಡಿಡುತಲವನಾಗಲೆ ಧರಣಿಗುರುಳಿಸುತ
ತರುಣಿ ದುರುಪದಿಗಿಂದು ನೆಮ್ಮದಿ
ಬರುವುದೌ ಹರಿ ಕೇಳುಯೆಂದನು
ಹರುಷದಿಂದರ್ಜುನನು ಸಾರಥಿಯಾದ ಕೃಷ್ಣನಿಗೆ ॥4 ||
ಕುರುಕ್ಷೇತ್ರದ ಭಾರಿಯುದ್ಧದ
ಮರೆಯಲಾರದ ದಿವಸವಿದು ಕೇಳ್
ತರಿದೆ ದುರ್ಯೋಧನನಿಗಾಸರೆಯಾದ ಕರ್ಣನನು ।
ಧರೆಗೆ ಬಿದ್ದನು! ಅಗ್ನಿ ಕನ್ಯೆಗೆ
ದೊರಕಿಹುದು ತುಸು ನ್ಯಾಯವೆಂದನು
ಹರುಷದಿಂದರ್ಜುನನು ಸಾರಥಿಯಾದ ಕೃಷ್ಣನಿಗೆ ॥5||
ಮರೆಯಲಾರೆನು ನಾನು ಮಾಧವ
ತರಳೆ ದ್ರೌಪದಿಗಂದು ಹಸ್ತಿನ
ಪುರದಿ ಕೌರವರಾಯನಿಂದಾಗಿರ್ದ ವಿಭವವನು ।
ದುರುಳ ಕರ್ಣನ ಯುದ್ಧ ಭೂಮಿಯ-
ಲುರುಳಿಸಾಯ್ತೈ ನೆಮ್ಮದಿಯೆನುತ
ಹರುಷದಿಂದರ್ಜುನನು ಸಾರಥಿಯಾದ ಕೃಷ್ಣನಿಗೆ ॥6||
ತರಣಿ ಕಂತುವ ಸಮಯದಲ್ಲಿಯೆ
ತರಣಿ ತನಯನು ನೀಗಲಸುವನು
ತರಣಿಗಾಗಿಹ ದುಗುಡದಿಂದಾಗಸವು ಕಪ್ಪಡರಿ |
ಸುರಿಸಿರಲು ಮಳೆಯನ್ನು ಖಂಡಿತ*
ಧರೆಗೆ ತಂಪಾಯ್ತೆಂದು ಹೇಳಿದ
ಹರುಷದಿಂದರ್ಜುನನು ಸಾರಥಿಯಾದ ಕೃಷ್ಣನಿಗೆ ॥7||
ಮರದ ಮೇಗಡೆ ಹತ್ತಿ ನೋಡಿರೆ
ನೆರೆದ ಸೈನ್ಯವು ಬಾನಿನಂಚಿನ-
ವರೆಗು ನಿಂತಿರುವುದನು ಕಾಣುತ ಮನದಿ ಹಿತವಡೆದು
ಮುರಿದು ಹಾಕುವೆವಿನ್ನು ಕೌರವ
ದುರುಳರನೆನುತ ಕೂಗಿ ಹೇಳಿದ
ಹರುಷದಲರ್ಜುನನು ಸಾರಥಿಯಾದ ಕೃಷ್ಣನಿಗೆ! ॥8 ॥
ಸರದಿಯಲಿ ಸತ್ತಿರುವ ಕೌರವ
ದುರುಳರೆಲ್ಲರು ತೆರಳಿ ಯಮನ ನ
ಗರಿಯಲೀಗಲೆ ಹಳಬರಾದರು ಶಿಕ್ಷೆಪಡೆಯುತಲಿ
ಪರಮ ಗುರು ನೀನೆಮ್ಮ ಜೊತೆಯಾ-
ಗಿರುವುದಕೆ ನಾ ಧನ್ಯನೆಂದನು
ಹರುಷದಲರ್ಜುನನು ಸಾರಥಿಯಾದ ಕೃಷ್ಣನಿಗೆ ॥9 ॥
ಗುರುಗುಡುತ್ತಲಿ ತುಂಬುಕೆಸರಲಿ
ಭರದಿ ಹೊಕ್ಕಿರೆ ರಥದ ಚಕ್ರವು
ಸರಸರನೆಯಿಳಿದ ಕರ್ಣ ತಾನದನು ಬಿಡಿಸಲಿಕೆ
ಸರಿಯ ಕಾಲವು ಕೊಲ್ಲಲೆಂದಿರೆ
ಹರಿಯು ಬಾಣವ ಬಿಟ್ಟೆನೆಂದನು
ಹರುಷದಿಂದರ್ಜುನನು ಸಾರಥಿಯಾದ ಕೃಷ್ಣನಿಗೆ ॥ 10 ॥
ಕರುಳ ಕುಡಿಯಭಿಮನ್ಯುವನು ತಾ-
ನರಿಯದಂತೆಯೆ ವ್ಯೂಹದಲಿ ಸಿಲು-
ಕಿರಿಸಿದನು ಕಡುನೀಚನೀತನ ನಾನು ಬಿಡಲೊಲ್ಲೆ ।
ದುರುಳ ಕರ್ಣನಿಗೆನ್ನ ಸರಳಲಿ
ಮರಣವೇ ಸೈಯಿವನಿಗೆಂದನು
ಹರುಷದಿಂದರ್ಜುನನು ಸಾರಥಿಯಾದ ಕೃಷ್ಣನಿಗೆ ॥ 11 ॥
ನರಿಮೊಗದ ಶಕುನಿಗೂ ಕೇಡಿಗ
ದುರುಳ ದುರ್ಯೋಧನನ ನೇಹಿಗ
ಉರಿವ ಹೊಟ್ಟೆಯ ಕರುಬುಗಾಂಧಾರಿಗಿವನೆ ಸಾಕುಮಗ
ದುರುಪದಿಯ ಮೇಣ್ ಸತಿಸುಭದ್ರೆಯ
ಮರುಗಿಸಿದನನು ಕೊಂದೆಯೆಂದನು
ಹರುಷದಿಂದರ್ಜುನನು ಸಾರಥಿಯಾದ ಕೃಷ್ಣನಿಗೆ ॥ 12 ॥
ನರಿಮೊಗದ ಶಕುನಿಗೂ ಕೇಡಿಗ
ದುರುಳ ದುರ್ಯೋಧನನ ನೇಹಿಗ
ಕುರುಡು ಪಟ್ಟಿಯ ರಾಣಿಗೀತನೆ ಸಾಕುಮಗನಲ್ತೆ
ದುರುಪದಿಯನೇ ದಾಸಿಯೆಂದನೆ!
ತರಿದು ಶಾಂತಿಯ ಪಡೆದೆನೆಂದನು
ಹರುಷದಿಂದರ್ಜುನನು ಸಾರಥಿಯಾದ ಕೃಷ್ಣನಿಗೆ ॥ 13 ॥
ಮರುಳ! ಶಲ್ಯನ ನಂಬಿ ಬಂದನು
ವಿರಸದಲ್ಲವ ಹೊರಟು ಹೋಗಿರೆ
ದುರುಳ ಕರ್ಣನು ಕಾಳಗವನಿನ್ನೆಂತು ನಡೆಸುವನು?
ಕರುಣೆಯನು ತೋರದೆಯೆ ನೀ ಶತ
ಶರವ ಹೂಡೆನೆ ಮಾಳ್ಪೆನೆಂದನು
ಹರುಷದಿಂದರ್ಜುನನು ಸಾರಥಿಯಾದ ಕೃಷ್ಣನಿಗೆ ॥ 14 ॥
ಅರಳುಮರುಳಿನ ಮುದುಕ ಶಲ್ಯನ-
ನರಿಯದೆಯೆ ನಂಬಿದ್ದ ಕಾರಣ
ದುರುಳ ಕರ್ಣನಿಗೀಗ ಸಾರಥಿಯಿಲ್ಲದೇ ಹೋಯ್ತು
ಕೊರಗುತಿಹನೈ ರಥದ ಗಾಲಿಗ-
ಳೆರಡು ಸಿಲುಕಿವೆ ಕೆಸರಲೆಂದನು
ಹರುಷದಿಂದರ್ಜುನನು ಸಾರಥಿಯಾದ ಕೃಷ್ಣನಿಗೆ ॥ 15 ॥
ಹರಿಯೆ ನೀನೀ ಗೀತ ಬೋಧೆಯ-
ನೊರೆದಿರಲು ಮನ ಹಗುರವಾದುದು!
ಮರುಳುಹಿಡಿದುದು ಬಿಟ್ಟುಹೋದುದು ನಿನ್ನ ದಯೆಯಿಂದ
ದುರುಳರನು ಕೊಲ್ವುದಕೆ ಬೇಗನೆ
ಹೊರಡು ಹೂಡಿ ಲಗಾಮನೆಂದನು
ಹರುಷದಿಂದರ್ಜುನನು ಸಾರಥಿಯಾದ ಕೃಷ್ಣನಿಗೆ ॥ 16 ॥
ಯುದ್ಧ ಸಂದರ್ಭವಲ್ಲದ ಪದ್ಯಗಳು:
ಗಿರಿಜೆ ಪೂಜೆಗೆ ಸತ್ಯಭಾಮೆಯು
ಪೊರಟಿರಲು ಪತಿಯೊಡನೆ ನೋಂಪಿಗೆ
ಬಿರಿದ ಹೂಗಳ ಬುಟ್ಟಿಯಲಿ ಹಾಕಿಟ್ಟು ಮುದದಿಂದ
ಹೊರಗೆ ನೋಡಲು ಸೂತನಿಲ್ಲವು
ಪುರದ ದೇವಳ ಸೇರಬೇಕೆನೆ
ಹರುಷದಿಂದರ್ಜುನನು ಸಾರಥಿಯಾದ ಕೃಷ್ಣನಿಗೆ ॥1॥
ಸರಸದಲ್ಲಿ ಸುಭದ್ರೆಯತ್ತಿಗೆ-
ಯರೊಡಗೂಡುತ ಲೆತ್ತವಾಡಿರ-
ಲರಸಿ ರುಕ್ಮಿಣಿ ಗೆದ್ದು ನಾದಿನಿಯನ್ನು ಛೇಡಿಸುತ
ಮೆರವಣಿಗೆಯಲಿ ನನ್ನ ಗಂಡನ
ಪುರದಿ ಕೊಂಡೊಯ್ಯುವುದೆ ಪಣವೆನೆ
ಹರುಷದಿಂದರ್ಜುನನು ಸಾರಥಿಯಾದ ಕೃಷ್ಣನಿಗೆ ! ॥2॥
ಮರಳಿ ನೆನೆದರು ಕುರುಕ್ಷೇತ್ರದ
ಭರದ ಕದನವ ಗೀತ ಬೋಧೆಯ
ನರನು ನಾರಾಯಣನು ಸೇರಿರೆ ವರ್ಷಗಳುಕಳೆದು ॥
ಮರಳಿಯದೆನಿತು ನಿನಗೆ ಸಲಿಪುದು
ಹರಕೆಯಂದಿನದೆಂದು ಪೇಳುತ
ಹರುಷದಿಂದರ್ಜುನನು ಸಾರಥಿಯಾದ ಕೃಷ್ಣನಿಗೆ ! ॥3॥
ತರಳನಿವನಭಿಮನ್ಯು ದ್ವಾರಾ-
ಪುರಿಗೆ ತೆರಳಿರುವಾಗ ಕಡಲಿನ
ಕರೆಯ ಮರಳಲಿ ಕಪ್ಪೆ ಗೂಡನು ಕಟ್ಟಬಯಸಿದನು ।
ಕಿರಿಯ ಮಾವನು ತಾಯ ಜೊತೆ ಕು-
ಳ್ಳಿರಲೆ ಬೇಕೆಂದು ಹಠಗೈದಿರೆ
ಹರುಷದಿಂದರ್ಜುನನು ಸಾರಥಿಯಾದ ಕೃಷ್ಣನಿಗೆ ! ॥4॥
ತರಳಶಿಶು ಅಭಿಮನ್ಯು ತಾಯ ತ-
ವರಿಗೆ ಪೋಗಿರುವಾಗ ಸಾಗರ
ಕರೆಯ ಉಸುಕಿನಲಾಡಬೇಕೆಂದಾಸೆ ಪಟ್ಟಿರಲು
ಕಿರಿಯ ಮಾವನು ರಥದಿ ಜೊತೆ ಕು-
ಳ್ಳಿರಲೆಬೇಕೆನುತ ಮಗು ಕೇಳಲು
ಹರುಷದಿಂದರ್ಜುನನು ಸಾರಥಿಯಾದ ಕೃಷ್ಣನಿಗೆ ! ॥5॥
ಆಧುನಿಕ ಕಾಲದ ಉತ್ತರಗಳು!
ಹೊರಡೊ ಮಗನೇ* ಊರು ದೂರವು
ಭರದಲೋಡಿಸು ಕಾರು ದಾರಿಗೆ
ಕರಿದ ತಿಂಡಿಯನಷ್ಟು ಕಟ್ಟಿಸಿಕೊಂಡು ಹೋಗೋಣ!
ಕುರುಕುರೆನ್ನುವ ಚಕ್ಕುಲಿಗಳಿರೆ
ಸರಿದು ಪೋಪುದು ಯಾನವೆಂದನು
ಹರುಷದಿಂದರ್ಜುನನು ಸಾರಥಿಯಾದ ಕೃಷ್ಣನಿಗೆ ||1 ||
(* ಅಪ್ಪನ ಹೆಸರು ಅರ್ಜುನ, ಮಗನ ಹೆಸರು ಕೃಷ್ಣ ಎಂದು ಅಥವಾ ಇಬ್ಬರು ಗೆಳೆಯರು ಅಂತ ಬೇಕಾದರೂ) ಇಟ್ಟುಕೊಳ್ಳಬಹುದು)
ತುರಿದು ಕಾಯನು ಘಮಘಮೆನ್ನುತ
ಹುರಿದ ರವೆಯುಪ್ಪಿಟ್ಟು ಮಾಡುವೆ
ತರುವ ಸಮಯವು ಬಾಲಕೃಷ್ಣನ ಶಾಲೆಯಿಂದೆನಲು
ಹೊರಟನರ್ಜುನ* ಪುಟ್ಟ ಮಗನನು
ಕರೆದು ಮಾರುತಿಯೊಳಗೆ ಕೂರಿಸಿ
ಹರುಷದಿ೦ದರ್ಜುನನು ಸಾರಥಿಯಾದ ಕೃಷ್ಣನಿಗೆ॥2 ||
(*ಅಪ್ಪನ ಹೆಸರು ಅರ್ಜುನ, ಮಗನ ಹೆಸರು ಕೃಷ್ಣ)
ವಿರಸ ಬೇಡೆಲೆ ಮಾನಿನೀ ನಾ-
ನರಸುತಿಲ್ಲವು ಸುಳ್ಳುಕಾರಣ
ಕರೆಯಬೇಡವೆ ಮಾಲಿಗೇ ಶಾಪಿಂಗ ನಾ ಮಾಣೆ ।
ಹೊರಡಬೇಕಿದೆ ಮಗನು ಟ್ಯೂಷನ್
ತರಗತಿಗೆ ತುಸು ಹೊತ್ತಿನಲೆನುತ
ಹರುಷದಿ೦ದರ್ಜುನನು ಸಾರಥಿಯಾದ ಕೃಷ್ಣನಿಗೆ॥3 ||
(*ಅಪ್ಪನ ಹೆಸರು ಅರ್ಜುನ, ಮಗನ ಹೆಸರು ಕೃಷ್ಣ)
ಸರಸರನೆ ಷಾಪಿಂಗು ಮುಗಿಸುತ
ಸರಸು ಕೃಷ್ಣನ ಹಿರಿಯ ಮೂರ್ತಿಯ-
ನರೆಗಳಿಗೆಯಲಿಕೊಳ್ಳೆ ವಿಸ್ಮಯ ಗಂಡ ಅರ್ಜುನಗೆ!
ಹೊರಡುವುದೆ ಸರಿಯೆಂದು ಕಾರ-
ಲ್ಲಿರಿಸಿ ಭಾರದ ವಿಗ್ರಹವ ತಾ
ಹರುಷದಿಂದರ್ಜುನನು ಸಾರಥಿಯಾದ ಕೃಷ್ಣನಿಗೆ || 4॥
(ಇಲ್ಲಿ ಅರ್ಜುನ ಎಂಬಾತ ಸಾರಥಿ ಆದದ್ದು ಕೃಷ್ಣನ ವಿಗ್ರಹಕ್ಕೆ!)
ಪದ್ಯಗಳನ್ನು ನಿಧಾನವಾಗಿ ಓದಿ ಆನಂದಿಸಿ.
-ಹಂಸಾನಂದಿ
(ನಾನು ಹಲವು ವರ್ಷಗಳಿಂದ ಬರೆದಿರುವ ಕೃಷ್ಣನ ಬಗ್ಗೆ ಕೆಲವು ಪದ್ಯಗಳು — ಇದರಲ್ಲಿ ಸ್ವಂತ ಪದ್ಯಗಳೂ, ಅನುವಾದಗಳೂ ಸೇರಿವೆ )
ಕಲಾವಿದ ಶ್ರೀ ಕೇಶವ್ ರಾಧಾಕೃಷ್ಣನ್ ಅವರ ವರ್ಣಚಿತ್ರ
ಗೊಲ್ಲ ಪೆಣ್ಗಳ ಬಟ್ಟೆ ಕದ್ದಿಹ
ಕಳ್ಳನೆನಲೋ? ದುರುಳ ನಾಶಕ
ಮಲ್ಲನೆನಲೋ? ದುಗುಡ ಕಳೆಯುವ ಭಲ್ಲೆ ಇವನೆನಲೋ?
ಪುಲ್ಲಲೋಚನೆ ಸತ್ಯಭಾಮೆಯ
ನಲ್ಲನೆನಲೋ? ಕಿರುನಗೆಯ ಸುಲಿ
-ಪಲ್ಲ ಕಂದನು ಮುದ್ದಿಸಲು ಸಲ್ಲುವನು ಇವನೆನಲೋ?
ಅಂದದಲ್ಲಾರಿಹರೊ ನಿನಗರ
-ವಿಂದಲೋಚನ! ಗೋಕುಲದೊಳಗೆ
ಮಂದೆ ಗೋವ್ಗಳ ಕಾಯುತಲಿ ನೀನಂದು ಕೊಳಲಿಂದ
ಸುಂದರ ಸ್ವರಗಳನು ನುಡಿಸಿರೆ
ಹಂದರದಿ ಮಲ್ಲಿಗೆಯು ನಲಿದವು
ಮಂದಿರದ ಗಂಟೆಗಳು ಮಂಗಲನಾದ ಮಾಡಿದವೆ!
ಸೆರೆಮನೆಯೊಳಗೆ ಹುಟ್ಟಿದಾ ಶಿಶು
ಕರುಣೆಯಿರದಿಹ ದುರುಳ ಕಂಸನ
ನೆರಳಿನಲ್ಲೇ ಯಮುನೆ ನೆರೆಯನು ದಾಟಿ ಗೋಕುಲಕೆ
ತೆರಳಿ ಗೊಲ್ಲರ ಕೆಳೆಯಲಾಡುತ
ಮುರಳಿಯನು ಪಿಡಿದವನೆ ಜಗದೀ
ಸೆರೆಯ ಬಿಡಿಸಲಿ ನಮ್ಮನೆಲ್ಲರ ಕಾಯ್ದು ಚೆನ್ನಿಗನು!
ಮಡಕೆಯೊಡೆದಿಹನಮ್ಮ ಬೆಣ್ಣೆಯ
ಹುಡುಗನೀತನು ನೀನೆ ಬೇಗನೆ
ಕೊಡಲುಬೇಕೌ ತಕ್ಕ ಶಿಕ್ಷೆಯನೆನಲು ಗೋಪಿಯರು
ಒಡನೆ ತಬ್ಬುತ ತಾಯಿ ನುಡಿದಳು
ಬಿಡಿರೆ ಸಟೆಯನು ನಿಲುವನೇ ಕಾ-
ಪಿಡದೆ ತಪ್ಪೆಸಗದಿಹ ಕಂದನ ಹೀಗೆ ದೂರುವಿರಿ?
ಕನ್ನೈದಿಲೆಯ ನೀಲ ಕೋಮಲಾಂಗದ ಹರಿಯ
ಮುನ್ನ ಇಂದ್ರಾದಿಗಳ ಪೂಜೆವಡೆದ
ಚೆನ್ನಾಗಿ ಆಸರೆಯಲಿಹರನ್ನು ಕಾಯ್ವಂಥ
ಚಿನ್ನ ಕಂದನ ನಾನು ನೆನೆವೆ ಮನದಿ
ಚೆಲುವ ಕೃಷ್ಣನ ಕೊರಳ ತಬ್ಬಿಹೆ-
ನೆನುತ ಮಾಲೆಯೆ ಮೆರೆವೆಯಾ?
ಗೋಪಿಯರು ನಲ್ಲನನು ಬಿಗಿದ-
ಪ್ಪಿರಲು ಹೊಸಕದೆ ಉಳಿವೆಯಾ?
ಪುಣ್ಯಗೈದರೆ ನಾನು ಹುಟ್ಟುವೆನು ಮುಂದೊಮ್ಮೆ
ಬಿದಿರಾಗಿ ಆ ಯಮುನೆ ದಡದ ಮೆಳೆಯಲ್ಲಿ
ಅಲ್ಲಿ ತಾನೇ ಧನ್ಯ ಕೊಳಲಾಗಿ ಪಡೆದುದದು
ಗೋಪಕುವರನ ರನ್ನದುಟಿಗೊತ್ತುವಾ ಹಿತವ
ದೊರೆಯ ಮೊಗದಲಿ ಕಣ್ಣಕಮಲಗಳು ಅರಳುತ್ತ
ಮುರಳಿ ನಾದದ ಜೇನಸವಿ ತುಂಬಿ ಸುರಿಸಿ;
ಮರಳಿ ಮೆದುಗಲ್ಲ ಕನ್ನಡಿಯವೋಲೆಸೆಯೆ ತಾ-
ವರೆ ಮುಖವು ಮನದಲ್ಲಿ ನಿಲಲಿ ಸಡಗರಿಸಿ!
ಹಣೆಯಲ್ಲಿ ಸೊಗಯಿಸುವ ಪುನುಗುಕತ್ತುರಿ ತಿಲಕ
ಎಣೆಯಿರದ ಕೌಸ್ತುಭವು ಅವನೆದೆಯಲಿ
ಕುಣಿಯುತಿರೆ ಮೂಗಿನಲಿ ಮುತ್ತಿನಾ ನತ್ತು ಕಂ-
ಕಣದ ಕೈಯಲ್ಲಿ ಮೆರೆವ ಕೊಳಲು!
ನರುಗಂಪು ಬೀರುತಿರಲವನು ಪೂಸಿದ ಗಂಧ
ಕೊರಳಲೋಲಾಡಿ ಮೆರೆಯುತಿರೆ ಸರವು
ನೆರೆದ ಗೋಪಿಯರೆಲ್ಲ ನಡುವಿನಲಿ ಕಂಗೊಳಿಸು-
ತಿರುವನೈ ಗೊಲ್ಲನಿವ ರತುನದಂತೆ
ಮೊಗದಲ್ಲಿ ಹೊಸಬೆಣ್ಣೆ ಘಮಲು ತುಂಬಿಹನನ್ನು
ನುಡಿಯಲ್ಲಿ ಚತುರತೆಯ ಕಳ್ಳಮಾತಿಹನ
ಸುಳ್ಳು ಕಣ್ಣೀರನ್ನು ಸುರಿಸುವನ ನೆಚ್ಚುವೆನು
ಮೆಲ್ಲನೇ ಕಾಲ್ಬಡಿವ ಹಠದ ಬಾಲಕನ !
ಗೋವ ಕಾಯ್ದಸುರರನು ಕೊಂದು ಗಿರಿಯನ್ನೆತ್ತಿ
ಮಾವನನೆ ತರಿದು ನೀ ಮಥುರೆಯನು ತೊರೆದು
ದೇವ ಕೃಷ್ಣನೆ! ಗೀತೆಯನ್ನೊರೆದು ಧರ್ಮವನು
ಬುವಿಯಲ್ಲಿ ಕಾಯ್ದೆಯೇ! ನನ್ನೆತ್ತಿ ಕರೆದು!
ನರುಗಂಪು ಚಂದನವ ಪೂಸಿ ಮೈಯಲ್ಲೆಲ್ಲ
ಕೊರಳನ್ನು ಸೊಬಗಿಸಲು ಮುತ್ತಿನ ಸರ
ಧರಿಸಿ ಸುತ್ತುವರಿದಿಹ ಗೋಪಿಯರ ನಡುವಲ್ಲೆ
ಮೆರೆಯುತಿಹ ಗೊಲ್ಲನಿವ ತಾ ಗೆಲ್ವನು!
ಹಾಲಕಡಲಿನ ದೊರೆಯು ಇವನೆಂದು ಗೋಪಾಲ
ಬಾಲನಿವ ಹಾಲೂಡಿಸುವನೀತನೆನುತ
ಸಲೆ ನೆಚ್ಚೆ ಮತ್ತೊಮ್ಮೆ ಇರದಂತೆ ತಾಯಮೊಲೆ-
ಹಾಲು ನಮಗಿನ್ನೆಂದು ಮಾಡಿದನೆ ಈತ !
ರವಿಯಂತೆ ಕಾಂತಿಯನು ಬೀರುತ್ತ ಗೋಪಿಯರ
ಮುಖಕಮಲವರಳಿಸಿದ ಮುಗುದ ಬಾಲಕನು
ತಲೆಯಲ್ಲಿ ನವಿಲುಗರಿಯನ್ನಿಟ್ಟು ನಲಿಯುತಿಹ
ಚಿತ್ರವನು ಎನ್ನೆದೆಯಲಾರು ಬರೆದವರು?
ತುಟಿಯಲೊತ್ತಿಟ್ಟಿರುವ ಸೊಗದಕೊಳಲಿನ ಹೊಳಪು
ಮುಡಿಯಲೇರಿಹ ನವಿಲ ಗರಿಯ ಮೆರುಗು
ಸೆಳೆವ ನೀಲಕೆ ಸಿಗ್ಗು ತಂದವನ ಮೈಬಣ್ಣ
ಬೆಳಕ ತೋರಲಿಯೆನಗೆ ಕಡೆಯ ಪಯಣದಲಿ!
ಒಂದು ಪಾದವ ನೆಲದಲಿರಿಸುತ ಬಾಗಿಸುತ ಮತ್ತೊಂದನು
ನಂದ ಭವನದಿ ಮೊಸರ ಕಡೆದಿಹ ತಾಳದುಲಿತಕೆ ಕುಣಿಯುತ
ಅಂದದಲಿ ಬಳುಕಾಡಿಸುತ ತಾ ತೊಟ್ಟ ಚಂದದೊಡವೆಗಳ
ಬಂದು ನಿಲ್ಲಲಿ ಕಣ್ಣ ಮುಂದೆಯೆ ಬೆಣ್ಣೆ ಬೇಡುವ ಚೆಲುವನು
ಮಾಗಿಕಾಲದ ಸಂಜೆಯಲಿ ಗೋಕುಲದ ಯಮುನೆಯ ತಟದಲಿ
ತೂಗುಗಂಟೆಯ ದನಿಯ ಕಿಂಕಿಣಿ ಸಂಜೆಹಾದಿಯ ತುಂಬಿರೆ
ಸಾಗಿಬರುತಿಹ ಗೊಲ್ಲಬಾಲರು ಮಂದೆ ಹಸುಗಳ ಮುಂದೆಯೆ
ಕೂಗಿ ಹಾಕಿಹ ಕೇಕೆ ಕೊಳಲಿನ ದನಿಯೆ ನಮ್ಮನು ಕಾಯಲಿ!
ಯಮುನೆ ಮರಳಿನ ದಡದ ಹೊಂಗೆಯ ನಿಬಿಡ ನೆರಳಲಿ ಕುಳಿತು ತಾ
ಎಡದ ಕೈಯಲ್ಲಿರಿಸಿ ಸವಿಗೊಳಲನ್ನು ಸೊಂಟದಿ ಕೊಂಬನು
ಹರಿವ ನದಿ ಕಮಲದೆಲೆ ದೊನ್ನೆಯ ಮೊಸರಿನನ್ನವ ಮೆಲ್ಲುತಾ
ಸುತ್ತಲಿಹ ಹಸುಗಳನು ಬಿಡದೆಯೆ ನೋಡಿಕೊಂಬನ ಕಂಡೆನೇ !
ಕಿರುನಗುವ ಆ ಕೃಷ್ಣನಾ ಮುಖಕಮಲದಲ್ಲಿ ಹೊಮ್ಮುವುಸಿರಿನ ಸವಿಯನು
ಅರಿತಿರುವೆ ನೀ ಕೊಳಲೆ! ನಿನ್ನ ನಾ ಬೇಡುತಿಹೆ ಇಂದು ಕೇಳೆನ್ನ ಮೊರೆಯ
ಆ ರನ್ನದುಟಿಗಳಾ ಬಳಿ ನೀನು ಹೋಗಿರುವ ಸಮಯದಲಿ ನನ್ನ ದೆಸೆಯ
ಸರಿಯಾಗಿ ನಂದಕಂದನ ಕಿವಿಗೆ ಗುಟ್ಟಿನಲಿ ಮೆಲ್ಲನೇ ಒಮ್ಮೆ ನುಡಿಯೇ!
ರಾಮ ಅಂತೊಬ್ಬಿದ್ದ; ಹುಂ; ಅವನ ಹೆಂಡತಿಯ ಹೆಸರು ಸೀತೇ ಅಂತ;ಹುಂ;
ತಂದೆ ಮಾತಿಗೆ ಪಂಚವಟಿಯ ದಡದಲ್ಲಿರಲು ರಾವಣನವಳ ಕದ್ದನು;
ನಿದ್ದೆ ಮಾಡಿಸಲಮ್ಮ ಕಥೆ ಹೇಳುತಿರಲು ಹುಂಗುಟ್ಟುತಿಹ ಹರಿಯು ಒಡನೇ
ಲಕ್ಷಣಾ ಬಿಲ್ಲು ಬಿಲ್ಲೆಲ್ಲೆಂದು ಕಳವಳಿಪ ಮಾತೆ ನಮ್ಮನು ಕಾಯಲಿ
-ಹಂಸಾನಂದಿ
A Tanboora/Tamboori/Tanpura (Currently in Chester Beatty Museum, Dublin)
As you might guess, this article is musical. Do read on, if Indian classical music interests you.
A common question some listeners have is why some ragas in Karnataka Sangeeta are sung in so-called “Madhyama Shruti”. I will try to explain it here in simple terms.
In Indian classical, semi-classical, and film music, most compositions span between one-and-a-half to two octaves. An octave consists of seven primary notes: Sa, Ri, Ga, Ma, Pa, Dha, and Ni. The first Sa is the fundamental base note (technically known as Madhya Shadja), and the Sa that follows the Ni is the upper note (Tara Shadja).
From a physics perspective, if the vibration frequency of the base Shadja is ‘x’, the frequency of the upper Shadja is ‘2x’.
The Range of the Human Voice
Most musical exploration happens within a two-octave range. Typically, this includes 3–4 notes below the base Shadja (down to the lower octave’s Panchama) and 4–5 notes above the upper Shadja (up to the higher octave’s Panchama). This limit exists because the average human voice is naturally confined to this range; only exceptionally trained vocalists can comfortably navigate three full octaves.
In Indian classical music, there is no fixed absolute pitch. Singers choose a base Shruti (pitch) that allows them to traverse these two octaves comfortably.
Why the Shift to Madhyama Shruti?
Some ragas in Carnatic music have a very limited range, often spanning only a single octave (for example, from Mandra Panchama to Madhya Panchama). Because these ragas don’t utilize the singer’s full vocal range, they can sound somewhat “subdued” or flat if performed at the singer’s usual pitch.
To make these ragas sound more vibrant and melodious, musicians use a convention called Madhyama Shruti. In this setup, the Madhyama (Ma) of the standard scale is treated as the new Shadja (Sa).
How the Tambura Changes
Normally, a Tambura (or Tanpura) is tuned to:
Mandra Panchama — Madhya Shadja — Madhya Shadja — Mandra Shadja
In Madhyama Shruti, the first string (Mandra Panchama) is lowered by one note to Shuddha Madhyama. By treating this Madhyama as the new base Sa, the listener perceives a higher, more brilliant tonal center. Even though the raga remains within a one-octave range, shifting the base higher makes the performance sound more resonant and appealing.
In #CarnaticMusic, this technique is frequently used for panchamāntya, dhaivatāntya, or nishādāntya ragas (ragas that end on Pa, Dha, or Ni), such as Jhanjhooti, Nadanamakriya, Kuranji, Navaroju. There are exceptions, though. For example, some ragas that span more than an octiave, such as #YamanKalyani or #SindhuBhairavi, are occasionally performed in Madhyama Shruti. Conversely, some limited-range ragas like #Chittaranjaniare still traditionally sung in normal Shruti.
-hamsanandi
ಶ್ರೀ ತ್ಯಾಗರಾಜರು ಅಪ್ರಸಿದ್ಧ ರಾಗಗಳಲ್ಲೂ ಹಲವಾರು ರಚನೆಗಳನ್ನು ಮಾಡಿ ಅವುಗಳನ್ನು ಬೆಳಕಿಗೆ ತಂದರು. ತಾವೇ ಹೊಸ ಹೊಸ ರಾಗಗಳನ್ನೂ ಕಲ್ಪಿಸಿದರು. ಇನ್ನು ದೊಡ್ಡ ರಾಗಗಳಾದ ತೋಡಿ, ಕಲ್ಯಾಣಿ, ಶಂಕರಾಭರಣ, ಮೋಹನ ಮೊದಲಾದುವುಗಳ ಬಗ್ಗೆ ಹೇಳುವಂತೆಯೇ ಇಲ್ಲ. ಈ ರಾಗಗಳಲ್ಲೆಲ್ಲ ಹತ್ತಿಪ್ಪತ್ತಕ್ಕೂ ಹೆಚ್ಚು ರಚನೆಗಳನ್ನ ಮಾಡಿದ್ದಾರೆ. ಆದರೆ , ಅವರ ಕಾಲದಲ್ಲೇ ತಕ್ಕಮಟ್ಟಿಗೆ ಪ್ರಖ್ಯಾತವೂ, ಜನಪ್ರಿಯವೂ ಆಗಿದ್ದ ಆನಂದ ಭೈರವಿಯಲ್ಲಿ ಹೆಚ್ಚಿನ ಸಂಖ್ಯೆಯ ರಚನೆಗಳನ್ನು ಮಾಡಿಲ್ಲ. ಇವರ ಮೂರು ರಚನೆಗಳು ಮಾತ್ರ ಈ ರಾಗದಲ್ಲಿ ಸಿಕ್ಕಿವೆ (ಕ್ಷೀರಸಾಗರ ವಿಹಾರ, ನೀ ಬಲಮಾ ನಾಮ ಬಲಮಾ, ನೀಕೇ ತೆಲಿಯಕ). ಇದರ ಹಿಂದೆ ಒಂದು ಕಥೆಯೂ ಇದೆ.
ತ್ರಿಭುವನಂ ಸ್ವಾಮಿನಾಥ ಅಯ್ಯರ್ ಎಂಬ ನಾಟಕ ಕಲಾವಿದರು ಬಹಳ ಚೆನ್ನಾಗಿ ಆನಂದಭೈರವಿ ರಾಗವನ್ನು ಹಾಡುತ್ತಿದ್ದರಂತೆ. ಅವರ ನಾಟಕ ತಂಡವು ತಿರುವೈಯ್ಯಾರಿಗೆ ಬಂದಾಗ, ತ್ಯಾಗರಾಜರು ಅವರ ನಾಟಕವನ್ನು ನೋಡಿ ಆನಂದಿಸಿ, ಆ ಕಲಾವಿದರನ್ನು ಅಭಿನಂದಿಸಿದರಂತೆ. ಆಗ ಆತ, ತ್ಯಾಗರಾಜರಿಗೆ, ಈ ರಾಗದಲ್ಲಿ ಇನ್ನು ಯಾವುದೇ ರಚನೆಗಳನ್ನು ಮಾಡದಿರುವಂತೆ, ಹಾಗಿದ್ದರೆ, ಅವರು ಯಾಕೆ ಈ ರಾಗದಲ್ಲಿ ಮಾಡಿಲ್ಲ ಎಂದು ಮುಂದಿನ ಪೀಳಿಗೆಯವರು ಕೇಳಿಕೊಂಡಾಗ, ಅದರಿಂದಾದರೂ ತಮ್ಮ ಹೆಸರನ್ನು ನೆನಪಿನಲ್ಲಿ ಇಟ್ಟು ಹೇಳುತ್ತಾರೆ ಎಂದು ಕೇಳಿಕೊಂಡರಂತೆ. ತ್ಯಾಗರಾಜರು ಹಾಗಾಗಿ ಇಂತಹ ಪೂರ್ವಪ್ರಸಿದ್ಧ ರಾಗದಲ್ಲಿ ಯಾವುದೇ ದೊಡ್ಡ ರಚನೆಗಳನ್ನೂ ಮಾಡಿಲ್ಲ.
ಅದೇನೋ ನನಗೆ ತ್ಯಾಗರಾಜರ ಬಗ್ಗೆ ಈ ರಚನೆಯನ್ನು ಮಾಡುವಾಗ ಆನಂದಭೈರವಿಯಲ್ಲಿ ಮಾಡೋಣವೆನ್ನಿಸಿತು. ತ್ಯಾಗರಾಜರ ಸರಳ ಕೃತಿಗಳ ಶೈಲಿಯಲ್ಲೇ ಇರುವ ಈ ಕೃತಿಯಲ್ಲಿ ಇನ್ನೂ ಕೆಲವು ಅವರನ್ನು ನೆನಪಿಸುವ ಅಂಶಗಳನ್ನು ಇಟ್ಟಿದ್ದೇನೆ. ಉದಾಹರಣೆಗೆ ಹೇಳುವುದೆಂದರೆ ಅನುಪಲ್ಲವಿಯಂತೆಯೇ ಇರುವ ಚರಣದ ಎರಡನೆಯ ಭಾಗದ ಮಟ್ಟು, ಪಲ್ಲವಿ ಮತ್ತು ಅನುಪಲ್ಲವಿಗಳಲ್ಲೂ ಇರುವ ಒಂದೇ ಅಕ್ಷರದ ಪ್ರಾಸ, ಅವರೇ ತಮ್ಮ ರೀತಿಗೌಳ ರಾಗದ ಕೃತಿಯೊಂದರಲ್ಲಿ ಪ್ರಸ್ತಾಪಿಸಿರುವ ಶತರಾಗರತ್ನಮಾಲಿಕೆಯ ನೆನಪಿಸುವಂತಹ ಪದಪುಂಜಗಳು, ಕೊನೆಯಲ್ಲಿ ಬರುವ ವಾಗ್ಗೇಯಕಾರ ಮುದ್ರೆ , ಅವರ ಅನೇಕ ಕೃತಿಗಳಂತೆ ಸರಳ ವರ್ಣಮೆಟ್ಟು ಇತ್ಯಾದಿ. ಇದರ ಜೊತೆಗೆ, ತ್ಯಾಗರಾಜರ ಜೀವನದ ಕೆಲವು ವಿವರಗಳು ಸಾಹಿತ್ಯದಲ್ಲಿ — ಅವರು ರಾಜಾಶ್ರಯವನ್ನು ನಿರಾಕರಿಸಿದ್ದು, ತಿರುವೈಯ್ಯಾರಿನಲ್ಲಿ (=ಐದುಹೊಳೆಯೂರು) ವಾಸವಾಗಿದ್ದುದು, ಕೊನೆಗಾಲದಲ್ಲಿ ಸಂನ್ಯಾಸ ತೆಗೆದುಕೊಂಡದ್ದು, ಸೂಕ್ಷ್ಮವಾಗಿ ಪ್ರಸ್ತಾಪವಾಗಿವೆ.
ತ್ಯಾಗರಾಜರು ಪಂಚರತ್ನಗಳನ್ನು ಬಿಟ್ಟು ಬೇರಾವುದೇ ಕೃತಿಯಲ್ಲೂ ಚಿಟ್ಟೆಸ್ವರಗಳನ್ನು ರಚಿಸಿದಂತೆ ಕಾಣುವುದಿಲ್ಲ. ನಾವೀಗ ಕೇಳುವ ಹಲವು ಚಿಟ್ಟೆಸ್ವರಗಳು, ನಂತರದ ವಿದ್ವಾಂಸರು ರಚಿಸಿಸೇರಿಸಿರುವಂತಹವು. ಆದರೆ ನನಗೇನೋ ಒಂದು ಸರಳವಾದ ಚಿಟ್ಟೆಸ್ವರವಿದ್ದರೆ ಸೊಗಸೆನಿಸಿ , ಅದನ್ನು ಕೂಡ ಈ ರಚನೆಯಲ್ಲಿ ಮಾಡಿದ್ದೇನೆ. ಕೇಳಿ! ಇತರ ತ್ಯಾಗರಾಜ ಅಭಿಮಾನಿಗಳೊಂದಿಗೆ ಹಂಚಿಕೊಳ್ಳಿ!
https://youtu.be/eob9TdWddqM
*ರಾಗ ಆನಂದ ಭೈರವಿ ಮಿಶ್ರಚಾಪು ತಾಳ*
ಪಲ್ಲವಿ:
ಆನಂದ ತಂದಿತ್ತ ನಮಗೇ (ಅಪರಿಮಿತ) ಮಹ॥ದಾನಂದ ॥
ಅನುಪಲ್ಲವಿ:
ತಾನೇ ರಚಿಸಿದ ಕೃತಿರತ್ನಮಾಲಿಕೆ
ಶ್ರೀನಾಥ ರಘುರಾಮಗರ್ಪಿಸಿ ಹಾಡುತ||ಲಾನಂದ||
ಚರಣ:
ಬಗೆಬಗೆಯ ರಾಗದಲಿ ನೂರಾರು ರಚನೆಗಳ
ಮಿಗೆ ಇತ್ತನವ ಯೋಗಿ ತ್ಯಾಗರಾಜ ।
ಭೋಗಗಳ ಬೇಡೆನುತ ನೆಲೆನಿಂತ ಹಾಡುತ
ರಾಗಗಳ ಐದುಹೊಳೆಯೂರ ರಾಜ ॥
ಅನುಪಲ್ಲವಿಯಂತೆ:
ಮಾಗಿರೆ ಜೀವನ ವಿರಾಗಿಯಾದೆಯೆ
ನೀಗಿಸೆ ಕೌಶಿಕೇಶ ಭವದ ಬವಣೆಯನ್ನು॥ ಆನಂದ॥
ಚಿಟ್ಟೆ ಸ್ವರ:
ಪ ದ ಪ | ಗ ರಿ ಗ ಮ || ಮ ಪ ಮ | ಗ ರಿ ಸ ನಿ ||
ಸ ಗ ರಿ | ಗ ಮ ಪ ಮ|| ಗ ಗ ರಿ | ಗ ಮ ಪಾ ||
ಪ ದ ಪ |ನೀ ಸಾ || ಮ ಗ ರಿ | ಸಾ ನಿ ಸ ||
ಗ ರಿ ಸ | ನಿ ದ ಪ ಮ || ದ ಪ ಮ | ಗ ರಿ ಗ ಮ ||
-ಹಂಸಾನಂದಿ
#ಆನಂದಭೈರವಿ #ಮಿಶ್ರಚಾಪು #ಸ್ವಂತರಚನೆ #ರಾಗ
Purandarasasa
(ಪುರಂದರದಾಸರ ಜೀವನ ಪರಿವರ್ತನದ ಸಾಂಪ್ರದಾಯಿಕ ಕಥೆ, ಪದ್ಯರೂಪದಲ್ಲಿ)
ಕ್ಷೇಮಪುರದಲಿ ಇದ್ದನೊಬ್ಬನು ಶ್ರೀನಿವಾಸನ ನಾಮದಿ
ಹೇಮದಾಭರಣಗಳ ಮಾಡುತ ಮಾರಿ ಗಳಿಸುತ ನೆಮ್ಮದಿ
ನಾಮಮಾತ್ರಕು ದಾನವೆಂಬುದನಾತ ಸ್ವಲ್ಪವು ನೀಡದೆ
ನೇಮದಿಂದಲಿ ದುಡ್ಡುಮಾಡುವ ದಾರಿಯೊಂದನೆ ಕಂಡನು || ೧||
ಶ್ರೀನಿವಾಸನು ಸತ್ಯದಲಿ ಬೇರೆಲ್ಲ ವಿಷಯದಿ ಯೋಗ್ಯನು
ಗಾನವಿದ್ಯೆಯ ಪದ್ಧತಿಯಲಿ ಸಮಾನರಾರನು ಕಾಣೆನು
ಸಾನುರಾಗದಿ ಚಿಣ್ಣರಿಗೆ ಸಂಗೀತವಿದ್ಯೆಯ ಪೇಳ್ವನು
ಕಾನುಮಲೆಯ ಕ್ಷೇಮಪುರದಲ್ಲವನೆ ಬಲುಸಿರಿವಂತನು ||೨||
ಶ್ರೀನಿವಾಸನ ಮಡದಿ ಸರಸತಿ ಸಾಧ್ವಿಯಾಕೆಯು ನಿಚ್ಚದಿ
ಮಾನಿನಿಯು ತಾನೆಂದು ಗಂಡನ ಮಾತ ಮೀರಲು ಹೋಗಳು
ತಾನು ಮಾಡಿದ ಭಾಗ್ಯ ತನ್ನಯ ಗಂಡ ಮಕ್ಕಳ ಕಾವುದು
ಏನೊ ಎಂತೋ ದೈವವಿತ್ತುದರಲ್ಲೆ ಶಾಂತಿಯ ಕಾಂಬಳು ||೩||
ಒಂದು ಶ್ರಾವಣ ತಂಪು ಹಗಲಲಿ ಶ್ರೀನಿವಾಸನ ಮಳಿಗೆಗೆ
ಬಂದು ನಿಂತನು ವೃದ್ಧ ಬ್ರಾಹ್ಮಣನೊಬ್ಬ ಬೇಡುತ ಹಣವನು
ಕಂದ ಮೊಮ್ಮಗನಿಹನು ಮನೆಯಲಿ ಮಾಡಬೇಕಿದೆ ಮುಂಜಿಯ
ಒಂದು ಹೊನ್ನನು ಕೊಟ್ಟರಾಯಿತು ಧನ್ಯನಾಗುವೆ ಎಂದನು ||೪||
ಎಂದು ದಾನವ ಮಾಡದಂತಹ ಶ್ರೀನಿವಾಸನು ಯೋಚಿಸಿ
ಇಂದು ಈತನ ಸಾಗಿಹಾಕಿದರಾಯಿತೆನ್ನುತ ಭಾವಿಸಿ
ಮುಂದೆ ಬಾಗಿಲಿನಿಂದ ಆಚೆಯೆ ವೃದ್ಧನಾತನ ಕಳುಹಿಸಿ
ಬಂದು ನೋಡೆಲೆ ವಾರವಾಗಲಿ ಆಗ ಕೊಡಬಹುದೆಂದನು ||೫||
ಹೀಗೆ ವಾರವು ಮತ್ತೆ ವಾರವು ತಿಂಗಳುಗಳೇ ಸಂದವು
ಯೋಗಿಯಂದದಿ ಮುದುಕ ಹಾರುವ ಬೇಸರಿಲ್ಲದೆ ಬರುವನು
ಬಾಗಿ ನಿಲ್ಲುವ ಮತ್ತೆ ಬೇಡುತ ಒಂದು ಹೊನ್ನಿನ ಕಾಸನು
ರೇಗು ಹತ್ತಿದ ಶ್ರೀನಿವಾಸನು ಕಿಲುಬು ನಾಣ್ಯವ ಕೊಟ್ಟನು ||೬||
ಕೆಟ್ಟ ನಾಣ್ಯವ ಕೊಟ್ಟರೂ ಅವ ಕೈಯ ಮುಗಿಯುತ ಹೊರಟನು
ಕೆಟ್ಟು ಹೋಗಿರೆ ಹಣೆಯ ಬರಹವು ಹೊಣೆಯು ಯಾರದಕೆಂದನು
ಪಟ್ಟು ಬಿಡದಿರುವುದೊಳಿತೆಂದವ ಮನದಿ ಯೋಚನೆ ಮಾಡುತ
ನೆಟ್ಟ ನೇರದಿ ಹೋಗಿ ಸರಸತಿ ಮನೆಯ ಬಾಗಿಲ ಬಡಿದನು ||೭||
ತಂದೆಯಂತಿಹ ಮುದುಕ ಹೇಳಿದ ಕಥೆಯ ಸರಸತಿ ಕೇಳಿ ತಾ
ನೊಂದು ನವೆಯುತ ಏನ ತಾನೇ ಮಾಡಬಲ್ಲೇನೆಂದಿರೆ
ತಂದೆ ತಾಯಿಯು ಕೊಟ್ಟ ಮುತ್ತಿನ ನತ್ತು ನೆನಪಿಗೆ ಬಂದಿತು
ಚೆಂದವಾಗಿರುವೊಡವೆಯೊಂದಿದೆ ಕೊಳ್ಳಿರೀಗಲೆ ಎಂದಳು ||೮||
ತರುಣಿ ಕೊಟ್ಟಿಹ ಹೊಳೆವ ಮೂಗುತಿ ನೋಡಿ ಹಿಗ್ಗಿದ ಬ್ರಾಹ್ಮಣ
ಸಿರಿನಿವಾಸನ ಬಳಿಗೆ ವೇಗದಿ ಧಾವಿಸುತ್ತಲೆ ಹೋದನು
ಇರುಳ ದೀಪದ ಸೊಬಗಿನಾ ಮುತ್ತಿಹುದು ನನ್ನಲಿ ನೋಡಿರಿ
ಸರಿಯ ಬೆಲೆಯನು ನೀವೆ ಕಟ್ಟಿರಿ ಹಣವ ನೀಡಿರಿ ಎಂದನು ||೯||
ಹೊಳೆವ ಮೂಗುತಿ ಸೊಬಗ ನೋಡುತ ಶಂಕೆಗೊಂಡನು ನಾಯಕ
ಬೆಳಕಿನಾ ಖನಿಯಿದನು ಕಂಡಿಹೆ ಮೊದಲೆ ತಾನೆಂದೆನಿಸಲು
ಹೊಳೆಯಿತವನಿಗೆ ಮಡದಿ ಸರಸತಿ ಹಾಕಿಕೊಳ್ಳುವ ಮೂಗುತಿ
ಸೆಳೆದು ತಂದಿಹನೇನೊ ಎನ್ನುವ ಭಯವು ಕಾಡಿತು ಮನಸಲಿ ||೧೦||
ಮಡದಿ ಕೊಟ್ಟಿಹಳೇನೊ ಎಂಬುದ ತಾನು ಅರಿಯುವ ಕಾರಣ
ಒಡನೆ ಹೊರಟನು ಬೇಗ ಮನೆಕಡೆ ಸತಿಯ ಕಾಣುವೆನೆನ್ನುತ
ಕೊಡುವೆ ಹಣವನು ಹೊರಗೆ ಕುಳ್ಳಿರು ಬೇಗ ಮರಳುವೆ ಎನ್ನುತ
ಹಿಡಿದ ನತ್ತನು ಪೆಟ್ಟಿಗೆಯಲೇ ಇಟ್ಟು ಬೀಗವ ಹಾಕಿದ || ೧೧||
ಅತ್ತ ನಾಯಕ ಮನೆಗೆ ಹೋದವ ಬಳಿಗೆ ಮಡದಿಯ ಕರೆಯುತ
ಮುತ್ತು ಮೂಗುತಿ ಕಾಣದೆಲ್ಲಿಗೆ ಹೋಯಿತೆನ್ನುತ ಕೇಳಲು
ಎತ್ತಿ ಇಟ್ಟಿಹೆ ತಂದು ತೋರುವೆನೆಂದು ನುಡಿದೊಳಹೋದಳು;
ಇತ್ತ ಕಡೆ ಮನೆ ಹೊಸ್ತಿಲಲಿ ಪತಿ ಶಂಕೆಯಲೆ ನಿಂತಿದ್ದನು ||೧೨ ||
ನುಡಿದೆ ಹುಸಿಯನು ಗಂಡನಲಿ ನಾನೆಂತು ಮೂಗುತಿ ತೋರಲಿ?
ಬಿಡದೆ ನಿನ್ನಯ ಪಾದವೆಂದಿಗು ನಂಬಿದವಳನು ಪಾಲಿಸೋ
ಕಡುಪರೀಕ್ಷೆಯ ಸಮಯ ಬಂದಿದೆ ನೀನೆ ದಾರಿಯ ತೋರ್ವುದು
ಎಡದ ಹೂವಲಿ ಪ್ರಾಣ ನೀಗುವೆ ಬಲದಿ ಕೊಟ್ಟರೆ ಬಾಳುವೆ ||೧೩||
ಹೀಗೆ ನೆನೆಯುತ ಸರಸತಿಯು ತಾ ಹೂವನಿಟ್ಟಳು ವಿಠಲಗೆ
ಬೇಗ ಬಾರೆನ್ನುತಲಿ ಹೊರಗಡೆ ಪತಿಯು ಕೂಗುತಲಿದ್ದಿರೆ
ಆಗಬಾರದುದೇನೊ ನಡೆಯುವ ಭಯವು ಹೆಚ್ಚುತ ಹೋದರೂ
ಆಗಲಿರುವುದ ವಿಠಲ ನಡೆಸುವನೆಂದು ಕಣ್ಣನು ತೆರೆದಳು ॥೧೪॥
ಮುಚ್ಚಿರುವಕಂಗಳನು ಸಾಧ್ವಿಯು ಕೈಯ ಮುಗಿದೇ ತೆರೆಯಲು
ನಿಚ್ಚದಲಿ ಬಿದ್ದಿತ್ತು ದೇವರ ಎಡದ ಕಡೆಯಲಿ ಕುಸುಮವು
ಅಚ್ಚಕೆಂಪನೆ ಹೂವು ಬಿದ್ದುದ ನೋಡಿ ಕಸಿವಿಸಿಗೊಳ್ಳುತ
ಪಚ್ಚೆವಜ್ರದ ಕಿವಿಯ ಓಲೆಯ ತೆಗೆದು ಪುಡಿಪುಡಿಗೈದಳು ||೧೫||
ಕಣ್ಣ ಮುಚ್ಚುತ ವಿಷವ ಸೇವಿಸಹೊರಟ ಸರಸತಿ ಬೆಚ್ಚುತ
ಕಣ್ಣ ಬಿಟ್ಟಳು ಏನೋ ಬಿದ್ದಿರಲಾಗ ಕೈಯಲಿ ಒಮ್ಮೆಗೆ
ಕಣ್ಣನೇ ತಾ ನಂಬಲಾರಳು ಕೈಯಲಿರುವುದು ಮೂಗುತಿ
ಬಣ್ಣಗೆಟ್ಟಿಹ ಅವಳ ಮೊಗದಲಿ ಮತ್ತೆ ಮರಳಿತು ಜೀವವು ||೧೬||
ಏನು ಯೋಚಿಸದೇನೆ ಸರಸತಿ ಹೋಗಿ ಹೊರಗಡೆ ಗಂಡಗೆ
ತಾನು ಕೈಯಲಿ ಹಿಡಿದ ಮೂಗುತಿ ಮಾತನಾಡದೆ ಕೊಟ್ಟಳು
ಏನಿಹುದವಳೆಡಗೈಲಿ ಬಟ್ಟಲು ಕಿವಿಯ ವಜ್ರವು ಕಾಣದೇ
ತಾನೆ ವಿಷಯವ ಅರಿತು ಬಟ್ಟಲ ವಿಷವ ನೆಲದಲಿ ಚೆಲ್ಲಿದ ||೧೭||
ನಡೆದ ನಾಯಕ ಭರದಿ ತನ್ನಯ ಮಳಿಗೆಯಲಿರುವನ ಕಾಣಲು
ಅಡಗಿ ಹೋಗಿತ್ತವನ ಮನದಲಿ ಬೀಡು ಬಿಟ್ಟಿಹ ಕೃಪಣತೆ
ಉಡುಗಿ ಹೋಗುವುದಿತ್ತು ಒಂದೂ ತಪ್ಪುಮಾಡದ ಜೀವವು!
ಮಡದಿಗಿಂತಲು ಮಿಗಿಲು ಆಪುದೆ ಬರಿಯ ಧನಕನಕಾದಿಯು? ||೧೮||
ಶ್ರೀನಿವಾಸನು ಕಾಣಲಿಲ್ಲವು ಅಂಗಡಿಯಲಾ ಮುದುಕನ
ಏನುಮಾಡಲು ಬೇಕು ಎಂಬುದನಾಗ ಮನದಲಿ ಯೋಚಿಸಿ
ತಾನೆ ಕೂಡಲೆ ಮಾಡಿಬಿಟ್ಟನು ಮುಡಿವನೊಂದನು ಹಿರಿದನು
ದಾನ ಮಾಡುವೆ ದಾಸನಾಗುವೆ ವಿಜಯನಗರವ ಸೇರುವೆ ||೧೯||
ಮನೆಗೆ ಮರಳಿದ ಶ್ರೀನಿವಾಸನು ಮುಡಿವ ಮಡದಿಗೆ ಹೇಳಿದ
ತನಗೆ ಭಾಗ್ಯವದಾಯಿತೆನ್ನುತ ಸರಸತಿಯು ಮರು ನುಡಿದಳು
ಜನವ ಕರೆಯುತ ಸಕಲ ಸಿರಿಯನು ಅಲ್ಲೆ ದಾನವ ಮಾಡುತ
ಮನೆಮಠಗಳನು ತೊರೆದು ಊರನೆ ಬಿಟ್ಟು ಹೊರಟರು ಕೂಡಲೆ||೨೦||
ಹೋದ ದಿನಗಳ ಮರೆತು ಬಿಟ್ಟರು ಮತ್ತೆ ದಂಡಿಗೆ ಹಿಡಿದರು
ವೇದವೇದ್ಯನ ಭಾವ ಗಮ್ಯನ ನಾಮ ಸಾಸಿರ ನುಡಿಯುತ
ಆದರದಿ ದಾಸನೆನಿಸಿದನವ ತಳೆದು ಹೆಸರು ಪುರಂದರ
ಆದುದೆಲ್ಲಾ ಒಳಿತೆಯೆನ್ನುತ ಪಾಡಿ ರಾಮಕ್ರಿಯೆಯಲಿ || ೨೧||
-ಹಂಸಾನಂದಿ
(ಪದ್ಯಗಳು ಮಾತ್ರಾಮಲ್ಲಿಕಾಮಾಲೆಯ ಚೌಪದಿ ಛಂದಸ್ಸಿನಲ್ಲಿವೆ)
ರಾಮ ಸೀತೆಯರ ಮದುವೆಯ ದಿನವೆಂದು ಆಚರಿಸುವ ದಿನ ಮಾರ್ಗಶಿರ ಪಂಚಮಿಯನ್ನು ವಿವಾಹಪಂಚಮಿ ಎಂದೆನ್ನುತ್ತಾರೆ. ಹಿಂದೆ ಬೇರೆ ಬೇರೆ ಛಂದಸ್ಸುಗಳಲ್ಲಿ ಬರೆದಿದ್ದ ಈ ಕಿರುಗಬ್ಬವನ್ನು ಇನ್ನೊಮ್ಮೆ, ಒಂದೇ ಛಂದಸ್ಸಿನಲ್ಲಿ (ಭಾಮಿನಿ ಷಟ್ಪದಿಯಲ್ಲೇ) ಇಂದಿನ ವಿವಾಹಪಂಚಮಿಯ ಸಂದರ್ಭದಲ್ಲಿ ಮತ್ತೆ ಬರೆದಿದ್ದೇನೆ.
ನನಗೆ ತಿಳಿದಂತೆ, ವಾಲ್ಮೀಕಿ ರಾಮಾಯಣದಲ್ಲಿ ಈ ಸೀತಾರಾಮಕಲ್ಯಾಣವು ಯಾವ ದಿನದಲ್ಲಿ ನಡೆಯಿತೆಂಬ ವಿಷಯ ಬರದಿದ್ದರೂ, ಆ ಪ್ರಸ್ತಾಪ ಬೇರೆ ರಾಮಾಯಣಗಳಲ್ಲಿ ಇರಬಹುದು. ಹಾಗಾಗಿ ಪರಂಪರೆಯಂತೆ ಈ ದಿನವನ್ನು ಅವರ ಮದುವೆಯ ಹಬ್ಬವಾಗಿ ಆಚರಿಸುವುದುಂಟು.
ಇಲ್ಲಿ ನಾನು ಬರೆದಿರುವ ಕಥೆಯು ವಾಲ್ಮೀಕಿಯ ಮೂಲಕ್ಕೆ ಪೂರ್ತಿ ಬದ್ಧವಾಗಿಲ್ಲದಿದ್ದರೂ ಅದರ ಆಶಯವನ್ನು ಮೀರುವುದಿಲ್ಲ.
ಓದುವವರಿಗೆ ಸುಲಭವಾಗಲೆಂದು ನಡುನಡುವೆ ಒಂದೆರಡು ಸಾಲುಗಳ ಟಿಪ್ಪಣಿಯನ್ನೂ ಕೊಟ್ಟಿದ್ದೇನೆ.
ಮಂಗಳ ಪದ್ಯ
ರಾಮ ಸೀತೆಯರಮಲ ಚರಿತೆಯ-
ಸೀಮ ರಸಭರಿತವದು; ನಿಲ್ವುದು
ಭೂಮಿಯಲ್ಲಿಹವರೆಗೆ ಬೆಟ್ಟವು ಹರಿವ ಹೊಳೆತೊರೆಯು ।
ತಾಮಸವ ಕಳೆಯುವುದು ಬಾಳಲಿ
ತಾ ಮನುಷ್ಯನ ರೂಪದಲಿ ಹರಿ-
ಯೇ ಮಹೋನ್ನತಿಗೇರುವಂತಹ ದಾರಿ ತೋರುವುದು ॥೧ ॥
ಕಥಾಮುಖ
ಸರಸವಿದು ಶ್ರೀರಾಮ ಸೀತೆಯ
ಚರಿತೆಯೊಳಗನುಪಮವು ಜಾನಕಿ
ಪರಿಣಯದ ಶುಭವೇಳೆ ಒದಗುವುದುಂಟು ನಲಿವಿನಲಿ
ಅರುಹುವೆನು ಸುಸಮಯದಿ ವಿಬುಧರು
ಪರಿಕಿಸಲಿ ಸಂತೋಷ ಗೊಳ್ಳಲಿ
ರಸದಘಟ್ಟಿಯ ಸವಿದು ಮನವನು ಹಗುರಗೈಯಲಿಕೆ ॥೨॥
ಸೀತೆಗೆ ಸ್ವಯಂವರವೆಂದು ಜನಕ ಘೋಷಿಸಿದ್ದಾನೆ. ಡಂಗುರದಲ್ಲಿ ಸೀತೆ ಆಸ್ಥಾನದಲ್ಲಿಟ್ಟ ಶಿವಧನುಸ್ಸನ್ನು ಎತ್ತಿ ಹೆದೆ ಏರಿಸಿದವರನ್ನು ಮದುವೆಯಾಗುವಳೆಂಬ ವಿಷಯವನ್ನು ಕೇಳಿದ ಮಿಥಿಲೆಯ ಜನರು ಕುತೂಹಲ-ಆತಂಕದಲ್ಲಿ ತಮ್ಮ ರಾಜಕುಮಾರಿಗೆ ತಕ್ಕ ವರನು ಸಿಕ್ಕಾನೋ ಇಲ್ಲವೋ ಎಂದು, ಅವಳಿಗೆ ಒಳಿತಾಗಲೆಂದು ಮನದಲ್ಲೇ ಹರಸುತ್ತಿದ್ದರಂತೆ :-
ಸಾರಿರಲು ಡಂಗುರವ ಮಿಥಿಲೆಯ
ಚಾರ ಗಡಣವು ನಾಳೆಯರಸು ಕು-
ಮಾರಿ ಶಿವಧನುವೆತ್ತಿದನ ತಾ ವರಿಸುವಳೆನುತಲಿ
ಊರ ಜನ ಕಾತರದಿ ನುಡಿದಿಹ-
ರಾರು ಬರುವರೊ? ಹೆದೆಯನೇರಿಸಿ-
ಯಾರೊ? ಸೀತೆಯ ದೈವಕಾಯಲೆನುತಲಿ ಹರಸಿಹರು ॥೩॥
ಸೀತಾಸ್ವಯಂವರದ ಬಗ್ಗೆ ಜನಕ ರಾಜ ಡಂಗೂರವಂತೂ ಸಾರಿದ್ದಾಗಿದೆ. ಇಡೀ ಮಿಥಿಲಾಪುರಕ್ಕೇ ಇನ್ನು ಶಿವಧನುವನ್ನು ಹೆದೆಯೇರಿಸಿ ಸೀತೆಯ ಮನಗೆಲ್ಲುವನಾರಿರಬಹುದೆಂಬ ಕುತೂಹಲವುಂಟಾಗಿದೆ :-
ಪುರವು ಮಿಥಿಲೆಯು ಸಡಗರಿಸುತಿದೆ
ಬರುವರೆನ್ನುತ ರಾಜಕುವರರು
ಸರಳತರಳೆಯ ಮುಗುದೆಸೀತೆಯ ಕೈಯ ಹಿಡಿಯಲಿಕೆ!
ಇರುವುದಾರಿಗೊ ಭಾಗ್ಯವಿಂಥದು?
ಸರಸಿಜವ ನಾಚಿಸುವ ಮೊಗವಿಹ
ಸಿರಿಯಿವಳ ಮನವನ್ನು ಗೆಲ್ಲುವ ಮನ್ನನಾರಿಹನೊ! ॥೪॥
ಇತ್ತ ಅದೇ ಸಮಯಕ್ಕೆ ರಾಮ ಲಕ್ಷ್ಮಣರು ವಿಶ್ವಾಮಿತ್ರನೊಡನೆ ಮಿಥಿಲೆಯನ್ನು ಪ್ರವೇಶಿಸಿ ಆ ನಗರಿಯ ಸೊಗಸಿನ ಬಗ್ಗೆ ಮಾತಾಡುತ್ತ ರಸ್ತೆಯಲ್ಲಿ ಬರುವಾಗ, ಒಬ್ಬ ವೃದ್ಧೆ ರಾಮನ ಬಳಿಸಾರಿ, ಆವನ ಅಂದಕ್ಕೆ ಬೆರಗಾಗಿ ಅವನಿಗೆ ದೃಷ್ಟಿಯಾಗಬಾರದೆಂದು ದೃಷ್ಟಿತೆಗೆದ ಪರಿ ಹೀಗಿದೆಯಂತೆ :-
ಬಹಳ ಸೊಗವೀ ನಗರಿ ಲಕ್ಷ್ಮಣ!
ಇಹರು ಸಜ್ಜನನಿಕರ! ಶೋಭಿಸು-
ತಿಹುದು ಸಗ್ಗಕೆ ಸಾಟಿಯಾಗುತ ನೋಡು! ಮೆರೆದಿಹುದು!
ಅಹಹ ಹಿತವೆನುತಿರಲು ರಾಮನು
ಮಹಿಳೆಯೋರ್ವಳು ಬಳಿಗೆ ಸಾರುತ
ಸಹಜದಲಿ ರಘುರಾಮನಿಗೆ ಮಿಗೆ ದಿಟ್ಟಿ ತೆಗೆದಿಹಳು ॥೫॥
ದೃಷ್ಟಿ ತೆಗೆದ ನಂತರ ಆಕೆ , ತನ್ನ ಬಳಿಯಿದ್ದವರಿಗೆ ಹೇಳಿದ್ದು ಹೀಗೆ :-
ಮುಗಿಲಬಣ್ಣನು ನವಿರುನುಡಿವನು
ಹಗಲ ನೇಸರ ಹೊಳೆವ ತಿಂಗಳ
ಮಿಗಿಲ ಕಾಂತಿಯನಾಂತ ಚೆಲುವನು ರಾಮಚಂದಿರನು
ನಗುವ ಮುಖವನು ನೋಡಿದಾಕ್ಷಣ
ಹಗುರವೆನಿಸಿಹನೆನ್ನ ಮನವನು
ಚಿಗುರು ಪೂಶರವಿಡಿದ ಮನ್ಮಥಗಿಂತ ಸುಂದರನು ॥೬॥
ಹೀಗೆ ರಾಮ ಲಕ್ಷ್ಮಣರು ಅರಮನೆಯ ದಾರಿಯಲ್ಲಿ ನಡೆದಾಡುವುದನ್ನು ಅಂತಃಪುರದ ಉಪ್ಪರಿಗೆಯಲ್ಲಿ ಸೀತೆಯ ತಂಗಿ ಊರ್ಮಿಳೆ ಕಂಡಳಂತೆ :-
ಚಟುವಟಿಕೆ ಚಿಮ್ಮುತಿಹ ಕೋಮಲೆ
ತಟವಟವನರಿಯದಿಹಳೂರ್ಮಿಳೆ
ಕಿಟಕಿಯಲಿ ಕುಳಿತವಳು ಬರುತಿರುವವರ ಕಂಡಿಹಳು
ಸಟೆಯನಾಡದ ಬಾಲೆ ಕಣ್ಣೆವೆ
ಮಿಟುಕಿಸದೆಲೆಯೆ ನೋಡಿ ನುಡಿದಳು
ದಿಟದಲಿಬ್ಬರು ಸೂರ್ಯರೊಟ್ಟಿಗೆ ಬಂದರಿಲ್ಲೆಂದು! ॥೭॥
ಮುಂದುವರಿಯುತ್ತಾ ಊರ್ಮಿಳೆ ಅಕ್ಕ ಸೀತೆಗೆ ಹೀಗೆ ನುಡಿದಳು :-
ಏನು ಹೇಳಲಿ ಕೇಳೆ ಜಾನಕಿ
ಸಾನುರಾಗದಲೆನ್ನ ಮಾತನು
ಮಾನಿಸರಿಗೆಲ್ಲಿರುವುದಿಂತಹ ಕಳೆಯು ಮೊಗದಲ್ಲಿ
ಜ್ಞಾನಿಗಳ ಕೇಳಿದರೆ ಪೇಳುವ-
ರೀ ನಿರಂಜನ ರೂಪಿ ಯುವಕರು
ಮಾನಿನೀಯರ ಮನಕೆ ಲಗ್ಗೆಯ ಹಾಕೆ ಬಂದಿಹರು! ॥೮॥
ಜಾಣೆ ಊರ್ಮಿಳೆಯಿಂದ ಸೀತೆಗೆ ಇನ್ನಷ್ಟು ಸಲಹೆಗಳು :-
ಅಕ್ಕ! ಕೇಳೀಗೆನ್ನ ಮಾತನು
ಚಿಕ್ಕವಳು ನಾನೆಂದು ಗಣಿಸದೆ
ನಕ್ಕು ಬಿಡದೆಲೆ ಸಿಗ್ಗು ತೋರದೆ ಕಡೆಯಗಾಣಿಸದೆ |
ತಕ್ಕವನು ನಿನಗಿವನು ಕಣ್ಣಿಗೆ
ಸಿಕ್ಕಿರಲು ಬಹುಮೂಲ್ಯ ರತುನವು
ಮಿಕ್ಕವರ ಮೇಲಕ್ಕರೆಯ ಕಿಂಚಿತ್ತು ತೋರದಿರು! || ೯॥
ಮಾರನೆಯ ದಿನ ಸ್ವಯಂವರದ ವಿಶೇಷ ಸಂದರ್ಭ! ಸಭೆ ತುಂಬಿದೆ. ಎಲ್ಲೆಲ್ಲೂ ಸಡಗರ. ಸ್ವಯಂವರ ಮಂಟಪಕ್ಕೆ ಬರುತ್ತಲಿದ್ದ ಸೀತೆ ಕುಳಿತ ರಾಜಕುಮಾರರ ಮುಂದೆ ಹಾದುಹೋಗುವಾಗ ಏನಾಯಿತು? :-
ಮಾಲೆ ಪಿಡಿಯುತ ಮೆಲ್ಲನಡೆದಿರೆ
ನೀಳಜಡೆಯಾ ಹುಲ್ಲೆಗಣ್ಣಿಯು
ಸಾಲು ಕುಳಿತಿರುವರಸುಕುವರರನೋರೆ ನೋಡುತಲಿ
ನೀಲವರ್ಣನು ಭಾನುತೇಜನು
ಬೀಳೆ ಕಣ್ಗಳಿಗಲ್ಲೆ ಸೀತೆಯ
ಕಾಲು ಮುಂದಕೆ ಹೋಗಲೊಲ್ಲದೆ ತಡೆದಿಹುದು ನಡೆಯು ॥೧೦ ॥
ಸೀತೆ ಮೊದಲ ಬಾರಿ ರಾಮನನ್ನು ಕಂಡ ಸಂದರ್ಭ ಹೇಗಿತ್ತು? :-
ಮಾತಿರದೆ ನೋಡುತ್ತಿರೆ ಜನಕ-
ಜಾತೆ ಶ್ರೀರಾಮನನು ದಿಟ್ಟಿಸಿ
ಆತ ಹಗಲಿನ ಚಂದಿರನೆನುತ ವಿಸ್ಮಯವ ತಳೆಯೆ
ಏತರದ ವೈಚಿತ್ರ ಮನ ತಾ
ಗೀತೆ ಹರುಷದಿ ಹಾಡುತಲಿಹುದು
ಈತನನು ನೋಡಿರಲುಯೆಂದಳು ಮನದೊಳಗೆ ಬಾಲೆ ॥೧೧॥
ತನ್ನ ಮುಂದೆ ಕ್ಷಣಕಾಲ ಕಾಲ್ದೆಗೆಯದೆ ನಿಂತ ಸೀತೆಯನ್ನ ಕಂಡ ಶ್ರೀರಾಮನ ಮನಸ್ಸಿನಲ್ಲಿ ಮೂಡಿದ ಭಾವನೆಗಳು ಹೀಗಿದ್ದವಂತೆ :-
ಸೀತೆಯಿವಳೇ? ನಿಜದಲಾ ಭುವಿ-
ಜಾತೆಯಿವಳೇ? ಸಕಲ ಭುವನ-
ಖ್ಯಾತೆಯಿವಳೇ ? ಕ್ಷೀರ ಸಾಗರ ಜಾತೆಯಿವಳೇನು?
ಪ್ರೀತಿಯನು ಚಿಮ್ಮುತಿಹ ಕಂಗಳ
ರೀತಿಯೇನಿದು! ಅರೆಚಣದಲೇ
ಸೋತಿಹೆನು! ನೀ ಸೋಲದಿಹ ಭೀತಿಯಲೆ ಸೊರಗಿದೆನು ! ॥೧೨॥
ಒಬ್ಬರಾದ ಮೇಲೆ ಒಬ್ಬ ರಾಜರು, ಶಿವಧನುಸ್ಸನ್ನು ಎತ್ತಿ ಹೆದೆಯೇರಿಸಲು ಹೋದಾಗ :-
ಸರದಿಯಂತೆಯೆ ಹೊರಟ ರಾಯರು
ಸರಸರನೆ ನಡೆಯುತ್ತ ಶಿವಧನು-
ವಿರಿಸಿರುವೆಡೆಗೆ ಹೋಗಿ ಬಿಲ್ಲನ್ನೆತ್ತ ಹೊರಟಿರಲು
ಅರರೆ! ಕಟ್ಟಿತು ಹಣೆಯ ಮೇಲೆ ಬೆ-
ವರಿನ ಹನಿಗಳ ಸಾಲು! ಗೋಡೆಯ-
ದುರಿತು! ಸಾಗದ ಕಾರ್ಯವಿದೆನುತ ನೆಲವು ನಡುಗಿತ್ತು! ॥೧೩॥
ಒಬ್ಬರಾದ ಮೇಲೆ ಒಬ್ಬರು ಸೋಲುತ್ತಿದ್ದಂತೆ, ಅತ್ತ ಜನಕನಿಗೆ, ಇತ್ತ ಸೀತೆಗೆ ಇಬ್ಬರಿಗೂ ಮನದಲ್ಲು ದುಗುಡ :-
ಏನ ಪೇಳಲಿ ಕೇಳು ರಾಯರ
ಮಾನ ಪೋದುದು ಜನಕ ಭೂಪತಿ
ತಾನು ಮಾಡಿದ ಪಾಪವೇನಿಹುದೆಂದು ಯೋಚಿಸಿರೆ
ಜಾನಕಿಗೆ ಪರಿತಾಪ ಹೆಚ್ಚಿತು
ಸಾನುರಾಗದಿ ರಾಮಚಂದ್ರನ-
ದೇನು ಶಿವಧನುವೆಡೆಗೆ ಪೋಗನೆನುತ್ತ ಮಿಡುಕಿದಳು ॥೧೪॥
ಹಲವು ರಾಜರು ಸೀತೆಯ ತಂದೆ ಜನಕರಾಯನಿಟ್ಟ ಪಂಥದಲ್ಲಿ ವಿಫಲರಾದನಂತರ, ಇನ್ನು ವಿಳಂಬವು ಬೇಡ, ಕೂಡಲೆ ಹೋಗಿ ಬಿಲ್ಲನ್ನೆತ್ತಬೇಕೆಂದು ಲಕ್ಷ್ಮಣ ತನ್ನ ಅಣ್ಣನನ್ನು ಕಳಿಸುತ್ತಾನೆ :-
ಇತ್ತ ರಾಮನನೆಬ್ಬಿಸುತ ಸೌ-
ಮಿತ್ರಿ ನುಡಿದನು ಹಸನು ಮಾತನು
ಅತ್ತ ಹೋಗೈ ದಾಶರಥಿ ಶಿವಧನುವನಿಟ್ಟಕಡೆ!
ಎತ್ತಿ ಹೆದೆಯೇರಿಸಲು ಗೆಲ್ಲುವೆ
ಚಿತ್ತದಲಿ ಮೈಥಿಲಿಯನೇ ನೆನೆ -
ಯುತ್ತಲಿದ್ದರೆ ಮುದದಿ! ಶಕುನವು ಶುಭವಿಹುದುಯೆಂದು! ॥೧೫॥
ಅಂತೂ ರಾಮ ಎದ್ದು ಶಿವಧನುವಿಟ್ಟೆಡೆಗೆ ನಡೆದು, ಅದನ್ನು ಎತ್ತಿದ್ದಾನೆ :-
ತಾಮರೆಯ ಕಣ್ಣುಗಳ ಸುಂದರ
ರಾಮ ಹರಧನುಸನ್ನು ಎತ್ತಿರೆ
ತಾ ಮನದೊಳಗೆ ಶಿವನನೇ ನುತಿಸುತಲಿ ದೃಢದಿಂದ
ಕಾಮದೇವಗು ಮಿಗಿಲಿಹ ಚೆಲುವ-
ನೇ ಮನದೊಳಗೆ ನಿಲಿಸುವೆನೆನುತ
ಸಾಮಜಗಮನೆ ಜಾನಕಿಯು ಶಿವನನ್ನು ನೆನೆದಿಹಳು॥ ೧೬॥
ಒಂದೆ ಮಾತಿನ ದಾಶರಥಿ ತಾ-
ನಿಂದು ಶಿವನಾ ಬಿಲ್ಲನೆತ್ತಲಿ-
ಕೆಂದು ಬಾಗಿದ ಶಿರವನೆತ್ತಿರಲಲ್ಲೆ ಜಾನಕಿಯ
ಇಂದುವದನದ ಹುಬ್ಬುಬಿಲ್ಗಳ
ಚಂದ ಕಂಡಿರಲೊಂದು ಚಣ ಮನ-
ದೊಂದುಗುರಿಯಿಬ್ಬಗೆಯೆನಿಸಿರಲು ಶಿವಶಿವಾಯೆಂದ! ॥೧೭॥
ರಾಮ ಶಿವಧನುವನ್ನೆತ್ತಿದ್ದೂ ಆಯಿತು! ಅದನ್ನು ಹೆದೆಯೇರಿಸುವಾಗ ಅದು ಮುರಿದದ್ದೂ ಆಯಿತು. ಸೀತೆ ಮಾಲೆ ಹಾಕಿದ್ದೂ ಆಯಿತು. ಜನ ಮೆಚ್ಚಿದ್ದೂ ಆಯಿತು ಇದಲ್ಲವೇ ಕಲ್ಯಾಣವೆಂದರೆ! :-
ಬಿಲ್ಲನೆತ್ತುತ ಹೆದೆಯನೇರಿಸೆ
ಝಲ್ಲೆನುವ ಸದ್ದಿನಲಿ ಮುರಿದುದು
ಎಲ್ಲ ಸಭಿಕರು ಬೆರಗಿನಲಿ ನೋಡುತಿರಲಚ್ಚರಿಯ
ಸಲ್ಲುತಿದೆ ಪುಷ್ಪಗಳ ವೃಷ್ಟಿಯು
ಮಲ್ಲೆ ಹೂಗಳ ಮಾಲೆ ಬಂದವು
ಅಲ್ಲೆ ಸಂದುದು ಮಂಗಳದ ಗಳಿಗೆಯಲಿ ಕಲ್ಯಾಣ! ॥೧೮॥
ಉಗ್ಗಡಿಸೆ ಮಂತ್ರಗಳು ಸುತ್ತಲು
ಸುಗ್ಗಿಯಲಿ ಸಂತಸವು ಹರಿಯಲು
ಬಗ್ಗಿರುವ ಕೊರಳಲ್ಲಿ ಹಾರವು ಮೆರೆಯೆ ಸತಿಪತಿಯ!
ಹಿಗ್ಗಿನಲಿ ವಧುವರರಿಗೆಲ್ಲರು
ಸಗ್ಗಸೊಗವಿರುತಿರಲಿಯೆನ್ನುತ
ಅಗ್ಗಳದಲಾಶೀರ್ವಚನಗಳ ನೀಡೆ ಕಲ್ಯಾಣ ॥೧೯॥
ಇನಕುಲಜ ರಾಮನಲಿ ನೀಲಿಯು
ಮನದಣುಗೆಯಾ ನಾಚಿರುವ ಕದ-
ಪಿನಲಿರುವ ಕೆಂಪೊಡನೆ ಸೀರೆಯ ಹಸಿರು ಸೇರುತಿರೆ
ಜನಕನೋಲಗದಲ್ಲೆ ಹೋಳಿಯ
ಘನಮಹೋತ್ಸವವಾದುದೈ! ವರ್-
ಣನೆಗೆ ಮೀರಿದ ಸಂಭ್ರಮವು ಕೇಳಿದುವೆ ಕಲ್ಯಾಣ॥ ೨೦॥
ಮಂಗಳವು ಸಿಂಗಾರಿ ಸೀತೆಗೆ
ತಂಗದಿರಮೊಗವಿರುವ ರಾಮಗೆ
ಮಂಗಳವಿರಲಿ ಸಕಲಲೋಕಕ್ಕೆಂದು ಭಜಿಸುತ್ತ
ಪೊಂಗುತಿರಲೆಲ್ಲೆಲ್ಲು ನೆಮ್ಮದಿ
ಇಂಗಿಹೋಗಲಿ ದುಃಖದುಮ್ಮಾ-
ನಂಗಳೀಜಗದಿಂದಲೆನ್ನುತ ಕೋರೆ ಕಲ್ಯಾಣ ॥೨೧॥
-ಹಂಸಾನಂದಿ
ಸೀನಪ್ಪ
ಹನುಮಂತಪ್ಪನಿಗೆ ತುಳಸೀದಾಸರು ನಲವತ್ತನ್ನು, ಹನುಮಂತಪ್ಪನ ನಲವತ್ತು ಅಂತಲೇ (ಹನುಮಾನ್ ಚಾಲೀಸ) ಬರೆದಿರುವಾಗ, ನಮ್ಮ ಸೀನಪ್ಪನಿಗೆ ನಾಲ್ಕಾದರೂ ನಾನು ಬರೆಯಬಾರದೇ ಅನ್ನಿಸಿ ಬರೆದಿದ್ದಿವು :) ಭಾಮಿನಿ ಷಟ್ಪದಿಯಲ್ಲಿ.
ಕಣ್ಣಮುಚ್ಚದ ಬೆನ್ನಡುಬ್ಬನು
ಮಣ್ಣನೆತ್ತುತ ಕಂಬವೊಡೆದವ
ಸಣ್ಣ ರೂಪದಿ ಬಿಕ್ಕೆಬೇಡಿದ ಚಂಡಗೊಡಲಿಗನೆ?
ಮಣ್ಣುಗೂಡಿಸಿ ಲಂಕೆ ಗೋವಳ
ಚಿಣ್ಣ ಮನೆಯನು ತೊರೆದು ತಾ ಬಿಳಿ
ಬಣ್ಣಗುದುರೆಯನೇರಿ ಲೋಕವ ಕಾಯ್ದೆ ನೀನೆನಲೆ? ||1||
ರಂಗನೆನ್ನಲೆ? ಘೋರತರ ನರ
ಸಿಂಗನೆನ್ನಲೆ? ಆದಿಶೇಷ ಭು-
ಜಂಗನಾ ಮೇಲ್ಪವಡಿಸಿದ ಶ್ರೀಹರಿಯು ನೀನೆನಲೆ?
ಮಂಗಗಳ ಗೆಳೆಯನೆನಲೇ? ಭವ-
ಭಂಗನೆನಲೇ? ಸಕಲದೇವೋ-
ತ್ತುಂಗನೆನಲೇ? ಮಂಗಳಾಂಗನು ನೀನು ಎಂದೆನಲೇ? ||2||
ಚೋರನೆನ್ಲಲೆ? ಗೋಪಕುವರೀ-
ಜಾರನೆನ್ನಲೆ? ನೆನೆವ ಭಕ್ತೋ-
ದ್ಧಾರನೆನ್ನಲೆ? ಪಂಚಪಾಂಡವರರಸಿ ಮೊರೆಯಿಡೆ ತಾ
ಸೀರೆಯಿತ್ತವನೆನಲೆ? ಮಡುಹಲು
ವೈರಿ ಬಂದಿರಲೂರ ತೊರೆಯುತ
ದೂರದೇಶಕ್ಕೋಡಿದಂತಹ ವೀರ ನೀನೆನಲೆ? ||3||
ತಿಮ್ಮನೆನ್ನಲೆ? ಸೀನನೆನ್ನಲೆ?
ಸುಮ್ಮನೇ ಬರಿ ಕರಿಯನೆನ್ನಲೆ?
ಒಮ್ಮನಸಿನಲಿ ಸಾಲತೀರಿಸಲಾರದವನೆನಲೆ?
ಬಿಮ್ಮನಸಿಯಾಗದದೆಯೆ ಪಡೆದನು
ಬೊಮ್ಮನನು ಹೊಕ್ಕಳಲಿ! ಕಾಯಲಿ-
ಕೆಮ್ಮನೆನುತಲಿ ಸಾಸಿರದ ನಾಮದಲಿ ಕರೆಯುವೆನು ||4||
-ಹಂಸಾನಂದಿ
ಮೊನ್ನೆ ಮೊನ್ನೆ ತಾನೇ ಶ್ರಾವಣ ಪೂರ್ಣಿಮೆಯ “ಸಂಸ್ಕೃತ ದಿನ” ಆಯಿತು. ಭಾಷೆಗೆ ಒಂದು ದಿನವೇಕೆ ಎಂದು ಕೇಳದಿರಿ. ನಿತ್ಯವೂ ಪ್ರೀತಿಸುವುದಾದರೂ, ಮಕ್ಕಳಿಗೆ ವರ್ಷಕ್ಕೊಂದು ದಿನ ಹುಟ್ಟಿದ ಹಬ್ಬವನ್ನು ಮಾಡಿ ಆನಂದಿಸುವುದಿಲ್ಲವೇ? ಕರ್ನಾಟಕವೆಂಬ ಹೆಸರಾಯಿತೆಂದು, ನವೆಂಬರ್ ಒಂದರಂದು ರಾಜ್ಯೋತ್ಸವವೆಂದು ಆಚರಿಸಿದಂತೆ ಶ್ರಾವಣದ ಹುಣ್ಣಿಮೆಯಂದು ಸಂಸ್ಕೃತ ದಿನ. ಅದೇ ರೀತಿ, ಹಿಂದಿನಿಂದ ಆಷಾಢ ಪೂರ್ಣಿಮೆಯಂದು ವ್ಯಾಸಪೂರ್ಣಿಮೆಯೆಂದೂ, ಗುರುಪೂರ್ಣಿಮೆಯೆಂದೂ ಆಚರಿಸುತ್ತಿದ್ದರೆ, ಈಗ ಕೆಲವು ದಶಕಗಳಿಂದ ಪುಷ್ಯ ಮಾಸದ ಹುಣ್ಣಿಮೆಯಂದು ನಾವು ಕವಿ ಕುಮಾರವ್ಯಾಸ ಜಯಂತಿ ಎಂದು, ಅದರ ಮೂಲಕ ಕನ್ನಡದ ಸಕಲ ಸಾಂಪ್ರದಾಯಿಕ ಕವಿಗಳನ್ನೂ , ಕಾವ್ಯಗಳನ್ನೂ ನೆನೆಯುವ ಕೆಲಸ ಮಾಡುತ್ತಿದ್ದೇವೆ. ಅದಿರಲಿ, ವಿಷಯಾಂತರವಾಯಿತು.
ಸಂಸ್ಕೃತ ದಿನ ಬಂದಾಗ, ಪ್ರತಿ ವರ್ಷವೂ, ಯಾರೂ ಮಾತಾಡದಿರುವ ಭಾಷೆಗೆ ದಿನವೇಕೆ? ಎಂಬ ಹೀಗಳಿಕೆಯೂ, ಮತ್ತಿನ್ನಷ್ಟು ಮಾಮೂಲಿ ಅಪಸ್ವರಗಳು ಸೋಶಿಯಲ್ ಮೀಡಿಯಾದಲ್ಲೂ , ಪತ್ರಿಕೆಗಳಲ್ಲೂ ಕೇಳಿಬರುವುದುಂಟು. (ಸಂಸ್ಕೃತವನ್ನು ಮಾತಾಡುವರಿದ್ದಾರೆ ಎನ್ನುವುದನ್ನು ಸದ್ಯಕ್ಕೆ ಮರೆತುಬಿಡೋಣ — ಕನ್ನಡವೊಂದೇ ಭಾಷೆಯನ್ನು ಮಾತಾಡುವ ಜನರಿರುವಂತೆ, ಸಂಸ್ಕೃತವೊಂದನ್ನೇ ಮಾತಾಡುವ ಜನರು ಇಲ್ಲ ಎನ್ನುವುದು ನಿಜವೇ, ಆದರೆ ಅದು ಇಲ್ಲಿ ಬೇಕಾಗಿಲ್ಲ); ಮಾತಾಡದಿದ್ದರೂ, ಸಂಸ್ಕೃತವನ್ನು ಕಲಿಯುವುದು ಹಲವು ವಿಷಯಗಳಲ್ಲಿ ಸಹಕಾರಿ ಎಂಬುದಕ್ಕೆ ಒಂದು ನಿದರ್ಶನವನ್ನು ಕೊಡಬೇಕೆಂದು ಈ ಟಿಪ್ಪಣಿ ಅಷ್ಟೇ.
೧೨ನೇ ಶತಮಾನದಲ್ಲಿ ಕರ್ನಾಟಕದ ಬಹು ಭಾಗಗಳನ್ನೂ , ಅಂತೆಯೇ ಇಂದಿನ ಮಹಾರಾಷ್ಟ್ರ, ತೆಲಂಗಾನ, ಆಂಧ್ರಗಳ ಹಲವು ಭಾಗಗಳನ್ನೂ ಆಳಿದ ಕಲ್ಯಾಣದ ಚಾಲುಕ್ಯರ ದೊರೆ ಮೂರನೇ ಸೋಮೇಶ್ವರ, ಅಭಿಲಷಿತಾರ್ಥ ಚಿಂತಾಮಣಿ ಎಂಬ ಒಂದು ವಿಶ್ವಕೋಶಾತ್ಮಕ ಗ್ರಂಥವನ್ನು ಬರೆದಿದ್ದಾನೆ. ಇದು #ಮಾನಸೋಲ್ಲಾಸ ಎಂಬ ಹೆಸರಿನಲ್ಲಿ ಪ್ರಖ್ಯಾತ. ಈ ಪುಸ್ತಕದಿಂದ, ಅಂದಿನ ಕಾಲದಲ್ಲಿ ಪ್ರಚಲಿತವಾಗಿದ್ದ ಊಟತಿಂಡಿಗಳು, ಸಂಗೀತ ನೃತ್ಯಗಳು, ಜನಸಾಮಾನ್ಯರೂ, ರಾಜ ಮಹಾರಾಜರೂ ಆಡುತ್ತಿದ್ದ ಆಟೋಟಗಳು, ಅವರು ಓದುತ್ತಿದ್ದ ವಿಚಾರಗಳು, ಶಿಲ್ಪಗಳು, ಜ್ಯೋತಿಷ, ರಾಜಕೀಯ ಅರಸೊತ್ತಿಗೆಯ ವಿಚಾರಗಳು, ಯುದ್ಧ, ರಕ್ಷಣೆ — ಹೀಗೆ ಹಲವು ವಿಷಯಗಳನ್ನು ವರ್ಣಿಸುವ ನೂರು ಅಧ್ಯಾಯಗಳ ಪುಸ್ತಕವಿದು. ಇದಿರುವುದು ಸಂಸ್ಕೃತ ಭಾಷೆಯಲ್ಲಿ.
ಕನ್ನಡ ನಾಡಿನ ರಾಜನಾಗಿದ್ದು, ಬಹುಶಃ ಕನ್ನಡದೊಂದಿಗೆ, ತೆಲುಗನ್ನೂ, ಪ್ರಾಕೃತ, ಮತ್ತು ಅಂದಿನ ಕಾಲದ ಹಳೆಯ ಮರಾಠಿಯನ್ನೂ ಮಾತಾಡುತ್ತಿದ್ದ ಸೋಮೇಶ್ವರ, ತನ್ನ ಪುಸ್ತಕವನ್ನು ಸಂಸ್ಕೃತದಲ್ಲಿ ಬರೆದದ್ದೇಕೆ ಎಂದು ಕೇಳಿಕೊಂಡರೆ, ಆ ಭಾಷೆಗೆ ಅಂದು ಇದ್ದ ವ್ಯಾಪ್ತಿ, ಮತ್ತು ಆ ಭಾಷೆಯಲ್ಲಿ ಬರೆದರೆ, ಅವನ ಪುಸ್ತಕಕ್ಕೆ ಸಿಗಬಹುದಾದ ಬಳಕೆಯ ವಿಸ್ತಾರ — ಅವೇ ಕಾರಣವೆನ್ನುವುದು ಅಂಗೈನಲ್ಲಿಟ್ಟ ನೆಲ್ಲಿಯಷ್ಟೇ ಸ್ಪಷ್ಟ. ಇದೇ ಕಾರಣಕ್ಕೇ ಹಲವು ಶಾಸ್ತ್ರ ಗ್ರಂಥಗಳು ಸುಮಾರು ನೂರಾರು, ಏಕೆ, ಸಾವಿರಾರು ವರ್ಷಗಳ ಕಾಲ ಸಂಸ್ಕೃತದಲ್ಲಿ ಬರೆಯಲ್ಪಟ್ಟವು. ದೇಶ ಭಾಷೆಗಳಲ್ಲಿ ಸಾಹಿತ್ಯ ಹೆಚ್ಚಾಗಿ, ಸಂಸ್ಕೃತದಲ್ಲಿ ರಚನೆಗಳು ಕಡಿಮೆಯಾಗುತ್ತ , ಆಂಗ್ಲರ ಆಳ್ವಿಕೆಯ ೧೭ ಶತಮಾನದಲ್ಲಿ ಆರಂಭವಾದ ನಂತರ ಹೆಚ್ಚು ಕಡಿಮೆ ನಿಂತೇ ಹೋದವು ಎನ್ನಬಹುದು. ಆದರೆ ಈ ವೇಳೆಗಾಗಲೇ ಸಂಸ್ಕೃತದಲ್ಲಿ ಇದ್ದ ಗ್ರಂಥ ಬಾಹುಳ್ಯದಿಂದ ಭಾಷೆಯನ್ನು ಕಲಿಯುವವರ ಸಂಖ್ಯೆ ಕಡಿಮೆಯಾದರೂ, ಪೂರ್ತಿ ನಿಲ್ಲಲಿಲ್ಲ.
ಉದಾಹರಣೆಗೆ ನೋಡುವುದಾದರೆ, ಸೋಮೇಶ್ವರನ ಮಾನಸೋಲ್ಲಾಸವನ್ನು ಓದುವುದರಿಂದ ನಮಗಾಗುವ ಒಳಿತೇನೆಂದರೆ, ಸುಮಾರು ಎಂಟುನೂರುವರ್ಷಗಳ ಹಿಂದೆ, ನಮ್ಮ ಸಂಗೀತ ಹೇಗಿತ್ತು, ಯಾವ ರೀತಿಯ ರಚನೆಗಳು ಇರುತ್ತಿದ್ದವು? ಅವುಗಳನ್ನು ಹೇಗೆ ಹಾಡುತ್ತಿದ್ದರು, ನುಡಿಸುತ್ತಿದ್ದರು? ಆ ಹಾಡುಗಳು ಯಾವ ಭಾಷೆಗಳಲ್ಲಿ ಇರುತ್ತಿದ್ದವು? ಅವು ಯಾವರೀತಿ ಛಂದೋಬಂಧಗಳಲ್ಲಿ ಕಟ್ಟಲ್ಪಡುತ್ತಿದ್ದವು? ಇಂತಹವುದಕ್ಕೆಲ್ಲ ಮಾನಸೋಲ್ಲಾಸದಲ್ಲಿ ಒಳ್ಳೆಯ ಉತ್ತರಗಳು ದೊರೆಯುತ್ತವೆ. ಅದೃಷ್ಟವಶಾತ್, ಈ ಪುಸ್ತಕವು ಸಂಸ್ಕೃತ ಟೀಕೆಗಳೊಂದಿಗೂ, ಕನ್ನಡ ಮೊದಲಾದ ಭಾಷೆಗಳಲ್ಲಿ ಅನುವಾದದೊಡನೆಯೂ ಅಚ್ಚಿನಲ್ಲಿ ಸದ್ಯಕ್ಕಂತೂ ದೊರೆಯುತ್ತದೆ. ಆಸಕ್ತರು ಓದಲು ತೊಂದರೆಯಿಲ್ಲ. ಆದರೂ ಸಂಗೀತದ ವಿಷಯಕ್ಕೆ ಬಂದಾಗ, ಒಂದು ಸಾಲು ಹಾಡುವುದೂ ಒಂದೇ, ಅದರ ಬಗ್ಗೆ ಒಂದು ಪುಟ ಬರೆಯುವುದೂ ಒಂದೇ. ಅಲ್ಲವೇ?
ಹೀಗೆ ಮಿತ್ರರೊಬ್ಬರು, ಸಾವಿರ ವರ್ಷಗಳ ಹಿಂದಿನ ಸಂಗೀತದ ಬಗ್ಗೆ ಅಧ್ಯಯನ ಮಾಡುತ್ತಿದ್ದವರು, ಏಲಾ (ಅಥವಾ ಏಳೆ) ಎಂಬ ಹೆಸರಿನ ಸಂಗೀತ ರಚನೆಗಳ ಬಗ್ಗೆ, ಅದರಲ್ಲೂ ನಾದಾವತಿ ಎಂಬ ಹೆಸರಿನ ಏಳೆಯ ಬಗ್ಗೆ ಹೆಚ್ಚಿನ ಮಾಹಿತಿ ಇದೆಯೇ ಎಂದು ಕೇಳಿದರು. ಆಗ ಮಾನಸೋಲ್ಲಾಸವು ನನ್ನ ಬಳಿ ಇತ್ತು. ಅದರಲ್ಲಿ ಸೋಮೇಶ್ವರನು ನಾದಾವತೀ ಪ್ರಬಂಧ (ಏಲಾ) ವನ್ನು ವರ್ಣಿಸಿ, ಅದಕ್ಕೆ ತಾನೇ ರಚಿಸಿರುವ ಸಂಸ್ಕೃತ ಭಾಷೆಯ ಏಲಾ ಪ್ರಬಂಧದ ಉದಾಹರಣೆಯನ್ನೂ ಕೊಟ್ಟಿದ್ದಾನೆ. (ಹಾಕಿರುವ ಚಿತ್ರಗಳನ್ನು ಗಮನಿಸಬಹುದು). ಇದರಲ್ಲಿ ಉದ್ಗ್ರಾಹ, ಅಭೋಗ, ಧ್ರುವ — ಹೀಗೆ ಹಲವು ಭಾಗಗಳಿದ್ದು, ಈ ಭಾಗಗಳು ಹೇಗಿರಬೇಕು ಎಂಬುದಕ್ಕೆ ಕೆಲವು ಛಂದಸ್ಸಿನ ನಿಯಮಗಳಿರುವ ವಿಷಯವನ್ನು ಮಾನಸೋಲ್ಲಾಸ ಸ್ಪಷ್ಟಪಡಿಸುತ್ತದೆ.
ಈ ಬಗ್ಗೆ ಹೆಚ್ಚಿನ ಆಳದ ವಿಷಯಗಳು ತಿಳಿಯಲೆಂದು ವಿದುಷಿ. Rohini Kanchana Subbarathnam ಅವರನ್ನು ಸಂಪರ್ಕಿಸಿದಾಗ, ಮಹಾಮಹೋಪಾಧ್ಯಾಯ ಡಾ.ಆರ್.ಸತ್ಯನಾರಾಯಣ ಅವರು ಏಳೆಗಳ ಬಗ್ಗೆ ಮಾಡಿರುವ ಸಂಶೋಧನಾ ಗ್ರಂಥವೇ ದೊರೆತಿತು. ನನ್ನ ಮಿತ್ರರಿಗೆ ಅದನ್ನು ತಲುಪಿಸಿದ ಮೇಲೆ, ಈ ಹಳೆಯ ರೀತಿಯ ರಚನೆಯನ್ನು ಮತ್ತೆ ಮಾಡಲಾಗುವುದೇ ಎಂಬ ಒಂದು ಪ್ರಯೋಗವನ್ನು ಮಾಡೋಣ ಎನ್ನಿಸಿ, ನಾದಾವತೀ ಏಳೆಯ ಬಂಧಕ್ಕೆ ಅನುಗುಣವಾಗಿ ಒಂದು ರಚನೆಯನ್ನು ಮಾಡಿದ್ದೆ ಕಳೆದ ವರ್ಷ.
ಸೋಮೇಶ್ವರನು ಕನ್ನಡ ಭಾಷೆಯಲ್ಲಿರುವ ಏಳೆಗಳನ್ನು ಕರ್ಣಾಟೈಲಾಗಳೆಂದೂ, ಲಾಟ ಭಾಷೆಯಲ್ಲಿರುವ ಏಳೆಗಳನ್ನು ಲಾಟೈಲಾ ಎಂದೂ, ಹೀಗೆ ಕರೆಯುತ್ತಾನೆ. ಹಾಗಾಗಿ ಈ ಸಂಗೀತ ರಚನೆಯನ್ನು (ಪ್ರಬಂಧ ಎಂಬುದು ಇನ್ನೊಂದು ಪಾರಿಭಾಷಿಕ ಪದ) ನಾದಾವತೀ ಕರ್ಣಾಟೈಲಾ ಎಂದು ಕರೆದರೆ, ಅಡ್ಡಿಇಲ್ಲ!
ನಾದಾವತಿಯ ಲಕ್ಷಣ — ೧
ನಾದಾವತಿಯ ಲಕ್ಷಣ — ೨
(ನಾದಾವತಿ ಎಂಬ ಹೆಸರಿನ ಏಲಾ ಪ್ರಬಂಧ, ಮೋಹನ ರಾಗ ಮತ್ತು ರೂಪಕತಾಳದಲ್ಲಿ ಹಾಡಲಾಗುವುದು)
ಹಾದಿಯ ಮಕ್ಕಳು ಆಟವನಾಡದೆ ಹಾಗೆ ಕುಳಿತಿರೆ ।।
ಬೀದಿಯ ಗೋವ್ಗಳು ಮೇವನು ಮೆಲ್ಕುವುದಾಗಲೆ ಮರೆಯೆ॥
ನಾದವನೊಯ್ದಿದೆ ಮೆಲ್ಲಗೆ ಬೀಸುವ ಗಾಳಿಯು ಮುದದೆ ॥ ಉದ್ಗ್ರಾಹ ೧ ॥
ಕರೆಯುತಲಿದೆ ಆ ಕೊಳಲಿನ ಸವಿಯಿಂಚರ॥
ಧರೆಯಲಿ ತಾ ಅಳಿಸುತ್ತಲಿ ನಲವಿನ ಬರ ॥ ಧ್ರುವ ॥
ತೇಲಿ ಬರುತ್ತಿರೆ ಮೋಹನ ರಾಗವು ಮೋಹಕವಹುದೆ ॥
ಬಾಳನು ಕಾಡುವ ಗೋಳುಗಳೆಲ್ಲವ ತಾನು ಮರೆಸಿದೆ ॥
ಕೇಳುತಲಿದ್ದರೆ ಕಾಣುವೆ ಸ್ವರ್ಗವನೀಧರೆಯೊಳಗೆ ॥ ಉದ್ಗ್ರಾಹ ೨॥
ಕರೆಯುತಲಿದೆ ಆ ಕೊಳಲಿನ ಸವಿಯಿಂಚರ॥
ಧರೆಯಲಿ ತಾನಳಿಸುತಲಿದೆ ನಲವಿನ ಬರ ॥ ಧ್ರುವ ॥
ವೇಣುವಿನೋದನ ಕೃಷ್ಣನ ಗಾನವ ಕೇಳೆಲೆ ಚದುರೆ ॥
ಹುಣ್ಣಿಮೆ ಸಂಜೆಯ ವೇಳೆಗೆ ಹಬ್ಬಿಸಿ ಪ್ರೇಮವನಿಳೆಗೆ ॥
ಹೆಣ್ಣುಗಳೆಲ್ಲರು ಗೋಕುಲ ಗೊಲ್ಲನನಿಟ್ಟು ಮನದಲೆ ॥ ಉದ್ಗ್ರಾಹ ೩॥
ಕರೆಯುತಲಿದೆ ಆ ಕೊಳಲಿನ ಸವಿಯಿಂಚರ॥
ಧರೆಯಲಿ ತಾನಳಿಸುತಲಿದೆ ನಲವಿನ ಬರ ॥ ಧ್ರುವ ॥
ಕೌಶಿಕೇಶನು ಕಾಂತಿರೂಪನು ನಿಂದಿರಲಾ ಯಮುನೆಯ ದಡದಲಿ ॥ಆಭೋಗ ||
ಕರೆಯುತಲಿದೆ ಆ ಕೊಳಲಿನ ಸವಿಯಿಂಚರ॥
ಧರೆಯಲಿ ತಾನಳಿಸುತಲಿದೆ ನಲವಿನ ಬರ ॥ ಧ್ರುವ ॥
ಈ ರಚನೆಯನ್ನು ವಿದುಷಿ ರಾಗಿಣಿ ಸನತ್ ಅವರ ಧ್ವನಿಯಲ್ಲಿ ಈ ಕೆಳಗೆ ಕೇಳಬಹುದು.
https://medium.com/media/7bfc7a9e70b2ba41967760a61ed13208/href
-ಹಂಸಾನಂದಿ
(ಕಳೆದ ವರ್ಷ ಇದೇ ದಿನ ಬರೆದದ್ದು)
ತರಚೀ ಪುಷ್ಪೋಪಾಖ್ಯಾನ ( ನನ್ನ ಕನ್ನಡ ಕಿರುಗತೆ) ವನ್ನು ಕೆಲವು ದಿನಗಳ ಹಿಂದೆ ಹಂಚಿಕೊಂಡಿದ್ದೆ. ಅದನ್ನು ಸಂಕೇತಿಭಾಷೆಗ ನನ್ನ ಮಿತ್ರ ಡಾ.ಶ್ರೀಕಾಂತ್ https://www.facebook.com/shrikaanth.k.murthy ಬರೆದು ಯುಟ್ಯೂಬ್ ನಲ್ಲಿ ಹಾಕಿದ್ದರು(ಅದರ ಕೊಂಡಿಯನ್ನು ಟಿಪ್ಪಣಿಯಲ್ಲಿ ಹಾಕಿದ್ದೇನೆ. ಅದೇ ರೀತಿ ನನ್ನ ಕಿರುಗತೆಯನ್ನೂ ಕೂಡ).
ಆ ಶ್ಲೋಕ ಕಾವ್ಯವನ್ನು ಮತ್ತೆ ಕನ್ನಡ ಭಾವಾನುವಾದ, ಭಾಮಿನಿ ಷಟ್ಪದಿಯಲ್ಲಿ ತರುವ ಪ್ರಯತ್ನವಿದು — ಒಂದು ರೀತಿಯಲ್ಲಿ ಕೆರೆಯ ನೀರನು ಕೆರೆಗೆ ಚೆಲ್ಲಿ ವರವ ಪಡೆದವರಂತೆ ಕಾಣುವುದಕ್ಕೆ! ಓದಿ, ನಕ್ಕುಬಿಡಿ! ಕೊನೆಗೆ ಶಿವನ , ಪಾರ್ವತಿಯ ಎಷ್ಟು, ಯಾವ ಹೆಸರುಗಳು ಬಂದಿವೆ ಅನ್ನುವುದನ್ನು ಗಮನಿಸಿ ಟಿಪ್ಪಣಿಯಲ್ಲಿ ಹಾಕುವುದನ್ನು ಮರೆಯಬೇಡಿ!
ತರಚೀ ಪುಷ್ಪೋಪಾಖ್ಯಾನ (ಭಾಮಿನಿ ಷಟ್ಪದಿಯಲ್ಲಿ)
ಕೇಳಿರೀಗಲೆ ತರಚಿ ಹೂವಿನ
ಕೇಳೆ ಸೊಗವನ್ನೀವ ಕಥೆಯನು
ವೇಳೆ ಕಳೆಯಲು ಮಹಾಗಂಧಪುರಾಣದಲ್ಲಿ ಶಿವ ।
ಲೀಲೆಯಿಂದಲಿ ಪತ್ನಿಯ ಶಿರ
ಶ್ಶೂಲೆಯನು ಕಳೆಯಲಿಕೆ ತಂದನು
ಫಾಲನೇತ್ರನೆ ಹೆಸರು ಕೊಟ್ಟಿಹ ಹೆಗ್ಗಳಿಕೆಯಿದಕೆ ॥೧॥
ಮಾತನಾಡದೆ ಒಮ್ಮೆ ಶೈಲಜೆ
ಕೂತಿರಲು ಮನೆಯಲ್ಲಿ ಭೈರವ
“ಪಾತು! ನುಡಿಯುತ್ತಿಲ್ಲವೇಕೆ”ನೆ ಮುಚ್ಚುಗಣ್ಣಲ್ಲೆ ।
“ಈ ತಲೆಯನೋವನ್ನು ತಾಳೆನು
ಏತಕಿಲ್ಲೈದಿಹಿರಿ! ನಡೆಯಿರಿ
ಭೂತಗಣಗಳ ಕೂಡೆ”ಯೆಂದಳು ಕೋಪದಲಿ ಲಲಿತೆ ॥೨॥
ಹೆರಳಿನಲಿ ಮುಡಿದಿರುವ ಮಲ್ಲಿಗೆ
ಯರಳು ಕೇದಗೆ ಕೆಂಡ ಸಂಪಿಗೆ
ಸರದಿ ಕೋದಿರುವಂತಿಗೆಯ ಕಡು ಪರಿಮಳದ ಸುಳಿಗೆ |
ಶಿರದ ಸುತ್ತಲು ಗುಯ್ಗುಡುವ ಮಧು-
ಕರಗಳಿಂದಾಗುತಿಹ ಕೋಟಲೆ
ಗಿರಿಜೆ ತಾಳುವಳೆಂತು? ಪೇಳಿರಿಯೆಂದಳೊಬ್ಬ ಸಖಿ ॥೩॥
ಹಳದಿ ಬಿಳುಪಿನ ಭಾರದಾ ಹೂ-
ಗಳನೆ ದಿನವೂ ಮುಡಿಯೆ ಗೌರಿಯು
ಗಳಿಸಲಿಕ್ಕೇನಿಹುದು ತಲೆಭಾರವನು ಬಿಟ್ಟೆನುತ ।
ಹಳಹಳಿಸೆ ಮತ್ತೊಬ್ಬ ಸಖಿ ತಾ
ಕಳವಳಿಸಿ ಹೊರಟಿಹನು ಹರ ಹೂ-
ಗಳನು ಮಡದಿಯು ಮೆಚ್ಚುವಂತೆಯೆ ತಾನೆ ತಹೆನೆಂದು ॥೪॥
ಸತಿಯ ಮುಡಿಯಲಿ ಹಲವು ಬಣ್ಣದ-
ಲತಿಶಯದಿ ಮೆರೆಯಲಿಕೆ ಹೂಗಳ-
ನತಿಯ ವೇಗದಿ ತರಲುಹೊರಟನು ಬುಟ್ಟಿಯನು ಹಿಡಿದು ।
ಗತಿಯದುಂಟೇ ಲೋಕದೊಳಗಡೆ
ಪತಿಯು ಯಜಮಾನತಿಯ ಮನದಾ-
ಣತಿಯ ಪಾಲಿಸದಿರಲು ಬಹುದೇಯೆನುತಲಾದಿಗುರು ॥ ೫॥
ಸುತ್ತುತಲಿ ಜಗವೆಲ್ಲ ಬಂದನು
ಇತ್ತ ಕಪಿಲಾರಣ್ಯದಲಿ ತಾ-
ನೆತ್ತ ನೋಡಲು ಹೆಮ್ಮರಗಳೆ! ಶರ್ವ ನಿಬ್ಬೆರಗು ।
ಎತ್ತರಕೆ ಕಣ್ಣೋಡಿಸಿರೆ ಕಾ-
ಣುತ್ತಿರದೆ ಹೂವೊಂದು ಮನಕಾ-
ಗುತ್ತಿರಲು ಖತಿಗೊಂಡ ಶೂಲಿಗೆ ಕಾಲು ಕಚ್ಚಿಹುದು ॥ ೬॥
ಏನೊ ತರಚಿದೆಯೆಂದು ಕೆಳಗಡೆ
ತಾನೆ ಕಳವಳದಲ್ಲೆ ನೋಡಲ-
ದೇನೊ ದದ್ದರಿಸಿಹುದು ಎಲೆಗಳ ಮುಟ್ಟಿ ಮೊಣಕಾಲು ।
ಏನಿದೇನಿದು ಪೊದೆಯ ತುಂಬಿವೆ
ಶಾನೆ ಬಣ್ಣಗಳಲ್ಲಿ ಹೂಗಳು
ಸ್ಥಾಣು ಹುಡುಕುತಲಿರುವೆಡೆಯಲೇ ಕಾಲ ತೊಡರಿತ್ತು ॥೭॥
ಬಿಲ್ಲೆಯಾ ರೀತಿಯಲಿರುವ ಹೂ-
ವಲ್ಲಿ ತುಸುವೂ ಗಂಧ ತೋರದು
ಎಲ್ಲಿ ವಿಶ್ವಾಮಿತ್ರ ಸೃಷ್ಟಿಯೊ ಎನುತ ನಂಜುಂಡ ।
ಒಳ್ಳಿತಿದುವೋ ಅಲ್ಲವೋ ಎಂ-
ದೆಲ್ಲ ಯೋಚಿಸದೇನೆ ತರಚಿದ-
ನಲ್ಲ! ಹೂಗಳ ಬುಟ್ಟಿ ತುಂಬಿರೆ ಮನೆಗೆ ಮರಳಿಹನು॥೮॥
ಪಶುಪತಿಯು ಮರಳಿರಲಗಾತ್ಮಜೆ
ತುಸುವು ತಡಮಾಡದೆಯೆ ತಬ್ಬಿದ-
ಳುಸುರೊಡೆಯನನು! ನೀಡೆ ಮಡದಿಗೆ ಬುಟ್ಟಿ ಹೂ ತುಂಬ ।
ಹಸಿರುಗೊಂಡಿಹುದವಳ ಮನ ತಾ
ಕುಸುಮಗಳ ಹಲಬಣ್ಣ ಕಂಡಿರೆ
ಶಶಿಧರನಿಗೂ ತಕ್ಕ ನೆಮ್ಮದಿಯಲ್ಲೆ ಆಗಿಹುದು ॥ ೯॥
ಮುಡಿದು ಹಿಗ್ಗಿದಳಯ್ಯ ಮಹಿಷನ
ಮಡುಹಿದಾಗಿರಿಸುತೆಯು ಗೆಳತಿಯ-
ರೊಡನೆ ಕೈಲಾಸಗಿರಿಪುರದಲಿ ದುಂಬಿ ಕಾಡದಿರೆ ।
ನುಡಿದಳೋರ್ವಳು ಸಖಿಯು ಹಂಸಿನಿ
ಮುಡಿದ ಹೂವಿನ ಹೆಸರದೇನೇ ?
ಬೆಡಗು ಮೂಡಿಸುತಿಹುದು ದಿಟದಲ್ಲೆನುತ ಮುದದಲ್ಲಿ॥ ೧೦॥
ಅಯ್ಯೊ! ಕೇಳದೆ ಹೋದೆ ಹೆಸರನು
ಸುಯ್ಯನೇ ನಡೆದೀಗಲೇ ಸರ್ವ-
ಜ್ಞಯ್ಯನನು ಕಂಡು ಹೆಸರನು ತಿಳಿದು ಬಾರೆನಲು ।
ಒಯ್ಯುತಿರೆ ಸಂದೇಶವನು ಸಖಿ
ಮೆಯ್ಯುತಿಹ ನಂದಿಯನು ಕಂಡಳು
ಅಯ್ಯ ವಿಶ್ವೇಶ್ವರಗೆ ಸಂದೇಶವನು ಕಳುಹಿದಳು ॥ ೧೧॥
ನಂದಿ ನರ್ತನಶಾಲೆಯೊಳು ತಾ
ವಂದಿಸುತ ಕಾಮಾರಿಯನು ಕೇಳಲು
ಒಂದು ಕಾಲನ್ನೆತ್ತುತಿರೆ ನಟರಾಜ ರೂಪದಲಿ ।
ಇಂದುವದನೆ ಭವಾನಿ ಪ್ರಶ್ನೆಗೆ
ಚಂದದಲ್ಲುತ್ತರಿಸಲಿಕೆ ಭವ
ನಿಂದ ರೂಪವು ತಾನೆ ಜಗಕಾನಂದತಾಂಡವವು ॥೧೨॥
ನಿಂತ ನಿಲುವಲೆ ಯೋಚಿಸುತ್ತಿಹ-
ನಂತಲೋಕವ ಜಟೆಯಲೊಳಗೊ-
ಳ್ವಂತ ಶಂಕರ ಜಗಕೆ ಮಂಗಳ ತರುವ ಗಿರಿವಾಸಿ ।
ಎಂತೊ ಮಾಡಲು ಹೊರಡೆ ಮತ್ತಿ-
ನ್ನೆಂತೊ ವಿಧಿಯಿರೆ ಬಾಳ್ವುದೆಂತೈ?
ಚಿಂತೆಯಿರದಿಹ ಗಂಡನೆಲ್ಲಿಹನೆಂದು ನಸುನಕ್ಕ ॥ ೧೩॥
ಆಗ ಕಾಲ್ಗಳು ತರಚಿದಾಗಲೆ
ಹೂಗಳವು ದೊರಕಿದ್ದವಲ್ಲವೆ;
ಬೇಗ ಹೂಗಳ ತರಚಿ ತಂದೆನು ದುರ್ಗೆಯಾ ಮುಡಿಗೆ ।
ಹಾಗಿರಲು ಸರಿ ತರಚಿ ಹೂವೆಂ-
ದೀಗ ಜಗದಲಿ ಹೆಸರುಗೊಳ್ಳಲಿ;
ಹೋಗಿ ಬೇಗನೆ ಉಮೆಯ ಕಿವಿಯಲ್ಲುಸಿರು ನೀನೆಂದ ॥೧೪॥
ಹೂವ ಹೆಸರನು ಕೇಳಿ ಪಾರ್ವತಿ
ಭಾವಿಸುತ ಜಡೆಬಿಲ್ಲೆಯೆನುತಲಿ
ಹಾವಿನಂತಹ ನೀಳಜಡೆಯಲ್ಲಿಟ್ಟು ನಲಿದಿರಲು ।
ಸೇವಿಸುವ ಕೆಳದಿಯರು ಜೊತೆಯಲಿ
ತಾವು ಹೂಗಳ ಮುಡಿದಪರ್ಣೆಯ
ತಾವಿನಲಿ ಹರಡಿತ್ತು ಹೂನಗೆ ಹೊಳೆಯು ನೆರೆದುಂಬಿ ॥೧೫॥
ಹಿಂದೆಯೀ ಕಥೆ ಹೇಳಿ ಹಂಸಾ-
ನಂದಿ ಕನ್ನಡ ಗದ್ಯದೊಳಗಿರೆ
ಚಂದದಲಿ ಸಂಕೇತಿ ಪದ್ಯದಿ ಬರೆಯೆ ಶ್ರೀಕಾಂತ ।
ಇಂದು ಭಾಮಿನಿ ಸರಳ ಷಟ್ಪದಿ
ಹೊಂದುವುದು ಕನ್ನಡದ ನುಡಿಗೆನೆ
ತಂದೆ ನಿಮಗಾನಂದ ತರಲಿಕೆ ಓದಿ ಹಾರಯಿಸಿ || ೧೬||
-ಹಂಸಾನಂದಿ
(ಈ ಕಿರುಗಬ್ಬದಲ್ಲಿ ಶಿವ ಮತ್ತು ಪಾರ್ವತಿಯರ ಹಲವು ಬೇರೆಬೇರೆ ಹೆಸರುಗಳನ್ನು ಬಳಸಲಾಗಿರುವುದನ್ನು ಗಮನಿಸಬಹುದು)
ಒಮ್ಮೆ ಗೌರಿಗೆ ನಿತ್ಯವೂ ಮಲ್ಲಿಗೆ ಜಾಜಿ ಕರ್ಣಿಕಾರ ಸಂಪಗೆ ಮೊದಲಾದ ಒಂದೇ ಬಣ್ಣದ ಹೂವುಗಳನ್ನು ಮುಡಿದೂ ಮುಡಿದೂ ಬೇಸರವಾಗಿತ್ತು. ಬರೀ ಬಿಳಿ, ತೆಳುಹಳದಿ ಬಣ್ಣ. ಮುನಿಸಿಕೊಂಡಳು. ಅಲ್ಲದೇ ಇವುಗಳ ಸುಗಂಧಕ್ಕೆ ತಲೆನೋವು ಬಂದದ್ದೂ ಇದೆ ಅವಳಿಗೆ. ಅಷ್ಟೇನು, ಇವನ್ನು ಮುಡಿದು ಓಡಾಡುವಾಗ ಕೆಲವೊಮ್ಮೆ ಜೇನುಹುಳಗಳು ಅವಳ ತಲೆಯನ್ನು ಮುತ್ತಿದ್ದೂ ಇದೆ.
ಶಿವನಿಗೆ ಏನು ಮಾಡಬೇಕೆಂದು ತೋರಲಿಲ್ಲ. ಕೂಡಲೆ ಜಗತ್ಸಂಚಾರ ಹೊರಟು ಕಪಿಲಾರಣ್ಯ ಪ್ರದೇಶಕ್ಕೆ ಬಂದ. ಕೈಲಾಸದಷ್ಟಿಲ್ಲದಿದ್ದರೂ ಚಳಿಯ ಪ್ರದೇಶವೇ. ಹೊಸ ಹೂವು ಏನಾದರೂ ಇದೆಯೇ ಎಂದು ಸೂಚೀಪರ್ಣವೃಕ್ಷಗಳ ಮೇಲೆ ಕಣ್ಣೆತ್ತರಿಸಿ ನೋಡುತ್ತಿದ್ದಾಗ ಕಾಲಿಗೆ ಏನೋ ಕಡಿದಂತಾಯಿತು. ಇರುವೆಗಳಿರಬಹುದೇ ಎಂದು ನೋಡಿದರೆ ಏನೂ ಕಾಣಲಿಲ್ಲ. ಮತ್ತೆರಡು ಹೆಜ್ಜೆಗೆ ಮತ್ತಷ್ಟು ಕಡಿತ. ಕೆಳಗೆ ನೋಡಿದರೆ, ಚಿಕ್ಕ ಪೊದೆಯ ಎಲೆಗಳು ಕಾಲಿಗೆ ತಗುಲಿದ ಕಡೆ ದದ್ದರಿಸಿ ಗಂಧೆ ಆಗಿ ಉರಿಯುತ್ತಿದೆ . ಆದರೆ ಗಿಡದಲ್ಲಿ ಬಣ್ಣ ಬಣ್ಣದ ಸುಂದರ ಹೂಗಳು!
ಶಿವ ಒಮ್ಮೆ ಕೈಯಲ್ಲಿ ತರಚಿಕೊಂಡ ಹೂಗಳ ಗಂಧ ಆಘ್ರಾಣಿಸಿದ. ಬ್ರಹ್ಮರಂಧ್ರಕ್ಕೇ ಹೋಗುವ ವಿವರಿಸಲಾಗದ ವಾಸನೆ! ಇದು ವಿಶ್ವಾಮಿತ್ರ ಸೃಷ್ಟಿ ಇರಬಹುದೇ ಎಂದು ಯೋಚನೆ ಬಂತಾದರೂ , ವಿಶ್ವಾಮಿತ್ರ ಋಷಿಯು ಕಪಿಲಾರಣ್ಯಕ್ಕೆ ಬಂದಿದ್ದನೇ ಇಲ್ಲವೇ ಅನ್ನುವ ವಿಷಯ ಶಿವನಿಗೆ ಸದ್ಯಕ್ಕೆ ಬಗೆಹರಿಯಲಿಲ್ಲ. ಅದು ಹಾಗಿರಲೆಂದು, ಎಲೆಗಳನ್ನು ಮುಟ್ಟಿಸಿಕೊಳ್ಳದೆ ಜೋಪಾನವಾಗಿ ಇನ್ನೊಂದಷ್ಟು ಬಣ್ಣದ ಹೂಗಳನ್ನು ತರಚಿ ಕೈಲಾಸಕ್ಕೆ ನಡೆದ.
ಗೌರಿಗಂತೂ ಬಹಳ ಆನಂದವಾಯಿತು ಈ ಹೂಗಳನ್ನು ಕಂಡು. ಶಿವ ಜೋಪಾನ ಹೇಳಿದ, ಹೂಗಳಿಗೆ ಪರಿಮಳವಿಲ್ಲ ಎಂದು. ಆದರೆ ಅಲ್ಲದೆ ರೇಜಿಗೆಯಾಗುವಷ್ಟು ಪರಿಮಳದ ಸಂಪಿಗೆ ಮಲ್ಲಿಗೆ ಜಾಜಿಗಳನ್ನೇ ಮುಡಿಯುತ್ತಿದ್ದ ಗೌರಿಗೆ ಈ ಬಣ್ಣಬಣ್ಣದ ಹೂಗಳು ಸುಂದರವಾಗೇ ಕಂಡು ಕೂಡಲೇ ಮುಡಿದಳು. ಗೌರಿ ಮುಡಿದ ಹೊಸ ಹೂಗಳನ್ನು ಕಂಡು ಸಖಿಯರಿಗೆ ಅಚ್ಚರಿ. ಏನೇ ಉಮಾ ಇದು, ಯಾವುದೇ ಇದು ಹೂವು ಎಂದರು. ಪಾರ್ವತಿಗೂ, ಅಯ್ಯೋ ಹೂವಿನ ಹೆಸರೇ ಕೇಳಲಿಲ್ಲವಲ್ಲ ಅಂತ ಪಿಚ್ಚೆನಿಸಿ, ಕೂಡಲೇ ನಂದಿಯನ್ನೋಡಿಸಿ ನರ್ತನಶಾಲೆಯಲ್ಲಿ ಮುದ್ರೆಗಳನ್ನು ಅಭ್ಯಾಸಮಾಡುತ್ತಿದ್ದ ಶಿವನನ್ನು ಕರೆಸಿದಳು.
“ಏನೀ ಹೂಗಳ ಹೆಸರು, ಆರ್ಯಪುತ್ರ?” ಅಂದಳು ಉಮಾ. ಶಿವ “ಅಯ್ಯಯ್ಯೋ, ಇದರ ಹೆಸರು ನಾನೆಲ್ಲಿ ಕೇಳಲಿ” ಎಂದುಕೊಂಡವನೇ ತಾನು ತರಚಿ ತರಚಿ ಹೂವು ಕಿತ್ತಿದ್ದದಿಂದ — “ತರಚಿ ಹೂವು ಅಂತ ಆರ್ಯೇ! ಕಪಿಲಾರಣ್ಯದಲ್ಲಿ ನೆಲವೇ ಕಾಣದಷ್ಟು ಹರಡಿ ಹೂಬಿಡುತ್ತವೆ” ಎಂದನೆಂಬಲ್ಲಿಗೆ ಸ್ಕಾಂದಪುರಾಣದ ಕಪಿಲಾರಣ್ಯ ಖಂಡದ ತರಚೀಪುಷ್ಪೋಪಾಖ್ಯಾನವು ಸಮಾಪ್ತವಾದುದು.
— — ಶುಭಂ — -
- ಹಂಸಾನಂದಿ
ಕೊ: ಓದಿಕೊಳ್ಳಿ! ಇಷ್ಟವಾದರೆ ಹಂಚಿಕೊಳ್ಳಿ!)
#ಕಂತೇಪುರಾಣ #ಹೂವು #ತರಚಿ #ಲಹರಿ